• Home
 • »
 • News
 • »
 • trend
 • »
 • Friendship Day 2021: ಗೆಳೆತನವನ್ನು ಆಚರಿಸೋಕೆ ಒಂದು ದಿನ ಸಾಕಾ? ಇಂದಿನ ಮಹತ್ವವೇನು?

Friendship Day 2021: ಗೆಳೆತನವನ್ನು ಆಚರಿಸೋಕೆ ಒಂದು ದಿನ ಸಾಕಾ? ಇಂದಿನ ಮಹತ್ವವೇನು?

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

Friendship Day 2021: 1935ರಲ್ಲಿ ಅಮೆರಿಕಾದಲ್ಲಿ ಈ ದಿನವನ್ನು ಆಚರಿಸಲು ಆರಂಭಿಸಲಾಯಿತು ಎಂದು ಹೇಳಲಾಗುತ್ತದೆ. ಆದರೆ ಕೆಲ ಮಾಹಿತಿಗಳ ಪ್ರಕಾರ 1919 ರಲ್ಲಿ ಆರಂಭವಾಯಿತು. ಆದರೆ ಹಾಲ್ಮಾರ್ಕ್ ಕಾರ್ಡ್ಗಳನ್ನು ಆರಂಭಿಸಿದ ಜಾಯ್ಸ್ ಹಾಲ್ 1930 ರ ಆಗಸ್ಟ್ 2 ಆರಂಭಿಸಿದರು. ಅಲ್ಲದೇ ಇದಕ್ಕೆ ಗ್ರೀಟಿಂಗ್ ಕಾರ್ಡ್ ಅಸೋಸಿಯೇಷನ್ ಸಹ ಈ ಹೊಸತನಕ್ಕೆ ಬೆಂಬಲ ನೀಡಿತು.

ಮುಂದೆ ಓದಿ ...
 • Share this:

  Friendship Day 2021: ಫ್ರೆಂಡ್ಶಿಪ್ ಅಥವಾ ಗೆಳೆತನ ಇದೊಂದು ಸುಮಧುರ ಬಾಂಧವ್ಯ. ನಮ್ಮ ಯಾವುದೇ ಸಮಸ್ಯೆಯಿದ್ದರೂ ಅದಕ್ಕೊಂದು ಪರಿಹಾರ ನಮ್ಮ ಗೆಳೆಯರ ಬಳಿ ಇರುತ್ತದೆ. ನಮ್ಮ ಸಂತೋಷವಿರಲಿ, ನೋವಿರಲಿ ನಮ್ಮ ಕುಟುಂಬದವರಂತೆ ನಮ್ಮೊಂದಿಗೆ ಇರುವುದು ನಮ್ಮ ಸ್ನೇಹಿತರು. ಸ್ನೇಹಿತರಿಲ್ಲದೆ ಬದುಕುವುದು ಸುಲಭವಲ್ಲ. ಕೇವಲ ವೈಯಕ್ತಿಕ ವಿಚಾರದಲ್ಲಿ ಮಾತ್ರವಲ್ಲ ನಾವು ಯಾವುದೇ ಸಂಬಂಧಗಳನ್ನು ತೆಗೆದುಕೊಂಡರೂ ಅಷ್ಟೇ ಅಲ್ಲಿ ಗೆಳೆತನ ಮುಖ್ಯವಾಗುತ್ತದೆ. ದೇಶಗಳ ನಡುವಿನ ಸಮಸ್ಯೆಯಿರಲಿ, ಬಡತನವಿರಲಿ, ಹಿಂಸೆಯಿರಲಿ. ಈ ಎಲ್ಲ ವಿಚಾರಗಳು ಜನರಲ್ಲಿ ಅಶಾಂತಿ ಮೂಡಿಸುತ್ತದೆ. ಆದರೆ ಗೆಳೆತನ ಎಂಬ ಸಂಬಂಧ ಈ ಎಲ್ಲ ಸಮಸ್ಯೆಗಳಿಗೆ ಉತ್ತರ ನೀಡುತ್ತದೆ. ನಮ್ಮ ಜೀವನದಲ್ಲಿ ಹಲವಾರು ಏಳುಬೀಳುಗಳನ್ನು ಕಾಣುತ್ತೇವೆ. ಮಾನಸಿಕವಾಗಿ ಅದೆಷ್ಟೋ ಕಷ್ಟ ಅನುಭವಿಸುತ್ತೇವೆ. ಆದರೆ ಅದನ್ನು ನಮ್ಮ ಸ್ನೇಹಿತರ ಜೊತೆ ಹಂಚಿಕೊಂಡಾಗ ಸಿಗುವ ನೆಮ್ಮದಿ ನಿಜಕ್ಕೂ ಅದ್ಭುತ.


  ಇನ್ನು ಇಂದು ವಿಶ್ವ ಸ್ನೇಹಿತರ ದಿನ . ಯಾವುದೇ ದಿನವಿರಲಿ ಅದರ ಆಚರಣೆಯ ಹಿಂದೆ ಕೆಲ ಕಾರಣಗಳು ಮಹತ್ವಗಳು ಇದ್ದೆ ಇರುತ್ತದೆ. ಈ ದಿನದ ಹಿಂದೆ ಸಹ ಹಲವಾರು ವಿಶೇಷತೆಗಳ ಜೊತೆ ಮಹತ್ವ ಕೂಡ ಇದೆ. ಈ ಫ್ರೆಂಡ್ಸ್ಶಿಪ್ ಡೇ ಆಚರಣೆ ಮಾಡುವುದರ ಹಿಂದೆ ಇರುವ ಉದ್ದೇಶ, ಕಾರಣ ಇಲ್ಲಿದೆ. ಜನರಲ್ಲಿ ಶಾಶ್ವತವಾಗಿ ಒಳ್ಳೆಯ ಸಂಬಂಧ ಬೆಸೆಯಲು ಈ ಗೆಳೆತನ ಸಹಾಯ ಮಾಡುತ್ತದೆ. ಈ ಸ್ನೇಹದಿಂದ ಪ್ರಪಂಚದಲ್ಲಿ ಉತ್ತಮ ಬಾಂಧವ್ಯ ಸೃಷ್ಟಿಸಲು ಇದೇ ಸ್ನೇಹ ಕಾರಣವಾಗುತ್ತದೆ. ಅಲ್ಲದೇ ಈ ಸ್ನೇಹದಿಂದ ಜನರಲ್ಲಿ ಆತ್ಮವಿಶ್ವಾಸ ಮತ್ತು ಸೌಹಾರ್ದತೆಯನ್ನು ಬೆಳೆಸಲು ಸಾಧ್ಯವಾಗುತ್ತದೆ. ಜನರ ನಡುವೆ ಬೆಳೆಯುವ ಆ ಸುಂದರ ಬಾಂಡ್ ಅವರ ಬದುಕನ್ನು ಬದಲಾಯಿಸುತ್ತದೆ.


  ಇನ್ನು ಈ ದಿನದ ಆಚರಣೆಯ ಮಹತ್ವವನ್ನು ಹುಡುಕಿಕೊಂಡು ಹೋದರೆ 1935ಕ್ಕೆ ಹೋಗುತ್ತೇವೆ. ಹೌದು, 1935ರಲ್ಲಿ ಅಮೆರಿಕಾದಲ್ಲಿ ಈ ದಿನವನ್ನು ಆಚರಿಸಲು ಆರಂಭಿಸಲಾಯಿತು ಎಂದು ಹೇಳಲಾಗುತ್ತದೆ. ಆದರೆ ಕೆಲ ಮಾಹಿತಿಗಳ ಪ್ರಕಾರ 1919 ರಲ್ಲಿ ಆರಂಭವಾಯಿತು. ಆದರೆ ಹಾಲ್ಮಾರ್ಕ್ ಕಾರ್ಡ್ಗಳನ್ನು ಆರಂಭಿಸಿದ ಜಾಯ್ಸ್ ಹಾಲ್ 1930 ರ ಆಗಸ್ಟ್ 2 ಆರಂಭಿಸಿದರು. ಅಲ್ಲದೇ ಇದಕ್ಕೆ ಗ್ರೀಟಿಂಗ್ ಕಾರ್ಡ್ ಅಸೋಸಿಯೇಷನ್ ಸಹ ಈ ಹೊಸತನಕ್ಕೆ ಬೆಂಬಲ ನೀಡಿತು. ಆದರೆ ಇದು ಈ ಬೆಂಬಲ ಗ್ರೀಟಿಂಗ್ ಕಾರ್ಡ್ಗಳ ಸಂಸ್ಥೆಗೆ ವ್ಯವಹಾರಿಕವಾಗಿ ಸಹಾಯ ಮಾಡುವ ನಿಟ್ಟಿನಲ್ಲಿ ಮಾಡಿದ ತಂತ್ರ ಎಂದು ನಿರ್ಧರಿಸಿ ಆ ದಿನದ ಆಚರಣೆಯನ್ನು ನಿಲ್ಲಿಸಲಾಯಿತು.


  ಇದನ್ನೂ ಓದಿ: ಬ್ರೆಜಿಲ್​ನಲ್ಲಿ ಶೀತಗಾಳಿಗೆ ನಲುಗಿದ ಕಾಫಿ (Coffee) ಬೆಳೆ, ಕರ್ನಾಟಕದ ಕಾಫಿಗೆ ಡಿಮ್ಯಾಂಡ್ ಹೆಚ್ಚಾಗುವ ಸಾಧ್ಯತೆ


  ನಂತರ ಡಾ. ರಾಮನ್ ಆರ್ಟೆಮಿಯೊ ಬ್ರಾಚೊ ಅವರು ಜುಲೈ 20 1958ರಂದು ವಿಶ್ವ ಸ್ನೇಹ ದಿನವನ್ನು ಆಚರಿಸಲು ಆರಂಭಿಸಿದರು. ನಂತರ 2011ರ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಜುಲೈ 30ರಂದು ಅಂತರಾಷ್ಟ್ರೀಯ ಸ್ನೇಹ ದಿನ ಎಂದು ಆಚರಿಸಲು ಘೋಷಣೆ ಮಾಡಲಾಯಿತು. ಆದರೆ ವಿಶ್ವಸಂಸ್ಥೆಯ ಘೋಷಣೆಯ ನಂತರ ಸಹ ಕೆಲ ದೇಶಗಳಲ್ಲಿ ಬೇರೆ ಬೇರೆ ತಿಂಗಳು ಮತ್ತೆ ದಿನಗಳಲ್ಲಿ ಆಚರಿಸಲಾಗುತ್ತದೆ.


  ಭಾರತದಲ್ಲಿ ಆಗಸ್ಟ್ ಮೊದಲ ಭಾನುವಾರ, ನೇಪಾಳದಲ್ಲಿ ಜುಲೈ 30 ಮತ್ತು ಓರ್ಬಲಿಯೊ, ಓಹಿಯೋದಲ್ಲಿ ಏಪ್ರಿಲ್ 9ರಂದು ಆಚರಿಸಲಾಗುತ್ತದೆ. ಈ ದಿನ ನಿಜಕ್ಕೂ ಅರ್ಥಪೂರ್ಣ. ಜನರ ಜೀವನವನ್ನೇ ಪರಿಪೂರ್ಣವಾಗಿ ಬದಲಾಯಿಸುವ ಸಾಮರ್ಥ್ಯ ಇರುವುದು ಈ ಸ್ನೇಹಕ್ಕೆ ಮಾತ್ರ. ಇದು ಜಾತಿ, ಪಂಥ ಮತ್ತು ಬಣ್ಣ ಯಾವುದನ್ನು ಲೆಕ್ಕಿಸದೆ ಜನಗಳ ನಡುವಿನ ಸಂಬಂಧವನ್ನು ಗಟ್ಟಿಗೊಳಿಸುತ್ತದೆ. ಒಂದರ್ಥದಲ್ಲಿ ಈ ಸ್ನೇಹಕ್ಕೆ ಯಾವುದೇ ದಿನ ಬೇಕಿಲ್ಲ ಆದರೆ ಸಧ್ಯದ ತಾಂತ್ರಿಕ ಬದುಕಿನಲ್ಲಿ ಪ್ರತಿಯೊಬ್ಬ್ರರು ತಮ್ಮದೇ ಕೆಲಸದಲ್ಲಿ ತಲ್ಲೀನರಾಗಿರುತ್ತಾರೆ. ಹಾಗಾಗಿ ಇದೊಂದು ದಿನ ಅವರ ಜೀವನದಲ್ಲಿ ಉತ್ಸಾಹವನ್ನು ಹೆಚ್ಚಿಸಲು ನೆರವಾಗುತ್ತದೆ.


  (ಸಂಧ್ಯಾ ಎಂ)

  Published by:Soumya KN
  First published: