International Astronomy Day 2022: ಈ ದಿನದ ವಿಶೇಷತೆ ಏನು? ಯಾಕಾಗಿ ಈ ಆಚರಣೆ? ಇಲ್ಲಿದೆ ಕಂಪ್ಲೀಟ್​ ಡೀಟೆಲ್ಸ್​

ಅಂತಾರಾಷ್ಟ್ರೀಯ ಖಗೋಳ ದಿನವನ್ನು ವರ್ಷಕ್ಕೆ ಎರಡು ಬಾರಿ ಆಚರಿಸಲಾಗುತ್ತದೆ. ಒಂದನ್ನು ವಸಂತಕಾಲದಲ್ಲಿ ಆಚರಿಸಿದರೆ ಮತ್ತು ಇನ್ನೊಂದನ್ನು ಶರತ್ಕಾಲದಲ್ಲಿ ಆಚರಿಸಲಾಗುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಅಂತಾರಾಷ್ಟ್ರೀಯ ಖಗೋಳ ದಿನ (International Astronomy Day) ವನ್ನು ವರ್ಷಕ್ಕೆ ಎರಡು ಬಾರಿ ಆಚರಿಸಲಾಗುತ್ತದೆ. ಒಂದನ್ನು ವಸಂತಕಾಲದಲ್ಲಿ ಆಚರಿಸಿದರೆ ಮತ್ತು ಇನ್ನೊಂದನ್ನು ಶರತ್ಕಾಲದಲ್ಲಿ ಆಚರಿಸಲಾಗುತ್ತದೆ. ಈ ವರ್ಷ ಈ ದಿನವನ್ನು ಮೇ (May) 7 ಮತ್ತು 1 ಅಕ್ಟೋಬರ್ (October) 2022 ರಂದು ಆಚರಿಸಲಾಗುತ್ತಿದೆ. ವಿಶ್ವದಲ್ಲಿ ಅಸ್ತಿತ್ವದಲ್ಲಿರುವ ಅತ್ಯುತ್ತಮ ನೈಸರ್ಗಿಕ (Natural) ವಿಜ್ಞಾನಗಳಲ್ಲಿ ಒಂದಾದ ಖಗೋಳಶಾಸ್ತ್ರದ ಬಗ್ಗೆ ಜನರಿಗೆ ಅರಿವು ಮೂಡಿಸುವ ಮುಖ್ಯ ಉದ್ದೇಶದಿಂದ ಈ ದಿನವನ್ನು ಜಾಗತಿಕ ಮಟ್ಟ (Global level) ದಲ್ಲಿ ಆಚರಿಸಲಾಗುತ್ತದೆ.

ಇಂದು ಅಂತಾರಾಷ್ಟ್ರೀಯ ಖಗೋಳ ದಿನ

ಜನರು ಯಾವಾಗಲೂ ನಕ್ಷತ್ರಗಳಿಂದ ತುಂಬಿರುವ ರಾತ್ರಿಯ ಆಕಾಶವನ್ನು ನೋಡಲು ಬಯಸುತ್ತಾರೆ. ನಮ್ಮ ಪೂರ್ವಜರಂತೆ, ನಾವು ಇನ್ನೂ ರಾತ್ರಿಯ ಆಕಾಶವನ್ನು ಹೆಚ್ಚು ಕುತೂಹಲದಿಂದ ನೋಡುತ್ತೇವೆ. ಈ ಅವಧಿಯಲ್ಲಿ, ಪ್ರಪಂಚದಾದ್ಯಂತದ ಅನೇಕ ಸಂಸ್ಕೃತಿಗಳು ಇದನ್ನು ಬರಿಗಣ್ಣಿನಿಂದ ಅಭ್ಯಾಸ ಮಾಡಿವೆ ಮತ್ತು ಅದಕ್ಕೆ ಸಂಬಂಧಿಸಿದಂತೆ ಅದರ ಪ್ರತಿಬಿಂಬಗಳು ಆಯಾ ಸಮುದಾಯಗಳ ಸಮಾಜದಲ್ಲಿ ಸಾಕಷ್ಟು ಪ್ರಭಾವ ಬೀರಿರುವುದನ್ನೂ ಕಾಣಬಹುದು.

ದೇವರ ಕ್ರಿಯೆಗಳನ್ನು ನಕ್ಷತ್ರಗಳ ಚಲನೆಯಿಂದ ನಿರ್ಧಾರ?

ಪ್ರಮುಖ ಉದಾಹರಣೆಗಳಲ್ಲಿ ಒಂದು ಮಾಯನ್ ಖಗೋಳಶಾಸ್ತ್ರ. ಮಾಯನ್ ಜನರು ಆಕಾಶವನ್ನು ವೀಕ್ಷಿಸಿ, ಅಭ್ಯಸಿಸಿ, ವಿಶ್ಲೇಷಿಸಿ ದಾಖಲೆಗಳನ್ನು ಬರೆದು ಇಟ್ಟುಕೊಂಡರು ಮತ್ತು ಅವುಗಳನ್ನು ಬಳಸಿಕೊಂಡು ಅವರು ಕ್ಯಾಲೆಂಡರ್ಗಳು ಮತ್ತು ನಕ್ಷತ್ರಗಳ ಚಾರ್ಟ್ ಗಳನ್ನು ರಚಿಸಿದರು. ಮಾಯನ್ ಜನರ ಪ್ರಕಾರ, ದೇವರ ಕ್ರಿಯೆಗಳನ್ನು ನಕ್ಷತ್ರಗಳ ಚಲನೆಯಿಂದ ನಿರ್ಧರಿಸಬಹುದು ಎನ್ನಲಾಗುತ್ತದೆ. ಆದರೆ ಕಾಲ ಉರುಳಿದಂತೆ
ಅಂತಿಮವಾಗಿ, ಪ್ರಪಂಚವು ಪ್ರಗತಿ ಹೊಂದಿತು ಮತ್ತು ಜನರು ಭೂಮಿಯ ಮತ್ತು ಇತರ ಗ್ರಹಗಳ ಚಲನೆಯನ್ನು ಅಧ್ಯಯನ ಮಾಡಲು ಅನೇಕ ಸುಧಾರಿತ ವೈಜ್ಞಾನಿಕ ಉಪಕರಣಗಳನ್ನು ಕಂಡುಹಿಡಿದರು.

ಇದನ್ನೂ ಓದಿ: ಅಬ್ದುಲ್ ಗಫರ್ ಗೋಪ್ರೇಮ, ಗೋವುಗಳ ದಾಹ ತಣಿಸುತ್ತಿರುವ ಗಫರ್!

ಭೂಮಿಯು ಸೂರ್ಯನ ಸುತ್ತ ಸುತ್ತುತ್ತದೆ ಎಂದು ಮೊದಲು ಪ್ರಸ್ತಾಪಿಸಿದವನು ನಿಕೋಲಸ್ ಕೋಪರ್ನಿಕಸ್. ಅವರು ಅಂದು ಅಂದರೆ ತಾವು ಜೀವಿಸಿದ್ದ ಕಾಲದಲ್ಲಿ ಅಸ್ತಿತ್ವದಲ್ಲಿದ್ದ ಪುರಾಣಗಳಿಗೆ ಸವಾಲು ಮಾಡಿದ್ದರು ಮತ್ತು ಮಾನವ ಕುಲ ಬ್ರಹ್ಮಾಂಡದ ಒಂದು ಸಣ್ಣ ಭಾಗವಾಗಿದೆ ಎಂದು ಪ್ರಸ್ತಾಪಿಸಿದ್ದರು.

ವಿಶ್ವ ಖಗೋಳ ದಿನದ ಇತಿಹಾಸ ಮತ್ತು ಮಹತ್ವ

Starwalk.space ಪ್ರಕಾರ, ಉತ್ತರ ಕ್ಯಾಲಿಫೋರ್ನಿಯಾದ ಖಗೋಳ ಸಂಘದ ಅಧ್ಯಕ್ಷ ಡೌಗ್ ಬರ್ಗರ್ ಅವರು 1973 ರಲ್ಲಿ ವಿಶ್ವ ಖಗೋಳ ದಿನವನ್ನು ಆಚರಿಸಲು ಪ್ರಾರಂಭಿಸಿದರು. ಅವರು ನಗರ ಪ್ರದೇಶಗಳಲ್ಲಿ ವಾಸಿಸುವ ಜನರಲ್ಲಿ ಕುತೂಹಲವನ್ನು ಹೆಚ್ಚಿಸುವ ಉದ್ದೇಶವನ್ನು ಹೊಂದಿದ್ದರು. ಜನರು ಆಕಾಶವನ್ನು ವೀಕ್ಷಿಸಲು ಮತ್ತು ಖಗೋಳಶಾಸ್ತ್ರದ ಕ್ಷೇತ್ರದಿಂದ ಹೆಚ್ಚಿನದನ್ನು ಕಲಿಯಲು ಅವರು ಆ ಪ್ರದೇಶಗಳಲ್ಲಿ ದೂರದರ್ಶಕಗಳನ್ನು ಸ್ಥಾಪಿಸಿದರು. ಶೀಘ್ರದಲ್ಲೇ, ಪ್ರಪಂಚದಾದ್ಯಂತ ಅನೇಕ ಸಂಸ್ಥೆಗಳು ಈ ದಿನವನ್ನು ಆಚರಿಸಲು ಪ್ರಾರಂಭಿಸಿದವು. 2006 ರಲ್ಲಿ, ಶರತ್ಕಾಲದಲ್ಲಿ ಮತ್ತೊಂದು ದಿನವನ್ನು ಈ ದಿನದ ಆಚರಣೆಗೆಂದು ಸೇರಿಸಲು ನಿರ್ಧರಿಸಲಾಯಿತು.

ವಿಶ್ವ ಖಗೋಳ ದಿನವನ್ನು ಹೇಗೆ ಆಚರಿಸಲಾಗುತ್ತದೆ

ಈ ದಿನದಂದು, ಖಗೋಳಶಾಸ್ತ್ರದ ಉತ್ಸಾಹಿಗಳು ಮತ್ತು ವೃತ್ತಿಪರರು ತಮ್ಮ ಅನುಭವ ಮತ್ತು ಬಾಹ್ಯಾಕಾಶದ ಜ್ಞಾನವನ್ನು ಸಾರ್ವಜನಿಕರೊಂದಿಗೆ ಹಂಚಿಕೊಳ್ಳುತ್ತಾರೆ. ಬಾಹ್ಯಾಕಾಶವನ್ನು ಅನ್ವೇಷಿಸಲು ಜನರಿಗೆ ಆಸಕ್ತಿಯನ್ನುಂಟುಮಾಡಲು ಇದು ಸಹಾಯ ಮಾಡುತ್ತದೆ. ವಸ್ತುಸಂಗ್ರಹಾಲಯಗಳು, ತಾರಾಲಯಗಳು ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿ ವಿಚಾರಗೋಷ್ಠಿಗಳು, ಕಾರ್ಯಾಗಾರಗಳು ಮತ್ತು ಅನೇಕ ಬಾಹ್ಯಾಕಾಶ ಸಂಬಂಧಿತ ಚಟುವಟಿಕೆಗಳು ನಡೆಯುತ್ತವೆ.

ಇದನ್ನೂ ಓದಿ: ಪ್ರತಿದಿನ ಈ ನಾಯಿ ಇಲ್ಲೇ ಬಂದು ಕೂರುತ್ತಂತೆ! ಯಾಕೆ ಅಂತ ತಿಳಿದರೆ ನಿಮ್ಮ ಮುಖದಲ್ಲೂ ನಗು ಮೂಡುತ್ತೆ

ಖಗೋಳ ಶಾಸ್ತ್ರ ಎಂಬುದು ಮುಂಚೆಯಿಂದಲೂ ಸಾಮಾನ್ಯ ಜನರಲ್ಲಿ ಒಂದು ಕೌತುಕದ ವಿಷಯವಾಗಿಯೇ ಉಳಿದುಕೊಂಡಿದೆ. ಶತಮಾನಗಳಿಂದ ಸಾಕಷ್ಟು ಖಗೋಳ ಶಾಸ್ತ್ರಜ್ಞರು ನಭೋ ಮಂಡಲದಲ್ಲಿ ಇನ್ನೂ ಅಡಗಿರಬಹುದಾದ ಅದೆಷ್ಟೋ ರಹಸ್ಯಗಳನ್ನು ಭೇದಿಸುವಲ್ಲಿ ಕರ್ಯನಿರತರಾಗಿದ್ದಾರೆ. ಈ ಕ್ಷೇತ್ರವು ಊಹೆಗೂ ನಿಲುಕದಷ್ಟು ಆಳ ಹೊಂದಿದೆ ಅಂತಾನೇ ಹೇಳಬಹುದು. ಈ ನಿಟ್ಟಿನಲ್ಲಿ ನಾವು ತಿಳಿದುಕೊಳ್ಳಬೇಕಾದ ವಿಷಯಗಳು ಸಾಕಷ್ಟಿದ್ದು ಈ ರೀತಿಯ ದಿನಗಳು ಮತ್ತೆ ಮತ್ತೆ ನಾವು ಆ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳುವಂತೆ ಪ್ರೇರೇಪಿಸುತ್ತವೆ ಎಂದು ಹೇಳಬಹುದು.
Published by:Vasudeva M
First published: