New Zealand- ಮನುಷ್ಯರಿಗಿಂತ ಕುರಿಗಳೇ ಹೆಚ್ಚು; ನ್ಯೂಜಿಲೆಂಡ್ ಬಗ್ಗೆ ಇಂಟ್ರೆಸ್ಟಿಂಗ್ ವಿಷಯಗಳು

Interesting things about New Zealand: ಪ್ರವಾಸಿಗರ ಸ್ವರ್ಗ ಎನಿಸಿದ ನ್ಯೂಜಿಲೆಂಡ್ ದೇಶದ ಬಗ್ಗೆ ಹಲವು ಕುತೂಹಲಕಾರಿ ವಿಷಯಗಳು ಇವೆ. ಪ್ರಪಂಚದಲ್ಲಿ ಅತೀ ಕಡಿಮೆ ಜನದಟ್ಟಣೆ ಇರುವ ದೇಶಗಳ ಪೈಕಿ ಒಂದೆನಿಸಿದ ಕಿವೀಸ್ ನಾಡಿನ ಒಂದು ಸಣ್ಣ ಪರಿಚಯ.

ನ್ಯೂಜಿಲೆಂಡ್ ಪರಿಸರ

ನ್ಯೂಜಿಲೆಂಡ್ ಪರಿಸರ

  • News18
  • Last Updated :
  • Share this:
    ನ್ಯೂಜಿಲೆಂಡ್ ಎಂದರೆ ಭಾರತೀಯರಿಗೆ ಥಟ್ಟನೆ ನೆನಪಿಗೆ ಬರುವುದು ಕ್ರಿಕೆಟ್ ತಂಡ ಹಾಗೂ ಟೂರಿಂಗ್ ಪ್ಲೇಸ್. ಅದ್ಭುತ ನೈಸರ್ಗಿಕ ಸೌಂದರ್ಯ, ಪ್ರಾಕೃತಿಕ ಸಂಪತ್ತು ಹೊಂದಿರುವ ರಮಣೀಯ ಪ್ರೇಕ್ಷಣೀಯ ಸ್ಥಳ ನ್ಯೂಜಿಲೆಂಡ್. ಕೊರೆಯುವ ಚಳಿ ಇದ್ದರೂ ಪ್ರವಾಸಿಗರ ಪಾಲಿಗೆ ಇದು ನೆಚ್ಚಿನ ಟೂರಿಸ್ಟ್ ಸ್ಪಾಟ್. ಈ ದೇಶದ ಬಗ್ಗೆ ಕೆಲ ಕುತೂಹಲಕಾರಿ ವಿಷಯಗಳಿವೆ. ಅವುಗಳತ್ತ ಒಂದು ನೋಟ.

    1) ಜನಸಂಖ್ಯೆ ಕಡಿಮೆ: ನ್ಯೂಜಿಲೆಂಡ್ ವಿಶ್ವದ ಅತ್ಯಂತ ಪ್ರಾಕೃತಿಕ ಸಿರಿತನ ಹೊಂದಿರುವ ದೇಶಗಳಲ್ಲಿ ಒಂದು. ಇದರ ವಿಸ್ತೀರ್ಣ 2.68 ಲಕ್ಷ ಚದರ ಕಿಮೀ. ಅಂದರೆ ಕರ್ನಾಟಕ ರಾಜ್ಯಕ್ಕಿಂತ ತುಸು ದೊಡ್ಡದು. ಆದರೆ, ಜನಸಂಖ್ಯೆ ನಮ್ಮ ಬೆಂಗಳೂರಿನದಕ್ಕಿಂತ ಅರ್ಧದಷ್ಟು ಮಾತ್ರ ಇದೆ. ಕೇವಲ 51 ಲಕ್ಷದಷ್ಟು ಜನಸಂಖ್ಯೆ ಇದೆ.

    2) ಜನರಿಗಿಂತ ಕುರಿಗಳೇ ಹೆಚ್ಚು: ನ್ಯೂಜಿಲೆಂಡ್ ದೇಶದಲ್ಲಿ ಪಶುಸಾಕಾಣಿಕೆ (Animal Husbandry) ಒಂದು ಪ್ರಮುಖ ಉದ್ಯಮ. ಹಸು ಮತ್ತು ಕುರಿ ಸಾಕಾಣಿಕೆ ಅಲ್ಲಿ ಹೆಚ್ಚು. ಇಂಟ್ರೆಸ್ಟಿಂಗ್ ವಿಷಯ ಎಂದರೆ ಮನುಷ್ಯರ ಸಂಖ್ಯೆಗಿಂತ ಹತ್ತು ಪಟ್ಟು ಹೆಚ್ಚಿನ ಸಂಖ್ಯೆಯಲ್ಲಿ ಕುರಿಗಳು ನ್ಯೂಜಿಲೆಂಡ್​ನಲ್ಲಿವೆ.

    3) ನವನವೀನ ಇತಿಹಾಸ: ಇಡೀ ಜಗತ್ತಿನಲ್ಲಿ ಮನುಷ್ಯರು ಕಾಲಿರಿಸಿದ ಕೊನೆಯ ದೇಶ ಎಂದರೆ ಅದು ನ್ಯೂಜಿಲೆಂಡ್. 800 ವರ್ಷಗಳ ಹಿಂದೆಯಷ್ಟೇ ನ್ಯೂಜಿಲೆಂಡ್ ನೆಲವನ್ನು ಮನುಷ್ಯ ಕಂಡಿದ್ದು, ಕಾಲಿಟ್ಟಿದ್ದು, ವಸಹಾತು ಮಾಡಿಕೊಂಡಿದ್ದು. ಮಾವೋರಿ ಜನಾಂಗದವರು ಇಲ್ಲಿಗೆ ಬಂದ ಮೊದಲಿಗರು. ಇವರೇ ಈಗ ಮೂಲನಿವಾಸಿಗಳು.

    4) ಮೂಗ-ಕಿವುಡರ ಭಾಷೆ ಅಧಿಕೃತ: ನ್ಯೂಜಿಲೆಂಡ್ ದೇಶದಲ್ಲಿ ಮೂರು ಅಧಿಕೃತ ಭಾಷೆಗಳಿವೆ. ಇಂಗ್ಲೀಷ್, ಮಾವೋರಿ ಮತ್ತು ಮೂಕ (Sign Language for Deaf) ಭಾಷೆಗಳು. ಮೂಗ ಮತ್ತು ಕಿವುಡರಿಗೆ ಒಂದು ಅಧಿಕೃತ ಭಾಷೆ ಇರುವ ವಿಶ್ವದ ಕೆಲವೇ ದೇಶಗಳಲ್ಲಿ ನ್ಯೂಜಿಲೆಂಡ್ ಕೂಡ ಒಂದು.

    ಇದನ್ನೂ ಓದಿ: Matthew Wade: ಮರಗೆಲಸದಿಂದ ವಿಶ್ವಕಪ್​ನವರೆಗೆ..ಆಸ್ಟ್ರೇಲಿಯಾ ಕ್ರಿಕೆಟಿಗ ಮ್ಯಾಥ್ಯೂ ವೇಡ್ ಕಥೆ ಗೊತ್ತಾ?

    5) ವಿಶ್ವದ ಅತಿ ಉದ್ದದ ಹೆಸರು ಹೊಂದಿರುವ ಊರು: ನ್ಯೂಜಿಲೆಂಡ್​ನ ಪೂರ್ವ ಕರಾವಳಿ ಭಾಗದಲ್ಲಿ ಒಂದು ಊರಿದೆ. ಅದರ ಹೆಸರನ್ನ ಕನ್ನಡದಲ್ಲಿ ಬರೆಯಲು ಅಸಾಧ್ಯವೆ. Taumatawhakatangihangakoauauotamateaturipukakapikimaungahoronukupokaiwhenuakitanatahu. ಮಾವೋರಿ ಭಾಷೆಯ ಪದವಾಗಿರುವ ಇದನ್ನ ಭಾಷಾಂತರಿಸಿದಾಗ, “ದೊಡ್ಡ ಮಂಡಿ ಇರುವ ಟಮಟೀ ಎಂಬ ವ್ಯಕ್ತಿ ಜಾರಿ, ಹತ್ತಿದ, ಹಾಗೂ ಭೂಮಿಬಾಕವೆನಿಸಿದ ಬೆಟ್ಟವನ್ನು ನುಂಗಿದ, ತನ್ನ ಪ್ರೀತಿಪಾತ್ರರಿಗೆ ಕೊಳಲನ್ನೂದಿದ ಸ್ಥಳ” ಎಂದಾಗುತ್ತದೆ.

    6) ಹಸಿರು ಪ್ರದೇಶ ಹೆಚ್ಚಿರಲು ಕಾರಣ: ನ್ಯೂಜಿಲೆಂಡ್ ದೇಶ ಎಂದರೆ ಹಸಿರ ಸಂಪತ್ತಿಗೆ ಹೆಸರುವಾಸಿ. ಎಲ್ಲೆಲ್ಲೂ ದಟ್ಟ ಕಾನನಗಳೇ. ಯಾಕೆಂದರೆ ಇಲ್ಲಿರುವ ಶೇ. 30ರಷ್ಟು ಪ್ರದೇಶವನ್ನು ರಾಷ್ಟ್ರೀಯ ಸಂರಕ್ಷಿತ ಪ್ರದೇಶವಾಗಿ ಘೋಷಿಸಲಾಗಿದೆ.

    ಇದನ್ನೂ ಓದಿ: Body Building: ಆಸ್ಟ್ರೇಲಿಯಾ ನೆಲದಲ್ಲಿ ಭಾರತೀಯ ಮಹಿಳೆಯ ಪಾರುಪತ್ಯ: 3 ಚಿನ್ನದ ಪದಕ ಗೆದ್ದ ಬಾಡಿಬಿಲ್ಡರ್​!

    7) ಮಹಿಳೆಯರಿಗೆ ಮತದಾನ ಹಕ್ಕು: ನ್ಯೂಜಿಲೆಂಡ್ ದೇಶದ ಗರಿಮೆ ಎಂದರೆ ಮಹಿಳೆಯರಿಗೆ ಮತದಾನದ ಹಕ್ಕು ಕೊಟ್ಟ ವಿಶ್ವದ ಮೊದಲ ದೇಶ ಎಂಬುದು. ಸುಮಾರು 128 ವರ್ಷಗಳ ಹಿಂದೆ ನ್ಯೂಜಿಲೆಂಡ್​ನಲ್ಲಿ ಮಹಿಳೆಯರಿಗೆ ವೋಟಿಂಗ್ ರೈಟ್ಸ್ ಕೊಡಲಾಯಿತು. ಅದಾಗಿ ಅನೇಕ ವರ್ಷಗಳ ಬಳಿಕ ಇತರ ದೇಶಗಳಲ್ಲಿ ಮಹಿಳೆಯರಿಗೆ ಆ ಹಕ್ಕು ಸಿಕ್ಕಿತು. ಈಗ ಅಲ್ಲಿ ಮಹಿಳಾ ಸಂಸದರ ಸಂಖ್ಯೆ ಶೇ. 30ಕ್ಕಿಂತ ಹೆಚ್ಚಿದೆ ಎಂಬುದು ಗಮನಾರ್ಹ.

    8) ಕಿವೀ (Kiwi) ಎಂದರೆ?: ಕ್ರಿಕೆಟ್​ನಲ್ಲಿ ನಾವು ನ್ಯೂಜಿಲೆಂಡ್ ತಂಡವನ್ನ ಕಿವೀಸ್ ಪಡೆ ಎನ್ನುತ್ತೇವೆ. ಕಿವಿ ಎಂಬುದು ಒಂದು ಜಾತಿಯ ಪಕ್ಷಿಯ ಹೆಸರು. ಹಾಗೆಯೇ ಒಂದು ಹಣ್ಣಿನ ಹೆಸರೂ ಕೂಡ. ಕಿವಿ ಹಣ್ಣಿನ ರೀತಿಯಲ್ಲೇ ನೋಡಲು ಕಿವಿ ಹಕ್ಕಿ ಕೂಡ ಇದೆ ಎಂಬುದು ಕುತೂಹಲ.
    Published by:Vijayasarthy SN
    First published: