ಪಿಜ್ಜಾ ಪಾರ್ಟಿಗೆ ಹೋಗದಿದ್ದಕ್ಕೆ ರಿಸೆಪ್ಷನಿಸ್ಟ್​ಗೆ ಸಿಕ್ತು 20 ಲಕ್ಷ ರೂ!; ಹೇಗೆ ಅಂತೀರಾ?

ಕಂಪನಿಯು ಲೆವಿಕಾ ಅರೆ ಕಾಲಿಕ ಕೆಲಸ ಮಾಡುತ್ತಿದ್ದಳು ಎಂದು ಹೇಳುವ ಮೂಲಕ ತನ್ನನ್ನು ಸಮರ್ಥನೆ ಮಾಡಿಕೊಂಡಿದೆ.

ಪಿಜ್ಜಾ

ಪಿಜ್ಜಾ

  • Share this:
ಇಂಗ್ಲೆಂಡ್​ನ ಕಾರ್ ಡೀಲರ್‌ಶಿಪ್‌ನ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮಾಜಿ ರಿಸೆಪ್ಷನಿಸ್ಟ್ ಒಬ್ಬರು 23,000 ಯುರೋ (20,50,699 ರೂ) ಪರಿಹಾರ ಪಡೆದುಕೊಂಡಿದ್ದಾರೆ. ಆಫೀಸಿನಲ್ಲಿ ನಡೆಯುತ್ತಿದ್ದ ನಿಯಮಿತ ಪಾರ್ಟಿಗಳಲ್ಲಿ ಭಾಗವಹಿಸದೇ ಇರುವುದೇ ಈ ಮೊತ್ತದ ಹಣವನ್ನು ಪಡೆಯಲು ನೆರವಾಗಿದೆ. ವಿಶ್ವದ ಎಲ್ಲೆಡೆ ಸಾಮಾನ್ಯವಾಗಿರುವಂತೆ ಮಾಲ್ಗೋರ್ಜಾಟಾ ಲೆವಿಕಾ ಅವರು ಕೆಲಸ ಮಾಡುತ್ತಿದ್ದ ಹಾರ್ಟ್‌ವೆಲ್‌ನಲ್ಲೂ ಸಹಜವಾಗಿಯೇ ಪಾರ್ಟಿ ಆಯೋಜನೆಯಾಗುತ್ತಿತ್ತು. ಈ ಸಂದರ್ಭದಲ್ಲಿ ಆಫೀಸ್‌ನ ಸಿಬ್ಬಂದಿ ತಮ್ಮ ಸಣ್ಣ ಪಾರ್ಟಿಗಳಿಗಾಗಿ ಟೇಕ್ ಅವೇ ಆರ್ಡರ್ಸ್‌ಗಳನ್ನು ಕೇಳಲು ಆರಂಭಿಸಿದರು. ಅದು ಬರ್ಗರ್‌ನಿಂದ ಪಿಜ್ಜಾವರೆಗೂ ಮತ್ತು ಇನ್ನಿತರ ಸ್ನ್ಯಾಕ್‌ಗಳವರೆಗೂ ಇರುತ್ತಿದ್ದವು. ಈ ನಿಟ್ಟಿನಲ್ಲಿ ಲೆವಿಕಾ ಅವರನ್ನು ಬಲಿಪಶು ಮಾಡಲಾಯಿತು. ಇದೇ ಕಾರಣಕ್ಕೆ ಲೆವಿಕಾ ಈ ಪಾರ್ಟಿಯಿಂದ ದೂರ ಉಳಿದರು. ಇದಿಷ್ಟೇ ಅಲ್ಲದೇ ಸಿಬ್ಬಂದಿ ಆಕೆಗೆ ಲೈಂಗಿಕ ತಾರತಮ್ಯವನ್ನು ತೋರಿಸಿದ್ದಾರೆ ಎಂದು ಆರೋಪಿಸಿ ಆಕೆ ಮನನೊಂದು ಈ ಪಾರ್ಟಿಗಳಿಂದ ದೂರ ಉಳಿದಿದ್ದಾರೆ.

2018ರಲ್ಲಿ, ಆಕೆ ತನ್ನ ವೇತನ, ಕೆಲಸದ ಸಮಯ ಮತ್ತು ಲೈಂಗಿಕ ತಾರತಮ್ಯದ ಆರೋಪಗಳ ಬಗ್ಗೆ ದೂರು ದಾಖಲಿಸಿದ್ದರು. ತನಿಖೆಯ ನಂತರ ನ್ಯಾಯಮಂಡಳಿ, ಸಿಬ್ಬಂದಿ ಈ ದುಷ್ಕೃತ್ಯ ಎಸಗಿದೆ ಎಂದು ಹೇಳಿ ಲಿಖಿತ ಎಚ್ಚರಿಕೆ ನೀಡಿತು.

ನ್ಯಾಯಮಂಡಳಿಯ ಎಚ್ಚರಿಕೆಯನ್ನು ನಿರ್ಲಕ್ಷಿಸಿದ ಸಿಬ್ಬಂದಿ ಲೆವಿಕಾರನ್ನು ಬೇಕಾಬಿಟ್ಟಿ ನಡೆಸಿಕೊಂಡರು. ಆಕೆಯ ಫೋನ್ ತೆಗೆಯದೇ, ಅವರ ಜೊತೆಗೆ ಸರಿಯಾಗಿ ಮಾತನಾಡದೇ, ಪ್ರತಿ ಶುಕ್ರವಾರದ ಆಫೀಸ್ ಪಾರ್ಟಿಗಳಿಗೆ ಕರೆಯದೇ ಮಾನಸಿಕವಾಗಿ ಕುಗ್ಗಿಸುವ ಪ್ರಯತ್ನ ನಡೆಸಲಾಯಿತು. ಅಲ್ಲದೇ 2019 ಜನವರಿಯಲ್ಲಿ ಆಕೆ ಪೂರ್ಣಾವಧಿಯ ಕೆಲಸ ಮಾಡಬೇಕು ಎಂದು ಹೇಳಲಾಯಿತು.

ಲೆವಿಕಾ ಮೇ 2014 ರಿಂದ ವ್ಯಾಟ್‌ಫೋರ್ಡ್‌ನಲ್ಲಿ ಹಾರ್ಟ್ವೆಲ್‌ ಸಂಸ್ಥೆಯೊಂದಿಗೆ ಕೆಲಸ ನಿರ್ವಹಿಸುತ್ತಿದ್ದರು. ಆ ನಂತರ ನವೆಂಬರ್ 2016 ಮತ್ತು ಏಪ್ರಿಲ್ 2018 ರಲ್ಲಿ ವಾಟ್‌ಫೋರ್ಡ್ ಡೀಲರ್‌ಶಿಪ್‌ ಮರು ನಿರ್ಮಾಣಕ್ಕೆ ತೊಡಗಿತ್ತು. ಈ ಸಮಯದಲ್ಲಿ ಲೆವಿಕಾ ಹೆಮೆಲ್ ಹೆಂಪ್‌ಸ್ಟಡ್‌ನಲ್ಲಿರುವ ಕಂಪನಿಯ ಸೈಟ್‌ನಲ್ಲಿದ್ದರು.

ಡೈಲಿ ಮೇಲ್ ಪ್ರಕಾರ, ಕಂಪನಿಯು ಲೆವಿಕಾ ಅರೆ ಕಾಲಿಕ ಕೆಲಸ ಮಾಡುತ್ತಿದ್ದಳು ಎಂದು ಹೇಳುವ ಮೂಲಕ ತನ್ನನ್ನು ಸಮರ್ಥನೆ ಮಾಡಿಕೊಂಡಿದೆ. ಅವಳು ಮಧ್ಯಾಹ್ನ 1 ಗಂಟೆಗೆ ತನ್ನ ಕೆಲಸ ಮುಗಿಸಿದ್ದಾಳೆ. ಇನ್ನು ನ್ಯಾಯಾಧೀಶರು ಪ್ರಕರಣದ ವಿಚಾರಣೆ ನಡೆಸಿ ವಜಾಗೊಳಿಸಿದ್ದಾರೆ.

ಜೆನ್ನಿಫರ್ ಬಾರ್ಟ್ಲೆಟ್ ಎಂಬ ನ್ಯಾಯಾಧೀಶರು ಇದು ಲೈಂಗಿಕ ತಾರತಮ್ಯ. ಊಟದ ವಿಚಾರಗಳು ಅನೌಪಚಾರಿಕವಾಗಿರಬಹುದು ಎಂದಿದ್ದಾರೆ. ಅಲ್ಲದೇ ಹೆಮೆಲ್‌ನಲ್ಲಿದ್ದಾಗ ಆಕೆಯನ್ನು ಪಾರ್ಟಿಗಳಿಗೆ ಸೇರಿಸಿಕೊಳ್ಳಲಾಗಿತ್ತು ಆದರೆ ವಾಟ್‌ಫೋರ್ಡ್‌ಗೆ ಬಂದಾಗ ಆಕೆಯನ್ನು ಪಾರ್ಟಿಯಿಂದ ಕೈ ಬಿಡಲಾಗಿತ್ತು ಎನ್ನುವುದನ್ನು ಸಾಬೀತು ಮಾಡಲು ಲೆವಿಕಾ ಸಾಕಷ್ಟು ಪುರಾವೆಗಳನ್ನು ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ಲೆವಿಕಾ ಅವರ ಮಾನಸಿಕ ಯಾತನೆಯನ್ನು ಪರಿಗಣಿಸಿದೆ. ಜೊತೆಗೆ ಆಕೆಗೆ ದುಡಿಮೆಯ ನಷ್ಟವನ್ನು ತುಂಬಲು 23, 079 ಯುರೋ ಪರಿಹಾರವನ್ನು ನೀಡಬೇಕು ಎಂದು ತೀರ್ಪು ನೀಡಿದೆ.
Published by:Sushma Chakre
First published: