Farmer Woman: ಕೃಷಿಯಲ್ಲೇ ಖುಷಿಯಿದೆ ಅಂತಾರೆ ಮಹಿಳಾ ವಿಜ್ಞಾನಿ, ಇದು ಕಾಶ್ಮೀರದ ಸಾಧಕಿಯ ಕಥೆ

ದಕ್ಷಿಣ ಕೋರಿಯಾದಲ್ಲಿ ಓದುತ್ತಿದ್ದ ಈಕೆಗೆ ಕೃಷಿಯೆಡೆಗೆ ಸೆಳೆತ ಶುರುವಾಯಿತು. ಸೀದಾ ಕಾಶ್ಮೀರದಲ್ಲಿರೋ ತಮ್ಮ ಊರಿಗೆ ಬಂದವರೇ ಕೃಷಿ ಕೆಲಸಕ್ಕಾಗಿ ಟೊಂಕ ಕಟ್ಟಿ ನಿಂತರು. ಇದೀಗ ಈಕೆ ಸಾಧನೆ ಎಲ್ಲಾ ರೈತರಿಗೆ ಸ್ಫೂರ್ತಿಯಾಗಿದೆ.

ತಮ್ಮ ತೋಟದಲ್ಲಿ ಇನ್ಶಾ

ತಮ್ಮ ತೋಟದಲ್ಲಿ ಇನ್ಶಾ

  • Share this:
ಸಾವಯವ ಕೃಷಿಯಲ್ಲಿ (Organic Farming) ಸಾಧನೆ ಮಾಡಬೇಕೆಂಬ ಇಚ್ಛೆಇಟ್ಟುಕೊಂಡ ಜಮ್ಮು ಕಾಶ್ಮೀರದ (Jammu Kashmir) ಬುಡ್ಗಾಮ್‌ನ ಇನ್ಶಾ ರಸೂಲ್‌ರ (Insha Rasool)  ಕಥೆಯನ್ನೇ ಇಂದಿನ ಲೇಖನದಲ್ಲಿ ನಾವು ತಿಳಿಸುತ್ತಿದ್ದೇವೆ. ದಕ್ಷಿಣ ಕೊರಿಯಾದಲ್ಲಿ (South Korea) ತಮ್ಮ ಪಿಎಚ್‌ಡಿ (PhD) ಮಾಡ್ತಿದ್ದಾಗಲೇ  ಕೃಷಿ ಮೇಲೆ ಅವರಿಗೆ ಸೆಳೆತ ಶುರುವಾಯಿತು. ಸಾವಯವ ಕೃಷಿಯಲ್ಲಿ ಏನಾದರೂ ಸಾಧಿಸಬೇಕೆಂಬ ಇಂಗಿತವನ್ನು ತಮ್ಮ ಪ್ರಾಧ್ಯಾಪಕರಿಗೆ ತಿಳಿಸಿದರು. ಈ ವೇಳೆ 6 ತಿಂಗಳ ಕಾಲಾವಕಾಶವನ್ನು ಕೋರಿದರು. ಇದರಲ್ಲಿ ಯಶಸ್ವಿಯಾಗದೇ ಇದ್ದರೆ ಪುನಃ ವಿಶ್ವವಿದ್ಯಾಲಯವನ್ನು ಸೇರುವುದಾಗಿ ಅವರು ತಿಳಿಸಿದ್ದರು. ಹೀಗೆ 2018ರಲ್ಲಿ ಬುಡ್ಗಾಮ್‌ಗೆ ರಸೂಲ್ ಪ್ರವಾಸ ಬೆಳೆಸಿದರು. ಮುಂದೆ ಇವರು ಮಾಡಿದ್ದು ಕೃಷಿಯಲ್ಲಿ ಅಪರೂಪದ ಸಾಧನೆ...

ಕೃಷಿಯಲ್ಲಿ ಸಂಶೋಧನೆ

ಇನ್ಶಾ ಬಳಿ ಆ ಸಮಯದಲ್ಲಿ ಇದ್ದುದು ಪೂರ್ವಿಕರಿಂದ ಬಂದ 3.5 ಎಕರೆ ಜಮೀನು ಮಾತ್ರ. ಆಕೆಯ ಕುಟುಂಬ ನಿತ್ಯ ಆಹಾರಕ್ಕಾಗಿ ಅಲ್ಪ ಸ್ವಲ್ಪ ತರಕಾರಿಗಳನ್ನು ಜಮೀನಿನಲ್ಲಿ ಬೆಳೆಯುತ್ತಿತ್ತು. ಆಕೆ ನೆರೆಹೊರೆಯ ರೈತರನ್ನು ಸಂಪರ್ಕಿಸಿ ಬೀಜ, ಗೊಬ್ಬರವನ್ನು ಖರೀದಿಸಿದಳು. ಜಮೀನು ಉಳಲು, ಬಿತ್ತನೆ ನಡೆಸಲು ಇನ್ಶಾ ಕೂಲಿ ಕಾರ್ಮಿಕರನ್ನು ಕೂಡ ನೇಮಿಸಿಕೊಂಡಳು.

ವೃತ್ತಿಯಲ್ಲಿ ವಿಜ್ಞಾನಿಯಾಗಿದ್ದ ರಸೂಲ್ ಬರಿಯ ಸಂಶೋಧನೆಯಿಂದ ಮಾತ್ರವೇ ಬೆಳೆ ಬೆಳೆಯಲು ಸಾಧ್ಯವಿಲ್ಲ ಎಂಬುದನ್ನು ಮನದಟ್ಟು ಮಾಡಿಕೊಂಡಿದ್ದರು. ಬೇರೆ ಬೇರೆ ಋತುಗಳಲ್ಲಿ ಬೇರೆ ಬೇರೆ ಬೀಜಗಳನ್ನು ಅನ್ವೇಷಣೆ ನಡೆಸಲು ಆಕೆ ತಿಂಗಳುಗಳನ್ನೇ ಕಳೆದರು.

ಯಶಸ್ಸಿಗಿಂತ ಸೋಲು ಅನುಭವಿಸಿದ್ದೇ ಹೆಚ್ಚು

ತಮ್ಮ ಪ್ರಯೋಗಗಳ ಬಗ್ಗೆ ಮಾತನಾಡುವ ರಸೂಲ್ ಯಶಸ್ಸಿಗಿಂತ ಸೋಲನ್ನು ಅನುಭವಿಸಿದ್ದೇ ಹೆಚ್ಚು ಎಂದು ತಿಳಿಸುತ್ತಾರೆ. ಒಮ್ಮೊಮ್ಮೆ ಬೀಜ ಮೊಳಕೆ ಒಡೆಯದೇ ಇರುವ ಸಮಸ್ಯೆ, ಮಗದೊಮ್ಮೆ ಗೊಬ್ಬರ ಸರಿಯಾಗಿ ಕೆಲಸ ಮಾಡದೇ ಇರುವುದು, ನೀರಿನ ಹೆಚ್ಚುವರಿ ಬಳಕೆ, ತಪ್ಪಾದ ಬೀಜಗಳನ್ನು ತಪ್ಪಾದ ಋತುಮಾನಗಳಲ್ಲಿ ಬಿತ್ತುವುದು ಹೀಗೆ ಪ್ರಯೋಗಗಳು ಅವರು ತೆಗೆದುಕೊಂಡಿದ್ದ ಆರು ತಿಂಗಳ ಸಮಯಾವಕಾಶವನ್ನು ಮುಗಿಸಿತ್ತು.

ಸಾವಯವ ಕೃಷಿಯಲ್ಲಿ ತಾನು ಅನುಭವಿಸಿದ ಸೋಲು ಗೆಲುವುಗಳ ಬಗ್ಗೆ ಸಾಕಷ್ಟು ಅನುಭವವನ್ನು ಇದೀಗ ರಸೂಲ್ ಹೊಂದಿದ್ದು, ಅನೇಕ ಕೃಷಿ ಸಾಧಕರ ಕಥೆಗಳನ್ನು ಓದಿ ತಾನು ಸ್ಫೂರ್ತಿ ಪಡೆದುಕೊಂಡಿದ್ದಾಗಿ ಆಕೆ ತಿಳಿಸುತ್ತಾರೆ.

ಇದನ್ನೂ ಓದಿ: Pet Care: ಬರೀ ಮುದ್ದು ಮಾಡೋದಷ್ಟೇ ಅಲ್ಲ, ನಾಯಿಯಿಂದ ದುಡ್ಡೂ ಗಳಿಸಬಹುದು ಅಂತಿದ್ದಾರೆ ಈ ಮಹಿಳೆ!

ಕೃಷಿಯಲ್ಲೇ ಭವಿಷ್ಯ ಅರಸಿದ ಮಹಿಳಾ ವಿಜ್ಞಾನಿ

ಅಂತಿಮವಾಗಿ ಆಕೆ ಕೃಷಿಯಲ್ಲೇ ತಮ್ಮ ಭವಿಷ್ಯ ಕಂಡುಕೊಳ್ಳುವ ನಿರ್ಧಾರವನ್ನು ನಡೆಸಿದರು. ಈ ತೀರ್ಮಾನ ಆಕೆಯ ಜೀವನದ ದಿಕ್ಕನ್ನೇ ಬದಲಾಯಿಸಿತು.  ಕಳೆದ ಎರಡು ವರ್ಷಗಳಲ್ಲಿ ಇನ್ಶಾ ತನ್ನ ಕಠಿಣ ಪರಿಶ್ರಮದಿಂದ ನಿರ್ಮಿಸಿದ 'ಫಾರ್ಮ್-ಟು-ಫೋರ್ಕ್' ಬ್ರ್ಯಾಂಡ್ ಹೋಮ್‌ಗ್ರೀನ್ಸ್ ಇದೀಗ ಮನೆ ಮಾತಾಗುತ್ತಿದೆ.

ಪತಿಯ ಸಲಹೆಯೇ ಇನ್ಶಾಗೆ ನೀಡಿತು ಬೆಂಬಲ

ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನ ಹಳೆಯ ವಿದ್ಯಾರ್ಥಿಯಾಗಿರುವ ಇನ್ಶಾ ರಸೂಲ್, ಕಡಿಮೆ ತಾಪಮಾನ ಹಾಗೂ ಹಚ್ಚಹಸಿರಿನ ಪ್ರದೇಶಗಳಲ್ಲಿ ತಂಗಿದವರು. ಕಾಶ್ಮೀರ, ದೆಹಲಿ ಹಾಗೂ ಬೆಂಗಳೂರಿನಲ್ಲಿ ತಂಗಿದ ನಂತರ ಆಕೆ ದಕ್ಷಿಣ ಕೊರಿಯಾದಲ್ಲಿ ಕೂಡ ವಾಸವಾಗಿದ್ದರು. ಇದರಿಂದ ಅವರಿಗೆ ವಾತಾವರಣದ ಬಗ್ಗೆ ತಿಳಿದುಕೊಳ್ಳಲು ಸಹಾಯವಾಯಿತು.

ಸ್ಟ್ರಾಬೆರಿ ನೋಡಿ ಕೃಷಿಯೆಡೆಗೆ ಸೆಳೆತ

ಕೃಷಿ ಹಿನ್ನಲೆಯ ಕುಟುಂಬದಿಂದ ಇನ್ಶಾ ರಸೂಲ್ ಬಂದಿದ್ದರೂ ತಮ್ಮ ಮಗುವಿನ ಶಾಲಾ ಕೆಲಸದ ನಿಮಿತ್ತ ಆಕೆ ಸ್ಟ್ರಾಬೆರಿ ತೋಟವನ್ನು ಪ್ರವೇಶಿಸಿದ ನಂತರವೇ ಕೃಷಿಯಲ್ಲಿ ಆಕೆ ಇನ್ನಷ್ಟು ಆಸಕ್ತಿಯನ್ನು ಬೆಳೆಸಿಕೊಂಡರಂತೆ ಎಂಬುದು ಆಕೆಯ ಮಾತಾಗಿದೆ. ತಾಜಾ ಸ್ಟ್ರಾಬೆರಿಗಳನ್ನು ಬೆಳೆಸಲು ಅವರು ಅನುಸರಿಸಿದ ತಂತ್ರಜ್ಞಾನ ನಿಜಕ್ಕೂ ನಂಬಲು ಅಸಾಧ್ಯವಾದುದು ಎಂಬುದು ಇನ್ಶಾ ಮಾತಾಗಿದೆ.

ಕಾಶ್ಮೀರದಲ್ಲಿ ಕೂಡ ಇದೇ ರೀತಿಯ ಕೃಷಿ ಪದ್ಧತಿಯನ್ನು ಯಾರಾದರೂ ಅನುಸರಿಸಬೇಕು ಎಂಬುದಾಗಿ ತಮ್ಮ ಪತಿಗೆ ಹೇಳಿದ್ದನ್ನು ಅವರು ಸ್ಮರಿಸುತ್ತಾರೆ. ನಮ್ಮದೇ ಕೃಷಿ ಭೂಮಿ ಇರುವಾಗ ಈ ಕೆಲಸವನ್ನು ಬೇರೆಯವರು ಮಾಡಲಿ ಎಂದು ನಾವೇಕೆ ಕಾಯಬೇಕು ಎಂಬುದಾಗಿ ಪತಿ ನೀಡಿದ ಸಲಹೆಯೇ ಆಕೆಗೆ ನೂರಾನೆ ಬಲವನ್ನು ನೀಡಿತು.

ಇದನ್ನೂ ಓದಿ: Technology: ಮಾನವ ಮೆದುಳಿಗೂ ಬಂತು ನ್ಯೂರಾಲಿಂಕ್ ಚಿಪ್! ಎಲೋನ್ ಮಸ್ಕ್ ನೇತೃತ್ವದಲ್ಲಿ ನಡೀತಿದೆ ಹೊಸ ಪ್ರಯೋಗ!

ಭಿನ್ನ ರೀತಿಯ ಕೃಷಿ ಪದ್ಧತಿ

ಕೃಷಿ ಭೂಮಿಯನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಿದ ಇನ್ಶಾ, ಒಂದು ಋತುಮಾನದಲ್ಲಿ ಒಂದೇ ಬೆಳೆ ಬೆಳೆಯುವ ಬದಲಿಗೆ ಬೇರೆ ಬೇರೆ ಋತುಮಾನಗಳಲ್ಲಿ ಬೇರೆ ಬೇರೆ ಬೆಳೆಗಳನ್ನು ಬೆಳೆಯುವ ವಿಧಾನಕ್ಕೆ ಆದ್ಯತೆ ನೀಡಿದರು.  ಕೀಟಗಳನ್ನು ದೂರವಿಡಲು ಆಕೆ  ಅಂತರ ಬೆಳೆ ವಿಧಾನವನ್ನು ಅಳವಡಿಸಿಕೊಂಡರು. ಅವರು ತರಕಾರಿಗಳ ನಡುವೆ ಬೆಳ್ಳುಳ್ಳಿ, ಸಾಮಾನ್ಯ ಗಿಡ ಮತ್ತು ಆರ್ಟೆಮಿಸಿಯಾದಂತಹ ಕೀಟ ನಿಯಂತ್ರಕ ಸಸ್ಯಗಳನ್ನು ಬೆಳೆಯುತ್ತಾರೆ. ಕೀಟಗಳ ಆಕ್ರಮಣದ ಸಂದರ್ಭದಲ್ಲಿ, ಅವಳು ಆರ್ಟೆಮಿಸಿಯಾ, ಬೇವಿನ ಎಣ್ಣೆ, ಮೆಣಸಿನಕಾಯಿ, ಈರುಳ್ಳಿ ಮತ್ತು ಬೆಳ್ಳುಳ್ಳಿಯ ಹುದುಗಿಸಿದ ಮಿಶ್ರಣವನ್ನು ಬಳಸುತ್ತಾರೆ.

ಸೋಶಿಯಲ್ ಮೀಡಿಯಾಗಳ ಮುಖಾಂತರ ಬೆಳೆ ಮಾರಾಟ

ಸಾಮಾಜಿಕ ಜಾಲತಾಣಗಳಾದ ಇನ್‌ಸ್ಟಾಗ್ರಾಮ್ ಹಾಗೂ ಫೇಸ್‌ಬುಕ್‌ನಲ್ಲಿ ಕೂಡ ತಮ್ಮ ಬೆಳೆಗಳನ್ನು ಮಾರಾಟ ಮಾಡುವ ಇನ್ಶಾ, ಪೋಸ್ಟ್ ಅಪ್‌ಲೋಡ್ ಮಾಡಿದ 24 ಗಂಟೆಗಳಲ್ಲೇ ತಮ್ಮೆಲ್ಲಾ ಬೆಳೆಗಳು ಮಾರಾಟವಾಗುವುದಕ್ಕೆ ಸಾಕ್ಷಿಯಾಗಿದ್ದಾರೆ.

ತಿಂಗಳಿಗೆ ಕೃಷಿಯಿಂದ ಲಕ್ಷ ಲಕ್ಷ ಆದಾಯ

ಇನ್ನು ಆದಾಯದ ಬಗ್ಗೆ ಮಾಹಿತಿ ನೀಡುವ ಇನ್ಶಾ ಕಳೆದ ನವೆಂಬರ್ ಹಾಗೂ ಡಿಸೆಂಬರ್‌ನಲ್ಲಿ 8 ಲಕ್ಷ ರೂ. ಗಳನ್ನು ಗಳಿಸಿರುವುದಾಗಿ ತಿಳಿಸುತ್ತಾರೆ. ಫ್ರೆಂಚ್ ಬೀನ್ಸ್ ಹಾಗೂ ಬಟಾಣಿ ಬೆಳೆಗಳಿಂದ ಕೂಡ ಲಾಭ ಹೊಂದಿರುವುದಾಗಿ ತಿಳಿಸಿರುವ ಇನ್ಶಾ, ಸಿಹಿಯಾದ ಜೋಳ ಮತ್ತು ಟೊಮ್ಯಾಟೋ ಬೆಳೆಗಳಿಂದ ಕೂಡ ಲಾಭ ಪಡೆದುಕೊಂಡಿರುವುದಾಗಿ ತಿಳಿಸುತ್ತಾರೆ. ಕೃಷಿಯಲ್ಲೇ ಖುಷಿಯಿದೆ ಅಂತಾರೆ ಈ ಮಹಿಳಾ ವಿಜ್ಞಾನಿ.
Published by:Annappa Achari
First published: