HOME » NEWS » Trend » INTERESTING STORY EVERYTHING IS IN CAKE THIS CELEBRITY ART DIRECTOR TURNED HER ENTIRE OUTFIT INTO COOKIES STG SCT

ಹಾಲಿವುಡ್ ಕಲಾ ನಿರ್ದೇಶಕಿ ಸಿದ್ಧಪಡಿಸಿದ ಡ್ರೆಸ್​ಗೆ ನೆಟ್ಟಿಗರು ಫಿದಾ; ಇದು ಕುಕೀಸ್ ಕಮಾಲ್!

ಹಾಲಿವುಡ್‌ನ ಸೆಲೆಬ್ರಿಟಿ ಕಲಾ ನಿರ್ದೇಶಕಿಯೊಬ್ಬರು ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಕುಕೀಸ್ ಮತ್ತು ಕೇಕ್ ಮೂಲಕ ತಮ್ಮ ಬಳಿ ಇರುವ ಉಡುಗೆಗಳ ಪ್ರತಿರೂಪವನ್ನುಕಲಾ ವಿನ್ಯಾಸ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.

news18-kannada
Updated:May 8, 2021, 8:58 AM IST
ಹಾಲಿವುಡ್ ಕಲಾ ನಿರ್ದೇಶಕಿ ಸಿದ್ಧಪಡಿಸಿದ ಡ್ರೆಸ್​ಗೆ ನೆಟ್ಟಿಗರು ಫಿದಾ; ಇದು ಕುಕೀಸ್ ಕಮಾಲ್!
ಕಲಾ ನಿರ್ದೇಶಕಿಯ ಉಡುಗೆ
  • Share this:
ಇವತ್ತು ಬೇಕರಿ ಉದ್ಯಮ ಬಾಯಿ ರುಚಿ ತಣಿಸಿ, ಹಸಿವು ನಿವಾರಣೆಗಷ್ಟೇ ಸೀಮಿತವಾಗಿಲ್ಲ. ಎಲ್ಲರ ಭಾವನೆಗಳಿಗೆ ಸ್ಪಂದಿಸುವ ಕಲಾ ತಾಣವಾಗಿ ಪರಿವರ್ತನೆ ಹೊಂದಿದೆ. ಹುಟ್ಟುಹಬ್ಬ, ಸಂಭ್ರಮದ ಗಳಿಗೆಗಳನ್ನು ಒಂದು ಥೀಮ್ ಇಟ್ಟುಕೊಂಡು ಆಚರಿಸುವುದು ಈಗ ಸರ್ವೇ ಸಾಮಾನ್ಯ. ಆ ಥೀಮ್ ಅನುಗುಣವಾಗಿ ಕೇಕ್ ಮತ್ತು ಕುಕೀಸ್‌ಗಳನ್ನು ತಯಾರಿಸುವುದು ಸದ್ಯ ಪ್ರಚಲಿತದಲ್ಲಿದೆ. ಆದರೆ ಹಾಲಿವುಡ್‌ನ ಸೆಲೆಬ್ರಿಟಿ ಕಲಾ ನಿರ್ದೇಶಕಿಯೊಬ್ಬರು ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಕುಕೀಸ್ ಮತ್ತು ಕೇಕ್ ಮೂಲಕ ತಮ್ಮ ಬಳಿ ಇರುವ ಉಡುಗೆಗಳ ಪ್ರತಿರೂಪವನ್ನುಕಲಾ ವಿನ್ಯಾಸ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.

ಅಮೆರಿಕದ ಪ್ರಶಸ್ತಿ ವಿಜೇತ ವಿನ್ಯಾಸಕಿ ಲಿಜ್ ಪ್ಲೆಷರ್ ತಮ್ಮ ಸೃಜನಶೀಲತೆಯ ಮೂಲಕ ನೆಟ್ಟಿಗರ ಮನಗೆದ್ದಿದ್ದಾರೆ. ಸಾಮಾನ್ಯ ಉಡುಗೆಗಳು ಕೂಡ ಸೋಶೀಯಲ್ ಮೀಡಿಯಾದಲ್ಲಿ ಪ್ರಸಿದ್ಧಿಯಾಗುವಂತೆ ಅವುಗಳನ್ನು ಕುಕೀಸ್ ಮೂಲಕ ವಿನ್ಯಾಸ ಮಾಡಿ ಹಂಚಿಕೊಂಡಿದ್ದಾರೆ. ಮೂಲತಃ ಕಲಾ ನಿರ್ದೇಶಕಿಯಾಗಿರುವ ಲಿಜ್ ಹಾಲಿವುಡ್ ಸ್ಟುಡಿಯೋಗಳಾದ ವಾರ್ನರ್ ಬ್ರದರ್ಸ್, ನೆಟ್‌ಫ್ಲಿಕ್ಸ್, ಡಿಸ್ನಿ ಸೇರಿದಂತೆ ಹಲವಾರು ಪ್ರತಿಷ್ಠಿತ ಸಂಸ್ಥೆಗಳಲ್ಲಿ ತಮ್ಮ ಕಲಾ ನೈಪುಣ್ಯತೆ ಮೆರೆದಿದ್ದಾರೆ. ಸದ್ಯ ಉಡುಪುಗಳನ್ನು ಕುಕೀಸ್‌ನಲ್ಲಿ ವಿನ್ಯಾಸ ಮಾಡಿ ಅದರ ಚಿತ್ರಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಕಂದು ಬಣ್ಣದ ಸ್ವೆಟರ್, ಪ್ಯಾಂಟ್ ಮತ್ತು ಸ್ಪಾಗೆಟ್ಟಿ ಟಾಪ್ ವಿನ್ಯಾಸವನ್ನು ಕುಕೀಸ್ ಮೂಲಕ ಮಾಡಿದ್ದಾರೆ. ಇನ್ನೂ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುವಾಗ ತಮ್ಮ ಮನಸ್ಸಿನ ಭಾವನೆಯನ್ನು ಹಂಚಿಕೊಂಡಿದ್ದಾರೆ. 'ಫ್ಯಾಷನ್ ಒಬ್ಬ ವ್ಯಕ್ತಿಯ ಜೀವನದ ಅನುಭವದಲ್ಲಿ ಮಿಳಿತವಾಗಿರುವ ಕಾರಣ ಫ್ಯಾಷನ್ ಬಹಳ ವಿಶೇಷ ಸ್ಥಾನ ಪಡೆದುಕೊಂಡಿದೆ. ಉಡುಪುಗಳು ಯಾವಾಗಲೂ ಒಂದು ಅನನ್ಯ ಕಥೆ ಹೇಳುವುದರಲ್ಲಿ ಎಂದೂ ಸೋಲುವುದಿಲ್ಲ. ಸದಾ ಜೀವಂತವಾಗಿರುವ ಇತಿಹಾಸದ ಕುರುಹುವಿನಂತೆ ಉಳಿಯುತ್ತದೆ. ಅದೊಂದು ಪದಗಳೇ ಇಲ್ಲದ ಪತ್ರಿಕೆಯಂತೆ ನಮ್ಮ ದಿನ ನಿತ್ಯದ ಎಲ್ಲಾ ಕ್ಷಣಗಳನ್ನೂ ದಾಖಲಿಸುತ್ತದೆ' ಎಂದು ಪುಟ್ಟ ಬರಹವನ್ನು ಬರೆದುಕೊಂಡಿದ್ದಾರೆ.




ಕಳೆದ ವಾರ ಪೋಸ್ಟ್ ಹಾಕಿದ್ದು, ಅಲ್ಲಿಂದ ಇಲ್ಲಿಯ ತನಕ 3 ಸಾವಿರ ಮೆಚ್ಚುಗೆಯನ್ನು ಗಳಿಸಿದೆ. ಬಳಕೆದಾರರೊಬ್ಬರು ಈ ಪೋಸ್ಟ್‌ಗೆ ಕಮೆಂಟ್ ಹಾಕಿದ್ದು, 'ವಾವ್! ನೀವು ಮತ್ತು ಈ ಸೃಜನಶೀಲತೆ ಎರಡೂ ಸುಂದರವಾಗಿದೆ' ಎಂದಿದ್ದಾರೆ. ಮತ್ತೊಬ್ಬ ಬಳಕೆದಾರರು 'ನಾನು ನಿಮ್ಮ ಕ್ರಿಯಾಶೀಲತೆಯನ್ನು ಬಹಳ ಪ್ರೀತಿಸುತ್ತೇನೆ ಲಿಜ್, ನೀವು ಪ್ರತಿ ಬಾರಿ ನನ್ನನ್ನು ಮಂತ್ರಮುಗ್ಧಗೊಳಿಸುತ್ತೀರಿ. ಹಾಯ್ ಬ್ಯೂಟಿಫುಲ್' ಎಂದಿದ್ದಾರೆ.

ಇದಿಷ್ಟೇ ಅಲ್ಲದೇ ರೆಡ್ಡಿಟ್‌ನಲ್ಲೂ ಕೂಡ ಸಾಕಷ್ಟು ಬಳಕೆದಾರರು ಲಿಜ್ ಅವರ ಪೋಸ್ಟ್ ಅನ್ನು ಹೊಗಳಿದ್ದಾರೆ. ಒಬ್ಬ ಬಳಕೆದಾರರು ' ವಾವ್, ಇದು ಕುಕೀಸ್‌ನಿಂದ ವಿನ್ಯಾಸ ಮಾಡಿದ ಉಡುಗೆ ಎಂದು ಗುರುತಿಸಲು ಬಹಳ ಶ್ರಮಪಡಬೇಕಾಯಿತು. ಬಹಳ ಚೆನ್ನಾಗಿದೆ' ಎಂದಿದ್ದಾರೆ. ಮತ್ತೊಬ್ಬ ಬಳಕೆದಾರರು 'ನಾನು ಮೊದಲು ನೋಡಿದಾಗ ಇದು ಕುಕೀಸ್ ಎಂದು ಗೊತ್ತಾಗಲಿಲ್ಲ. ಆದರೆ ನೀವು ಅದರ ಪಕ್ಕ ಇಟ್ಟಿರುವ ವಿಸ್ಕ್ ( ಕುಕೀಸ್ ಮಿಕ್ಸ್ ಮಾಡಲು ಬಳಸುವ ಸಾಧನ) ಅನ್ನು ನೋಡುವವರೆಗೆ ನನಗೆ ಇದು ಕುಕೀಸ್ ಎಂದು ತಿಳಿಯಲಿಲ್ಲ. ನೀವು ಇಷ್ಟು ದೊಡ್ಡದಾದ ವಿಸ್ಕ್ ಅನ್ನು ಎಲ್ಲಿಂದ ಪಡೆದುಕೊಂಡಿರಿ?' ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಈ ಎಲ್ಲಾ ಕಮೆಂಟ್ಗಳಿಗೂ ಉತ್ತರಿಸಿರುವ ಲಿಜ್ ಅವರು 'ಥ್ಯಾಂಕ್ ಯೂ ಸೋ ಮಚ್! ನಾನು ವೈಯಕ್ತಿಕವಾಗಿ ಈ ರೀತಿಯ ಪ್ರಾಜೆಕ್ಟ್‌ಗಳನ್ನು ಮಾಡಲು ಹೆಚ್ಚು ಬಯಸುತ್ತೇನೆ. ಆ ಮೂಲಕ ನಾನು ನನ್ನ ಸ್ಫೂರ್ತಿಯನ್ನು ಕಂಡುಕೊಳ್ಳಲು ಇದು ನನಗೆ ನೆರವಾಗುತ್ತದೆ. ಪ್ರತಿಯೊಂದು ವಿವರಣೆ, ಅದರ ಆಕಾರವನ್ನು ಮರು ಸೃಷ್ಟಿ ಮಾಡುವುದು ಬಹಳ ಖುಷಿಯನ್ನು ನೀಡುತ್ತದೆ' ಎಂದಿದ್ದಾರೆ.
Youtube Video

ಇನ್ನು ಲಿಜ್ ಅವರು ಬ್ಲಾಗ್ ಹೊಂದಿದ್ದು ಅಡುಗೆ ಮತ್ತು ಕಲಾ ನೈಪುಣ್ಯತೆ ಬಳಸಿಕೊಂಡು ಸೃಜನಾತ್ಮಕ ಕೆಲಸಗಳನ್ನು ಮತ್ತು ಟೆಕ್ನಿಕ್‌ಗಳನ್ನು ಆಸಕ್ತರಿಗಾಗಿ ಹಂಚಿಕೊಳ್ಳುತ್ತಿರುತ್ತಾರೆ. ಅವರ ಇತ್ತೀಚಿನ ಬ್ಲಾಗ್ ಪೋಸ್ಟ್‌ನಲ್ಲಿ ಕೈಗಳಿಂದ ಚಿತ್ರಿಸಿದ ಕ್ರೂಸೆಂಟ್ ಕುಕೀಸ್ ಅನ್ನು ಅವರ ಓದುಗರ ಜೊತೆಗೆ ಹಂಚಿಕೊಂಡಿದ್ದರು.
First published: May 8, 2021, 8:58 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories