Love Story: ಪುಟಿನ್‌ ಪುತ್ರಿಯ‌ ಲವ್‌ ಸ್ಟೋರಿ! ಲವರ್​ ನೋಡಲು 50 ಬಾರಿ ಮನೆಯಿಂದ ಓಡಿ ಹೋಗಿದ್ದಾಳೆ ಈಕೆ

ಪುಟಿನ್‌ ಅವರ ಸಿಕ್ರೇಟ್‌ ಲವ್‌ ಸ್ಟೋರಿ ಬಗ್ಗೆ ತಿಳಿದುಕೊಂಡಿದ್ದ ಪ್ರಪಂಚಕ್ಕೆ ಈಗ ಅವರ ಪುತ್ರಿಯ ಲವ್‌ ಸ್ಟೋರಿ ಇಂಟರ್ಸ್ಟಿಂಗ್‌ ಆಗಿ ಕಾಣುತ್ತಿದೆ. ಮಾಜಿ ನರ್ತಕಿ ಆಗಿರುವ ಪುಟಿನ್‌ ಪುತ್ರಿ ಕಟೆರಿನಾ ಟಿಖೋನೋವಾ ಜರ್ಮನಿಯ ಮ್ಯೂನಿಚ್‌ ಮೂಲದ ಬ್ಯಾಲೆಟ್ ನೃತ್ಯಗಾರ ಇಗೋರ್‌ ಜೆಲೆನ್ಸ್‌ಕಿ ಜೊತೆ ಸಂಬಂಧ ಹೊಂದಿದ್ದಾರೆ ಎಂಬ ಸಂಶಯ ಮೂಡುತ್ತಿದೆ.

ಪುಟಿನ್‌ ಪುತ್ರಿ ಕಟೆರಿನಾ ಟಿಖೋನೋವಾ

ಪುಟಿನ್‌ ಪುತ್ರಿ ಕಟೆರಿನಾ ಟಿಖೋನೋವಾ

  • Share this:
ಉಕ್ರೇನ್‌ (Ukraine) ಮೇಲೆ ಯುದ್ಧ ಸಾರಿದ ಬಳಿಕ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ (Russian President Vladimir Putin) ಅವರ ರಹಸ್ಯಮಯ ವೈಯಕ್ತಿಕ ಜೀವನ ಜಗತ್ತಿನ ಮುಂದೆ ಅನಾವರಣ ಆಗುತ್ತಿದೆ. ಇಲ್ಲಿಯವರೆಗೂ ಪುಟಿನ್‌ ಅವರ ಸಿಕ್ರೇಟ್‌ ಲವ್‌ ಸ್ಟೋರಿ (Secret Love Story) ಬಗ್ಗೆ ತಿಳಿದುಕೊಂಡಿದ್ದ ಪ್ರಪಂಚಕ್ಕೆ ಈಗ ಅವರ ಪುತ್ರಿಯ ಲವ್‌ ಸ್ಟೋರಿ ಇಂಟರ್ಸ್ಟಿಂಗ್‌ ಆಗಿ ಕಾಣುತ್ತಿದೆ. ಮಾಜಿ ನರ್ತಕಿ ಆಗಿರುವ ಪುಟಿನ್‌ ಪುತ್ರಿ ಕಟೆರಿನಾ ಟಿಖೋನೋವಾ (Katerina Tikhonova) ಜರ್ಮನಿಯ ಮ್ಯೂನಿಚ್‌ ಮೂಲದ ಬ್ಯಾಲೆಟ್ ನೃತ್ಯಗಾರ ಇಗೋರ್‌ ಜೆಲೆನ್ಸ್‌ಕಿ (Igor Zelensky)  ಜೊತೆ ಸಂಬಂಧ ಹೊಂದಿದ್ದಾರೆ ಎಂಬ ಸಂಶಯ ಮೂಡುತ್ತಿದೆ.

ಇಗೋರ್‌ ಜೆಲೆನ್ಸ್‌ಕಿ ಹಾಗೂ ವೊಲೊಡಿಮಿರ್‌ ಜೆಲೆನ್ಸ್‌ಕಿಗೂ ಏನು ಸಂಬಂಧ
ಇದೇನಿದು ಜೆಲೆನ್ಸ್‌ಕಿನಾ ಎಂದು ಹುಬ್ಬೇರಿಸಬೇಡಿ. ಇಗೋರ್‌ ಜೆಲೆನ್ಸ್‌ಕಿ ಹಾಗೂ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಜೆಲೆನ್ಸ್‌ಕಿಗೂ ಯಾವುದೇ ಸಂಬಂಧ ಇಲ್ಲ. ಕೇವಲ ಅಡ್ಡಹೆಸರಿನಲ್ಲಿ ಮಾತ್ರ ಅವರಿಬ್ಬರಿಗೂ ಸಾಮ್ಯತೆ. ಪುಟಿನ್ ಪುತ್ರಿ ಟಿಖೋನೋವಾ ಮತ್ತು ಇಗೋರ್‌ ಜೆಲೆನ್ಸ್‌ಕಿ ಮಗುವನ್ನು ಕೂಡ ಹೊಂದಿರಬಹುದು ಎಂಬ ಅನುಮಾನ ಮೂಡಿದೆ. 2018 ರಿಂದ 2019ರ ನಡುವೆ ಪುಟಿನ್ ಪುತ್ರಿ 50ಕ್ಕೂ ಹೆಚ್ಚು ಬಾರಿ ಮ್ಯೂನಿಚ್‌ಗೆ ಪ್ರಯಾಣಿಸಿದ್ದಾರೆ ಎಂಬ ಅಂಶ ರಷ್ಯಾದ ಸ್ವತಂತ್ರ ಮಾಧ್ಯಮ ಸಂಸ್ಥೆ ಐಸ್ಟೋರಿಸ್‌ ಮತ್ತು ಜರ್ಮನಿಯ ನಿಯತಕಾಲಿಕೆ ಡೆರ್‌ ಸ್ಪೀಗೆಲ್‌ನ ಜಂಟಿ ತನಿಖೆಯಿಂದ ಬಯಲಾಗಿದೆ.

ಪ್ರಿಯಕರನನ್ನು ನೋಡಲು ಜರ್ಮನಿಗೆ ಪ್ರಯಾಣಿಸುತ್ತಿದ್ದ ಟಿಖೋನೋವಾ
ಟಿಖೋನೋವಾ ಪ್ರತಿ ಬಾರಿಯೂ ತಮ್ಮ ಪ್ರಿಯಕರ ಜೆಲೆನ್ಸ್‌ಕಿಯನ್ನು ನೋಡಲು ಜರ್ಮನಿಯ ಮ್ಯೂನಿಚ್‌ಗೆ ಸರ್ಕಾರಿ ಚಾರ್ಟರ್ಡ್‌ ವಿಮಾನಗಳಲ್ಲಿ ಪ್ರಯಾಣಿದ್ದಾರೆ ಎಂಬುದು ತಿಳಿದುಬಂದಿದೆ. ಯಾವಾಗಲೂ ರಹಸ್ಯವಾಗಿಯೇ ಮುಚ್ಚಿದ್ದ ಪುಟಿನ್‌ ಮತ್ತು ಅವರ ಕುಟುಂಬದ ವೈಯಕ್ತಿಕ ಜೀವನ ಫೆಬ್ರವರಿಯಲ್ಲಿ ಉಕ್ರೇನ್‌ ಮೇಲೆ ಯುದ್ಧ ಘೋಷಿಸಿದ ಬಳಿಕ ಬಹಿರಂಗವಾಗುತ್ತಿದೆ. ಈ ಹಿಂದೆ ಪುಟಿನ್‌ ಅವರು ಒಲಿಂಪಿಕ್ಸ್‌ ಪದಕ ವಿಜೇತೆ ಜಿಮ್ನಾಸ್ಟಿಕ್‌ ಪಟು ಅಲಿನಾ ಕಬೆವಾ ಜೊತೆ ಇದೆ ಎನ್ನಲಾದ ರಹಸ್ಯಮಯ ಲವ್‌ ಸ್ಟೋರಿ ಬಹಿರಂಗವಾಗಿತ್ತು. ಈಗ ಅವರ ಪುತ್ರಿ ಜರ್ಮನಿ ಮೂಲದ ಡ್ಯಾನ್ಸರ್‌ ಜೊತೆ ಸಂಬಂಧ ಹೊಂದಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ:  SpiceJet Airhostesses Dance: ಕೆಲಸದ ಮಧ್ಯೆ ನಟಿಯೊಂದಿಗೆ ಕುಣಿದು ನಲಿದ ಗಗನಸಖಿಯರು, ವಿಡಿಯೋ ಇಲ್ಲಿದೆ

ಪುಟಿನ್ ಪುತ್ರಿ ಟಿಖೋನೋವಾ ಅವರು ಜರ್ಮನಿಗೆ ಹಲವು ಬಾರಿ ಪ್ರಯಾಣಿಸಿದ್ದು, ಮ್ಯೂನಿಚ್‌ನಲ್ಲಿ ಇರುವ ನೃತ್ಯಗಾರ ಜೆಲೆನ್ಸ್‌ಕಿ ಜೊತೆ ನಿಜವಾಗಿಯೂ ಸಂಬಂಧ ಹೊಂದಿರಬಹುದು ಎಂದು ಪಾಶ್ಚಿಮಾತ್ಯ ಮಾಧ್ಯಮಗಳು ಟೀಕಿಸಿವೆ. ಈ ವೇಳೆ ಪಾಶ್ಚಿಮಾತ್ರ ರಾಷ್ಟ್ರಗಳ ವಿರುದ್ಧ ಪುಟಿನ್‌ ಅವರ ನಿಲುವನ್ನು ಕೂಡ ಮಾಧ್ಯಮಗಳು ಉಲ್ಲೇಖಿಸುತ್ತಿರುವುದು ಗಮನಾರ್ಹ.

ಮಾಸ್ಕೋ ಮತ್ತು ಮ್ಯೂನಿಚ್‌ ನಡುವಿನ ಸರಣಿ ವಿಮಾನ ಪ್ರಯಾಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ತನಿಖೆಯು ಬಹಿರಂಗಪಡಿಸಿದೆ. ಅದಲ್ಲದೇ, ಮಾಧ್ಯಮಗಳ ತನಿಖೆಯ ವೇಳೆ ಎರಡು ವರ್ಷದ ಬಾಲಕಿಯ ಪಾಸ್‌ಪೋರ್ಟ್‌ ಇರುವುದು ಕೂಡ ಪತ್ತೆಯಾಗಿದೆ. ಅದು, ಪುಟಿನ್ ಅವರ ಅಪರಿಚಿತ ಮೊಮ್ಮಗಳಾಗಿರುವ ಸಾಧ್ಯತೆ ಇದೆ ಎಂದು ಮಾಧ್ಯಮ ಸಂಸ್ಥೆಗಳು ವರದಿ ಮಾಡಿವೆ.

ಯಾರಿತ ಇಗೋರ್‌ ಜೆಲೆನ್ಸ್‌ಕಿ?
ವರದಿಗಳ ಪ್ರಕಾರ, ಇಗೋರ್ ಜೆಲೆನ್ಸ್‌ಕಿ 52 ವರ್ಷದ ಡ್ಯಾನ್ಸರ್‌ ಆಗಿದ್ದು, ಈ ವರ್ಷದ ಏಪ್ರಿಲ್‌ವರೆಗೆ ಬೇರಿಸ್ಚೆಸ್ ಸ್ಟ್ಯಾಟ್ಸ್‌ಬಾಲ್‌ನ ನಿರ್ದೇಶಕರಾಗಿದ್ದರು. ಖಾಸಗಿ ಕೌಟುಂಬಿಕ ಕಾರಣಗಳನ್ನು ನೀಡಿ ಏಪ್ರಿಲ್ 4ರಂದು ತಮ್ಮ ಸ್ಥಾನಕ್ಕೆ ಜೆಲೆನ್ಸ್‌ಕಿ ರಾಜೀನಾಮೆ ನೀಡಿದ್ದರು. ಉಕ್ರೇನ್‌ ಮೇಲೆ ವ್ಲಾಡಿಮಿರ್‌ ಪುಟಿನ್‌ ಘೋಷಿಸಿದ ಯುದ್ಧವನ್ನು ಖಂಡಿಸುವಲ್ಲಿ ಇಗೋರ್‌ ಜೆಲೆನ್ಸ್‌ಕಿ ವಿಫಲರಾಗಿದ್ದಾರೆ ಎಂದು ಗಾರ್ಡಿಯನ್‌ ವರದಿ ಮಾಡಿತ್ತು. ಜೆಲೆನ್ಸ್‌ಕಿ ರಷ್ಯಾದ ರಾಷ್ಟ್ರೀಯ ಸಾಂಸ್ಕೃತಿಕ ಪರಂಪರೆಯ ಪ್ರತಿಷ್ಠಾನದ ಮೇಲ್ವಿಚಾರಣಾ ಮಂಡಳಿಯಲ್ಲಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

ಇದನ್ನೂ ಓದಿ:  Short Term Memory Loss: ಈ ಮನುಷ್ಯನಿಗೆ ಇರೋದು ಗಜನಿ ಖಾಯಿಲೆ! 30 ನಿಮಿಷದಲ್ಲಿ ಹೆಂಡತಿಯನ್ನೇ ಮರೆತು ಬಿಡುತ್ತಾನೆ ಈತ

ಇನ್ನು, “ಬ್ಯಾಲೆಟ್ ನೃತ್ಯ ತಂಡವನ್ನು ಮುನ್ನಡೆಸಲು ಸಂಪೂರ್ಣ ಏಕಾಗ್ರತೆ ಮತ್ತು ದಕ್ಷತೆಯ ಅಗತ್ಯವಿದೆ. ಆದರೆ, ಪ್ರಸ್ತುತ ಸಮಯದಲ್ಲಿ ವೈಯಕ್ತಿಕ, ಕೌಟುಂಬಿಕ ವಿಷಯಗಳಿಗೆ ನನ್ನ ಸಂಪೂರ್ಣ ಗಮನ ಮತ್ತು ಸಮಯ ನೀಡುವ ಅವಶ್ಯಕತೆ ಇದೆ. ಈ ಹಿನ್ನೆಲೆ ಮ್ಯೂನಿಚ್‌ನಲ್ಲಿ ಬ್ಯಾಲೆ ನಿರ್ದೇಶಕನಾಗಿ ನಾನು ಸಮರ್ಪಕವಾಗಿ ಕೆಲಸ ಮಾಡಲು ಆಗುವುದಿಲ್ಲ. ಈಗ ನನ್ನ ಕುಟುಂಬಕ್ಕೆ ನನ್ನ ಬೆಂಬಲದ ಅಗತ್ಯವಿದೆ” ಎಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ವೇಳೆ ಹೇಳಿದ್ದರು ಎಂದು ನ್ಯೂಸ್‌ವೀಕ್‌ ವರದಿ ಮಾಡಿತ್ತು.

ಪುಟಿನ್ ಪುತ್ರಿ ಮತ್ತು ಜೆಲೆನ್ಸ್‌ಕಿ ಈಗ ಎಲ್ಲಿದ್ದಾರೆ?
ಟಿಖೋನೋವಾ ಮತ್ತು ಜೆಲೆನ್ಸ್‌ಕಿ ಪ್ರಸ್ತುತ ಎಲ್ಲಿದ್ದಾರೆ ಎಂಬುದು ಇದುವರೆಗೂ ತಿಳಿದುಬಂದಿಲ್ಲ. ಈ ಬಗ್ಗೆ ತಿಳಿದುಕೊಳ್ಳಲು ಇಗೋರ್ ‌ಜೆಲೆನ್ಸ್‌ಕಿಯ ಮ್ಯೂನಿಚ್‌ ಮನೆಗೆ ಭೇಟಿ ನೀಡಿದ ಪತ್ರಕರ್ತರಿಗೆ ಅವರ ಮಾಜಿ ಪತ್ನಿ ಯಾನಾ ಸೆರೆಬ್ರಿಯಾಕೋವಾ ಮಾತ್ರ ಸಿಕ್ಕಿದ್ದಾರೆ. ಅವರು ಕೂಡ ಮಾಜಿ ಬ್ಯಾಲೆಟ್ ನೃತ್ಯಗಾರ್ತಿ.
Published by:Ashwini Prabhu
First published: