Viral Video: ಮಲಾಲಾ ಯೂಸುಫಾಯ್‌ಗೆ 'ಮಿಸ್ ಯೂ' ಎಂದ ಗೆಳತಿಯ ವೀಡಿಯೋ ಈಗ ಫುಲ್ ವೈರಲ್

ಮಲಾಲ ಯೂಸುಫಾಯ್‌ ಅವರ ಸ್ನೇಹಿತಳಾದ ವೀ ಅವರು ಪೋಸ್ಟ್ ಮಾಡಿದ್ದಾರೆ ಮತ್ತು ಅವರಿಬ್ಬರನ್ನೂ ಪದವಿ ಪ್ರದಾನ ಸಮಾರಂಭದಲ್ಲಿ ಕಪ್ಪು ಗೌನ್ ಧರಿಸಿರುವುದನ್ನು ನಾವು ಇಲ್ಲಿ ನೋಡಬಹುದು. ವೀಡಿಯೋದಲ್ಲಿ ವೀ ತಮ್ಮ ಇಬ್ಬರೂ ಸ್ನೇಹಿತರ ವಿರುದ್ಧ ವ್ಯಕ್ತಿತ್ವಗಳ ಬಗ್ಗೆ ಮಾತನಾಡುತ್ತಾರೆ, ಇದು ಅವರ ನಡುವೆ ಬಲವಾದ ಬಂಧವನ್ನು ಸೃಷ್ಟಿಸಿತ್ತು ಅಂತ ಸಹ ಹೇಳುತ್ತಾರೆ.

ಮಲಾಲಾ ಯೂಸುಫ್ಜಾಯ್ ಹಾಗೂ ಆಕೆಯ ಗೆಳತಿ

ಮಲಾಲಾ ಯೂಸುಫ್ಜಾಯ್ ಹಾಗೂ ಆಕೆಯ ಗೆಳತಿ

  • Share this:
ಬಾಲಕಿಯರ ಶಿಕ್ಷಣದ (Girl's Education) ಮೇಲೆ ತಾಲಿಬಾನ್ ನಿಯಂತ್ರಣದ ವಿರುದ್ದ ಧ್ವನಿ ಎತ್ತಿದ್ದ ಮತ್ತು ತನ್ನ ದೇಶದಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣದ ಹಕ್ಕನ್ನು ಅನುಮತಿಸದ ತಾಲಿಬಾನ್ ನಿರ್ಧಾರವನ್ನು ಬಹಿರಂಗವಾಗಿ ಟೀಕಿಸಿದ್ದ ಮಲಾಲಾ ಯೂಸುಫಾಯ್‌ (Malala Yousafzai) ಅವರು ಯಾರಿಗೆ ತಾನೇ ಗೊತ್ತಿರಲ್ಲ ಹೇಳಿ? ಪಾಕಿಸ್ತಾನದ ಯುವ ಮಾನವ ಹಕ್ಕುಗಳ ಹೋರಾಟಗಾರ್ತಿಯಾಗಿದ್ದ (fighter) ಮಲಾಲಾ ಅವರು ನೊಬೆಲ್ ಪ್ರಶಸ್ತಿಯನ್ನು ಪಡೆದಂತಹ ಅತ್ಯಂತ ಕಿರಿಯ ವಯಸ್ಸಿನವರಾಗಿದ್ದಾರೆ. ಅವರು ತಮ್ಮ 17ನೇ ವಯಸ್ಸಿನಲ್ಲಿಯೇ ಭಾರತದ ಕೈಲಾಶ್ ಸತ್ಯಾರ್ಥಿ ಅವರೊಂದಿಗೆ 2014 ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿಯನ್ನು (Nobel Laureate) ಗೆದ್ದರು. ಈಗ ಇವರ ಒಂದು ವಿಡಿಯೋ ಅಂತರ್ಜಾಲದಲ್ಲಿ ಮತ್ತೊಮ್ಮೆ ಅಲೆಯನ್ನು ಎಬ್ಬಿಸುತ್ತಿದೆ.

ಮಲಾಲಾ ಯೂಸುಫಾಯ್‌ ಅವರ ಮತ್ತೊಂದು ವಿಡಿಯೋ ವೈರಲ್
ಇದನ್ನು ಯೂಸುಫಾಯ್‌ ಅವರ ಸ್ನೇಹಿತಳಾದ ವೀ ಅವರು ಪೋಸ್ಟ್ ಮಾಡಿದ್ದಾರೆ ಮತ್ತು ಅವರಿಬ್ಬರನ್ನೂ ಪದವಿ ಪ್ರಶಸ್ತಿ ಸಮಾರಂಭದ ಆ ಕಪ್ಪು ಗೌನ್ ಧರಿಸಿರುವುದನ್ನು ನಾವು ಇಲ್ಲಿ ನೋಡಬಹುದು. ವಿಡಿಯೋದಲ್ಲಿ ವೀ ತಮ್ಮ ಇಬ್ಬರೂ ಸ್ನೇಹಿತರ ವಿರುದ್ಧ ವ್ಯಕ್ತಿತ್ವಗಳ ಬಗ್ಗೆ ಮಾತನಾಡುತ್ತಾರೆ, ಇದು ಅವರ ನಡುವೆ ಬಲವಾದ ಬಂಧವನ್ನು ಸೃಷ್ಟಿಸಿತ್ತು ಅಂತ ಸಹ ಹೇಳುತ್ತಾರೆ.

ಇದನ್ನೂ ಓದಿ: Neeraj Chopra: ಹಿರಿಯ ಅಭಿಮಾನಿಯ ಕಾಲುಮುಟ್ಟಿ ನಮಸ್ಕರಿಸಿದ ನೀರಜ್! ಚಿನ್ನದ ಹುಡುಗನ ಚಿನ್ನದಂಥಾ ಗುಣಕ್ಕೆ ನೆಟ್ಟಿಗರು ಫಿದಾ

"ಈ ಜಗತ್ತಿನಲ್ಲಿ ಎರಡು ರೀತಿಯ ಉತ್ತಮ ಸ್ನೇಹಿತರು ಮತ್ತು ಪದವೀಧರರಿದ್ದಾರೆ. ವೀ: ನಗೆಗಡಲಲ್ಲಿ ಮತ್ತು ಗೊಂದಲಮಯವಾಗಿರುವ ಹುಡುಗಿ. ಮಲಾಲಾ ಅವರು ಜೀವನದಲ್ಲಿ ತುಂಬಾನೇ ಒಂದು ಗುರಿಯಿರುವಂತಹ ಹುಡುಗಿ" ಎಂದು ಒಂದು ವಾರದ ಹಿಂದೆ ಅಪ್ಲೋಡ್ ಮಾಡಲಾದ ವಿಡಿಯೋದಲ್ಲಿ ಸೂಪರ್ಸ್ ಎಂದು ಸೇರಿಸಲಾದ ಪಠ್ಯವು ಹೇಳುತ್ತದೆ. ಈ ವಿಡಿಯೋಗೆ ಪೋಸ್ ನೀಡುವಾಗ ವೀ ನಗುತ್ತಿದ್ದರೆ, ಯೂಸುಫಾಯ್‌ ಎಂದಿನಂತೆ ತುಂಬಾನೇ ಶಾಂತವಾದ ಅಭಿವ್ಯಕ್ತಿಯನ್ನು ಹೊಂದಿರುವುದನ್ನು ನಾವು ನೋಡಬಹುದು.


View this post on Instagram


A post shared by Vee (@veekativhu)
ಈ ಪೋಸ್ಟ್ ಮಾಡಿದ ವಿಡಿಯೋವನ್ನು ಆಕ್ಸ್ಫರ್ಡ್ ವಿಶ್ವವಿದ್ಯಾಲಯದಲ್ಲಿ ಚಿತ್ರೀಕರಿಸಲಾಗಿದೆ ಎಂದು ಉಲ್ಲೇಖಿಸಲಾಗಿದೆ, ಅಲ್ಲಿ ವೀ ಮತ್ತು ಯೂಸುಫಾಯ್‌ ಇಬ್ಬರೂ ಕಳೆದ ವರ್ಷ ಪದವಿ ಪಡೆದಿದ್ದರು.

ಗೆಳತಿಯ ಬಗ್ಗೆ ವೀ ಹೇಳಿದ್ದೇನು
ಬಾಲಕಿಯರ ಶಿಕ್ಷಣ ವಕೀಲೆ, ಲೇಖಕಿ ಮತ್ತು ಸಬಲೀಕರಣ ತರಬೇತುದಾರರಾಗಿರುವ ವೀ ಅವರು "ನಾವಿಬ್ಬರೂ 2 ತಿಂಗಳಿಂದ ಒಬ್ಬರನೊಬ್ಬರು ಭೇಟಿ ಮಾಡಿಲ್ಲ ಮತ್ತು ಮುಖ ಸಹ ನೋಡಲು ಆಗಲಿಲ್ಲ, ಏಕೆಂದರೆ ನಾವಿಬ್ಬರೂ ಜಗತ್ತನ್ನು ಸುತ್ತುತ್ತಿದ್ದೇವೆ ಮತ್ತು ನಾವು ಪ್ರೀತಿಸುವ ಕೆಲಸವನ್ನು ಮಾಡುತ್ತಿದ್ದೇವೆ ಮತ್ತು ಈಗ ನಾವು ನಮ್ಮ ಹಳೆಯ ಸುಮಧುರ ಕ್ಷಣಗಳನ್ನು ನೆನಪು ಮಾಡಿಕೊಳ್ಳುತ್ತಾ ಹಳೆಯ ಫೋಟೋಗಳು ಮತ್ತು ವಿಡಿಯೋಗಳನ್ನು ನೋಡುತ್ತಿದ್ದೇವೆ. ಏಕೆಂದರೆ ನಮ್ಮ ಕೆಲಸದ ಮಧ್ಯೆ ಈ ಫೇಸ್ಟೈಮ್ ಅಥವಾ ಈ ಪಠ್ಯ ಸಂದೇಶಗಳು ಕೆಲಸ ಮಾಡುತ್ತಿಲ್ಲ" ಎಂದು ಹೇಳಿದರು.

ಈ ವಿಡಿಯೋ ಇಲ್ಲಿಯವರೆಗೆ 4.3 ಮಿಲಿಯನ್ ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ ಮತ್ತು 1 ಲಕ್ಷಕ್ಕಿಂತಲೂ ಹೆಚ್ಚು ಲೈಕ್ ಗಳು ಸಹ ಈ ವಿಡಿಯೋಗೆ ಲಭಿಸಿವೆ ಎಂದು ಹೇಳಬಹುದು.

ಯಾರು ಈ ಮಲಾಲಾ ಯೂಸುಫಾಯ್‌?
ಮಲಾಲಾ ಯೂಸುಫಾಯ್‌ ತನ್ನ ತಾಯ್ನಾಡಾದ ಪಾಕಿಸ್ತಾನದಲ್ಲಿ ಬಾಲಕಿಯರ ಶಿಕ್ಷಣಕ್ಕಾಗಿ ಪ್ರಚಾರಕ್ಕಾಗಿ ಓಡಾಡುತ್ತಿದ್ದಾಗ ತಾಲಿಬಾನ್ನಿಯರಿಂದ ಗುಂಡನ್ನು ತಿಂದ ಒಂಬತ್ತು ವರ್ಷಗಳ ನಂತರ ಎಂದರೆ ನವೆಂಬರ್ 2021 ರಲ್ಲಿ ಆಕ್ಸ್ಫರ್ಡ್ ವಿಶ್ವವಿದ್ಯಾಲಯದಿಂದ ತತ್ವಶಾಸ್ತ್ರ, ರಾಜಕೀಯ ಮತ್ತು ಅರ್ಥಶಾಸ್ತ್ರದಲ್ಲಿ ಪದವಿ ಪಡೆದರು.

ಅವರು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಹ್ಯಾಂಡಲ್ ನಲ್ಲಿ ತಮ್ಮ ಪದವಿ ಪ್ರಧಾನ ಸಮಾರಂಭದ ಫೋಟೋಗಳನ್ನು ಹಂಚಿಕೊಂಡಿದ್ದರು. ಫೋಟೋಗಳಲ್ಲಿ ಅವಳು ತನ್ನ ಹೆಮ್ಮೆಯ ಪೋಷಕರು ಮತ್ತು ಪತಿ ಅಸ್ಸರ್ ಮಲಿಕ್ ಅವರೊಂದಿಗೆ ವಿಶ್ವವಿದ್ಯಾಲಯದಲ್ಲಿ ತನ್ನ ಕಪ್ಪು ಬಣ್ಣದ ಟೋಪಿ ಮತ್ತು ಗೌನ್ ನಲ್ಲಿ ಪೋಸ್ ನೀಡುತ್ತಿರುವುದು ಕಂಡು ಬಂದಿತ್ತು.

ಇದನ್ನೂ ಓದಿ: Viral Video: ಚಕ್ ಚಕ್ ಅಂತ ಟಿಕೆಟ್ ಕೊಡೋ ರೈಲ್ವೆ ಉದ್ಯೋಗಿ! ಸ್ಪೀಡ್ ನೋಡಿ ವಾವ್ ಎಂದ ನೆಟ್ಟಿಗರು

2021 ರ ನವೆಂಬರ್ 9 ರಂದು ಬರ್ಮಿಂಗ್‍ಹ್ಯಾಮ್ ನಲ್ಲಿ ನಡೆದ ಪ್ರಮುಖ ಸಮಾರಂಭದಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ವ್ಯವಸ್ಥಾಪಕರಾದ ಮಲಿಕ್ ಅವರನ್ನು ಮಲಾಲಾ ಅವರು ವಿವಾಹವಾದರು. "ಬರ್ಮಿಂಗ್‍ಹ್ಯಾಮ್ ನ ಮನೆಯಲ್ಲಿ ನಾವು ನಮ್ಮ ಕುಟುಂಬಗಳೊಂದಿಗೆ ಒಂದು ಸಣ್ಣ ನಿಕ್ಕಾ ಸಮಾರಂಭವನ್ನು ಆಚರಿಸಿದ್ದೇವೆ" ಎಂದು ಅವರು ಟ್ವೀಟ್ ಮಾಡಿದ್ದರು.
Published by:Ashwini Prabhu
First published: