• Home
  • »
  • News
  • »
  • trend
  • »
  • Ummul Kher: 8 ಶಸ್ತ್ರಚಿಕಿತ್ಸೆಯ ನಂತರ ಸಹ IAS ಪಾಸ್​ ಮಾಡಿದ ಉಮ್ಮುಲ್ ಖೇರ್, ಇವರ ಕಥೆ ನಿಜಕ್ಕೂ ಸ್ಫೂರ್ತಿ

Ummul Kher: 8 ಶಸ್ತ್ರಚಿಕಿತ್ಸೆಯ ನಂತರ ಸಹ IAS ಪಾಸ್​ ಮಾಡಿದ ಉಮ್ಮುಲ್ ಖೇರ್, ಇವರ ಕಥೆ ನಿಜಕ್ಕೂ ಸ್ಫೂರ್ತಿ

ಉಮ್ಮುಲ್ ಖೇರ್

ಉಮ್ಮುಲ್ ಖೇರ್

Inspiring Story of IAS Officer: ಉಮ್ಮುಲ್ ಅವರು ತಮ್ಮ ಜೀವನದಲ್ಲಿ ಅನೇಕ ಆರ್ಥಿಕ ತೊಂದರೆಗಳನ್ನು ಎದುರಿಸಿದ್ದಲ್ಲದೆ, ತನ್ನ ಕುಟುಂಬದಿಂದ ಸಹ ದೂರಾಗಿದ್ದರು. ಅವರು ತನ್ನದೇ ಆದ ಮಾರ್ಗವನ್ನು ನಿರ್ಧರಿಸಿ, ಐಎಎಸ್ ಆಫೀಸರ್​ ಆಗುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.

  • Trending Desk
  • Last Updated :
  • New Delhi, India
  • Share this:

ಕೆಲವರು ಜೀವನದಲ್ಲಿ (Life) ತಮಗೆ ಕಷ್ಟಗಳು ಎದುರಾದವು ಅಂತ ತಮಗಿದ್ದ ಗುರಿಯನ್ನು ಮರೆತು ಬಿಡುತ್ತಾರೆ ಅಂತ ಹೇಳಬಹುದು. ಆದರೆ ಇನ್ನೂ ಕೆಲವರು ಅದೆಷ್ಟೇ ಕಷ್ಟಗಳು ಎದುರಾದರೂ ಸಹ ತಮ್ಮ ಗುರಿಯ ಮೇಲಿರುವ ಅವರ ಗಮನ ಸ್ವಲ್ಪವೂ ವಿಚಲಿತಗೊಳ್ಳುವುದಿಲ್ಲ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಇಲ್ಲೊಬ್ಬ ವಿಕಲಚೇತನ ಯುವತಿ (Girl) ಬಾಲ್ಯದಿಂದ ಎಷ್ಟೋ ಕಷ್ಟಗಳನ್ನು (Struggles) ಎದುರಿಸಿದ್ದರೂ ಸಹ ತಮ್ಮ ಗುರಿಯ ಮೇಲಿನ ಗಮನಕ್ಕೆ ತೊಂದರೆಯಾಗಲು ಬಿಡಲಿಲ್ಲ ನೋಡಿ. ಐಎಎಸ್ ಉಮ್ಮುಲ್ ಖೇರ್ (IAS Ummul Kher) ತಮ್ಮ ಬಾಲ್ಯದಲ್ಲಿ ಅನೇಕ ತೊಂದರೆಗಳನ್ನು ಎದುರಿಸಿದ್ದರೂ ಸಹ ಐಎಎಸ್ (IAS Officer)  ಅಧಿಕಾರಿಯಾಗಬೇಕೆಂಬ ಗುರಿಯನ್ನು ಸಾಧಿಸಿ ತೋರಿಸಿದವರು.


ರಾಜಸ್ಥಾನದ ಪಾಲಿಯ ನಿವಾಸಿಯಾದ ಉಮ್ಮುಲ್ ಖೇರ್ ಬಾಲ್ಯದಿಂದಲೂ ವಿಕಲಚೇತನರಾಗಿದ್ದರು. ಅವರ ಸುತ್ತಮುತ್ತಲೂ ಇರುವ ಜನರು ಈ ಯುವತಿ ತನ್ನ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತದೆಯೇ ಅಥವಾ ಇಲ್ಲವೋ ಎಂದು ಚಿಂತೆಗೀಡಾಗಿದ್ದರು. ಆದರೆ ದೃಢನಿಶ್ಚಯ ಹೊಂದಿದ್ದ ಈ ಮಹಿಳೆ ನಾಗರಿಕ ಸೇವಾ ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಮೂಲಕ ಐಎಎಸ್ ಅಧಿಕಾರಿಯಾಗಿದ್ದಾರೆ.


16 ಭಾರಿ ಮೂಳೆ ಮುರಿತ,  ಎಂಟು ಶಸ್ತ್ರಚಿಕಿತ್ಸೆ


ಉಮ್ಮುಲ್ ಖೇರ್ ರಾಜಸ್ಥಾನದ ಪಾಲಿಯಲ್ಲಿ ವಾಸಿಸುವ ಆರ್ಥಿಕವಾಗಿ ಹಿಂದುಳಿದ ಮಾರ್ವಾರ್ ಕುಟುಂಬಕ್ಕೆ ಸೇರಿದವರು. ಅವರು ಮೂಳೆ ದುರ್ಬಲ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಸಮಸ್ಯೆಯಲ್ಲಿ, ದೇಹದ ಮೂಳೆಗಳು ದುರ್ಬಲವಾಗುತ್ತವೆ. ಈ ಸಮಸ್ಯೆಯಿಂದಾಗಿ ಉಮ್ಮುಲ್ ನ ಮೂಳೆಗಳು ಆಗಾಗ್ಗೆ ಮುರಿಯುತ್ತಿದ್ದವು. ಅವರು ತಮ್ಮ ಜೀವನದಲ್ಲಿ 16 ಮುರಿತಗಳು ಮತ್ತು ಎಂಟು ಶಸ್ತ್ರಚಿಕಿತ್ಸೆಗಳನ್ನು ಅನುಭವಿಸಿದ್ದಾರೆ.


ಕಷ್ಟದಲ್ಲೇ ಬಾಲ್ಯ ಕಳೆದ ಉಮ್ಮುಲ್


ಉಮ್ಮುಲ್ ಅವರ ಕುಟುಂಬದಲ್ಲಿ ಅವರ ಪೋಷಕರು ಮತ್ತು ಮೂವರು ಸಹೋದರ, ಸಹೋದರಿಯರು ಇದ್ದಾರೆ. ಉಮ್ಮುಲ್ ಅವರು ತುಂಬಾ ಚಿಕ್ಕವಳಿದ್ದಾಗ, ಅವರ ತಂದೆ ಕುಟುಂಬದೊಂದಿಗೆ ದೆಹಲಿಯ ನಿಜಾಮುದ್ದೀನ್ ಪ್ರದೇಶದಲ್ಲಿರುವ ಸ್ಲಂ ನಲ್ಲಿ ವಾಸಿಸಲು ಪ್ರಾರಂಭಿಸಿದರು. ಅವರ ತಂದೆ ಬಟ್ಟೆಗಳನ್ನು ಮಾರಾಟ ಮಾಡುತ್ತಿದ್ದರು. ನಂತರ ಅಲ್ಲಿನ ಸ್ಲಂ ಗಳನ್ನು ಸರ್ಕಾರದ ಆದೇಶದ ಮೇರೆಗೆ ನೆಲಸಮ ಮಾಡಲಾಯಿತು. ಅವಳ ಕುಟುಂಬವು ಅಲ್ಲಿಂದ ಬೇರೆಡೆಗೆ ಸ್ಥಳಾಂತರಗೊಳ್ಳಬೇಕಾಯಿತು ಮತ್ತು ಅವರು ತ್ರಿಲೋಕ್‌ಪುರಿಯ ಸ್ಲಂ ಪ್ರದೇಶದಲ್ಲಿ ವಾಸಿಸಲು ಪ್ರಾರಂಭಿಸಿದರು.


9ನೇ ತರಗತಿಯಲ್ಲಿಯೇ ಮನೆ ಬಿಟ್ಟ ಉಮ್ಮುಲ್


ಉಮ್ಮುಲ್ ಖೇರ್ ಅವರ ಕುಟುಂಬದ ಆರ್ಥಿಕ ಸ್ಥಿತಿ ತುಂಬಾ ಹೀನಾಯವಾಗಿತ್ತು. ಕುಟುಂಬವನ್ನು ಪೋಷಿಸಲು ಮತ್ತು ಅವರ ಶಾಲೆಯ ಶುಲ್ಕವನ್ನು ಪಾವತಿಸಲು, ಅವರು 7ನೇ ತರಗತಿಯಿಂದಲೇ ಚಿಕ್ಕ ಮಕ್ಕಳಿಗೆ ಟ್ಯೂಷನ್ ಹೇಳಿಕೊಡಲು ಶುರು ಮಾಡಿದರು. ಅವರು 9ನೇ ತರಗತಿಯಲ್ಲಿದ್ದಾಗ ಅವರ ತಾಯಿ ತೀರಿಕೊಂಡರು.


ಇದನ್ನೂ ಓದಿ: 10,000 ವರ್ಷಗಳ ಹಿಂದೆ ಮಕ್ಕಳನ್ನು ಹೇಗೆ ಸಾಗಿಸುತ್ತಿದ್ದರು? ಇದಕ್ಕೆ ಸಾಕ್ಷಿಯಾಯ್ತು ಮಗುವಿನ ಸಮಾಧಿ


ಅವರ ತಾಯಿಯ ಮರಣದ ನಂತರ, ಅವರ ತಂದೆ ಮರು ಮದುವೆಯಾದರು. ಉಮ್ಮುಲ್ ಶಾಲೆಗೆ ಹೋಗುವುದು ಆಕೆಯ ಮಲತಾಯಿಗೆ ಇಷ್ಟವಿರಲಿಲ್ಲ. ಉಮ್ಮುಲ್ ತನ್ನ ಓದನ್ನು ಅರ್ಧಕ್ಕೆ ಬಿಡಲು ಇಷ್ಟವಾಗಲಿಲ್ಲ,  ಆದ್ದರಿಂದ ಅವಳು ಮನೆಯನ್ನು ತೊರೆದು ಏಕಾಂಗಿಯಾಗಿ ವಾಸಿಸಲು ಪ್ರಾರಂಭಿಸಿ, ನಂತರ ಒಂದೊಂದೇ ಸಾಧನೆ ಮಾಡಿದ್ದಾರೆ.


ಉಮ್ಮುಲ್ ಬಾಲ್ಯದಿಂದಲೂ ಪ್ರತಿಭಾವಂತ ವಿದ್ಯಾರ್ಥಿನಿ


ಉಮ್ಮುಲ್ 10ನೇ ತರಗತಿಯಲ್ಲಿ ಶೇ.91ರಷ್ಟು ಹಾಗೂ 12ನೇ ತರಗತಿಯಲ್ಲಿ ಶೇ.90ರಷ್ಟು ಅಂಕಗಳನ್ನು ಗಳಿಸಿದ್ದಾರೆ. ಅವರು ದೆಹಲಿ ವಿಶ್ವವಿದ್ಯಾಲಯದ ಗಾರ್ಗಿ ಕಾಲೇಜಿನಿಂದ ಮನೋವಿಜ್ಞಾನದಲ್ಲಿ ಪದವಿ ಪಡೆದು,  ನಂತರ ಜೆಎನ್‌ಯು ನ ಸ್ಕೂಲ್ ಆಫ್ ಇಂಟರ್ನ್ಯಾಷನಲ್ ಸ್ಟಡೀಸ್ ನಿಂದ ಎಂಎ ಮತ್ತು ಎಂಫಿಲ್ ಪದವಿಗಳನ್ನು ಪಡೆದಿದ್ದಾರೆ. 2014 ರಲ್ಲಿ, ಅವರು ಜಪಾನಿನ ಅಂತರರಾಷ್ಟ್ರೀಯ ನಾಯಕತ್ವ ತರಬೇತಿ ಕಾರ್ಯಕ್ರಮಕ್ಕೆ ಆಯ್ಕೆಯಾದರು. ಉಮ್ಮುಲ್ ಇದಕ್ಕೆ ಆಯ್ಕೆಯಾದ ನಾಲ್ಕನೇ ಭಾರತೀಯರಾಗಿದ್ದಾರೆ. ಅವರು ಎಂಫಿಲ್ ನಂತರ, ಉಮ್ಮುಲ್ ಜೆಆರ್‌ಎಫ್ ಅನ್ನು ಪಾಸ್ ಮಾಡಿದ್ದು, ಅಲ್ಲಿಂದ ಅವರ ಆರ್ಥಿಕ ಸ್ಥಿತಿ ಸುಧಾರಿಸಿತು ಎಂದು ಹೇಳಲಾಗುತ್ತಿದೆ.


ಇದನ್ನೂ ಓದಿ: ಇನ್ಮುಂದೆ ಮದುವೆ ಹಾಲ್‍ಗಳೇ ನಿಮ್ಮ ಮನೆಗೆ ಬರುತ್ತೆ! ಪೋರ್ಟಬಲ್ ಮ್ಯಾರೇಜ್ ಹಾಲ್ ನೋಡಿ ಇಂಪ್ರೆಸ್ ಆದ ಮಹೀಂದ್ರಾ


ತನ್ನದೇ ಆದ ಜೀವನವನ್ನು ಸೃಷ್ಟಿಸಿಕೊಂಡ ಉಮ್ಮುಲ್


ಉಮ್ಮುಲ್ ಅವರು ತಮ್ಮ ಜೀವನದಲ್ಲಿ ಅನೇಕ ಆರ್ಥಿಕ ತೊಂದರೆಗಳನ್ನು ಎದುರಿಸಿದ್ದಲ್ಲದೆ, ತನ್ನ ಕುಟುಂಬದಿಂದ ಸಹ ದೂರಾಗಿದ್ದರು. ಅವರು ತನ್ನದೇ ಆದ ಮಾರ್ಗವನ್ನು ನಿರ್ಧರಿಸಿ, ಐಎಎಸ್ ಆಫೀಸರ್​ ಆಗುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ. ಅವರು ಜೆಆರ್‌ಎಫ್ ಸಮಯದಲ್ಲಿ ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ಪ್ರಾರಂಭಿಸಿದರು ಮತ್ತು ಸಿಎಸ್ಇ 2016 ಪರೀಕ್ಷೆಯಲ್ಲಿ ತಮ್ಮ ಮೊದಲ ಪ್ರಯತ್ನದಲ್ಲಿಯೇ 420ನೇ ರ್ಯಾಂಕ್ ಪಡೆದು ಸಾಧನೆ ಮಾಡಿದ್ದಾರೆ.

Published by:Sandhya M
First published: