Inspiring Story: ಮನೆಗೆಲಸದ ಸಹಾಯಕಿ ಉಳಿತಾಯಕ್ಕೆ ಬೆರಗಾದ; ಮಾನವೀಯತೆ ಎಂದರೆ ಇದೆ ಅಲ್ವಾ

ಗೌರವ್ ಸರಣಿ ಟ್ವೀಟ್ ಮೂಲಕ ಈ ವಿಷಯವನ್ನು ತಿಳಿಸಿದ್ದು ಪ್ರತಿಯೊಬ್ಬರೂ ಅವರ ಕಾರ್ಯವನ್ನು ಶ್ಲಾಘಿಸಿ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

File photo

File photo

  • Share this:

ಸಾಂಕ್ರಾಮಿಕ ಕಾಯಿಲೆ ಕೋವಿಡ್‌ನ ದಾಳಿಯಿಂದ ನಾವೆಲ್ಲರೂ ಜರ್ಝರಿತರಾಗಿರುವೆವು.ಆರ್ಥಿಕವಾಗಿ, ದೈಹಿಕವಾಗಿ, ಸಾಮಾಜಿಕವಾಗಿ ಇಂದು ಸೋಲನ್ನು ಅನುಭವಿಸಿದ್ದೇವೆ. ಮಾಡಲು ಕೆಲಸವಿಲ್ಲದೆ,ಕೈಯಲ್ಲಿ ಕಾಸಿಲ್ಲದೆ ಯಾವಾಗ ಕೋವಿಡ್ ಮುಗಿಯುತ್ತದೆಯೋ ಹಿಂದಿನಂತೆ ವಿಶ್ವ ತನ್ನ ಎಂದಿನ ಸ್ಥಿತಿಗೆ ಮರಳುತ್ತದೋ ಎಂದು ಕಾದು ನೋಡುತ್ತಿದ್ದೇವೆ. ಅದಾಗ್ಯೂ ಕೋವಿಡ್ ಪರಸ್ಪರರ ನೆರವಿಗೆ ವೇದಿಕೆಯನ್ನೊದಗಿಸಿದೆ ಎಂಬುದರನ್ನೂ ತಳ್ಳಿ ಹಾಕುವಂತಿಲ್ಲ. ಕುಟುಂಬದ ಮಹತ್ವವವನ್ನು, ಸಹಕಾರ ಧರ್ಮದ ನೀತಿಪಾಠವನ್ನು, ನೆರವಿನ ಹಸ್ತವನ್ನು ಕಲಿಸಿಕೊಟ್ಟಿದೆ ಈ ರೋಗ. ಇಂದಿನ ಲೇಖನದಲ್ಲಿ ಕೂಡ ಇಂತಹುದೇ ಮಾನವೀಯತೆಯ ಅಂಶವುಳ್ಳ ಸುದ್ದಿಯೊಂದನ್ನು ತಿಳಿಸಲಿದ್ದು ಮಾನವೀಯತೆ, ಕರುಣೆ, ಪ್ರೀತಿ ಕೊರೋನಾದ ನಡುವೆಯೂ ಜನರ ನಡುವೆ ಇದೆ ಎಂಬುದನ್ನು ತಿಳಿಸಿಕೊಟ್ಟಿದೆ.


ಇದು ಮನೆಗೆಲಸದವಳು ತಾನು ಉಳಿಸಿದ ಹಣದಲ್ಲಿ ಮಗಳಿಗೆ ಲ್ಯಾಪ್‌ಟಾಪ್ ಖರೀದಿಸಿದ ಕಥೆಯಾಗಿದೆ. ಅಷ್ಟೇನೂ ಓದು ಬರಹ ಗೊತ್ತಿರದ ಈಕೆ ಮಗಳಿಗೆ ಲ್ಯಾಪ್‌ಟಾಪ್ ಖರೀದಿಸಲು ರೂ 35,000 ವನ್ನು ಉಳಿತಾಯ ಮಾಡಿದ್ದಳು ಇದಕ್ಕಾಗಿ ತಾನು ಕೆಲಸ ಮಾಡುತ್ತಿದ್ದ ಮನೆಮಾಲೀಕರ ನೆರವನ್ನು ಕೋರಿದ್ದಾಳೆ. ಪ್ರಸ್ತುತ ಮಗಳು ಏರ್‌ಹೋಸ್ಟೆಸ್ ಆಗಲು ತರಬೇತಿಯನ್ನು ಆನ್‌ಲೈನ್‌ನಲ್ಲಿ ಪಡೆಯುತ್ತಿದ್ದಳು. ಆಕೆಗೆ ಲ್ಯಾಪ್‌ಟಾಪ್ ಅಗತ್ಯವಿತ್ತು. ಆದರೆ ಲ್ಯಾಪ್‌ಟಾಪ್‌ನ ಬೆಲೆ ಆಕೆ ಉಳಿಸಿದ್ದ ಹಣಕ್ಕಿಂತ ಕೊಂಚ ದುಬಾರಿಯಾಗಿತ್ತು ಈ ಸಮಯದಲ್ಲಿ ಮನೆ ಮಾಲೀಕ ಗೌರವ್ ಮಹಿಳೆಗೆ ಹೆಚ್ಚಿನ ಹಣ ನೀಡಿದ ಲ್ಯಾಪ್‌ಟಾಪ್ ಖರೀದಿಗೆ ಸಹಾಯ ಮಾಡಿದ್ದಾರೆ.


ಮಹಿಳೆಯ ಪತಿ ಕೋವಿಡ್ ಕಾರಣದಿಂದ ಉದ್ಯೋಗವನ್ನು ಕಳೆದುಕೊಂಡಿದ್ದು ತನ್ನ ಮನೆಯ ನಿರ್ವಹಣೆಯನ್ನು ಆಕೆ ಮನೆಗೆಲಸ ಮಾಡಿ ಸರಿದೂಗಿಸುತ್ತಿದ್ದಳು. ಅದರ ನಡುವೆಯೂ ಆಕೆ ಮಗಳಿಗಾಗಿ ರೂ 35,000 ಹಣವನ್ನು ಉಳಿಸಿದ್ದಳು. ಮನೆಮಾಲೀಕನ ಸಹಾಯವನ್ನು ನೆನೆಯುವ ಆ ಮಹಿಳೆ ಸಂಬಳದಿಂದ 1 ಸಾವಿರ ಹಣವನ್ನು ಕಡಿತಗೊಳಿಸುವಂತೆ ವಿನಂತಿಸಿದ್ದಾಳೆ. ಆದರೆ ಗೌರವ್ ಮಹಿಳೆಯ ಪುತ್ರಿಯ ಮುಂದಿನ ಓದಿಗೆ ಮತ್ತು ಭವಿಷ್ಯಕ್ಕೆ ನಮ್ಮ ಚಿಕ್ಕ ಕಾಣಿಕೆ ಎಂದು ಹೇಳಿದ್ದಾರೆ.


ಇದನ್ನು ಓದಿ: ಡೆಲ್ಟಾ ಭೀತಿ: ಕೇರಳದಿಂದ ರಾಜ್ಯಕ್ಕೆ ಆಗಮಿಸುವವರಿಗೆ RT-PCR ನೆಗಟಿವ್​ ವರದಿ ಕಡ್ಡಾಯ

ಮಹಿಳೆಯು ಒಬ್ಬಳೇ ಮಗಳನ್ನು ಹೊಂದಿದ್ದು ಆಕೆಗೆ ಉತ್ತಮ ವಿದ್ಯಾಭ್ಯಾಸವನ್ನು ಕೊಡಿಸುವುದು ಆಕೆಯ ಗುರಿಯಾಗಿದೆ. ಮಗಳು ನಮ್ಮಂತೆ ಮನೆಗೆಲಸ ಮಾಡದೇ ಒಳ್ಳೆಯ ಸ್ಥಾನಮಾನವನ್ನು ಅಲಂಕರಿಸಬೇಕು ಎಂಬುದು ಆ ತಾಯಿಯ ಆಸೆಯಾಗಿತ್ತು. ಇದನ್ನರಿತ ಗೌರವ್ ಆಕೆಯ ಆಸೆಗೆ ತಮ್ಮಿಂದಾದ ಸಹಾಯವನ್ನು ಮಾಡಿದ್ದಾರೆ. ಲಾಕ್‌ಡೌನ್‌ನಿಂದ ಹಲವಾರು ಜನರು ಉದ್ಯೋಗವಿಲ್ಲದೆ ಆರ್ಥಿಕವಾಗಿ ಕಂಗಾಲಾಗಿದ್ದಾರೆ. ಇನ್ನು ಕೆಲವರು ಉನ್ನತ ಸಂಬಳದ ಕೆಲಸ ಹೋದ ಕಾರಣ ಕಡಿಮೆ ಸಂಬಳಕ್ಕೆ ದುಡಿಯುತ್ತಿದ್ದಾರೆ. ಆದರೆ ಗೌರವ್ ಮನೆಗೆಲಸದಾಕೆಯ ಕಷ್ಟವನ್ನು ತಮ್ಮ ಕಷ್ಟವೆಂದು ನೆನೆದು ಆಕೆಗೆ ಸಹಾಯ ಮಾಡಿದ್ದಾರೆ.


ಗೌರವ್ ಸರಣಿ ಟ್ವೀಟ್ ಮೂಲಕ ಈ ವಿಷಯವನ್ನು ತಿಳಿಸಿದ್ದು ಪ್ರತಿಯೊಬ್ಬರೂ ಅವರ ಕಾರ್ಯವನ್ನು ಶ್ಲಾಘಿಸಿದ್ದಾರೆ ಮತ್ತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಗೌರವ್ ಕಾರ್ಯ ನಿಜಕ್ಕೂ ಮೆಚ್ಚುವಂತಹದ್ದು. ನಮಗೂ ಇದರಿಂದ ಪ್ರೇರಣೆ ದೊರಕಿದೆ ನಾವು ಇಂತಹುದ್ದೇ ನೆರವಿನ ಹಸ್ತವನ್ನು ನಮ್ಮ ಸುತ್ತಲಿನವರಿಗೆ ಮಾಡುತ್ತೇವೆ ಎಂದು ಟ್ವೀಟ್ ನೋಡಿದ ಹೆಚ್ಚಿನವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು
First published: