HOME » NEWS » Trend » INSPIRATIONAL QUOTES BY SWAMI VIVEKANANDA ON HIS 158TH BIRTH ANNIVERSARY SESR

Swami Vivekananda Jayanti: ವಿವೇಕಾನಂದರ ಈ ನುಡಿಮುತ್ತುಗಳು ನಿಮ್ಮ ಜೀವನಕ್ಕೆ ಸ್ಪೂರ್ತಿದಾಯಕ

ಕೇವಲ ಭಾರತೀಯರು ಮಾತ್ರವಲ್ಲದೇ ವಿಶ್ವಕ್ಕೆ ಪ್ರೇರಣೆ ನೀಡಿದವರು ಅವರು. ರಾಷ್ಟ್ರೀಯ ಯುವ ದಿನವಾದ ಹಿನ್ನಲೆ ಅವರ ಸ್ಪೂರ್ತಿ ತುಂಬಿದ ನುಡಿಮುತ್ತುಗಳು ಇಲ್ಲಿವೆ

news18-kannada
Updated:January 12, 2021, 6:06 AM IST
Swami Vivekananda Jayanti: ವಿವೇಕಾನಂದರ ಈ ನುಡಿಮುತ್ತುಗಳು ನಿಮ್ಮ ಜೀವನಕ್ಕೆ ಸ್ಪೂರ್ತಿದಾಯಕ
ಕೇವಲ ಭಾರತೀಯರು ಮಾತ್ರವಲ್ಲದೇ ವಿಶ್ವಕ್ಕೆ ಪ್ರೇರಣೆ ನೀಡಿದವರು ಅವರು. ರಾಷ್ಟ್ರೀಯ ಯುವ ದಿನವಾದ ಹಿನ್ನಲೆ ಅವರ ಸ್ಪೂರ್ತಿ ತುಂಬಿದ ನುಡಿಮುತ್ತುಗಳು ಇಲ್ಲಿವೆ
  • Share this:
ಯುವಜನತೆಗೆ ಕನಸಿ ನ ಗುರಿ ಬೆನ್ನಟ್ಟುವಂತೆ ಕರೆ ನೀಡಿದ ಮಹಾನ್​ ಚೇತನ ಸ್ವಾಮೀ ವಿವೇಕಾನಂದರ ಹುಟ್ಟುಹಬ್ಬ ಇಂದು. ಇದೇ ದಿನವನ್ನು ರಾಷ್ಟ್ರೀಯ ಯುವ ದಿನವಾಗಿ ಕೂಡ ಆಚರಿಸಲಾಗುವುದು. ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ ಎಂದು ಯುವಕರಿಗೆ ಕರೆ ಕೊಟ್ಟ ವಿವೇಕಾನಂದರ ಜನ್ಮ ದಿನವನ್ನು 1984ರಿಂದ ರಾಷ್ಟ್ರೀಯ ಯುವ ದಿನವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಸ್ವಾಮಿ ವಿವೇಕಾನಂದರ ಸಿದ್ದಾಂತಗಳು ಅವರ ಆದರ್ಶಗಳು ಯುವಕರಿಗೆ ಸದಾ ಪ್ರೇರಣೆದಾಯಕವಾಗಿದೆ. ಕೇವಲ ಭಾರತೀಯರಿಗೆ ಮಾತ್ರವಲ್ಲದೇ ಇಡೀ ದೇಶಕ್ಕೆ ಮಹಾನ್​ ಚೇತನ ಸ್ಪೂರ್ತಿಯಾಗಿರುವ ವಿವೇಕಾನಂದರ 158ನೇ ಜಯಂತಿ ಇಂದು ಯುವಕರ ಮೇಲೆ ಅಪಾರ ನಂಬಿಕೆ ಹೊಂದಿದ್ದ ಅವರು ನಮಗೆ 100 ಯುವಕರನ್ನು ನೀಡಿದರೆ ನವಭಾರತ ನಿರ್ಮಾಣ ಮಾಡುತ್ತೇನೆ ಎಂದಿದ್ದರು. ಯುವಕರ ಬಗ್ಗೆ ಅವರಿಗಿದ್ದ ವಿಶ್ವಾಸದ ಹಿನ್ನಲೆ ಅವರ ಈ ಜಯಂತಿಯನ್ನು ರಾಷ್ಟ್ರೀಯ ಯುವ ದಿನವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಈ ಮೂಲಕ ಅವರ ಚಿಂತನೆಗಳನ್ನು ಯುವ ಪೀಳಿಗೆಗೆ ತಲುಪಿಸುವ ಕಾರ್ಯ ನಡೆಯುತ್ತಿದೆ.

ಕೇವಲ ಭಾರತೀಯರು ಮಾತ್ರವಲ್ಲದೇ ವಿಶ್ವಕ್ಕೆ ಪ್ರೇರಣೆ ನೀಡಿದವರು ಅವರು. ಶಿಕಾಗೋ ಸಮ್ಮೇಳನ ಅವರ ಸಂದೇಶಗಳು ಹೆಚ್ಚು ಪ್ರಚೋದನಾತ್ಮಕವಾಗಿದೆ. ರಾಷ್ಟ್ರೀಯ ಯುವ ದಿನವಾದ ಹಿನ್ನಲೆ ಅವರ ಸ್ಪೂರ್ತಿ ತುಂಬಿದ ನುಡಿಮುತ್ತುಗಳು ಇಲ್ಲಿವೆ


  • ಶಕ್ತಿಯೆಲ್ಲ ನಿಮ್ಮೊಳಗೆ ಇದೆ; ನೀವು ಏನು ಬೇಕಾದರೂ ಮಾಡಬಲ್ಲಿರಿ, ಎಲ್ಲವನ್ನೂ ಮಾಡಬಲ್ಲಿರಿ

  • ಪ್ರತಿಯಾಗಿ ಏನನ್ನೂ ಬಯಸಬೇಡಿ. ಆದರೆ, ನೀವು ಹೆಚ್ಚು ಕೊಟ್ಟಷ್ಟು ನಿಮಗೆ ಹೆಚ್ಚು ಬರುತ್ತದೆ.

  • ಎದ್ದೇಳಿ ಕಾರ್ಯೋನ್ಮಖರಾಗಿ. ಈ ಜೀವನವಾದರೂ ಎಷ್ಟು ಕಾಲ? ನೀವು ಈ ಜಗತ್ತಿಗೆ ಬಂದ ಮೇಲೆ ಗುರುತನ್ನು ಬಿಟ್ಟು ಹೋಗಿ. ಅದಿಲ್ಲದಿದ್ದರೆ ನಿಮಗೂ ಮರ ಕಲ್ಲುಗಳಿಗೂ ಏನು ವ್ಯತ್ಯಾಸ? ಅವು ಅಸ್ತಿತ್ವಕ್ಕೆ ಬರುತ್ತವೆ, ನಶಿಸಿ ನಿರ್ನಾಮವಾಗುತ್ತವೆ.

  • ನಿಮ್ಮನ್ನು ನೀವು ಜಯಿಸಿ . ಆಗ ಇಡೀ ಜಗತ್ತೇ ನಿಮ್ಮದಾಗುತ್ತದೆ.
  • ಮನಸ್ಸನ್ನು ಶಕ್ತಿಯುತವೂ ಶಿಸ್ತುಬದ್ಧವೂ ಆಗಿಸುವುದರಲ್ಲಿಯೇ ಜ್ಞಾನದ ಮೌಲ್ಯವಿರುವುದು

  • ಅನುಭವು ಜಗತ್ತಿನ ಸರ್ವಶ್ರೇಷ್ಠ ಶಿಕ್ಷಕ. ಉಸಿರಾಡುವವರೆಗೂ ಕಲಿಕೆಮ ಜ್ಞಾನರ್ಜನೆಯೇ ಜೀವನದ ಗುರಿಯಾಗಿರಲಿ

  • ಗುರಿ ತಲುಪುವವರೆಗೆ ಎದ್ದೇಳಿ, ಎಚ್ಚರವಾಗಿರಿ ಮತ್ತು ನಿಲ್ಲಿಸಬೇಡಿ

Published by: Seema R
First published: January 12, 2021, 6:06 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories