ರಷ್ಯಾದಲ್ಲೊಂದು ವಿಚಿತ್ರ ಗೇಮ್​: ಕಪಾಳಕ್ಕೆ ಬಾರಿಸಿ ಹಣಗಳಿಸಿಕೊಳ್ಳಿ

ಕಪಾಳಕ್ಕೆ ಬಾರಿಸೋ ಆಟದಲ್ಲಿ ಯಾರು ಎದುರಾಳಿಯ ಏಟಿನಿಂದ ಹಿಂಜರಿಯುತ್ತಾನೋ ಆತ ಸೋತಂತೆ.

news18
Updated:April 20, 2019, 7:39 PM IST
ರಷ್ಯಾದಲ್ಲೊಂದು ವಿಚಿತ್ರ ಗೇಮ್​: ಕಪಾಳಕ್ಕೆ ಬಾರಿಸಿ ಹಣಗಳಿಸಿಕೊಳ್ಳಿ
ಕಪಾಲಕ್ಕೆ ಬಾರಿಸುವ ಸರ್ಧೆ
news18
Updated: April 20, 2019, 7:39 PM IST
ಕರಾಟೆ, ಕುಸ್ತಿ, ಕಬಡ್ದಿ ಮುಂತಾದ ಸರ್ಧೆಗಳಲ್ಲಿ ಸ್ಪರ್ಧಾಳುಗಳು ತಮ್ಮ ಶಕ್ತಿಯನ್ನು ಪ್ರದರ್ಶನ ಮಾಡುವುದು ನೋಡಿರುತ್ತೇವೆ ಆದರೆ ರಷ್ಯಾದಲ್ಲಿ ಕಪಾಳಕ್ಕೆ ಬಾರಿಸುವ ಸರ್ಧೆಯೊಂದಿದ್ದು ಈ ವಿಶೇಷ ಆಟದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

ಆಟದಲ್ಲಿ ಎದುರಾಳಿ ಇಬ್ಬರು ಸ್ಪರ್ಧಿಗಳು ಎದುರುಬದುರಾಗಿ ನಿಂತು ಕಪಾಳಕ್ಕೆ ಬಾರಿಸಬೇಕು. ಕಪಾಳಕ್ಕೆ ಬಾರಿಸುವ ಮುನ್ನ ಎದುರಾಳಿ ಸ್ಪರ್ಧಿಯನ್ನು ನೋಡುತ್ತಿರು ಬೇಕು. ಯಾವುದೇ ಕಾರಣಕ್ಕೂ ಏಟನ್ನು ತಪ್ಪಿಸಿಕೊಳ್ಳಲು ಯತ್ನಿಸಬಾರದು.

ಇದನ್ನೂ ಓದಿ: ಪ್ರಧಾನಿ ಆಗುವವರಿಗೆ ಪ್ರಬುದ್ಧತೆ ಇರಬೇಕು; ರಾಹುಲ್​ ಗಾಂಧಿ ಲೇವಡಿ ಮಾಡಿದ ಎಸ್​.ಎಂ.ಕೃಷ್ಣ

ಕಪಾಳಕ್ಕೆ ಬಾರಿಸೋ ಆಟದಲ್ಲಿ ಯಾರು ಎದುರಾಳಿಯ ಏಟಿನಿಂದ ಹಿಂಜರಿಯುತ್ತಾನೋ ಆತ ಸೋತಂತೆ. ಅಲ್ಲಿಯವರೆಗೆ ನಿರಂತರವಾಗಿ ಕಪಾಳಕ್ಕೆ ಬಾರಿಸುತ್ತಾ ಇರುತ್ತಾರೆ. ಇನ್ನೂ ರೆಫರಿ ಆಟಗಾರರನ್ನು ನಿಯಂತ್ರಿಸುವಲ್ಲಿ ಮತ್ತು ಆಟವನ್ನು ನಡೆಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿರುತ್ತಾನೆ. ಕಪಾಳಕ್ಕೆ ಬಾರಿಸೋ ಆಟದಲ್ಲಿ ಯಾವುದೇ ಪಾಯಿಂಟ್ಸ್​ ಅಥವಾ ಟೈಂ ಲಿಮಿಟ್ಸ್​ ಇರುವುದಿಲ್ಲ.

 
ಕಳೆದ ಮಾರ್ಚ್​ನಲ್ಲಿ ಕ್ರಾಸ್​​ನೋಯಾಸ್ಕ್​ನಲ್ಲಿ ಸೈಬೀರಿಯನ್​ ಪವರ್​ ಶೋ ಕಾರ್ಯಕ್ರಮದಲ್ಲಿ ಪುರುಷರ ಕಪಾಳಕ್ಕೆ ಹೊಡೆಯೊ ಸ್ಪರ್ಧೆ ಎರ್ಪಡಿಸಲಾಗಿತ್ತು. ಆಟದಲ್ಲಿ ವಸಿಲಿ ಕಮೋಟ್​​ಸ್ಕೀ ಎಂಬಾತ ಗೆಲುವು ಸಾಧಿಸಿದ್ದು 32 ಸಾವಿರ ರೂಪಾಯಿಯನ್ನು ಬಹುಮಾನವಾಗಿ ಗೆದ್ದಿದ್ದಾನೆ.

First published:April 20, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...