• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • ಪ್ರೀತಿಯ ನಾಯಿ ಗೋಪಿ ಹುಟ್ಟುಹಬ್ಬಕ್ಕೆ ಆರತಿ ಬೆಳಗಿ ಸಂಭ್ರಮಿಸಿದ ಸುಧಾ ಮೂರ್ತಿ, ವಿಡಿಯೋ ವೈರಲ್

ಪ್ರೀತಿಯ ನಾಯಿ ಗೋಪಿ ಹುಟ್ಟುಹಬ್ಬಕ್ಕೆ ಆರತಿ ಬೆಳಗಿ ಸಂಭ್ರಮಿಸಿದ ಸುಧಾ ಮೂರ್ತಿ, ವಿಡಿಯೋ ವೈರಲ್

ಗೋಪಿಯೊಂದಿಗೆ ಸುಧಾ ಮೂರ್ತಿ

ಗೋಪಿಯೊಂದಿಗೆ ಸುಧಾ ಮೂರ್ತಿ

Sudha Murthy: ಸೋಫಾದ ಮೇಲೆ ಮಹಾರಾಜನಂತೆ ರಿಲ್ಯಾಕ್ಸ್ ಮೂಡಿನಲ್ಲಿದ್ದ ಗೋಪಿಗೆ ಸುಧಾ ಮೂರ್ತಿ ಮತ್ತು ಅವರ ಸಂಬಂಧಿ ಮಹಿಳೆ ಇಬ್ಬರೂ ಸೇರಿ ಆರತಿ ಬೆಳಗಿದರು. ದೇವರ ಆರತಿ ಹಾಡು ಹಾಡುತ್ತಾ, ಗೋಪಿಗೆ ಆರತಿ ಬೆಳಗಿ ಹಣೆಗೆ ತಿಲಕವನ್ನಿಟ್ಟರು. ಇವರು ಹಣೆಗೆ ಕುಂಕುಮ ಇಟ್ಟ ಕ್ಷಣ ಮಾತ್ರದಲ್ಲೇ ಗೋಪಿ ಹಣೆಯನ್ನು ಸೋಫಾಗೆ ಉಜ್ಜಿ ಒರೆಸಿಕೊಂಡುಬಿಟ್ಟ..ಥೇಟ್ ಪುಟ್ಟ ಮಕ್ಕಳ ಹಾಗೆ.

ಮುಂದೆ ಓದಿ ...
  • Share this:

ಬಹುತೇಕ ಮನೆಗಳಲ್ಲಿ ನಾಯಿ (Pet Dog) ಕುಟುಂಬದ ಸದಸ್ಯನೇ. ತಮ್ಮದೇ ಮತ್ತೊಂದು ಮಗನೋ ಮಗಳೋ ತಮ್ಮೊಂದಿಗಿದ್ದಾರೆ ಎನ್ನುವಷ್ಟು ಸಂಭ್ರಮದಿಂದ ಜನ ನಾಯಿಗಳನ್ನು ಸಾಕುತ್ತಾರೆ. ಅವುಗಳು ಕೂಡಾ ಹೆತ್ತ ಮಕ್ಕಳಿಗಿಂತಲೂ ಹೆಚ್ಚೇ ಪ್ರೀತಿ (Love) ತೋರಿಸಿ ಅದಕ್ಕೆ ಸರಿಸಮನಾಗಿ ನಡೆದುಕೊಳ್ಳುತ್ತವೆ. ಇದಕ್ಕೆ ಸಾಮಾನ್ಯ ಜನರು ಮಾತ್ರವಲ್ಲ, ಸೆಲಬ್ರಿಟಿಗಳೂ (Celebrity) ಹೊರತಲ್ಲ. ಇನ್ಫೋಸಿಸ್ ಫೌಂಡೇಶನ್ (Infosys Foundation) ಅಧ್ಯಕ್ಷೆ ಸುಧಾ ಮೂರ್ತಿ (Sudha Murthy) ತಮ್ಮ ನೆಚ್ಚಿನ ಸಾಕು ನಾಯಿ ಗೋಪಿ (Gopi) ಬಗ್ಗೆ ಕತೆಗಳು, ಪುಸ್ತಕವನ್ನೇ ಬರೆದಿದ್ದಾರೆ. ಅವರಿಗೆ ಗೋಪಿ ನೆಚ್ಚಿನ ಮಗ. ಇವನು ನನ್ನ ಮೂರನೇ ಮಗು ಎಂದು ಖುಷಿಯಿಂದಲೇ ಹೇಳಿಕೊಳ್ತಾರೆ. ಇತ್ತೀಚೆಗೆ ಗೋಪಿಯ ಹುಟ್ಟುಹಬ್ಬ (Birthday Celebration) ಇತ್ತು. ಅದನ್ನು ಮನೆಯ ಮಕ್ಕಳ ಹುಟ್ಟುಹಬ್ಬವನ್ನು ಆಚರಿಸಿದಷ್ಟೇ ಖುಷಿ-ಸಂಭ್ರಮದಲ್ಲಿ ಆಚರಿಸಿದರು ಸುಧಾ ಮೂರ್ತಿ.


ಮೊದಲಿಗೆ ಸೋಫಾದ ಮೇಲೆ ಮಹಾರಾಜನಂತೆ ರಿಲ್ಯಾಕ್ಸ್ ಮೂಡಿನಲ್ಲಿದ್ದ ಗೋಪಿಗೆ ಸುಧಾ ಮೂರ್ತಿ ಮತ್ತು ಅವರ ಸಂಬಂಧಿ ಮಹಿಳೆ ಇಬ್ಬರೂ ಸೇರಿ ಆರತಿ ಬೆಳಗಿದರು. ದೇವರ ಆರತಿ ಹಾಡು ಹಾಡುತ್ತಾ, ಗೋಪಿಗೆ ಆರತಿ ಬೆಳಗಿ ಹಣೆಗೆ ತಿಲಕವನ್ನಿಟ್ಟರು. ಇವರು ಹಣೆಗೆ ಕುಂಕುಮ ಇಟ್ಟ ಕ್ಷಣ ಮಾತ್ರದಲ್ಲೇ ಗೋಪಿ ಹಣೆಯನ್ನು ಸೋಫಾಗೆ ಉಜ್ಜಿ ಒರೆಸಿಕೊಂಡುಬಿಟ್ಟ..ಥೇಟ್ ಪುಟ್ಟ ಮಕ್ಕಳ ಹಾಗೆ.


ನಂತರ ಗೋಪಿಯನ್ನು ತಬ್ಬಿಕೊಂಡು ಜನ್ಮದಿನದ ಶೂಭಾಷಯ ಕೋರಿದರು ಸುಧಾ ಮೂರ್ತಿ. ಖುಷಿಯಿಂದ ನಡೆದ ಈ ಸಮಾರಂಭವನ್ನು ಮನೆಯವರೇ ವಿಡಿಯೋ ಮಾಡಿದ್ದಾರೆ. ಅದನ್ನು ಅವರ ಅಪ್ಪನಿಗೆ ಕಳಿಸು ಎಂದು ಸುಧಾಮೂರ್ತಿ ವಿಡಿಯೋದಲ್ಲಿ ಹೇಳಿರುವುದು ತಿಳಿಯುತ್ತದೆ. ಅಂದರೆ ನಾರಾಯಣ ಮೂರ್ತಿ ಅವರಿಗೆ ಈ ವಿಡಿಯೋ ಕಳಿಸುವಂತೆ ಹೇಳಿದ್ದಾರೆ.



ಇದನ್ನೂ ಓದಿ: Sudha Murthy: ಈ ವರ್ಷ ಡಿಸೆಂಬರ್ 31ಕ್ಕೆ ಇನ್ಫೋಸಿಸ್ ಫೌಂಡೇಶನ್​ಗೆ ಸುಧಾ ಮೂರ್ತಿ ವಿದಾಯ, ನಿವೃತ್ತಿ ನಂತರದ ಅವರ ಪ್ಲಾನ್​ ಏನು ಗೊತ್ತಾ?


ಗೋಪಿಯನ್ನು ಸುಧಾಮೂರ್ತಿ ಎಷ್ಟು ಹಚ್ಚಿಕೊಂಡಿದ್ದಾರೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಅವರ ಹಿಂದೆ ಮುಂದೆಯೇ ಸುತ್ತಾಡುತ್ತಾ ಇರೋ ಅವನು ಅವರ ನೆಚ್ಚಿನ ಕೂಸು. ಗೋಪಿಯ ಆಟೋಟಗಳಲ್ಲಿ ನಾನು ಬಹಳ ಖುಷಿಪಡುತ್ತೇನೆ ಎಂದು ಖುದ್ದು ಸುಧಾ ಮೂರ್ತಿ ಅನೇಕ ಬಾರಿ ಹೇಳಿದ್ದಾರೆ.


ಈ ವರ್ಷದ ಅಂತ್ಯಕ್ಕೆ ಇನ್ಫೋಸಿಸ್ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷೆ ಸುಧಾಮೂರ್ತಿ ತಮ್ಮ ಹುದ್ದೆಯಿಂದ ನಿವೃತ್ತಿ ಪಡೆಯಲಿದ್ದಾರೆ. ಇನ್ನು ಕುಟುಂಬ ಮತ್ತು ಗೋಪಿ ಜೊತೆ ಹೆಚ್ಚು ಸಮಯ ಕಳೆಯುವ ಆಲೋಚನೆ ಅವರದ್ದು. ಈ ವರ್ಷ ಡಿಸೆಂಬರ್ 31ಕ್ಕೆ ತಾನು ಇನ್ಫೋಸಿಸ್ ಫೌಂಡೇಶನ್​ನಿಂದ ನಿವೃತ್ತಿ ಪಡೆಯುವುದಾಗಿ ಸುಧಾ ಮೂರ್ತಿ ಕಳೆದ ವರ್ಷವೇ ಘೋಷಿಸಿದ್ದರು. ನಿವೃತ್ತಿ ನಂತರ ತಾನು ಕುಟುಂಬದ ಮೂರ್ತಿ ಫೌಂಡೇಶನ್​ನ ಮುಖ್ಯಸ್ಥರ ಸ್ಥಾನದಲ್ಲಿ ಕುಳಿತು ಇದೇ ಕೆಲಸ ಮುಂದುವರೆಸುವುದಾಗಿ ತಿಳಿಸಿದ್ದಾರೆ.


ಇದನ್ನೂ ಓದಿ: ಟೀ ಕ್ಯಾಂಟೀನ್ ಯುವಕನಿಗೆ ಕರೆ ಮಾಡಿ ಮಾತನಾಡಿದ ಇನ್ಪೋಸಿಸ್ ಸುಧಾ ಮೂರ್ತಿ; ಕಾರಣವೇನು ಗೊತ್ತಾ?


ಅದು ಚಿಕ್ಕ ಫೌಂಡೇಶನ್, ಹಾಗಾಗಿ ಇನ್ಫೋಸಿಸ್ ಫೌಂಡೇಶನ್​ನಂತೆ ದೊಡ್ಡ ಮಟ್ಟಿಗಿನ ಕೆಲಸವನ್ನು ಮಾಡಲು ಸಾಧ್ಯವಾಗದೇ ಇರಬಹುದು. ಆದರೆ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ನಮ್ಮ ಸಹಾಯ ಮತ್ತು ಕೆಲಸ ನಿರಂತರವಾಗಿ ಮುಂದುವರೆಯುತ್ತಿರುತ್ತದೆ ಎಂದಿದ್ದಾರೆ ಸುಧಾ ಮೂರ್ತಿ. ತಮ್ಮ ಮಕ್ಕಳು, ಮೊಮ್ಮಕ್ಕಳು ಎಲ್ಲರೂ ತಂತಮ್ಮ ಬದುಕಿನಲ್ಲಿ ಅವರ ಪಾಡಿಗೆ ಅವರಿದ್ದಾರೆ. ಒಂದು ಫೌಂಡೇಶನ್​ನ ನೆರವು ಇರಲಿ ಇಲ್ಲದಿರಲಿ ಬದುಕನ್ನು ನೇರಾನೇರ ಭೇಟಿ ಮಾಡುವ, ಎಲ್ಲೆಲ್ಲೋ ಅಲೆದು ಜನರಿಗೆ ನೆವಾಗುವ ಈ ಅವಕಾಶವನ್ನು ತಾನು ನಿರಂತರವಾಗಿ ಮುಂದುವರೆಸುತ್ತೇನೆ ಎಂದಿದ್ದಾರೆ ಸುಧಾ ಮೂರ್ತಿ.


ಒಂದು ಫೌಂಡೇಶನ್​ನಿಂದ ಏನೆಲ್ಲಾ ಕೆಲಸಗಳನ್ನು ಮಾಡಲು ಸಾಧ್ಯವೋ ಅದೆಲ್ಲವನ್ನೂ ಮಾಡಿದ ಕೀರ್ತಿ ಇನ್ಫೋಸಿಸ್ ಫೌಂಡೇಶನ್​ಗೆ ಇದೆ. ಸುಧಾ ಮೂರ್ತಿ (Sudha Murthy) ಸಾರಥ್ಯದಲ್ಲಿ ಇನ್ಫೋಸಿಸ್ ಫೌಂಡೇಶನ್ ಲೆಕ್ಕವಿಲ್ಲದಷ್ಟು ಜನರ ಬದುಕಿಗೆ ಆಸರೆಯಾಗಿದೆ. ಆದ್ರೆ ತಾನು ಇನ್ನೇನು ಈ ವರ್ಷ ನಿವೃತ್ತಳಾಗ್ತಿದ್ದೇನೆ, ಮತ್ತು ಇನ್ಫೋಸಿಸ್ ಎನ್ನುವ ಸಂಸ್ಥೆ ತನ್ನ ಎರಡನೇ ಮಗು ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ ಸುಧಾ ಮೂರ್ತಿ. ಅಂದ್ಹಾಗೆ 1996ರಲ್ಲಿ ಆರಂಭವಾದ ಇನ್ಫೋಸಿಸ್ ಫೌಂಡೇಶನ್​ಗೆ ಇದು 25 ವಸಂತಗಳನ್ನು ಪೂರೈಸಿದ ಸುಸಂದರ್ಭವೂ ಹೌದು. ನಿವೃತ್ತಿಯ ನಂತರ ತಮ್ಮ ಕುಟುಂಬ ನಡೆಸುವ ಮೂರ್ತಿ ಫೌಂಡೇಶನ್​ ಚುಕ್ಕಾಣಿಯನ್ನು ಹಿಡಿಯಲಿದ್ದಾರೆ ಸುಧಾ ಮೂರ್ತಿ.

First published: