HOME » NEWS » Trend » INFINIX NOTE 10 INFINIX NOTE 10 PRO LAUNCHED WITH MEDIATEK CHIPS 5000MAH BATTERY PRICE SPECS AND MORE STG MAK

Infinix Note 10| ಇನ್ಫಿನಿಕ್ಸ್ ನೋಟ್ 10 ಸ್ಮಾರ್ಟ್‌ಫೋನ್‌ ಬಿಡುಗಡೆ: ಬೆಲೆ, ವೈಶಿಷ್ಟ್ಯಗಳು ಹೀಗಿದೆ..!

ಇನ್ಫಿನಿಕ್ಸ್ ನೋಟ್ 10 ಮೀಡಿಯಾ ಟೆಕ್ ಹೇಲಿಯೋ ಜಿ 85 ಚಿಪ್‌ಸೆಟ್ 6 ಜಿಬಿವರೆಗೆ RAM ನೊಂದಿಗೆ ಜೋಡಿಸಲಾ ಗಿದೆ. ಮತ್ತೊಂದೆಡೆ, ಇನ್ಫಿನಿಕ್ಸ್ ನೋಟ್ 10 ಪ್ರೋ 8 ಜಿಬಿ RAM ನೊಂದಿಗೆ ಜೋಡಿಯಾಗಿರುವ ಮೀಡಿಯಾ ಟೆಕ್ ಹೇಲಿಯೋ ಜಿ 95 ಚಿಪ್‌ಸೆಟ್‌ನಿಂದ ನಿಯಂತ್ರಿಸಲ್ಪಡುತ್ತದೆ.

Trending Desk
Updated:June 11, 2021, 5:20 PM IST
Infinix Note 10| ಇನ್ಫಿನಿಕ್ಸ್ ನೋಟ್ 10 ಸ್ಮಾರ್ಟ್‌ಫೋನ್‌ ಬಿಡುಗಡೆ: ಬೆಲೆ, ವೈಶಿಷ್ಟ್ಯಗಳು ಹೀಗಿದೆ..!
ಇನ್ಫಿನಿಕ್ಸ್ ನೋಟ್ 10 ಸ್ಮಾರ್ಟ್‌ಫೋನ್‌.
  • Share this:
ಹಾಂಗ್‌ಕಾಂಗ್‌ ಮೂಲದ ಸ್ಮಾರ್ಟ್‌ಫೋನ್‌ ತಯಾರಕ ಇನ್ಫಿನಿಕ್ಸ್ ತನ್ನ ನೋಟ್ 10 ಸರಣಿಯನ್ನು ಜೂನ್‌ 7 ರಂದು ಭಾರತದಲ್ಲಿ ಬಿಡುಗಡೆ ಮಾಡಿದೆ. ಇನ್ಫಿನಿಕ್ಸ್ ನೋಟ್ 10 ಮತ್ತು ಇನ್ಫಿನಿಕ್ಸ್ ನೋಟ್ 10 ಪ್ರೋ ಸರಣಿಯ ಎರಡು ಸ್ಮಾರ್ಟ್‌ಫೋನ್‌ ಗಳನ್ನು ಬಿಡುಗಡೆ ಮಾಡಲಾಗಿದ್ದು, ಇನ್ಫಿನಿಕ್ಸ್ ನೋಟ್ 10 ಪ್ರೋ ಈ ಎರಡರ ಪೈಕಿ ಹೆಚ್ಚು ಶಕ್ತಿಶಾಲಿ ಸಾಧನವಾಗಿದೆ. ಇನ್ಫಿನಿಕ್ಸ್ ನೋಟ್ 10 ಸರಣಿಯ ಈ ಸ್ಮಾರ್ಟ್‌ಫೋನ್‌ ಅನೇಕ ವೈಶಿಷ್ಟ್ಯಗಳನ್ನು ಹೊಂದಿದೆ. ಇನ್ಫಿನಿಕ್ಸ್ ನೋಟ್ 10 ನ 4 ಜಿಬಿ ರ‍್ಯಾಮ್ + 64 ಜಿಬಿ ಸ್ಟೋರೇಜ್ ಮಾಡೆಲ್‌ ಅನ್ನು 10,999 ರೂ.ಗಳ ದರದಲ್ಲಿ ಬಿಡುಗಡೆ ಮಾಡಲಾಗಿದೆ. ಹಾಗೆ, 8 ಜಿಬಿ RAM + 256GB ಸ್ಟೋರೇಜ್ ಸಾಮರ್ಥ್ಯ ಇರುವ ಸ್ಮಾರ್ಟ್‌ಫೋನ್‌ಗೆ 16,999 ರೂ. ದರ ನೀಡಲಾಗಿದೆ. ಈ ಸ್ಮಾರ್ಟ್‌ಫೋನ್‌ ಗಳು ಮೀಡಿಯಾ ಟೆಕ್ ಪ್ರೊಸೆಸರ್‌ಗಳಿಂದ ನಿಯಂತ್ರಿಸಲ್ಪಡುತ್ತವೆ ಮತ್ತು ದೊಡ್ಡ 5,000 ಎಮ್ಎಹೆಚ್ ಬ್ಯಾಟರಿಗಳೊಂದಿಗೆ ಬರುತ್ತವೆ. ಇನ್ಫಿನಿಕ್ಸ್ ನೋಟ್ 10 ಸರಣಿಯ ವಿವರವಾದ ಬೆಲೆಗಳು, ವಿಶೇಷಣಗಳು ಮತ್ತು ಲಭ್ಯತೆಯ ವಿವರ ಹೀಗಿದೆ..

ಈ ಮೊದಲೇ ತಿಳಿಸಿದಂತೆ ಇನ್ಫಿನಿಕ್ಸ್ ನೋಟ್ 10 ಸರಣಿಯ ಸ್ಮಾರ್ಟ್‌ಫೋನ್‌ 10,999 ರೂ. ನಿಂದ ಆರಂಭವಾಗುತ್ತದೆ. ಇನ್ನು, 6 ಜಿಬಿ RAM + 128 ಜಿಬಿ ಸ್ಟೋರೇಜ್ ಮಾಡೆಲ್‌ ಬೆಲೆ 11,999 ರೂ. . ಆಗಿದೆ. ಹಾಗೂ 8 ಜಿಬಿ RAM + 256GB ಸ್ಟೋರೇಜ್ ಸಾಮರ್ಥ್ಯ ಇರುವ ಸ್ಮಾರ್ಟ್‌ಫೋನ್‌ಗೆ 16,999 ರೂ. ದರವಿದೆ. ಜೂನ್ 13 ರಿಂದ ಮಾರಾಟವಾಗಲಿದ್ದು, ಇನ್ಫಿನಿಕ್ಸ್ ನೋಟ್ 10 ಪ್ರೋ ಸಹ ಜೂನ್‌ 13 ರಂದು ಪ್ರೀ ಆರ್ಡರ್‌ಗಳಲ್ಲಿ ಲಭ್ಯವಾಗಲಿದೆ. ಹಾಂಗ್‌ಕಾಂಗ್ ಮೂಲದ ಈ ಸ್ಮಾರ್ಟ್‌ಫೋನ್‌ಗಳು ಫ್ಲಿಪ್‌ಕಾರ್ಟ್‌ ಮೂಲಕ ಮಾರಾಟವಾಗಲಿದೆ ಮತ್ತು ತಲಾ ಮೂರು ಬಣ್ಣ ಆಯ್ಕೆಗಳಲ್ಲಿ ಬರಲಿವೆ. ಇನ್ಫಿನಿಕ್ಸ್ ನೋಟ್ 10, 7 ಡಿಗ್ರಿ ಪರ್ಪಲ್, 95 ಡಿಗ್ರಿ ಬ್ಲ್ಯಾಕ್ ಮತ್ತು ಎಮರಾಲ್ಡ್ ಗ್ರೀನ್ ಕಲರ್ ಆಯ್ಕೆಗಳಲ್ಲಿ ಲಭ್ಯವಿದೆ. ಇನ್ನು, ಇನ್ಫಿನಿಕ್ಸ್ ನೋಟ್ 10 ಪ್ರೋ, 7 ಡಿಗ್ರಿ ಪರ್ಪಲ್, 95 ಡಿಗ್ರಿ ಬ್ಲ್ಯಾಕ್ ಮತ್ತು ನಾರ್ಡಿಕ್ ಸೀಕ್ರೆಟ್ ಬಣ್ಣಗಳಲ್ಲಿ ಬರುತ್ತದೆ.

ಇದನ್ನೂ ಓದಿ: Trending: ಒಂದು ಚಿಕನ್‌ ನಗ್ಗೆಟ್‌ 72 ಲಕ್ಷ ರೂ. ಗೆ ಮಾರಾಟ..!

ವಿಶೇಷಣಗಳ ಪ್ರಕಾರ, ಇನ್ಫಿನಿಕ್ಸ್ ನೋಟ್ 10 ಮತ್ತು ನೋಟ್ 10 ಪ್ರೋ ಎರಡೂ ಆ್ಯಂಡ್ರಾಯ್ಡ್ 11 ಆಧಾರಿತ ಎಕ್ಸ್‌ಒಎಸ್ 7.6 ಸಾಫ್ಟ್‌ವೇರ್‌ನಲ್ಲಿ ಕಾರ್ಯನಿರ್ವಹಿಸುತ್ತವೆ. ಎರಡೂ ಸ್ಮಾರ್ಟ್‌ಫೋನ್‌ಗಳು 6.95 ಇಂಚಿನ ಪೂರ್ಣ ಎಚ್‌ಡಿ + ಸೂಪರ್ ಫ್ಲೂಯಿಡ್ ಡಿಸ್ಪ್ಲೇಯೊಂದಿಗೆ 180 ಹರ್ಟ್ಸ್‌ ಟಚ್ ಸ್ಯಾಂಪ್ಲಿಂಗ್ ದರವನ್ನು ಹೊಂದಿವೆ. ಆದರೂ, ಇನ್ಫಿನಿಕ್ಸ್ ನೋಟ್ 10 ಪ್ರೋ ಮಾತ್ರ 90Hz ಪ್ಯಾನೆಲ್‌ನೊಂದಿಗೆ ಹೆಚ್ಚಿನ ರಿಫ್ರೆಶ್ ದರ ಪ್ರದರ್ಶನವನ್ನು ಪಡೆಯುತ್ತದೆ.

ಇದನ್ನೂ ಓದಿ: Prashant Kishore| ಮಹಾರಾಷ್ಟ್ರ ಮಿಷನ್ 2024; ಕುತೂಹಲ ಮೂಡಿಸಿದ ಶರದ್ ಪವಾರ್-ಪ್ರಶಾಂತ್ ಕಿಶೋರ್ ಸಭೆ

ಇನ್ಫಿನಿಕ್ಸ್ ನೋಟ್ 10 ಮೀಡಿಯಾ ಟೆಕ್ ಹೇಲಿಯೋ ಜಿ 85 ಚಿಪ್‌ಸೆಟ್ 6 ಜಿಬಿವರೆಗೆ RAM ನೊಂದಿಗೆ ಜೋಡಿಸಲಾಗಿದೆ. ಮತ್ತೊಂದೆಡೆ, ಇನ್ಫಿನಿಕ್ಸ್ ನೋಟ್ 10 ಪ್ರೋ 8 ಜಿಬಿ RAM ನೊಂದಿಗೆ ಜೋಡಿಯಾಗಿರುವ ಮೀಡಿಯಾ ಟೆಕ್ ಹೇಲಿಯೋ ಜಿ 95 ಚಿಪ್‌ಸೆಟ್‌ನಿಂದ ನಿಯಂತ್ರಿಸಲ್ಪಡುತ್ತದೆ. ಎರಡೂ ಸ್ಮಾರ್ಟ್‌ಫೋನ್‌ಗಳು 5,000 ಎಂಎಹೆಚ್ ಬ್ಯಾಟರಿಯೊಂದಿಗೆ ಬರುತ್ತವೆ. ಇನ್ನೊಂದೆಡೆ, ಇನ್ಫಿನಿಕ್ಸ್ ನೋಟ್ 10 ಪ್ರೋ 33W ವೇಗದ ಚಾರ್ಜಿಂಗ್‌ನೊಂದಿಗೆ ಬಂದರೆ, ನೋಟ್ 10 ಕೇವಲ 18W ಚಾರ್ಜಿಂಗ್ ವೇಗದೊಂದಿಗೆ ಬರುತ್ತದೆ.
Youtube Video
ಇನ್ಫಿನಿಕ್ಸ್ ನೋಟ್ 10 ಟ್ರಿಪಲ್ ರಿಯರ್ ಕ್ಯಾಮೆರಾ, 48 ಮೆಗಾಪಿಕ್ಸೆಲ್ ಪ್ರೈಮರಿ ಶೂಟರ್ ಕ್ಯಾಮೆರಾ ಫೀಚರ್‌ ಅನ್ನು ಹೊಂದಿದೆ. ಹಾಗೆ, 2 ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಮತ್ತು 2 ಮೆಗಾಪಿಕ್ಸೆಲ್ ಪೋರ್ಟ್ರೇಟ್ ಲೆನ್ಸ್ ಅನ್ನು ಹೊಂದಿದೆ. ಮುಂಭಾಗದಲ್ಲಿ, ಇನ್ಫಿನಿಕ್ಸ್ ನೋಟ್ 10 16 ಮೆಗಾಪಿಕ್ಸೆಲ್ ಸೆಲ್ಫಿ ಸ್ನ್ಯಾಪರ್‌ನೊಂದಿಗೆ ಬರುತ್ತದೆ. ಹಾಗೆ, ಇನ್ಫಿನಿಕ್ಸ್ ನೋಟ್ 10 ಪ್ರೋ ಕ್ವಾಡ್‌ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ, ಇದರಲ್ಲಿ 64 ಮೆಗಾಪಿಕ್ಸೆಲ್ ಪ್ರೈಮರಿ ಶೂಟರ್, 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಆ್ಯಂಗಲ್ ಸೆನ್ಸಾರ್‌, 2 ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಮತ್ತು 2 ಮೆಗಾಪಿಕ್ಸೆಲ್ ಪೋರ್ಟ್ರೇಟ್ ಲೆನ್ಸ್ ಸೇರಿವೆ. ಮುಂಭಾಗದಲ್ಲಿ, ಇದು ಇನ್ಫಿನಿಕ್ಸ್ ನೋಟ್ 10 ರಂತೆಯೇ ಕ್ಯಾಮೆರಾವನ್ನು ಹೊಂದಿದೆ.
First published: June 11, 2021, 5:18 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories