ಮಹಿಳೆಯೊಬ್ಬರು ಅಸ್ವಾಭಾವಿಕ ಲೈಂಗಿಕತೆಗೆ (unnatural Sex) ವ್ಯಸನಿಯಾಗಿದ್ದ (addicted) ತನ್ನ ಪತಿಯ (Husband) ವಿರುದ್ಧ ಕೋರ್ಟ್ (Court) ಮೆಟ್ಟಿಲೇರಿರುವ ಘಟನೆ ಮಧ್ಯಪ್ರದೇಶದ (MadhyaPradesh) ಇಂದೋರ್ನಲ್ಲಿ (Indor) ಬೆಳಕಿಗೆ ಬಂದಿದೆ. ಮಹಿಳೆ ತನಗಿಂತ 27 ವರ್ಷ ದೊಡ್ಡವನನ್ನು ಮದುವೆಯಾಗಿದ್ದು, ಪತಿಗೆ ಅಸಹಜ ಸಂಭೋಗದ ಅಭ್ಯಾಸವಿದೆ ಎಂದು ಪತ್ನಿ ಆರೋಪಿಸಿದ್ದಾಳೆ.
ಮದುವೆಯಾದ ಮೊದಲ ರಾತ್ರಿಯಿಂದಲೇ ಆತನ ವರ್ತನೆ ವಿಪರೀತವಾಗಿದೆ. ಇದರಿಂದ ಆಕೆ ಸಂಭೋಗ ನಡೆಸಲು ನಿರಾಕರಿಸಿದಾಗ ಪತಿ ಕೊಲೆ ಬೆದರಿಕೆ ಹಾಕಿದ್ದಾನೆ. ಪತಿಯ ಚೇಷ್ಟೆಯಿಂದ ಬೇಸತ್ತ ಪತ್ನಿ ಕೆಲ ದಿನಗಳ ಹಿಂದೆ ಇಂದೋರ್ ನ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಅಂದಹಾಗೆಯೇ, 67 ವರ್ಷದ ಪತಿ ಗುಜರಾತ್ನ ದೊಡ್ಡ ಆಭರಣ ವ್ಯಾಪಾರಿಯಾಗಿದ್ದಾನೆ.
ವ್ಯಕ್ತಿಯ ಮೊದಲ ಪತ್ನಿ ಕೊರೊನಾದಿಂದ ಸಾವನ್ನಪ್ಪಿದ್ದಳು. ಆ ಬಳಿಕ ಇವರಿಬ್ಬರು ಮದುವೆಯಾಗಲು ನಿರ್ಧರಿಸಿದರು. ಕಳೆದ ವರ್ಷ ಅಕ್ಟೋಬರ್ನಲ್ಲಿ ಇವರಿಬ್ಬರು ಮದುವೆಯಾಯಿತು. ಆದರೆ, ಹನಿಮೂನ್ನಲ್ಲಿಯೇ ಪತಿ ಆಕೆಯೊಂದಿಗೆ ವಿಪರೀತ ಸಂಭೋಗದ ಚಟಕ್ಕೆ ಬಿದ್ದು ಆಕೆಗೆ ದೇಹಕದ ಭಾಗಗಳಿಗೆ ಕಚ್ಚಿದ್ದಾನೆ. ಇದರಿಂದ ಭಯಗೊಂಡು ಆಕೆ ಕೋರ್ಟ್ ಮೆಟ್ಟಿಲೇರಿದ್ದಾಳೆ.
ಪತಿ ವಿರುದ್ಧ ಪತ್ನಿ ಗಂಭೀರ ಆರೋಪ
ಪತಿ ತನ್ನೊಂದಿಗೆ ಅಸ್ವಾಭಾವಿಕ ಲೈಂಗಿಕತೆಯನ್ನು ಹೊಂದಿದ್ದನಲ್ಲದೆ, ನನ್ನ ಇಡೀ ದೇಹವನ್ನು ತನ್ನ ಕೃತಕ ಹಲ್ಲುಗಳಿಂದ ಕಚ್ಚಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾಳೆ. ಮಹಿಳೆ ವಿರೋಧ ವ್ಯಕ್ತಪಡಿಸಿದಾಗ ಪತಿ ಬೆದರಿಕೆ ಹಾಕಿದ್ದಾನೆ. ಪತಿಯ ದಬ್ಬಾಳಿಕೆಯಿಂದ ವಿಚಲಿತಳಾದ ಮಹಿಳೆ ಗುಜರಾತ್ನಿಂದ ಇಂದೋರ್ನಲ್ಲಿರುವ ತನ್ನ ಮನೆಗೆ ಬಂದಿದ್ದಾಳೆ. ನಂತರ ಪೊಲೀಸ್ ಠಾಣೆಯಲ್ಲಿ ಪತಿ ವಿರುದ್ಧ ದೂರು ದಾಖಲಿಸಿದ್ದಾಳೆ.
ಇದನ್ನು ಓದಿ: Viral Photo: ಲಿಫ್ಟ್ನಲ್ಲಿ ಬಾಲಕಿಗೆ ಬಲವಂತವಾಗಿ ಮುತ್ತಿಡಲು ಯತ್ನಿಸಿದ ಯುವಕ.. ಮುಂದೇನಾಯ್ತು ಗೊತ್ತಾ?
ಪೊಲೀಸರು ಪ್ರಕರಣ ದಾಖಲಿಸಿಕೊಂಡಾಗ ಆರೋಪಿ ಪತಿ ನಿರೀಕ್ಷಣಾ ಜಾಮೀನಿಗಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದಾನೆ, ಆದರೆ ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ನ್ಯಾಯಾಲಯ ಆತನ ಅರ್ಜಿಯನ್ನು ತಿರಸ್ಕರಿಸಿತ್ತು. ಪೊಲೀಸರು ಮಹಿಳೆಯನ್ನು ವೈದ್ಯಕೀಯ ಚಿಕಿತ್ಸೆಗೆ ಒಳಪಡಿಸಿದಾಗ ಗಾಯಗಳು ದೃಢಪಟ್ಟಿವೆ. ಇದಾದ ನಂತರ ಪೊಲೀಸರು ಆರೋಪಿಯನ್ನು ಬಂಧಿಸಿ ಆತನ ನಕಲಿ ಹಲ್ಲುಗಳನ್ನು ಜಪ್ತಿ ಮಾಡಿದ್ದಾರೆ.
ಇದನ್ನು ಓದಿ: Piranha Fish: ಪಿರಾನ್ಹಾ ಮೀನುಗಳ ದಾಳಿಗೆ 4 ಜನ ಸಾವು, 20ಕ್ಕೂ ಹೆಚ್ಚು ಜನರಿಗೆ ಗಾಯ!
ಅಷ್ಟೇ ಅಲ್ಲದೆ, ಪತಿಯನ್ನು ಸುಲಭವಾಗಿ ಬಿಡುಗಡೆ ಮಾಡಬಾರದು ಎಂದು ನೊಂದ ಪತ್ನಿ ಜಿಲ್ಲಾ ನ್ಯಾಯಾಲಯಕ್ಕೆ ಮೊರೆ ಹೋಗಿದ್ದಾಳೆ. ಆತನಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದ್ದಾಳೆ. ಸಂತ್ರಸ್ತೆಯ ದೂರಿನ ನಂತರ ಪೊಲೀಸರು ಪತಿಯನ್ನು ಬಂಧಿಸಿ ಮಂಗಳವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ