Viral News: 2 ತಲೆ, 2 ಹೃದಯ, 3 ಕೈ ಇರೋ ಮಗು, ನೋಡಿ ದಿಗ್ಭ್ರಮೆಗೊಂಡ ವೈದ್ಯರು..!

ಶಾಹೀನ್ ಮತ್ತು ಆಕೆಯ ಪತಿ ಸೋಹೇಲ್ ಇಬ್ಬರು ಆರೋಗ್ಯವಾಗಿರುವ ಅವಳಿ ಮಕ್ಕಳನ್ನು (Twin) ನಿರೀಕ್ಷಿಸುತ್ತಿದ್ದರು. ಆದರೆ ಮಾರ್ಚ್ 28 ರಂದು ಮಧ್ಯಪ್ರದೇಶದ ರತ್ಲಾಮ್‌ನಲ್ಲಿ ಹುಟ್ಟಿದ ಈ ಮಗುವಿಗೆ ಎರಡು ತಲೆಗಳನ್ನು ಇರುವುದನ್ನು ನೋಡಿ ದಂಪತಿ (Couple) ಆಘಾತಕ್ಕೊಳಗಾದರು.

ಎರಡು ತಲೆ ಒಂದೇ ದೇಹ

ಎರಡು ತಲೆ ಒಂದೇ ದೇಹ

  • Share this:
ಕೆಲವೊಮ್ಮೆ ಗರ್ಭದಲ್ಲಿ ಅವಳಿ ಮಕ್ಕಳು ಬೆಳೆಯುತ್ತಿವೆ ಎಂದು ವೈದ್ಯರು (Doctors) ಹೇಳಿದಾಗ, ತಾಯಿಯಾಗುವವಳು (Mother) ತುಂಬಾನೇ ಜಾಗ್ರತೆಯನ್ನು (Careful) ವಹಿಸಬೇಕಾಗುತ್ತದೆ. ಈಗಂತೂ ‘ಮಕ್ಕಳು ಆರೋಗ್ಯವಾಗಿ ಹುಟ್ಟಿದರೆ ಸಾಕಪ್ಪಾ ದೇವರೇ’ ಅಂತ ಪೋಷಕರಾಗುವವರು (Parents) ದೇವರಲ್ಲಿ ಬೇಡಿಕೊಳ್ಳುತ್ತಾರೆ. ಇಲ್ಲಿ ನೋಡಿ ಈಗ ತಾನೇ ಹುಟ್ಟಿದ ಒಂದು ಹಸುಗೂಸಿಗೆ ಎರಡು ತಲೆಗಳು (Head), ಎರಡು ಹೃದಯಗಳು ಮತ್ತು ಮೂರು ಕೈಗಳಿವೆಯಂತೆ. ಈ ಹಸುಗೂಸು ಇಡೀ ಆಸ್ಪತ್ರೆಯ (Hospital) ವೈದ್ಯರನ್ನೇ ದಿಗ್ಭ್ರಮೆಗೊಳಿಸಿದೆ ಎಂದು ಹೇಳಬಹುದು.

ಶಾಹೀನ್ ಮತ್ತು ಆಕೆಯ ಪತಿ ಸೋಹೇಲ್ ಇಬ್ಬರು ಆರೋಗ್ಯವಾಗಿರುವ ಅವಳಿ ಮಕ್ಕಳನ್ನು (Twin) ನಿರೀಕ್ಷಿಸುತ್ತಿದ್ದರು. ಆದರೆ ಮಾರ್ಚ್ 28 ರಂದು ಮಧ್ಯಪ್ರದೇಶದ ರತ್ಲಾಮ್‌ನಲ್ಲಿ ಹುಟ್ಟಿದ ಈ ಮಗುವಿಗೆ ಎರಡು ತಲೆಗಳನ್ನು ಇರುವುದನ್ನು ನೋಡಿ ದಂಪತಿ (Couple) ಆಘಾತಕ್ಕೊಳಗಾದರು.

ಡೈಸೆಫಾಲಿಕ್ ಪ್ಯಾರಾಫಾಗಸ್

ಈ ಸ್ಥಿತಿಯನ್ನು ಡೈಸೆಫಾಲಿಕ್ ಪ್ಯಾರಾಫಾಗಸ್ ಎಂದು ಕರೆಯಲಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ. ಇಲ್ಲಿ ಎರಡು ಶಿಶುಗಳು ಒಂದು ಮುಂಡದಿಂದ ಸೇರಿಕೊಳ್ಳುತ್ತವೆ ಎಂದು ಹೇಳಿದ್ದಾರೆ. ಆದರೆ ಪವಾಡ ಎಂದರೆ ಈ ಹಸುಗೂಸು ಇಲ್ಲಿಯವರೆಗೆ ಬದುಕುಳಿದಿವೆ ಮತ್ತು ವೈದ್ಯರ ಮೇಲ್ವಿಚಾರಣೆಗಾಗಿ ಹತ್ತಿರದ ನಗರವಾದ ಇಂದೋರ್‌ನ ಆಸ್ಪತ್ರೆಗೆ ಈ ಶಿಶುವನ್ನು ದಾಖಲಿಸಿದ್ದಾರೆ.

ಆಸ್ಪತ್ರೆಯ ಎನ್ಐಸಿಯುಗೆ ದಾಖಲು

ತಾಯಿ ಮಾತ್ರ ರತ್ಲಾಮ್‌ನ ಜಿಲ್ಲಾ ಆಸ್ಪತ್ರೆಯಲ್ಲಿಯೇ ಉಳಿದಿದ್ದಾರೆ. ಎರಡು ತಲೆ ಮತ್ತು ಮೂರು ಕೈಗಳ ನವಜಾತ ಶಿಶುವನ್ನು ಮಹಾರಾಜ ಯಶವಂತರಾವ್ ಆಸ್ಪತ್ರೆಗೆ ಮಂಗಳವಾರ ದಾಖಲಿಸಲಾಗಿದೆ. ಅವರನ್ನು ರತ್ಲಾಮ್‌ನಿಂದ ರೆಫರ್ ಮಾಡಲಾಯಿತು ಮತ್ತು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಯ ಎನ್ಐಸಿಯುಗೆ ದಾಖಲಿಸಲಾಯಿತು.

ಅವಳಿ ಮಕ್ಕಳ ಅಪರೂಪದ ರೂಪ

ಮಕ್ಕಳ ಶಸ್ತ್ರಚಿಕಿತ್ಸಕ ಡಾ. ಬ್ರಿಜೇಶ್ ಲಹೋಟಿ ಅವರ ಪ್ರಕಾರ, ಈ ಸ್ಥಿತಿಯನ್ನು ಡೈಸೆಫಾಲಿಕ್ ಪ್ಯಾರಾಫಾಗಸ್ ಎಂದು ಕರೆಯಲಾಗುತ್ತದೆ. ಇದು ಭಾಗಶಃ ಅವಳಿ ಮಕ್ಕಳ ಅಪರೂಪದ ರೂಪವಾಗಿದ್ದು, ಒಂದು ಮುಂಡದ ಮೇಲೆ ಎರಡು ತಲೆಗಳನ್ನು ಅಕ್ಕಪಕ್ಕದಲ್ಲಿ ಹೊಂದಿರುತ್ತದೆ.

ಇದನ್ನೂ ಓದಿ: Bengaluruನಲ್ಲಿ ಐಷಾರಾಮಿ ವಿಲ್ಲಾ ಖರೀದಿಸಿದ Flipkart ಸಿಇಒ ಪತ್ನಿ: ಬೆಲೆ ಎಷ್ಟು ಗೊತ್ತಾ?

"ಇಂತಹ ಪ್ರಕರಣಗಳು ಅಪರೂಪ ಮತ್ತು ಶಿಶುಗಳ ಸ್ಥಿತಿಯು ವಿಶೇಷವಾಗಿ ಆರಂಭಿಕ ದಿನಗಳಲ್ಲಿ ಅನಿಶ್ಚಿತವಾಗಿದೆ, ಇದರಿಂದಾಗಿ ನಾವು ಅವರನ್ನು ತೀವ್ರ ನಿಗಾದಲ್ಲಿ ಇರಿಸಿದ್ದೇವೆ. ನಾವು ಅವುಗಳಿಗೆ ಯಾವುದೇ ಶಸ್ತ್ರಚಿಕಿತ್ಸೆ ಮಾಡಲು ಯೋಜಿಸಿಲ್ಲ" ಎಂದು ಡಾ.ಲಹೋಟಿ ಮಾಧ್ಯಮಗಳಿಗೆ ತಿಳಿಸಿದರು.

“ಇದು ಒಂದು ಮಿಲಿಯನ್ ಜನನಗಳಲ್ಲಿ ಕೇವಲ ಒಂದು ಮಗುವಿನ ಮೇಲೆ ಮಾತ್ರ ಈ ರೀತಿಯಾದ ಪರಿಣಾಮ ಬೀರುತ್ತದೆ” ಎಂದು ವೈದ್ಯರು ಹೇಳಿದ್ದಾರೆ.

ಇದನ್ನೂ ಓದಿ: Birds Lover: ಮೂಕ ಹಕ್ಕಿಗಳಿಗೆ ನೀರು, ಆಹಾರ ನೀಡುತ್ತಿದ್ದಾರೆ ಈ ಚಾಲಕ! 14 ವರ್ಷಗಳಿಂದ ಸದ್ದಿಲ್ಲದೇ ಸಾಗಿದೆ ಇವರ ಕಾರ್ಯ

ಮಾಹಿತಿಯ ಪ್ರಕಾರ, ಜೋರಾದ ನೀಮ್ ಚೌಕ್ ನಿವಾಸಿ ಶಾಹಿನ್ ಬಿ ಸೋಮವಾರ ಸಂಜೆ ರತ್ಲಾಮ್‌ನ ಜಿಲ್ಲಾ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದರು. ಅಲ್ಟ್ರಾಸೌಂಡ್ ನಡೆಸಿದ ನಂತರ ಅವರಿಗೆ ಅವಳಿ ಮಕ್ಕಳಿದ್ದಾರೆ ಎಂದು ವೈದ್ಯರು ಪೋಷಕರಿಗೆ ತಿಳಿಸಿದ್ದರು. ಆದರೆ ಈ ಸ್ಥಿತಿಯ ಬಗ್ಗೆ ಅವರಿಗೆ ತಿಳಿದಿರಲಿಲ್ಲ.

2019 ರಲ್ಲಿ 21 ವರ್ಷದ ಮಹಿಳೆ ಭಾರತದಲ್ಲಿ ಎರಡು ತಲೆಗಳು ಮತ್ತು ಮೂರು ತೋಳುಗಳಿರುವ ಮಗುವಿಗೆ ಜನ್ಮ ನೀಡಿದ ನಂತರ ಇದು ಅಂತಹದೇ ಇನ್ನೊಂದು ಪ್ರಕರಣ ಎಂದು ಹೇಳಬಹುದಾಗಿದೆ. ಬಬಿತಾ ಅಹಿರ್ವಾರ್ ಮತ್ತು ಅವರ ಪತಿ ಜಸ್ವಂತ್ ಸಿಂಗ್ ಅಹಿರ್ವಾರ್ ಅವರು ಆ ವರ್ಷದ ನವೆಂಬರ್ 23 ರಂದು ಮಗುವಿಗೆ ಜನ್ಮ ನೀಡಿದಾಗ, ಆ ಮಗುವಿಗೆ ಎರಡು ತಲೆಗಳಿರುವುದನ್ನು ನೋಡಿ ಆಘಾತಕ್ಕೊಳಗಾಗಿದ್ದರು.

ಸ್ಥಳೀಯ ಮಾಧ್ಯಮಗಳ ವರದಿಗಳ ಪ್ರಕಾರ, ಗರ್ಭಧಾರಣೆಯ 35ನೇ ವಾರದಲ್ಲಿ ಸಂಯೋಜಿತ ಅವಳಿಗಳನ್ನು ನಿರೀಕ್ಷಿಸಲು ಅವರಿಗೆ ತಿಳಿಸಲಾಗಿತ್ತು. ಆದರೆ ಸಿ-ಸೆಕ್ಷನ್ ನಂತರ ಅವರು ಎರಡು ತಲೆಗಳಿರುವ ಮಗುವಿಗೆ ಜನ್ಮ ನೀಡಿದ್ದರು.

ಏನಿದು ಡೈಸೆಫಾಲಿಕ್ ಪ್ಯಾರಾಪಾಗಸ್?

ಡೈಸೆಫಾಲಿಕ್ ಪ್ಯಾರಾಪಾಗಸ್ ಅವಳಿಗಳಿಗೆ ಸೊಂಟದ ಭಾಗ, ಕಿಬ್ಬೊಟ್ಟೆ ಮತ್ತು ಎದೆಗಳು ಅಕ್ಕಪಕ್ಕದಲ್ಲಿ ಇರುತ್ತವೆ, ಆದರೆ ಪ್ರತ್ಯೇಕ ತಲೆಗಳನ್ನು ಹೊಂದಿರುತ್ತವೆ. ಈ ಅವಳಿಗಳು ಎರಡು, ಮೂರು ಅಥವಾ ನಾಲ್ಕು ಕೈಗಳನ್ನು ಮತ್ತು ಎರಡು ಅಥವಾ ಮೂರು ಕಾಲುಗಳನ್ನು ಹೊಂದಿರಬಹುದು.

ಹೀಗೇಕೆ ಆಗುತ್ತದೆ?

ಗರ್ಭಧಾರಣೆಯ ಕೆಲವು ವಾರಗಳ ನಂತರ ಫಲವತ್ತಾದ ಅಂಡಾಣುವು ಎರಡು ಭ್ರೂಣಗಳಾಗಿ ವಿಭಜನೆಗೊಳ್ಳಲು ಪ್ರಾರಂಭಿಸುವುದರಿಂದ ಸಂಯೋಜಿತ ಅವಳಿಗಳು ಉಂಟಾಗುತ್ತವೆ. ಆದರೆ ಅದು ಪೂರ್ಣಗೊಳ್ಳುವ ಮೊದಲು ಈ ಪ್ರಕ್ರಿಯೆಯು ನಿಲ್ಲುತ್ತದೆ. ಬೇರ್ಪಡಿಸುವ ಶಸ್ತ್ರಚಿಕಿತ್ಸೆಯ ಯಶಸ್ಸು ಸಂಪೂರ್ಣವಾಗಿ ಈ ಅವಳಿಗಳು ಹೇಗೆ ಸೇರಿಕೊಂಡಿವೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ ಎಂದು ವೈದ್ಯರು ಹೇಳುತ್ತಾರೆ.
Published by:Divya D
First published: