ಮಗುವಿನ ಹೆಸರು ಡಿಪಾರ್ಟ್‍ಮೆಂಟ್ ಆಫ್ ಸ್ಟಾಟಿಸ್ಟಿಕಲ್ ಕಮ್ಯೂನಿಕೇಷನ್: ಆಶ್ಚರ್ಯವಾದರೂ ಸತ್ಯ..!

ಇಂಡೋನೇಷ್ಯಾದಲ್ಲಿ ಹಸುಗೂಸಿಗೆ ಇಟ್ಟಿರುವ ಹೆಸರು ಕೇಳಿದರೆ ಆಶ್ಚರ್ಯವಾಗುವುದು ಮಾತ್ರ ಖಚಿತ. ಜೊತೆಗೆ ಇದು ಹೆಸರು ಹೇಗಾಗುತ್ತದೆ ಎಂದು ನಿಮ್ಮನ್ನು ನೀವು ಪ್ರಶ್ನಿಸಿಕೊಂಡರೂ ಅಚ್ಚರಿ ಪಡಬೇಕಾಗಿಲ್ಲ. ಹೌದು ಆ ಹೆಸರು ಏನೆಂದು ನಿಮಗೂ ಕುತೂಹಲ ಹುಟ್ಟಿರಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಮನೆಯಲ್ಲಿ ಎಳೆ ಕೂಸಿನ ಆಗಮನವನ್ನು ಸಂತೋಷದಿಂದ ಎದುರು ನೋಡುತ್ತಿರುತ್ತಾರೆ. ಮಗು ಬರುವಿಕೆಯಲ್ಲೇ ಇಷ್ಟೊಂದು ಸಂಭ್ರಮಿಸುವ ಮಂದಿ ಮಗುವಿಗೊಂದು ಹೆಸರು ಇಡುವ ಉತ್ಸಾಹ ಇನ್ನಷ್ಟು ಚಂದ. ಅದರಲ್ಲೂ ನಾಮಕರಣದೊಳಗೆ ಚಿನ್ನು, ಮುನ್ನು ರನ್ನ, ಪಿಂಕಿ, ಅಮ್ಮು, ಡಾಲಿ, ಹೀಗೆ ಹೂವಿನ ಹೆಸರೋ, ಕಾರ್ಟೂನ್‍ನಲ್ಲಿ ಬರುವ ಪಾತ್ರಗಳೋ ಹೆಸರು, ಸ್ಥಳದ ಹೆಸರು ಹೇಗೋ ಒಂದು ಅಡ್ಡ ಹೆಸರನ್ನು ಕರೆದು ಶಾಶ್ವತವಾಗಿ ಉಳಿಸಿ ಬಿಡುತ್ತಾರೆ. ಅದರ ಜೊತೆಯಲ್ಲೇ ನಾಮಕರಣದಲ್ಲಿ ಈಗಿನ ಕಾಲಕ್ಕೆ ಅನುಗುಣವಾಗಿ, ಜೀವನದಲ್ಲಿ ಸಂತೋಷ ತಂದ ಕಾರಣಕ್ಕೋ ಮುದ್ದಾದ ಹೆಸರು ನಾಮಕಾರಣ ಮಾಡುತ್ತಾರೆ.

  ಆದರೆ ಇಂಡೋನೇಷ್ಯಾದಲ್ಲಿ ಹಸುಗೂಸಿಗೆ ಇಟ್ಟಿರುವ ಹೆಸರು ಕೇಳಿದರೆ ಆಶ್ಚರ್ಯವಾಗುವುದು ಮಾತ್ರ ಖಚಿತ. ಜೊತೆಗೆ ಇದು ಹೆಸರು ಹೇಗಾಗುತ್ತದೆ ಎಂದು ನಿಮ್ಮನ್ನು ನೀವು ಪ್ರಶ್ನಿಸಿಕೊಂಡರೂ ಅಚ್ಚರಿ ಪಡಬೇಕಾಗಿಲ್ಲ. ಹೌದು ಆ ಹೆಸರು ಏನೆಂದು ನಿಮಗೂ ಕುತೂಹಲ ಹುಟ್ಟಿರಬಹುದು. ಆ ಮಗುವಿನ ಹೆಸರೇ ಡಿಪಾರ್ಟ್‍ಮೆಂಟ್ ಆಫ್ ಸ್ಟ್ಯಾಟಿಸ್ಟಿಕಲ್ ಕಮ್ಯೂನಿಕೇಷನ್ ಎಂದು. ಇದೇನಿದು ಹೆಸರಾ? ಎಂದು ಹುಬ್ಬೇರಿತೇ? ಹೌದು ಇದು ಹೆಸರು. ಇವರು ಈ ಹೆಸರನ್ನು ಹಿಂದೆ ತಾವು ಕೆಲಸ ಮಾಡಿದ್ದರ ಇಲಾಖೆಯ ನೆನಪಿಗೆ ಇಟ್ಟಿದ್ದಾರೆ.

  ಮಗುವಿಗೆ ಹೆಸರಿಟ್ಟ ತಂದೆಯ ಹೆಸರು 'ಯೋಗ' ವಾಹ್ಯೂದಿ (38). ಇವರು ತಮ್ಮ ಪತ್ನಿ ರಿರಿನ್ ಲಿಂಡಾ ತುಂಗಾಲ್ ಸರಿ ಅವರೊಟ್ಟಿಗೆ ಒಂದು ಒಪ್ಪಂದ ಮಾಡಿಕೊಂಡರು. ಗಂಡು ಮಗು ಹುಟ್ಟಿದರೆ ಆ ಹೆಸರಿಡುವುದಾಗಿ ಇವರಿಬ್ಬರ ನಡುವೆ ಒಪ್ಪಂದವಾಗಿತ್ತು. ಅದರಂತೆ ಕಳೆದ ಡೆಸೆಂಬರ್‌ನಲ್ಲಿ ಜನಿಸಿದ ಗಂಡು ಮಗುವಿಗೆ ತಂದೆ ಡಿಪಾರ್ಟ್‍ಮೆಂಟ್ ಆಫ್ ಸ್ಟಾಟಿಸ್ಟಿಕಲ್ ಕಮ್ಯೂನಿಕೇಷನ್ ಎಂಬುದಾಗಿ ಹೆಸರಿಟ್ಟಿದ್ದಾರೆ ಎಂದು ಡೈಲಿ ಸ್ಟಾರ್ ವರದಿ ಮಾಡಿದೆ.

  ಈ ಹಿಂದೆ ಕರ್ತವ್ಯ ನಿರ್ವಹಿಸಿದ್ದ ಇಲಾಖೆಗೆ ಕೊಡುಗೆ ನೀಡುವ ಸಲುವಾಗಿ ಇಂಡೋನೇಷ್ಯಾದಲ್ಲಿ ಬರ್ಬಸ್ ಇನ್ ಸೆಂಟ್ರಲ್ ಜಾವಾದಲ್ಲಿ ಕೆಲಸ ನಿರ್ವಹಿಸಿದ್ದರ ನಿಮಿತ್ತ ದಿನಸ್ ಕೊಮುನಿಕಾಸಿ ಇನ್‍ಫಾರ್ಮೆಟಿಕಾ ಸ್ಟಾಟಿಸ್ಟಿಕ್ ಎಂಬ ಹೆಸರನ್ನು ತರ್ಜುಮೆಗೊಳಿಸಿ ಡಿಪಾರ್ಟ್‍ಮೆಂಟ್ ಆಫ್ ಸ್ಟಾಟಿಸ್ಟಿಕಲ್ ಕಮ್ಯೂನಿಕೇಷನ್ ಎಂದು ಕರೆದಿದ್ದಾರೆ.

  ಮೊದಲ ಬಾರಿ ಈ ಹೆಸರನ್ನು ಕರೆದಾಗ ಅಪರಿಚಿತದಂತೆ ಭಾಸವಾಯಿತು. ಪುಣ್ಯ ನನ್ನ ಹೆಂಡತಿ ಏನು ಹೇಳಲಿಲ್ಲ ಎಂದು ಸಮಾಧಾನಗೊಂಡರು ಎಂದು ಹೆಸರಿಡುವ ಸಂದರ್ಭವನ್ನು ನೆನಪಿಸಿಕೊಂಡರು. ಈ ಹೆಸರಿಗೆ ನನ್ನ ಪತ್ನಿಯಾಗಲಿ ಸಂಬಂಧಿಕರಾಗಲಿ, ಸ್ನೇಹಿತರಾಗಲಿ ಅಲ್ಲದೇ ಪತ್ನಿಯ ತಂದೆ ತಾಯಿಯೂ ಏನು ತಕರಾರು ಎತ್ತಲಿಲ್ಲ. ಹೆಸರನ್ನು ಖುಷಿಯಿಂದಲೇ ಸ್ವೀಕರಿಸಿದರು. ಎಲ್ಲರ ಒಪ್ಪಿಗೆಯ ಮೇರೆಗೆ 38 ಅಕ್ಷರಗಳು ಬರುವ ಹೆಸರನ್ನು ಇಟ್ಟಿದ್ದೇವೆ ಎನ್ನುತ್ತಾರೆ ಯೋಗ.

  ಯೋಗ ಅವರು 2009ರಲ್ಲಿ ನಾಗರಿಕ ಸೇವಾ ಅಧಿಕಾರಿಯಾಗಿ ಇಂಡೋನೇಷ್ಯಾದಲ್ಲಿ ನೇಮಕವಾದರು. ಸುಮಾರು ದಶಕಗಳ ಕಾಲ ನಾಗರಿಕ ಸೇವಾ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿದರು. ರೇಡಿಯೋ ಅನೌನ್ಸರ್ ಆಗಿಯೂ ಕೆಲಸ ಮಾಡಿದ ಇವರು ನಂತರ ಸ್ಟಾಟಿಸ್ಟಿಕಲ್ ಕಮ್ಯೂನಿಕೇಷನ್ ವಿಭಾಗದಲ್ಲಿ ಕೆಲಸ ಮಾಡಿದರು. ನನ್ನ ಮಗ ಭವಿಷ್ಯತ್ತಿನಲ್ಲಿ ನಮ್ಮ ಮನೆಯ ಧಾರ್ಮಿಕ ಶ್ರದ್ಧೆಯುಳ್ಳ ವ್ಯಕ್ತಿಯಾಗಿ ಜೀವಿಸುತ್ತಾನೆ ಎಂಬ ವಿಶ್ವಾಸ ವ್ಯಕ್ತಪಡಿಸುತ್ತಾರೆ.
  First published: