Man Marries Rice Cooker: ರೈಸ್ ಕುಕರ್​ನ್ನು ಬಾಳ ಸಂಗಾತಿಯನ್ನಾಗಿ ಮಾಡ್ಕೊಂಡು ನಾಲ್ಕೇ ದಿನಕ್ಕೆ ಡಿವೋರ್ಸ್ ಕೊಟ್ಟ!

ಕುಕ್ಕರ್ ನಲ್ಲಿ ಅನ್ನ ಚೆನ್ನಾಗಿ ಮಾಡಬಹುದಾಗಿದೆ. ಆದರೆ ಬೇರೆ ಯಾವುದೇ ಅಡುಗೆ ಮಾಡಲು ಆಗುತ್ತಿಲ್ಲ ಎಂದು ಕಾರಣ ಹೇಳಿ ವಿಚ್ಛೇದನ ನೀಡಿದ್ದಾನೆ. ಡಿವೋರ್ಸ್ ಪೋಸ್ಟ್ ನೋಡಿದ ನೆಟ್ಟಿಗರು ಯುವಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ

 ಖೊಯಿರಲ್ ಅನಮ್

ಖೊಯಿರಲ್ ಅನಮ್

  • Share this:
    ವ್ಯಾಮೋಹ ಅನ್ನೋದು ಮಾಯೆ. ಅದು ಯಾರಿಗೆ? ಯಾವಾಗ ಮತ್ತು ಹೇಗೆ ಆಗುತ್ತೆ ಎಂಬ ನಿಗೂಢ ಸತ್ಯವನ್ನು ಯಾರಿಂದಲೂ ಬೇಧಿಸಲು ಆಗಿಲ್ಲ. ಕೆಲವೊಮ್ಮೆ ನಾವು ಪ್ರತಿನಿತ್ಯ ಬಳಸುವ ವಸ್ತುಗಳ ಜೊತೆ ಅವಿನಾಭಾವ ಸಂಬಂಧ ಬೆಳೆಯುತ್ತೆ. ಆ ವಸ್ತು ಹಳೆಯಾದಾದರೂ ಅದನ್ನ ಜೊತೆಯಲ್ಲಿರಿಸಿಕೊಳ್ಳುವ ಜನರನ್ನು ನೀವು ನೋಡಿರುತ್ತೀರಿ. ಬೇರೆಯವರು ಯಾಕೆ ಆ ರೀತಿ ನಿಮ್ಮ ಬಳಿಯಲ್ಲಿಯೇ ಕಲೆಕ್ಷನ್ ಇರಬಹುದು. ಆದ್ರೆ ಇಲ್ಲೊಬ್ಬ ವ್ಯಕ್ತಿ ರೈಸ್ ಕುಕ್ಕರ್ ನ್ನು ( (Rice Cooker) )ಬಾಳ ಸಂಗಾತಿಯನ್ನಾಗಿ ಮಾಡಿಕೊಂಡಿದ್ದಾನೆ. ಯಾರು ಆ ವ್ಯಕ್ತಿ ಎಂಬುದರ ಡೀಟೈಲ್ ರಿಪೋರ್ಟ್ ಇಲ್ಲಿದೆ.

    ಯಾರು ಈ ವ್ಯಕ್ತಿ?
    ಇಂಡೋನೇಷಿಯಾದ ಖೊಯಿರಲ್ ಅನಮ್ (Indonesian man named Khoirul Anam) ಎಂಬಾತನೇ ರೈಸ್ ಕುಕ್ಕರ್ ಜೊತೆ ಮದುವೆಯಾಗಿದ್ದಾನೆ. ಸೋಶಿಯಲ್ ಮೀಡಿಯಾದಲ್ಲಿ ರೈಸ್ ಕುಕ್ಕರ್ ಜೊತೆ ಮದುವೆಯಾಗಿರುವ ವಿಷಯವನ್ನ ಖೊಯಿರಲ್ ಹಂಚಿಕೊಂಡಿದ್ದನು. ಪೋಸ್ಟ್ ನಲ್ಲಿ ರೈಸ್ ಕುಕ್ಕರ್ (Rice Cooker) ಜೊತೆ ಕ್ಲಿಕ್ಕಿಸಿಕೊಂಡಿದ್ದ ಫೋಟೋ ಸಹ ಅಪ್ಲೋಡ್ ಮಾಡೊಕೊಂಡಿದ್ದನು. ಸದ್ಯ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಬಿಳಿ ಬಣ್ಣದ ರೈಸ್ ಕುಕ್ಕರ್ ಜೊತೆ ಸಾಂಪ್ರದಾಯಿಕವಾಗಿ ಮದುವೆಯಾಗಿರುವ ಖೊಯಿರಲ್, ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದಾನೆ.


    ಒಂದು ಫೋಟೋದಲ್ಲಿ ವರನಾಗಿ ಖೊಯಿರಲ್ ರೆಡಿಯಾಗಿ ಪಕ್ಕದಲ್ಲಿಯೇ ಬಾಳ ಸಂಗಾತಿ ರೈಸ್ ಕುಕ್ಕರ್ ಇರಿಸಿಕೊಂಡಿದ್ದಾರೆ. ಮತ್ತೊಂದು ಫೋಟೋದಲ್ಲಿ ಕುಕ್ಕರ್ ಗೆ ಮುತ್ತು ನೀಡುತ್ತಿರೋದನ್ನ ಕಾಣಬಹುದಾಗಿದೆ. ಜೊತೆ ಮದುವೆ ದಾಖಲೆಗಳನ್ನು ಸಹ ರಿವೀಲ್ ಮಾಡಿದ್ದಾನೆ. ಮದುವೆ ಫೋಟೋಗಳಿಗೆ 10 ಸಾವಿರಕ್ಕೂ ಅಧಿಕ ಲೈಕ್ಸ್ ಮತ್ತು 1200ಕ್ಕೂ ಅಧಿಕ ಕಮೆಂಟ್ ಗಳು ಬಂದಿವೆ.

    ಇದನ್ನು ಓದಿ: ಬನಶಂಕರಿಯ ಅಪಾರ್ಟ್​ಮೆಂಟ್​ನ 11ನೇ ಮಹಡಿಯಿಂದ ಬಿದ್ದು 10 ವರ್ಷದ ಬಾಲಕ ಸಾವು

    ಇನ್ನು ಮದುವೆ ಫೋಟೋಗಳಿಗೆ ಬಗೆ ಬಗೆಯ ಫನ್ನಿ ಕಮೆಂಟ್‍ಗಳು ಬಂದಿವೆ. ಒಬ್ಬ ಯೂಸರ್, ನಾನು ನನ್ನ ಏರ್ ಪ್ರೆಶರ್ ನೊಂದಿಗೆ ಮದುಗೆಯಾಗಲು ಪ್ಲಾನ್ ಮಾಡಿದ್ದೆ ಎಂದು ಕಮೆಂಟ್ ಮಾಡಿದ್ರೆ, ಬಹುತೇಕರು ಇದು ನಿಜನಾ ಎಂದು ಪ್ರಶ್ನೆ ಮಾಡಿದ್ದಾರೆ. ಈ ವ್ಯಕ್ತಿ ತುಂಬಾನೇ ಜೀನಿಯಸ್. ಜಗಳ ಮಾಡದ ಪತ್ನಿಯನ್ನ ಮದುವೆ ಮಾಡಿಕೊಂಡಿದ್ದಾನೆ ಎಂದು ಹೇಳುವ ಕಾಲೆಳೆದಿದ್ದಾರೆ.

    ಇದನ್ನು ಓದಿ: ಕೈಗಾದ ಅಣುಶಕ್ತಿ ಕೇಂದ್ರದಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ; ITI ಅಭ್ಯರ್ಥಿಗಳಿಗೆ ಉತ್ತಮ ಅವಕಾಶ

    ನಾಲ್ಕನೇ ದಿನಕ್ಕೆ ಡಿವೋರ್ಸ್ ಕೊಟ್ಟ:
    ಮದುವೆಯಾದ ನಾಲ್ಕನೇ ದಿನಕ್ಕೆ ಖೊಯಿರಲಾ ಅನಮ್ ಪತ್ನಿ ರೈಸ್ ಕುಕ್ಕರ್ ಗೆ ಡಿವೋರ್ಸ್ (Divorce) ನೀಡಿದ್ದಾನೆ. ಕುಕ್ಕರ್ ನಲ್ಲಿ ಅನ್ನ ಚೆನ್ನಾಗಿ ಮಾಡಬಹುದಾಗಿದೆ. ಆದರೆ ಬೇರೆ ಯಾವುದೇ ಅಡುಗೆ ಮಾಡಲು ಆಗುತ್ತಿಲ್ಲ ಎಂದು ಕಾರಣ ಹೇಳಿ ವಿಚ್ಛೇದನ ನೀಡಿದ್ದಾನೆ. ಡಿವೋರ್ಸ್ ಪೋಸ್ಟ್ ನೋಡಿದ ನೆಟ್ಟಿಗರು ಯುವಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮದುವೆ ಮತ್ತು ವಿಚ್ಛೇದನ ಅಂದ್ರೆ ನಿನಗೆ ಆಟವಾಗಿದೆಯಾ ಎಂದು ಕಿಡಿಕಾರಿದ್ದಾರೆ.

    ರಾತ್ರೋರಾತ್ರಿ ಫೇಮಸ್​ ಆದ ಖೊಯಿರಲ್​

    ಸ್ಥಳೀಯ ಪತ್ರಿಕೆಗಳ ಪ್ರಕಾರ ಖೊಯಿರಲ್ ಅನಮ್ ಓರ್ವ ಫೇಮಸ್ ಸೆಲೆಬ್ರಿಟಿಯಾಗಿದ್ದಾನೆ. ಸೋಶಿಯಲ್ ಮೀಡಿಯಾದಲ್ಲಿ ಅಪಾರ ಫಾಲೋವರ್ಸ್ ಹೊಂದಿರುವ ವಿಚಿತ್ರ ಪೋಸ್ಟ್ ಮಾಡುತ್ತಿರುತ್ತಾನೆ. ಕುಕ್ಕರ್ ಜೊತೆಗಿನ ಮದುವೆಯೂ ಫಾಲೋವರ್ಸ್ (Followers) ಗಳನ್ನು ಹೆಚ್ಚಿಸಿಕೊಳ್ಳುವ ಪ್ಲಾನ್ ಇರಬಹುದು ಎಂದು ವರದಿಯಾಗಿದೆ. ಈ ಹಿಂದೆ ಹಲವರು ಬೈಕ್, ಹಾವು, ಕಾರ್ ಜೊತೆ ಮದುವೆಯಾಗಿರುವ ಸುದ್ದಿಗಳು ವರದಿಯಾಗಿವೆ. ಆದ್ರೆ ಖೊಯಿರಲ್ ಅನಮ್ ರೈಸ್ ಕುಕ್ಕರ್ ಜೊತೆ ಮದುವೆ ಮಾಡಿಕೊಂಡು ಸುದ್ದಿಯಾಗಿರೋದು ಮಾತ್ರ ಸತ್ಯ.

    -ಮಹ್ಮದ್​ ರಫೀಕ್​
    Published by:Seema R
    First published: