ಒಮ್ಮೊಮ್ಮೆ ತುಂಬಾ ಕೆಲಸ ಮಾಡಿ ಸುಸ್ತಾದಾಗ (Tired) ನಾವು ಎಲ್ಲಿ ನಿದ್ರೆಗೆ (Fall asleep) ಜಾರುತ್ತೇವೆ ಎಂದು ನಮಗೆ ತಿಳಿಯುವುದೇ ಇಲ್ಲ. ನಿದ್ರೆ ಬಂದವರಿಗೆ ಹಾಸಿಗೆ ಇದ್ದರೆಷ್ಟು ಬಿಟ್ಟರೆಷ್ಟು ಹಾಗೆ ನಿದ್ರೆಗೆ ಜಾರಿ ಬಿಡುತ್ತಾರೆ. ಆದರೆ ಒಬ್ಬ ವ್ಯಕ್ತಿ ಒಂದು ದೇಶದಲ್ಲಿ ಮಲಗಿ ಇನ್ನೊಂದು ದೇಶಕ್ಕೆ ಹೋದ ಸನ್ನಿವೇಶಗಳನ್ನು ನಾವು ನೋಡಿರುವುದಿಲ್ಲ ಮತ್ತು ಯಾವತ್ತೂ ಕೇಳಿಯೂ ಇರುವುದಿಲ್ಲ.ಆದರೆ ಇಲ್ಲಿ ನಡೆದಂತಹ ನೈಜ ಘಟನೆಯಲ್ಲಿ ಇಂಡಿಗೋ ಏರ್ಲೈನ್ಸ್ನ (Indigo Airlines) ಲೋಡರ್ ಒಬ್ಬ ಮುಂಬೈಯಿಂದ (Mumbai ) ಅಬುಧಾಬಿಗೆ ( Abu Dhabi) ಹೋಗುವ ವಿಮಾನದ ಕಾರ್ಗೋ ಕಂಪಾರ್ಟ್ಮೆಂಟ್ನಲ್ಲಿ ಕೆಲಸ ಮಾಡಿ ಹಾಗೆಯೇ ನಿದ್ರೆಗೆ ಜಾರಿದ್ದಾನೆ ಮತ್ತು ಹಾಗೆಯೇ ಅವರು ಹೋದದ್ದು ಅಬುಧಾಬಿಗೆ ಎಂದರೆ ನಿಮಗೆ ಸ್ವಲ್ಪ ಆಶ್ಚರ್ಯವಾಗಬಹುದು.( Surprised ) ಆದರೆ ಇದು ಸತ್ಯವಾದ ಘಟನೆ.
ಸುರಕ್ಷಿತವಾಗಿ ಬಂದಿಳಿದ ಲೋಡರ್
ಆ ಲೋಡರ್ ಹಾಗೆಯೇ ಅದರಲ್ಲಿಯೇ ಕುಳಿತು ಹೋದದ್ದು ಯುಎಇಯ ರಾಜಧಾನಿಗೆ ಎಂದು ಹೇಳಲಾಗುತ್ತಿದೆ. ವಿಮಾನದ ಕಾರ್ಗೋ ಕಂಪಾರ್ಟ್ಮೆಂಟ್ನಲ್ಲಿ ಕೆಲವು ಗಂಟೆಗಳ ಕಾಲ ಇದ್ದರೂ ಸುರಕ್ಷಿತವಾಗಿ ಅವರು ಬಂದಿಳಿದಿದ್ದಾರೆ ಎಂದು ವಾಯುಯಾನ ನಿಯಂತ್ರಕ ಡಿಜಿಸಿಎ ಅಧಿಕಾರಿಗಳು ತಿಳಿಸಿದ್ದಾರೆ.
ವಿಮಾನದಲ್ಲಿ ಸಾಮಾನು ಸರಂಜಾಮುಗಳನ್ನು ಲೋಡ್ ಮಾಡಿದ ನಂತರ, ಖಾಸಗಿ ವಾಹಕದ ಲೋಡರ್ಗಳಲ್ಲಿ ಒಬ್ಬರು ಭಾನುವಾರದ ವಿಮಾನದಲ್ಲಿ ಸರಕು ಕಂಪಾರ್ಟ್ಮೆಂಟ್ನಲ್ಲಿಯೇ ಸಾಮಾನು ಸರಂಜಾಮುಗಳ ಹಿಂದೆ ಹಾಗೆಯೇ ಸ್ವಲ್ಪ ದಣಿವನ್ನು ಆರಿಸಿಕೊಳ್ಳಲು ಕುಳಿತುಕೊಂಡಿದ್ದಾರೆ. ಹಾಗೆಯೇ ಅಲ್ಲಿಯೇ ನಿದ್ರೆಗೆ ಜಾರಿದರು ಎಂದು ಹೇಳಿದರು.
ಮುಂಬೈ ವಿಮಾನ ನಿಲ್ದಾಣದಿಂದ ಹೊರಟ ವಿಮಾನ
ಸರಕು ಕಂಪಾರ್ಟ್ಮೆಂಟ್ನ ಬಾಗಿಲು ಮುಚ್ಚಲಾಗಿತ್ತು ಮತ್ತು ವಿಮಾನವು ಮುಂಬೈ ವಿಮಾನ ನಿಲ್ದಾಣದಿಂದ ಹೊರಡುವಾಗ ಲೋಡರ್ ಥಟಕ್ಕನೆ ಎಚ್ಚರಗೊಂಡರು. ಆದರೆ ಏನು ಮಾಡಲು ಆಗದೆ ಅಲ್ಲಿಯೇ ಕುಳಿತರು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಮುಂಬೈಯಿಂದ ಅಬುಧಾಬಿಗೆ ಹೋಗುವ ವಿಮಾನವು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನ ಅಬುಧಾಬಿಯಲ್ಲಿ ಕೆಳಕ್ಕೆ ಇಳಿದ ನಂತರ, ಲೋಡರ್ನನ್ನು ಸಂಪೂರ್ಣವಾಗಿ ವೈದ್ಯಕೀಯ ತಪಾಸಣೆಯನ್ನು ಅಬುಧಾಬಿ ಅಧಿಕಾರಿಗಳು ನಡೆಸಿದರು ಮತ್ತು ಅವರ ದೈಹಿಕ ಸ್ಥಿತಿ ಸ್ಥಿರವಾಗಿದೆ ಮತ್ತು ಸಾಮಾನ್ಯವಾಗಿದೆ ಎಂದು ಅವರು ಮಾಧ್ಯಮಗಳಿಗೆ ತಿಳಿಸಿದರು.
ಸಾಮಾನ್ಯ ಪ್ರಯಾಣಿಕರಾಗಿ ಮರಳಿ ಮುಂಬೈಗೆ
ಅಬುಧಾಬಿಯ ಅಧಿಕಾರಿಗಳಿಂದ ಅಗತ್ಯ ಅನುಮತಿಗಳನ್ನು ಪಡೆದ ನಂತರ, ಆ ಲೋಡರ್ನನ್ನು ಅದೇ ಇಂಡಿಗೋ ವಿಮಾನದಲ್ಲಿ ಒಬ್ಬ ಸಾಮಾನ್ಯ ಪ್ರಯಾಣಿಕರಾಗಿ ಮರಳಿ ಮುಂಬೈಗೆ ಕಳುಹಿಸಲಾಗಿದೆ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶಕ (ಡಿಜಿಸಿಎ) ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆಯಲ್ಲಿ ಭಾಗಿಯಾಗಿರುವ ವಿಮಾನಯಾನ ಸಂಸ್ಥೆಯ ಸಿಬ್ಬಂದಿಯ ತನಿಖೆ ಇನ್ನೂ ಬಾಕಿ ಇರುವಂತೆ ಅವರನ್ನು ಹಿರಿಯ ಅಧಿಕಾರಿಗಳು ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಘಟನೆಯ ಬಗ್ಗೆ ಕೇಳಿದಾಗ, ಇಂಡಿಗೋ ವಕ್ತಾರರು ಸುದ್ದಿ ಸಂಸ್ಥೆಯೊಂದಕ್ಕೆ "ಈ ಘಟನೆಯ ಬಗ್ಗೆ ನಮಗೆ ತಿಳಿದಿದೆ ಮತ್ತು ಅಗತ್ಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಈ ವಿಷಯದ ಬಗ್ಗೆ ಇನ್ನೂ ತನಿಖೆ ನಡೆಯುತ್ತಿದೆ, ಈಗಲೇ ನಾವು ಇದರ ಬಗ್ಗೆ ಏನು ಹೇಳುವುದಕ್ಕೆ ಆಗುವುದಿಲ್ಲ ಎಂದು ಹೇಳಿದರು. ಈ ಸಂಬಂಧ ಲೋಡರ್ ಕೂಡ ವಿಚಾರಣೆ ಎದುರಿಸಬೇಕಾಗಿದೆ.
Published by:vanithasanjevani vanithasanjevani
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ