ವಿದೇಶಕ್ಕೆ (foreign) ಹೋಗಬೇಕು ಅಂದರೆ ಸುಲಭದ ಮಾತಲ್ಲ, ಅದರ ಹಿಂದೆ ಹಲವು ಪ್ರಕ್ರಿಯೆಗಳು ಇರುತ್ತವೆ. ಅದರಲ್ಲೂ ಈ ವಿಸಾ ಕೆಲವೊಮ್ಮೆ ಸುಲಭವಾಗಿ ಸಿಗೋದೇ ಇಲ್ಲ. ಹೀಗೆ ಹಲವು ಮಂದಿಗೆ ಫ್ಲೈಟ್ (Flight) ಹತ್ತಿ ವಿದೇಶದಲ್ಲಿ ಲ್ಯಾಂಡ್ ಆಗುವ ಕನಸಿದ್ದರೂ ವೀಸಾ ಸಿಗುವುದೇ ಸಮಸ್ಯೆಯಾಗುತ್ತದೆ. ಅದಕ್ಕಾಗಿ ಇನ್ನಿಲ್ಲದ ಪ್ರಾರ್ಥನೆಗಳು ಸಹ ದೇವರಿಗೆ ಸಲ್ಲಿಕೆಯಾಗುತ್ತವೆ. ದೇಗುಲಕ್ಕೆ ಬರುವ ಭಕ್ತರಲ್ಲಿ ಒಬ್ಬರಾದರೂ ವೀಸಾ ಸಂದರ್ಶನಗಳು ಸರಾಗವಾಗಿ ಮತ್ತು ಯಶಸ್ವಿಯಾಗಿ ನಡೆಯಲೆಂದು ಪ್ರಾರ್ಥಿಸಿ ವಿದೇಶಕ್ಕೆ ಬಂದಿರುತ್ತಾರೆ ಎಂದರೆ ತಪ್ಪಾಗಲಾರದು. ಶ್ರೀ ಲಕ್ಷ್ಮೀ ವೀಸಾ ಗಣಪತಿ ದೇವಸ್ಥಾನ, ಚೆನ್ನೈಚೆನ್ನೈನ ವಿಮಾನ ನಿಲ್ದಾಣದ ಉತ್ತರಕ್ಕೆ ಸ್ವಲ್ಪ ದೂರದಲ್ಲೇ ಇರುವ ಈ ದೇವಾಲಯಕ್ಕೆ ವೀಸಾ (Visa) ವಿಚಾರವನ್ನು ಪರಿಹರಿಸಿಕೊಳ್ಳಲು ಇಲ್ಲಿಗೆ ಪ್ರಯಾಣಿಕರು ಬರುತ್ತಾರೆ. ಈ ವೀಸಾ ದೇವಾಲಯ ಹಲವು ವರ್ಷಗಳಿಂದ (Years) ವೀಸಾ ವಿಚಾರಕ್ಕೆ ಜನಪ್ರಿಯತೆ ಹೊಂದಿದೆ.
ಗಣೇಶ ದೇವಸ್ಥಾನದಿಂದ ಒಂದು ಮೈಲಿ ದೂರದಲ್ಲಿ ಶ್ರೀ ಲಕ್ಷ್ಮೀ ನರಸಿಂಹ ನವನೀತ ಕೃಷ್ಣನ್ ದೇವಸ್ಥಾನವಿದೆ, ಅಲ್ಲಿ ಮಾನವ ದೇಹ ಮತ್ತು ಮಂಗನ ಮುಖವನ್ನು ಹೊಂದಿರುವ ಹನುಮಾನ್ ಮೂರ್ತಿ ಇದೆ.
ಈ ದೇವರು ವೀಸಾಗಳನ್ನು ಪಡೆದುಕೊಳ್ಳುವ ಶಕ್ತಿಯನ್ನು ಹೊಂದಿದ್ದಾರೆ ಎಂದು ನಂಬಲಾಗಿದೆ. ಈ ದೇವಾಲಯ ಮತ್ತು ಇಲ್ಲಿರುವ ಮೂರ್ತಿಗಳು "ಅಮೆರಿಕಾ ಆಂಜನೇಯ" ಮತ್ತು "ವೀಸಾ ಆಂಜನೇಯ" ಎಂದೂ ಸಹ ಖ್ಯಾತಿ ಹೊಂದಿವೆ.
"ವೀಸಾ ಸಮಸ್ಯೆ ಇಲ್ಲಿ ಪರಿಹಾರವಾಗುತ್ತೆ"
ಗಣೇಶ ದೇಗುಲದಲ್ಲಿ ವಿಶ್ವನಾಥ್ ಎಂಬುವವರು ಮಾತನಾಡಿ "ನಾನು 10 ವರ್ಷಗಳ ಹಿಂದೆ ನನ್ನ ಸಹೋದರನ ಯುಕೆ ವೀಸಾಕ್ಕಾಗಿ ಮತ್ತು ಎರಡು ವರ್ಷಗಳ ಹಿಂದೆ ನನ್ನ ಹೆಂಡತಿಯ ಯುಎಸ್ ವೀಸಾಕ್ಕಾಗಿ ಪ್ರಾರ್ಥಿಸಲು ಇಲ್ಲಿಗೆ ಬಂದಿದ್ದೇನೆ" ಎಂದು ಅವರು ಹೇಳಿದರು. ಅವರಿಬ್ಬರಿಗೂ ವೀಸಾ ಸಿಕ್ಕಿತ್ತು, ಈಗ ನನಗೂ ವೀಸಾ ಸಿಗಬಹುದು ಎಂಬ ನಂಬಿಕೆ ಇದೆ ಎಂದು ಅವರು ಹೇಳಿದರು.
ದೇವಸ್ಥಾನದ ಕಾರ್ಯದರ್ಶಿ ಜಿ.ಸಿ. ಶ್ರೀನಿವಾಸನ್, 2016ರ ನಂತರ ಇದು ವೀಸಾ ದೇವಾಲಯ ಎಂದು ಖ್ಯಾತಿ ಪಡೆದುಕೊಂಡಿದೆ. ಹಲವು ಭಕ್ತರು ಇಲ್ಲಿಗೆ ಬರುತ್ತಾರೆ, ಇಲ್ಲಿ ವೀಸಾಕ್ಕೆ ಸಲ್ಲಿಸಿದ ಪ್ರಾರ್ಥನೆಗಳು ಯಶಸ್ವಿಯಾಗಿವೆ ಎಂದಿದ್ದಾರೆ.
ಇದನ್ನೂ ಓದಿ: ಹೊಸ ವರ್ಷಕ್ಕೆ ಫಾರಿನ್ ಟ್ರಿಪ್ ಪ್ಲ್ಯಾನ್ ಮಾಡ್ತಿದ್ದೀರಾ? ಜಗತ್ತಿನಲ್ಲಿ ರೂಪಾಯಿಗೆ ಅತಿಹೆಚ್ಚು ಬೆಲೆ ಇರೋ ಇಲ್ಲಿಗೆ ಹೋಗಿ
ಹಲವರು ಈ ವಿಷಯಗಳನ್ನು ನನ್ನ ಬಳಿ ಹಂಚಿಕೊಂಡಿದ್ದಾರೆ, ಇಲ್ಲಿಗೆ ಬಂದ ನಂತರ ವೀಸಾ ಸಮಸ್ಯೆ ಬಗೆಹರಿದಿದೆ ಎಂದು ಹೇಳಿದ್ದಾರೆಂದು ಶ್ರೀನಿವಾಸನ್ ಹೇಳಿದ್ದಾರೆ. ಎಸ್.ಪ್ರದೀಪ್ ಎಂಬ ಭಕ್ತರೊಬ್ಬರು ಶನಿವಾರ ವೀಳ್ಯದೆಲೆಯಿಂದ ಮಾಡಿದ ಮಾಲೆಗಳನ್ನು ದೇವರಿಗೆ ಅರ್ಪಿಸಿ ವೀಸಾಕ್ಕೆ ಮನವಿ ಸಲ್ಲಿಸಿದರು.
1987ರಲ್ಲಿ ಮೂಲ ನಿರ್ಮಾಣ
1987ರಿಂದ ಮೋಹನ್ಬಾಬು ಜಗನ್ನಾಥನ್ ಅವರ ತಾತನಿಂದ ನಿರ್ಮಿಸಲಾದ ಈ ದೇವಾಲಯವನ್ನು ಸದ್ಯ ಮೋಹನ್ ಬಾಬು ಹಾಗೂ ಅವರ ಪತ್ನಿ ಸಂಗೀತಾ ಅವರು ನಡೆಸಿಕೊಂಡು ಬರುತ್ತಿದ್ದಾರೆ. ಚೆನ್ನೈನ ದೇವರಿಗೆ ದುಷ್ಟಶಕ್ತಿಯನ್ನು ನಿವಾರಿಸುವ ಶಕ್ತಿಯಿದೆ ಎಂದು ಭಕ್ತರು ನಂಬಿದ್ದಾರೆ. ಮೊದಲಿಗೆ ಇಲ್ಲಿ ಸ್ಥಳೀಯರು ಬರುತ್ತಿದ್ದರು, ಆದರೆ ಈಗ ಎಲ್ಲೆಡೆಯಿಂದ ದೇಗುಲಕ್ಕೆ ಬಂದು ವೀಸಾ ಕೋರಿಕೆಯನ್ನು ಸಲ್ಲಿಸುತ್ತಿದ್ದಾರೆ ಎಂದು ಜಗನ್ನಾಥನ್ ಹೇಳಿದರು. 2009 ರಲ್ಲಿ, ಜಗನ್ನಾಥನ್ ರಾಧಾಕೃಷ್ಣನ್ ಅವರ ತಂದೆ ಮತ್ತೆ ದೇವಾಲಯವನ್ನು ಪುನರ್ನಿರ್ಮಿಸಿದರು ಮತ್ತು ದೇವಾಲಯದ ಹೆಸರಿಗೆ "ವೀಸಾ" ಎಂಬ ಪದವನ್ನು ಸೇರಿಸಿದರು.
ಇಲ್ಲಿಗೆ ಬರುವ ಭಕ್ತರ ವೀಸಾ ಯಶೋಗಾಥೆಗಳು ಹೃದಯಸ್ಪರ್ಶಿಯಾಗಿವೆ ಎಂದು ಜಗನ್ನಾಥನ್ ಹೇಳಿದರು. ಈ ದೇಗುಲ ಕಟ್ಟಿದ್ದಕ್ಕೆ ನಮ್ಮ ಕುಟುಂಬಕ್ಕೆ ಧನ್ಯವಾದ ಹೇಳಲು ಮನೆಯ ಬಳಿ ಜನರು ಬರುತ್ತಿರುತ್ತಾರೆ ಎಂದು ಜಗನ್ನಾಥನ್ ಖುಷಿ ವ್ಯಕ್ತಪಡಿಸಿದರು.
ಇತರೆ ದೇಗುಲಗಳು
ಇಷ್ಟೇ ಅಲ್ಲ ಹೈದರಾಬಾದ್ನಲ್ಲಿರುವ ಚಿಲ್ಕೂರು ಬಾಲಾಜಿ ದೇವಸ್ಥಾನ, ಪಂಜಾಬ್ನಲ್ಲಿರುವ ಶಹೀದ್ ಬಾಬಾ ನಿಹಾಲ್ ಸಿಂಗ್ ಗುರುದ್ವಾರ, ಅಹ್ಮದಾಬಾದ್ನ ವೀಸಾ ಹನುಮಾನ್ ದೇವಾಲಯ, ದೆಹಲಿಯ ಭಜರಂಗಬಲಿ ದೇವಾಲಯ ಕೂಡ ಭಕ್ತರಿಗೆ ವೀಸಾ ಸಮಸ್ಯೆ ಪರಿಹರಿಸಲು ಹೆಸರುವಾಸಿಯಾಗಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ