ಅವಳಿ ಮಕ್ಕಳಿಂದ ಪ್ರಸಿದ್ಧವಾಗಿದೆ ಭಾರತದ ‘ಟ್ವಿನ್​ಟೌನ್​‘ ಗ್ರಾಮ

Harshith AS | news18
Updated:March 13, 2019, 8:15 PM IST
ಅವಳಿ ಮಕ್ಕಳಿಂದ ಪ್ರಸಿದ್ಧವಾಗಿದೆ ಭಾರತದ ‘ಟ್ವಿನ್​ಟೌನ್​‘ ಗ್ರಾಮ
ಅವಳಿ ಮಕ್ಕಳು
Harshith AS | news18
Updated: March 13, 2019, 8:15 PM IST
ಸಾಮಾನ್ಯವಾಗಿ ಒಂದು ಊರಿನಲ್ಲಿ ಎರಡು ಅಥವಾ ನಾಲ್ಕೂ ಅವಳಿ ಮಕ್ಕಳು ಜನಿಸಿರುತ್ತಾರೆ. ಆದರೆ ಕೇರಳದ ಮಲಪ್ಪುರಂ ಜಿಲ್ಲೆಯ ಕೊಡಿನಿ ಗ್ರಾಮದಲ್ಲಿ ಪ್ರತಿ 1000 ಮಕ್ಕಳಿಗೆ 650 ರಿಂದ 750 ಅವಳಿ ಮಕ್ಕಳು ಜನಿಸುತ್ತಿದ್ದು, ಈ ಪ್ರದೇಶ ಎಲ್ಲರ ಕುತೂಹಲತೆಗೆ ಕಾರಣವಾಗಿದೆ.

ನಿರಂತರ ಅವಳಿ ಮಕ್ಕಳು ಹುಟ್ಟುವ ಕಾರಣದಿಂದ ಈ ಊರಿಗೆ ‘ಟ್ವಿನ್​ ಟೌನ್​‘ ಎಂದು ಹೆಸರು ಬಂದಿದ್ದು, ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿದೆ. ಅವಳಿ ಜನನದ ಕುರಿತಾಗಿ ಲಂಡನ್​, ಜರ್ಮನಿ,ಹೈದರಾಬಾದ್​, ಮತ್ತು ಕೇರಳ ವಿಶ್ವವಿದ್ಯಾನಿಲಯಗಳು ಕೊಡಿನಿ ಗ್ರಾಮದ ಕುರಿತು ಸಂಶೋಧನೆ ನಡೆಸಿದ್ದಾರೆ. ಆದರೆ ಸಂಶೋಧನೆಯಿಂದ ನಿಖರವಾದ ಉತ್ತರ ದೊರೆತಿಲ್ಲ.

ಇದನ್ನೂ ಓದಿ: ಬುಕ್​ಮೈಶೋನಲ್ಲಿ ಸಿಗಲಿದೆ ಐಪಿಎಲ್ ಟಿಕೆಟ್

ಮೂಲವಾಗಿ ಕೊಡಿನಿ ಗ್ರಾಮದಲ್ಲಿ ಹರಿಯುವ ಸ್ಥಳೀಯ ನೀರು ಮತ್ತು ವಾತವರಣದಿಂದಾಗಿ ಅವಳಿ ಮಕ್ಕಳ ಜನನಕ್ಕೆ ಕಾರಣವಾಗಿದೆ ಎಂದು ವಿಜ್ನಾನಿಗಳ ಅನಿಸಿಕೆ. ಬಹುತೇಕ ಎಲ್ಲಾ ತಾಯಂದಿರು ಅವಳಿ ಶಿಶುಗಳಿಗೆ ಜನನ ನೀಡಿದ್ದರು ಎಲ್ಲಾ ಮಕ್ಕಳು ಆರೋಗ್ಯವಾಗಿದ್ದಾರೆ.

First published:March 13, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...