Haunted Roads: ಭಾರತದ ಈ ಹೈವೇಗಳಲ್ಲಿ ಬಿಳಿ ಸೀರೆಯ ದೆವ್ವ, ವೀರಪ್ಪನ್ ಪ್ರೇತ ಕಾಣಿಸುತ್ತಂತೆ; ಭಯ ಹುಟ್ಟಿಸುವ ರಸ್ತೆಗಳಿವು

ನಮ್ಮ ದೇಶದಲ್ಲಿ ದೆವ್ವಗಳು ವಾಸ ಇದ್ದು, ಮನುಷ್ಯರಿಗೆ ಕಾಟ ಕೊಡುತ್ತವೆ ಎಂದು ಹೆಸರುವಾಸಿಯಾದ ಜಾಗಗಳಿವೆ. ಅಂತಹ ಕೆಲವು ಸ್ಥಳಗಳ ಮಾಹಿತಿಯನ್ನು ಕೆಳಗೆ ನೀಡಲಾಗಿದೆ.

ಭಯ ಹುಟ್ಟಿಸುವ ರಸ್ತೆಗಳು

ಭಯ ಹುಟ್ಟಿಸುವ ರಸ್ತೆಗಳು

  • Share this:
India's Haunted Roads: ನಮ್ಮ ದೇಶದಲ್ಲಿ ದೆವ್ವ ಪಿಶಾಚಿಗಳ ಕಥೆಗಳನ್ನು ಕೇಳದವರು ಕಡಿಮೆ. ಚಿಕ್ಕಮಕ್ಕಳಂತೂ ದೆವ್ವದ ಕಥೆಗಳನ್ನು ಕೇಳಿ ಗಡಗಡ ನಡುಗುವುದು ಸಾಮಾನ್ಯ ಸಂಗತಿ. ಭಾರತದಲ್ಲಿ ಮಾತ್ರವಲ್ಲ ವಿಶ್ವದ ಎಲ್ಲಾ ದೇಶಗಳಲ್ಲೂ ಅಲೌಕಿಕ ಸಂಗತಿಗಳಿಗೆ ಸಂಬಂಧಿಸಿದ ಬಹಳಷ್ಟು ವಿಷಯಗಳು, ಕಥೆಗಳು ಜನಜನಿತವಾಗಿವೆ. ಎಷ್ಟೇ ಆಧುನಿಕ ಮನೋಭಾವದವರು, ಶಿಕ್ಷಿತರು ಆಗಿದ್ದರೂ, ಬಾಯಿಯಲ್ಲಿ ಇಲ್ಲ, ಇಲ್ಲ ಎಂದರೂ, ಜೀವನದಲ್ಲಿ ಒಮ್ಮೆಯಾದರೂ ದೆವ್ವಗಳ ಬಗ್ಗೆ ಹೆದರಿಕೊಂಡವರು ಇದ್ದೇ ಇರುತ್ತಾರೆ. ಹಾಗೆಯೇ, ಅಲೌಕಿಕ ಶಕ್ತಿಗಳ ಅಥವಾ ದೆವ್ವಗಳ ಇರುವಿಕೆಯ ಬಗ್ಗೆ ಸಂದೇಹ ವ್ಯಕ್ತಪಡಿಸುವವರು ಕೂಡ ಇಲ್ಲದಿಲ್ಲ. ನಮ್ಮ ದೇಶದಲ್ಲಿ ದೆವ್ವಗಳು ವಾಸ ಇದ್ದು, ಮನುಷ್ಯರಿಗೆ ಕಾಟ ಕೊಡುತ್ತವೆ ಎಂದು ಹೆಸರುವಾಸಿಯಾದ ಜಾಗಗಳಿವೆ. ಅಂತಹ ಕೆಲವು ಸ್ಥಳಗಳ ಮಾಹಿತಿಯನ್ನು ಕೆಳಗೆ ನೀಡಲಾಗಿದೆ.

ದೆಹಲಿ-ಜೈಪುರ ಹೆದ್ದಾರಿ, ರಾಜಸ್ಥಾನ(Delhi Jaipur Highway-Rajasthan):ಇಲ್ಲಿನ ಭಾನಗಡ ಕೋಟೆಯ ಬಗ್ಗೆ ಕೇಳಿರದವರು ಬಹುಶ: ಯಾರೂ ಇರಲಿಕ್ಕಿಲ್ಲ. ಈ ಕೋಟೆಯ ಕುರಿತು ಅತ್ಯಂತ ಭಯಾನಕ ಅಲೌಕಿಕ ಕಥೆಗಳು ಚಾಲ್ತಿಯಲ್ಲಿವೆ. ಈ ಕೋಟೆಯು ದೆವ್ವಗಳಿಂದ ಪೀಡಿತವಾಗಿದೆ ಎಂದು ನಂಬಲಾಗಿರುವುದರಿಂದ, ದಿನದ ನಿರ್ದಿಷ್ಟ ವೇಳೆಯ ಬಳಿಕ ಇಲ್ಲಿಗೆ ಹೋಗುವುದನ್ನು ನಿರ್ಬಂಧಿಸಲಾಗಿದೆ. ಇನ್ನೊಂದು ಆಸಕ್ತಿದಾಯಕ ವಿಷಯ ಎಂದರೆ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯಿಂದ ‘ಹಾಂಟೆಡ್’ ಸ್ಥಳ(Haunted Place) ಎಂದು ಅಧಿಕೃತ ಪ್ರಮಾಣಪತ್ರ ಪಡೆದ ಏಕೈಕ ಸ್ಥಳವಿದು.

ಇದನ್ನೂ ಓದಿ:Jaggery: ನೀವು ಬಳಸುವ ಬೆಲ್ಲ ಎಷ್ಟು ಶುದ್ಧವಾಗಿದೆ? ಬಿಳಿ ಬಣ್ಣದ ಬೆಲ್ಲದಲ್ಲಿ ಕೆಮಿಕಲ್ಸ್​​ ಜಾಸ್ತಿ ಅಂತಾರೆ ತಜ್ಞರು..!

ಚೆನ್ನೈ-ಪಾಂಡಿಚೆರ್ರಿ (Chennai-Pondicherry- 2-ಲೇನ್ ಪೂರ್ವ ಕರಾವಳಿ ರಸ್ತೆ, ಚೆನ್ನೈ-ಪಾಂಡಿಚೆರ್ರಿ): ಪಾಂಡಿಚೆರ್ರಿ ಮತ್ತು ಚೆನ್ನೈ, ಎರಡು-ಲೇನ್ ಪೂರ್ವ ಕರಾವಳಿ ರಸ್ತೆಯಿಂದ ಸಂಪರ್ಕ ಹೊಂದಿವೆ. ಆ ರಸ್ತೆಯಲ್ಲಿ ಹಲವಾರು ಅಪಘಾತಗಳು ನಡೆದಿವೆ ಎಂಬ ವದಂತಿಗಳಿವೆ. ಹಲವಾರು ಮಂದಿಗೆ ಈ ರಸ್ತೆಯಲ್ಲಿ ಬಿಳಿ ಸೀರೆ ಉಟ್ಟಿರುವ ಹೆಂಗಸು ಕಾಣಲು ಸಿಕ್ಕಿರುವ ಕುರಿತು ವರದಿಗಳಿವೆ.

ರಾಷ್ಟ್ರೀಯ ಹೆದ್ದಾರಿ 209, ತಮಿಳುನಾಡು(National Highway-209 Tamil Nadu) : ವರದಿಗಳ ಪ್ರಕಾರ, ಕುಖ್ಯಾತ ಶ್ರೀಗಂಧ ಕಳ್ಳ ಸಾಗಣೆಕಾರ ವೀರಪ್ಪನ್, ತಮಿಳುನಾಡಿನ ಈ ರಸ್ತೆಯಲ್ಲಿ ಅಪಹರಣ, ಕಳ್ಳಸಾಗಾಣೆ, ಕೊಲೆ ಮತ್ತಿತರ ಹಲವಾರು ರೀತಿಯ ಅಪರಾಧಗಳನ್ನು ಮಾಡುತ್ತಿದ್ದ ಎನ್ನಲಾಗುತ್ತದೆ. ಈ ರಸ್ತೆ ಸತ್ಯಮಂಗಲಂ ವನ್ಯಜೀವಿ ಅಭಯಾರಣ್ಯದ ಮೂಲಕ ಹಾದು ಹೋಗುತ್ತದೆ. ಈ ರಸ್ತೆಯಲ್ಲಿ ಹಲವಾರು ಭಯ ಹುಟ್ಟಿಸುವಂತಹ ಚಟುವಟಿಕೆಗಳು ನಡೆದಿರುವ ಬಗ್ಗೆ ವರದಿಯಾಗಿದ್ದು, ಅದಕ್ಕೆ ವೀರಪ್ಪನ್ ಪ್ರೇತ ಕಾರಣವೆಂದು ನಂಬಲಾಗಿದೆ.

ಖೂನಿ ನಾಲಾ, ಜಮ್ಮು- ಶ್ರೀನಗರ ಹೈವೇ(Srinagar Highway): ಇಲ್ಲಿ ನಡೆದಿರುವ ಹಲವಾರು ಅಲೌಕಿಕ ಭಯಾನಕ ಘಟನೆಗಳ ಕಾರಣದಿಂದಾಗಿ ಸ್ಥಳೀಯರು ಈ ಜಾಗಕ್ಕೆ ಖೂನಿ ನಾಲಾ (ಕೊಲೆಯ ಕಂದಕ) ಎಂದು ಹೆಸರಿಟ್ಟಿದ್ದಾರೆ. ವದಂತಿಗಳ ಪ್ರಕಾರ, ಈ ರಸ್ತೆಯಲ್ಲಿ ಗರ್ಭಿಣಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರಂತೆ. ಆ ಬಳಿಕ, ಗೊತ್ತು ಗುರಿಯಿಲ್ಲದ ವಿಚಿತ್ರ ಅಪಘಾತಗಳು ಸೇರಿದಂತೆ ಹಲವಾರು ಭಯ ಹುಟ್ಟಿಸುವಂತಹ ಸಂಗತಿಗಳು ನಡೆಯಲು ಆರಂಭಿಸಿದವು ಎನ್ನಲಾಗುತ್ತದೆ.

ಇದನ್ನೂ ಓದಿ:ITR Filing: ಹೊಸ ವೆಬ್​ ಪೋರ್ಟಲ್​ನಲ್ಲಿ ಆನ್‌ಲೈನ್​​ ಮೂಲಕ Income Tax Return ಸಲ್ಲಿಸುವುದು ಹೇಗೆ..? ಇಲ್ಲಿದೆ ವಿವರ

ಇವು ದೆವ್ವ ಪಿಶಾಚಿಗಳ ಕಾಟದಿಂದ ಪೀಡಿತವಾಗಿವೆ ಎಂದು ಹೆಸರುವಾಸಿಯಾದ ಕೆಲವು ಲೇನ್‍, ರಸ್ತೆಗಳು ಮತ್ತು ರಾಷ್ಟ್ರೀಯ ಹೆದ್ದಾರಿಗಳು. ಆದರೆ ಭಾರತದಲ್ಲಿ ವಿಚಿತ್ರ ಅಲೌಕಿಕ ಶಕ್ತಿಗಳ ಅಥವಾ ದೆವ್ವಗಳು ಕಾಟ ಇವೆ ಎನ್ನಲಾಗುವ ರಸ್ತೆಗಳು ಸಾಕಷ್ಟು ಸಂಖ್ಯೆಯಲ್ಲಿವೆ, ಮತ್ತು ಅಂತಹ ರಸ್ತೆಗಳಲ್ಲಿ ಭಯಾನಕ ದೃಶ್ಯಗಳನ್ನು ಕಣ್ಣಾರೆ ಕಂಡವರು ಕೂಡ ಇದ್ದಾರೆ ಎನ್ನಲಾಗುತ್ತದೆ.
Published by:Latha CG
First published: