Alcohol Museum Goa| ಗೋವಾದಲ್ಲಿ ಪ್ರಾರಂಭವಾದ ಭಾರತದ ಮೊದಲ ಆಲ್ಕೋಹಾಲ್ ಮ್ಯೂಸಿಯಂ..!
ಈ ಆಲ್ಕೋಹಾಲ್ ಮ್ಯೂಸಿಯಂನಲ್ಲಿ ಫೆನಿಗೆ ಸಂಬಂಧಿಸಿದ ನೂರಾರು ಕಲಾಕೃತಿಗಳನ್ನು ಹೊಂದಿದೆ, ಇದರಲ್ಲಿ ದೊಡ್ಡ, ಸಾಂಪ್ರದಾಯಿಕ ಗಾಜಿನ ವ್ಯಾಟ್ಗಳು ಸೇರಿವೆ, ಇದರಲ್ಲಿ ಸ್ಥಳೀಯ ಗೋಡಂಬಿ ಮಿಶ್ರಿತ ಮದ್ಯವನ್ನು ಶತಮಾನಗಳ ಹಿಂದೆ ಸಂಗ್ರಹಿಸಲಾಗುತ್ತಿತ್ತು ಎಂದು ಹೇಳಲಾಗುತ್ತಿದೆ.
ಮದ್ಯಪ್ರಿಯರಿಗೆ ಇಲ್ಲಿದೆ ಒಂದು ಸಿಹಿ ಸುದ್ದಿ, ಮದ್ಯ ಎಂದರೆ ಸಾಕು ಬೇರೆ ರಾಜ್ಯಗಳಿಗಿಂತಲೂ ಗೋವಾದಲ್ಲಿ (Goa) ಸ್ವಲ್ಪ ಕಡಿಮೆ ಬೆಲೆಗೆ ತಮಗೆ ಬೇಕಾದಂತಹ ಮದ್ಯ ದೊರೆಯುತ್ತದೆ ಎಂದು ಬಹುತೇಕ ಮದ್ಯಪ್ರಿಯರು ಗೋವಾ ಕಡೆಗೆ ಹೋಗುವುದು ಎಲ್ಲರಿಗೂ ತಿಳಿದಂತಹ ವಿಷಯವೇ ಆಗಿದೆ.ಆದೇನಪ್ಪಾ ಸಿಹಿ ಸುದ್ದಿ ಅಂತೀರಾ.. ಆಲ್ಕೋಹಾಲ್ (Alcohol) ಗೆ ಮೀಸಲಾದ ಭಾರತದ ಮೊದಲ ಮ್ಯೂಸಿಯಂ ಗೋವಾದಲ್ಲಿ ಮದ್ಯ ಪ್ರಿಯರಿಗಾಗಿ ಪ್ರಾರಂಭ ಮಾಡಿದೆ. ಸ್ಥಳೀಯ ಉದ್ಯಮಿಯಾದಂತಹ ನಂದನ್ ಕುಡ್ಚಾಡ್ಕರ್ "ಆಲ್ ಅಬೌಟ್ ಆಲ್ಕೋಹಾಲ್" ಎಂಬ ಹೆಸರಿನ ಆಲ್ಕೋಹಾಲ್ ಮ್ಯೂಸಿಯಂ ಅನ್ನು ಉತ್ತರ ಗೋವಾದ ಕಾಂಡೋಲಿಮ್ನಲ್ಲಿ ಸ್ಥಾಪಿಸಿದ್ದಾರೆ. ವಿಭಿನ್ನ ತರಹದ ಮದ್ಯ ಮತ್ತು ಪಾನೀಯಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳಲು ಇದು ತುಂಬಾನೇ ಸಹಾಯಕವಾಗುತ್ತದೆ.
ಈ ಆಲ್ಕೋಹಾಲ್ ಮ್ಯೂಸಿಯಂನಲ್ಲಿ ಫೆನಿಗೆ ಸಂಬಂಧಿಸಿದ ನೂರಾರು ಕಲಾಕೃತಿಗಳನ್ನು ಹೊಂದಿದೆ, ಇದರಲ್ಲಿ ದೊಡ್ಡ, ಸಾಂಪ್ರದಾಯಿಕ ಗಾಜಿನ ವ್ಯಾಟ್ಗಳು ಸೇರಿವೆ, ಇದರಲ್ಲಿ ಸ್ಥಳೀಯ ಗೋಡಂಬಿ ಮಿಶ್ರಿತ ಮದ್ಯವನ್ನು ಶತಮಾನಗಳ ಹಿಂದೆ ಸಂಗ್ರಹಿಸಲಾಗುತ್ತಿತ್ತು ಎಂದು ಹೇಳಲಾಗುತ್ತಿದೆ.
ಆಲ್ಕೋಹಾಲ್ ಮ್ಯೂಸಿಯಂ:
ಉತ್ತರ ಗೋವಾದ ಕಾಂಡೋಲಿಮ್ನಲ್ಲಿ ಪ್ರಾರಂಭ ಮಾಡಿದ ಈ ಆಲ್ಕೋಹಾಲ್ ಮ್ಯೂಸಿಯಂನ ಮುಖ್ಯ ಉದ್ದೇಶವೆಂದರೆ ಗೋವಾದ ಶ್ರೀಮಂತ ಪರಂಪರೆಯ ಬಗ್ಗೆ ಜಗತ್ತಿಗೆ ಅರಿವು ಮೂಡಿಸುವುದು. ಅದರಲ್ಲಿಯೂ ವಿಶೇಷವಾಗಿ ಸ್ಥಳೀಯ ಪಾನೀಯವಾದ ಫೆನಿಯ ಬಗ್ಗೆ ಇರುವಂತಹ ಕಥೆಯ ಬಗ್ಗೆ ಜಗತ್ತಿನಾದ್ಯಂತ ಜನರಿಗೆ ಅರಿವು ಮೂಡಿಸುವುದಾಗಿದೆ ಎಂದು ಮ್ಯೂಸಿಯಂ ಮಾಲೀಕರು ಮತ್ತು ಪ್ರಾಚೀನ ವಸ್ತುಗಳ ಸಂಗ್ರಹಕಾರರಾದ ಕುಡ್ಚಾಡ್ಕರ್ ಹೇಳಿದರು.
"ನಾನು ಈ ರೀತಿಯ ಮ್ಯೂಸಿಯಂ ಪ್ರಾರಂಭಿಸಲು ಯೋಚಿಸಿದಾಗ, ನನ್ನ ಮನಸ್ಸಿನಲ್ಲಿ ಬಂದ ಮೊದಲ ಆಲೋಚನೆ ಜಗತ್ತಿನಲ್ಲಿ ಆಲ್ಕೋಹಾಲ್ ಮ್ಯೂಸಿಯಂ ಇದೆಯೇ ಎಂಬುದಾಗಿತ್ತು. ನಂತರ ಪ್ರಪಂಚದಲ್ಲಿ ಎಲ್ಲಿಯೂ ಆಲ್ಕೋಹಾಲ್ ಗೆ ಸಂಬಂಧಿಸಿದ ವಿಷಯಗಳನ್ನು ನೀವು ನೋಡಲು ಯಾವುದೇ ನಿರ್ದಿಷ್ಟವಾದ ಸ್ಥಳವಿಲ್ಲ ಎಂದು ನನಗೆ ಗೊತ್ತಾಯಿತು. ನೀವು ಸ್ಕಾಟ್ಲೆಂಡ್ಗೆ ಹೋದರೆ, ತಮ್ಮ ನೀರಿನ ಬಗ್ಗೆ, ಅವರ ಪಾನೀಯಗಳ ಬಗ್ಗೆ ಇತ್ಯಾದಿಗಳ ಬಗ್ಗೆ ತುಂಬಾ ಸಂತೋಷ ಪಡುತ್ತಾರೆ. ಅದೇ ರೀತಿ, ರಷ್ಯಾದಲ್ಲಿಯೂ ಜನರು ತಮ್ಮ ಬಳಿ ಲಭ್ಯವಿರುವ ಪಾನೀಯಗಳನ್ನು ಪ್ರದರ್ಶಿಸಲು ಸಂತೋಷಪಡುತ್ತಾರೆ," ಎಂದು ಅವರು ಹೇಳಿದರು.
"ಆದರೆ ನಮ್ಮ ದೇಶದಲ್ಲಿ ಮದ್ಯವನ್ನು ತುಂಬಾ ವಿಭಿನ್ನವಾಗಿ ಬಿಂಬಿಸುತ್ತೇವೆ, ಇದನ್ನು ನೆನೆದು ನಾನು ಭಾರತದಲ್ಲಿ ಮೊದಲ ಲಿಕ್ಕರ್ ಮ್ಯೂಸಿಯಂ ಸ್ಥಾಪಿಸಲು ನಿರ್ಧರಿಸಿದೆ" ಎಂದು ಅವರು ಹೇಳಿದರು.
ನಮ್ಮ ಪ್ರಮುಖ ಪಾನೀಯಗಳಲ್ಲಿ ಕಾಜು ಫೆನಿ ತುಂಬಾ ಮಹತ್ವದ್ದಾಗಿದ್ದು, ಇಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಗೋವಾದ ಜನರಿಗೆ ಮದ್ಯ ಸೇವನೆ ಆತಿಥ್ಯದ ಸಂಕೇತವಾಗಿದೆ' ಎಂದು ಆಲ್ಕೋಹಾಲ್ ಮ್ಯೂಸಿಯಂನ ಸಿಇಒ ಅರ್ಮಾಂಡೊ ಡುವಾರ್ಟೆ ಹೇಳಿದ್ದಾರೆ. "ಈಗಾಗಲೇ ಮ್ಯೂಸಿಯಂಗೆ ಭೇಟಿ ನೀಡಿದ ಪ್ರವಾಸಿಗರೊಬ್ಬರು “ಇಲ್ಲಿ ಸಂರಕ್ಷಿಸಲಾದ ಮಾಹಿತಿಯು ಅದ್ಭುತವಾಗಿದೆ" ಎಂದು ಹೇಳಿದ್ದಾರೆ.
Published by:MAshok Kumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ