ಹೊರದೇಶದಲ್ಲೂ ಹೆಸರುವಾಸಿಯಾದ ಭಾರತದ 'ತಂಗಳನ್ನ'..! ಎಲ್ಲಾ ಆಹಾರಗಳಿಗಿಂತಲೂ ಇದು ಅತ್ಯುತ್ತಮ ಏಕೆ ಗೊತ್ತೇ..?

ತಂಗಳನ್ನದ ಪರಿಕಲ್ಪನೆ ಇಂದು ನಿನ್ನೆಯದಲ್ಲ. ನಮ್ಮ ಪೂರ್ವಜರ ಕಾಲದಿಂದ ತಂಗಳನ್ನದ ಸೇವನೆ ಹಾಗೂ ಅನುಷ್ಠಾನ ನಿತ್ಯದ ಬಳಕೆಯಲ್ಲಿದೆ.

ತಂಗಳನ್ನದ ಪರಿಕಲ್ಪನೆ ಇಂದು ನಿನ್ನೆಯದಲ್ಲ. ನಮ್ಮ ಪೂರ್ವಜರ ಕಾಲದಿಂದ ತಂಗಳನ್ನದ ಸೇವನೆ ಹಾಗೂ ಅನುಷ್ಠಾನ ನಿತ್ಯದ ಬಳಕೆಯಲ್ಲಿದೆ.

ತಂಗಳನ್ನದ ಪರಿಕಲ್ಪನೆ ಇಂದು ನಿನ್ನೆಯದಲ್ಲ. ನಮ್ಮ ಪೂರ್ವಜರ ಕಾಲದಿಂದ ತಂಗಳನ್ನದ ಸೇವನೆ ಹಾಗೂ ಅನುಷ್ಠಾನ ನಿತ್ಯದ ಬಳಕೆಯಲ್ಲಿದೆ.

  • Share this:

ಮಾಸ್ಟರ್ ಶೆಫ್ ಆಸ್ಟ್ರೇಲಿಯಾದ ಪಾಕ ಸ್ಪರ್ಧೆಯಲ್ಲಿ ಬಾಣಸಿಗ ಭಾರತದ ಕಿಶ್ವಾರ್ ಚೌಧರಿ ತಂಗಳನ್ನದ ಪಾಕ ವೈವಿಧ್ಯವನ್ನು ಕಾರ್ಯಕ್ರಮದಲ್ಲಿ ಪ್ರಸ್ತುತಪಡಿಸಿದ ನಂತರ ತಂಗಳನ್ನದ ಮಹತ್ವ ಈಗ ದೇಶವ್ಯಾಪಿ ಹೆಸರುವಾಸಿಯಾಗಿದೆ. ಅಸ್ಸಾಂನಲ್ಲಿ ಪೋಟಿಯಾ ಬಾತ್, ಒಡಿಯಾದಲ್ಲಿ ಪಕಾಲಾ ಭಾತ್, ತಮಿಳಿನಲ್ಲಿ ಪಳೆಯ ಸಾದಂ, ಬಿಹಾರ್‌ನಲ್ಲಿ ಗೀಲ್ ಬಾತ್, ತೆಲುಗಿನಲ್ಲಿ ಚಡ್ಡಾನ್ನಮ್, ಮಲಯಾಳಂನಲ್ಲಿ ಪಳಂಕಂಜಿ ಹೀಗೆ ಬೇರೆ ಬೇರೆ ಪ್ರದೇಶಗಳಲ್ಲಿ ತಂಗಳನ್ನವನ್ನು ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಾರೆ. ಹೆಚ್ಚು ಆರಾಮದಾಯಕ ಎಂದೆನ್ನಿಸಿಕೊಂಡಿರುವ ಈ ಆಹಾರ ಭಾರತದ ಹೆಚ್ಚಿನ ಕಡೆಗಳಲ್ಲಿ ಸಾಂಪ್ರದಾಯಿಕ ತಿನಿಸಾಗಿದೆ. ಇಂಡೋನೇಷ್ಯಾ, ಮಲೇಷಿಯಾ, ಫಿಲಿಫೈನ್ಸ್, ಥೈಲ್ಯಾಂಡ್ ಮತ್ತು ವಿಯೆಟ್ನಾಂನಲ್ಲಿ ಕೂಡ ತಂಗಳನ್ನ ಸಾಂಪ್ರದಾಯಿಕ ಭಕ್ಷ್ಯವಾಗಿದೆ.


ನ್ಯೂಯಾರ್ಕ್ ಯುನಿವರ್ಸಿಟಿಯ ಆಹಾರ ಅಧ್ಯಯನಗಳ ಸಹಾಯಕ ಪ್ರಧ್ಯಾಪಕರಾಗಿರುವ ಕೃಷ್ಣೇಂದು ರೇ ಹೇಳುವಂತೆ ತಂಗಳನ್ನವು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದ್ದು ಮುಖ್ಯವಾಗಿ ಮೂರು ಕಾರಣಗಳು ಮಹತ್ವದ್ದು ಎಂದು ತಿಳಿಸಿದ್ದಾರೆ.


ಮೊದಲನೆಯದು ಇದು ರಾಷ್ಟ್ರೀಯ ಆಹಾರವಾಗಿರುವುದು. ನಮಗೆಲ್ಲಾ ಮೊದಲೇ ಗೊತ್ತಿರುವಂತೆ ಪ್ರಾದೇಶಿಕ ಮತ್ತು ಉಪ-ಪ್ರಾದೇಶಿಕ ಪಾಕಪದ್ಧತಿಗಳಿದ್ದು, ಅದರಲ್ಲಿ ತಂಗಳನ್ನವು ಪ್ರಾದೇಶಿಕ ಆಹಾರವಾಗಿದೆ.


ಇದನ್ನು ಓದಿ: ವಕ್ರದಂತ ಸಮಸ್ಯೆಯೇ? ಇದಕ್ಕೆ ಬ್ರೇಸಸ್ ಚಿಕಿತ್ಸೆ ಉತ್ತಮವಂತೆ!

ಎರಡನೆಯದಾಗಿ ಅಮೆರಿಕದಂತಹ ಪಾಶ್ಚಾತ್ಯ ದೇಶಗಳು ಆಹಾರದ ವೈವಿಧ್ಯತೆ ಕಂಡಿವೆ. ಹಾಗೆಯೇ ರೆಸ್ಟೋರೆಂಟ್‌ಗಳಲ್ಲಿ, ರಸ್ತೆಬದಿಯಲ್ಲಿ ದೊರೆಯುವ ಜಂಕ್ ಫುಡ್‌ಗಳಿಂದ ಉಂಟಾಗುವ ಅಪಾಯವನ್ನು ತಿಳಿದುಕೊಂಡಿವೆ. ಸೋಡಾ ಹಾಗೂ ಟೇಸ್ಟಿ ಮೇಕರ್‌ಗಳಿಂದ ತಯಾರಾದ ಆಹಾರವು ಉಂಟುಮಾಡುವ ದುಷ್ಪರಿಣಾಮವನ್ನು ಜನರು ಮನಗಂಡಿದ್ದಾರೆ. ಹೀಗಾಗಿ ಜನರು ಮನೆಯೂಟವನ್ನೇ ನೆಚ್ಚಿಕೊಂಡಿದ್ದಾರೆ.


ಮೂರನೆಯದಾಗಿ ಕರುಳಿನ ಆರೋಗ್ಯವು ಪ್ರತಿರಕ್ಷಣಾ ವ್ಯವಸ್ಥೆ, ಆರೋಗ್ಯ ಹಾಗೂ ಮಾನಸಿಕ ಸ್ವಾಸ್ಥ್ಯದೊಂದಿಗೆ ನಿಕಟ ಸಂಬಂಧವನ್ನು ಹೊಂದಿದೆ.


ಇದನ್ನು ಓದಿ: ಮರೆಯದಿರಿ! ಅಡುಗೆ ಮಾಡುವಾಗ ನೆನಪಿನಲ್ಲಿಡಬೇಕಾದ ಪ್ರಮುಖ ಅಂಶಗಳಿವು

ಮೊದಲು ಸೂಕ್ಷ್ಮಾಣುಜೀವಿಗಳನ್ನು ನಾಶಪಡಿಸಲು ಆಹಾರವನ್ನು ಕುದಿಸಿ ಬೇಯಿಸುವುದು ಮುಖ್ಯವಾಗಿತ್ತು. ಆದರೆ ನಮ್ಮ ಆರೋಗ್ಯಕ್ಕೆ ಕೆಲವೊಂದು ಸೂಕ್ಷ್ಮಾಣುಗಳು ಮುಖ್ಯವಾಗಿರುವುದರಿಂದ ತಂಗಳನ್ನವು ಅತ್ಯುತ್ತಮವಾಗಿದೆ. ತಂಗಳನ್ನದಲ್ಲಿ ಸೂಕ್ಷ್ಮಜೀವಿಗಳು, ಯೀಸ್ಟ್ ಹಾಗೂ ಪೋಷಕಾಂಶಗಳ ಆಗರವಾಗಿದ್ದು ನಮ್ಮ ದೈನಂದಿನ ಆರೋಗ್ಯಕ್ಕೆ ಪ್ರಮುಖವಾಗಿವೆ.


ತಂಗಳನ್ನದ ಪರಿಕಲ್ಪನೆ ಇಂದು ನಿನ್ನೆಯದಲ್ಲ. ನಮ್ಮ ಪೂರ್ವಜರ ಕಾಲದಿಂದ ತಂಗಳನ್ನದ ಸೇವನೆ ಹಾಗೂ ಅನುಷ್ಠಾನ ನಿತ್ಯದ ಬಳಕೆಯಲ್ಲಿದೆ. ಅಕ್ಕಿ ಬೆಳೆಯುವ ಪ್ರತಿ ಮನೆಯಲ್ಲಿ ತಂಗಳನ್ನದ ಬಳಕೆಯನ್ನು ಮಾಡುತ್ತಿದ್ದರು ಹಾಗೂ ಫ್ರಿಡ್ಜ್ ಬರುವ ಮುನ್ನ ಈ ಅನ್ನದ ಬಳಕೆ ವಾಡಿಕೆಯಲ್ಲಿತ್ತು. ಇದನ್ನು ರೆಸ್ಟೋರೆಂಟ್‌ನ ಮೆನುವಿನಲ್ಲಿ ಸೇರಿಸದೇ ಇರಲು ಕಾರಣವೇನೆಂದರೆ ಇದು ಸಾಮಾನ್ಯ ಜನರ ಆಹಾರವಾಗಿದೆ. ಆದರೆ ಮಾಸ್ಟರ್ ಶೆಫ್ ಕಾರ್ಯಕ್ರಮದಲ್ಲಿ ತಂಗಳನ್ನ ಕೂಡ ಗೌರವ ಪಡೆದುಕೊಂಡಿದೆ.


ದೇಶದ ಕೆಲವೊಂದು ಭಾಗಗಳಲ್ಲಿ ಕೆಲವು ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ತಂಗಳನ್ನವನ್ನು ಮೆನುವಿನಲ್ಲಿ ಸೇರಿಸಿದ್ದಾರೆ ಮತ್ತು ಈ ಅನ್ನವನ್ನು ಸೇವಿಸುವ ಜನರು ಅಪಾರ ಸಂಖ್ಯೆಯಲ್ಲಿದ್ದಾರೆ. ಮಧ್ಯಾಹ್ನದೂಟಕ್ಕೆ ಕೂಡ ತಂಗಳನ್ನದ ಬುತ್ತಿ, ಉಪ್ಪಿನಕಾಯಿ ಈಗಲೂ ಮೆಚ್ಚಿನ ಆಹಾರ ಎಂಬುದು ಕೊಟ್ಟಾಯಮ್‌ನ ರೇಗಿಯ ಮಾತಾಗಿದೆ. ಬೇಯಿಸಿದ ಅನ್ನವನ್ನು ರಾತ್ರಿ ಪೂರ್ತಿ ನೀರಿನಲ್ಲಿ ಹಸಿ ಮೆಣಸಿನೊಂದಿಗೆ ನೆನೆಸುತ್ತೇವೆ. ಮರುದಿನ ಬೆಳಗ್ಗೆ ಈ ಅನ್ನವನ್ನು ಚಟ್ನಿ, ಉಪ್ಪಿನಕಾಯಿ, ಮೀನಿನ ಫ್ರೈ, ಮೊಸರು, ಹಪ್ಪಳದೊಂದಿಗೆ ಗ್ರಾಹಕರಿಗೆ ಬಡಿಸುತ್ತೇವೆ ಎಂಬುದು ರೆಸ್ಟೋರೆಂಟ್‌ನ ಬಾಣಸಿಗ ಸುರೇಶ್ ಪಿಳ್ಳೈ ಮಾತಾಗಿದೆ.


ತಂಗಳನ್ನದ ಸೇವನೆಯಿಂದ ದೇಹವು ತಂಪಾಗುತ್ತದೆ ಹಾಗಾಗಿಯೇ ರೈತರು, ಬಿಸಿಲಿನಲ್ಲಿ ದುಡಿಯುವ ಕಾರ್ಮಿಕರು ತಂಗಳನ್ನವನ್ನೇ ಬುತ್ತಿಯಲ್ಲಿ ಕಟ್ಟಿ ಉಣ್ಣುತ್ತಾರೆ.


First published: