• Home
  • »
  • News
  • »
  • trend
  • »
  • Travel: ಭಾರತೀಯರು ಈ ಸುಂದರವಾದ ದೇಶಗಳಿಗೆ ವೀಸಾ ಇಲ್ಲದೆ ಪ್ರಯಾಣಿಸಬಹುದಂತೆ!

Travel: ಭಾರತೀಯರು ಈ ಸುಂದರವಾದ ದೇಶಗಳಿಗೆ ವೀಸಾ ಇಲ್ಲದೆ ಪ್ರಯಾಣಿಸಬಹುದಂತೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನಮ್ಮಲ್ಲಿ ಎಷ್ಟೋ ಜನರು ತಮ್ಮ ರಜಾದಿನಗಳನ್ನು ಕಳೆಯಲು ಬೇರೆ ದೇಶಗಳಿಗೆ ಹೋಗಬೇಕು ಅಂತ ಇಷ್ಟವಿರುತ್ತದೆ, ಆದರೆ ಅಲ್ಲಿಗೆ ಹೋಗಲು ವೀಸಾ ವ್ಯವಸ್ಥೆಯನ್ನು ಮಾಡಿಕೊಳ್ಳುವುದು ಮತ್ತು ಅಲ್ಲಿನ ನೀತಿ ನಿಯಮಗಳ ಬಗ್ಗೆ ತಿಳಿದುಕೊಳ್ಳುವುದು ಸ್ವಲ್ಪ ತಲೆನೋವು ಅಂತ ಅಂದುಕೊಂಡು ಅನೇಕರಿಗೆ ಬೇರೆ ದೇಶಗಳಿಗೆ ಹೋಗಲು ಆಗುವುದಿಲ್ಲ. ಅದ್ರೆ ಭಾರತೀಯರು ಈ ದೇಶಗಳಿಗೆ ವೀಸಾ ಇಲ್ಲದೆ ಪ್ರಯಾಣಿಸಬಹುದಂತೆ! ಅದು ಯಾವ ದೇಶ ಅನ್ನೋದನ್ನು ತಿಳಿದುಕೊಳ್ಳಿ.

ಮುಂದೆ ಓದಿ ...
  • Share this:

    ನಮ್ಮಲ್ಲಿ ಎಷ್ಟೋ ಜನರು ತಮ್ಮ ರಜಾದಿನಗಳನ್ನು ( Holydays ) ಕಳೆಯಲು ಬೇರೆ ದೇಶಗಳಿಗೆ ( Other Country) ಹೋಗಬೇಕು ಅಂತ ಇಷ್ಟವಿರುತ್ತದೆ, ಆದರೆ ಅಲ್ಲಿಗೆ ಹೋಗಲು ವೀಸಾ ವ್ಯವಸ್ಥೆಯನ್ನು (Visa) ಮಾಡಿಕೊಳ್ಳುವುದು ಮತ್ತು ಅಲ್ಲಿನ ನೀತಿ ನಿಯಮಗಳ ( Rules and Regulations) ಬಗ್ಗೆ ತಿಳಿದುಕೊಳ್ಳುವುದು ಸ್ವಲ್ಪ ತಲೆನೋವು ಅಂತ ಅಂದುಕೊಂಡು ಅನೇಕರಿಗೆ ಬೇರೆ ದೇಶಗಳಿಗೆ ಹೋಗಲು ಆಗುವುದಿಲ್ಲ. ಆದರೆ ಕೆಲವು ದೇಶಗಳು ನಮಗೆ ಅಲ್ಲಿ ಹೋಗಿ ವಿಮಾನ ನಿಲ್ದಾಣದಲ್ಲಿ (Airport land) ಲ್ಯಾಂಡ್  ಆದ ತಕ್ಷಣವೇ ವೀಸಾವನ್ನು ನೀಡುತ್ತವೆ, ಇದನ್ನು ‘ವೀಸಾ ಆನ್ ಅರೈವಲ್’ (Visa on Arrival ) ಅಂತ ಹೇಳುತ್ತಾರೆ. ಇನ್ನೂ ಕೆಲವು ದೇಶಗಳಲ್ಲಿ ಈ ವೀಸಾ ಪಡೆಯುವ ಕೆಲಸವೇ ಇರುವುದಿಲ್ಲ ಅಂತ ಹೇಳಬಹುದು. ಎಂದರೆ ನೀವು ಕೆಲವು ದೇಶಗಳಿಗೆ ವೀಸಾ-ಮುಕ್ತ ಪ್ರಯಾಣವನ್ನು ಆನಂದಿಸಬಹುದು.


    ಅಂತರರಾಷ್ಟ್ರೀಯ ಪ್ರವಾಸವನ್ನು ಯೋಜಿಸುವುದಕ್ಕೆ ಸಂಬಂಧಿಸಿದಂತೆ ನಿಮ್ಮನ್ನು ತಡೆಯುತ್ತಿರುವ ವಿಷಯ ಇದೇ ಆಗಿದ್ದರೆ, ನೀವು ಹೆಚ್ಚು ಚಿಂತಿಸಬೇಡಿ. ಬದಲಿಗೆ, ವೀಸಾ ಇಲ್ಲದೆ ಭಾರತೀಯ ಪ್ರಯಾಣಿಕರಿಗೆ ಅವಕಾಶ ನೀಡುವ ದೇಶಗಳಿಗೆ ನೀವು ಭೇಟಿ ನೀಡಬಹುದು.


    ಭಾರತೀಯರು ವೀಸಾ ಇಲ್ಲದೆ ಪ್ರಯಾಣಿಸಬಹುದಾದ ಸುಂದರ ದೇಶಗಳಿವು


    1. ಭೂತಾನ್


    ಭಾರತೀಯ ಪ್ರಯಾಣಿಕರು ವೀಸಾ ಇಲ್ಲದೆಯೇ ಈ ಸುಂದರ ದೇಶಕ್ಕೆ ಭೇಟಿ ನೀಡಬಹುದು. ಭೂತಾನ್ ಗೆ ಭೇಟಿ ನೀಡಲು ಬಯಸುವವರು, ಅವರು ಎರಡು ಮಾನ್ಯ ಪ್ರಯಾಣ ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ಹೊಂದಿದ್ದಾರೆ ಎಂದು ಖಚಿತಪಡಿಸಿಕೊಳ್ಳಬೇಕು, ಅಂದರೆ ಕನಿಷ್ಠ 6 ತಿಂಗಳ ಸಿಂಧುತ್ವವನ್ನು ಹೊಂದಿರುವ ಮಾನ್ಯ ಭಾರತೀಯ ಪಾಸ್‌ಪೋರ್ಟ್ ಅಥವಾ ಭಾರತೀಯ ಚುನಾವಣಾ ಆಯೋಗವು ವಿತರಿಸಿದ ಮತದಾರರ ಗುರುತಿನ ಚೀಟಿ.


    2. ಇಂಡೋನೇಷ್ಯಾ


    ನೀವು ಈ ಸುಂದರ ತಾಣಕ್ಕೆ ಭೇಟಿ ನೀಡಲು ದೀರ್ಘಕಾಲದಿಂದ ಯೋಜಿಸುತ್ತಿದ್ದರೆ, ಇದು ಸರಿಯಾದ ಸಮಯ ಅಂತಾನೆ ಹೇಳಬಹುದು. ಭಾರತೀಯ ಪ್ರಯಾಣಿಕರಿಗೆ ಅಲ್ಪಾವಧಿಯ ವಾಸ್ತವ್ಯಕ್ಕಾಗಿ ದೇಶಕ್ಕೆ ಭೇಟಿ ನೀಡಲು ಇಂಡೋನೇಷ್ಯಾ ಪ್ರವಾಸಿ ವೀಸಾ ಅಥವಾ ವ್ಯಾಪಾರ ವೀಸಾದ ಅಗತ್ಯವಿರುವುದಿಲ್ಲ. ಆದಾಗ್ಯೂ, ನೀವು ಅಲ್ಲಿ ಹೆಚ್ಚು ಕಾಲ ಉಳಿಯಲು ಬಯಸಿದರೆ, ವೀಸಾಗೆ ಅರ್ಜಿ ಸಲ್ಲಿಸಬೇಕಾಗುತ್ತದೆ ಎಂಬುದನ್ನು ಗಮನಿಸಿ.


    Indians can travel to these beautiful countries without a visa
    ಸಾಂದರ್ಭಿಕ ಚಿತ್ರ


    3. ಜಮೈಕಾ


    ಭಾರತೀಯ ಪ್ರಯಾಣಿಕರಿಗೆ ಜಮೈಕಾಗೆ ಭೇಟಿ ನೀಡಲು ಮತ್ತು 30 ದಿನಗಳವರೆಗೆ ಅಲ್ಲಿ ಉಳಿದುಕೊಳ್ಳಲು ವೀಸಾ ಅಗತ್ಯವಿಲ್ಲ. ಅವರು ಗಮ್ಯಸ್ಥಾನವನ್ನು ತಲುಪಿದಾಗ, ವಲಸೆ ಅಧಿಕಾರಿಯು ಮಾನ್ಯ ಪ್ರವಾಸಿ ವೀಸಾದಂತೆ ಕಾರ್ಯನಿರ್ವಹಿಸುವ ಅವರ ಪಾಸ್‌ಪೋರ್ಟ್ ನ ಮೇಲೆ ಒಂದು ಮುದ್ರೆಯನ್ನು ಹಾಕುತ್ತಾರೆ. ಇದರರ್ಥ ಈ ಗಮ್ಯಸ್ಥಾನಕ್ಕೆ ಭೇಟಿ ನೀಡಲು ಯೋಜಿಸುವುದು ತಲೆನೋವನ್ನು ಕಡಿಮೆ ಮಾಡುತ್ತದೆ.


    4. ಮಕಾವು


    ಮಕಾವುಗೆ 30 ದಿನಗಳಿಗಿಂತ ಕಡಿಮೆ ಅವಧಿಗೆ ಭೇಟಿ ನೀಡುವ ಭಾರತೀಯ ಪ್ರಯಾಣಿಕರಿಗೆ ದೇಶವನ್ನು ಪ್ರವೇಶಿಸಲು ವೀಸಾದ ಅಗತ್ಯವಿರುವುದಿಲ್ಲ. ಇದರರ್ಥ ಹೆಚ್ಚಿನ ಪ್ರಯಾಣಿಕರು ತಮ್ಮ ಪ್ರಯಾಣದ ಅವಧಿಯು 30 ದಿನಗಳಿಗಿಂತ ಕಡಿಮೆ ಎಂದು ಭಾವಿಸಿ, ವೀಸಾಕ್ಕಾಗಿ ಅರ್ಜಿ ಸಲ್ಲಿಸುವ ಪ್ರಕ್ರಿಯೆಗೆ ಒಳಗಾಗುವ ಅಗತ್ಯವಿಲ್ಲ.


    5. ಸೇಂಟ್ ಕಿಟ್ಸ್ ಮತ್ತು ನೆವಿಸ್


    ಭಾರತೀಯ ಪ್ರಯಾಣಿಕರು ವ್ಯಾಪಾರ ಮತ್ತು ಪ್ರವಾಸೋದ್ಯಮ ಉದ್ದೇಶಗಳಿಗಾಗಿ ಸೇಂಟ್ ಕಿಟ್ಸ್ ಮತ್ತು ನೆವಿಸ್ ಗೆ ಭೇಟಿ ನೀಡಿದರೆ ಮತ್ತು ಅಲ್ಲಿ ಕಡಿಮೆ ಸಮಯದವರೆಗೆ ಉಳಿಯುವುದಾಗಿದ್ದರೆ, ಅವರಿಗೆ ಯಾವುದೇ ರೀತಿಯ ವೀಸಾದ ಅಗತ್ಯವಿಲ್ಲ. ಇದು ಭಾರತೀಯರು ತೊಂದರೆಯಿಲ್ಲದ ಮತ್ತು ವೀಸಾ ಮುಕ್ತ ಪ್ರಯಾಣವನ್ನು ಆನಂದಿಸಬಹುದಾದ ಮತ್ತೊಂದು ಸುಂದರ ತಾಣವಾಗಿದೆ.


    ಇದನ್ನೂ ಓದಿ: Gold Fish: ಅಪರೂಪದ ಸುಂದರ ಗೋಲ್ಡ್ ಫಿಶ್ ಕ್ಯಾಚ್ ಮಾಡಿ ವಿಶ್ವದಾಖಲೆ ಬರೆದ ಮೀನುಗಾರ!


    6. ಸೆರ್ಬಿಯಾ


    ಭಾರತದಿಂದ ಪ್ರಯಾಣಿಸುವವರು ಅಲ್ಪಾವಧಿಯ ವಾಸ್ತವ್ಯಕ್ಕಾಗಿ ಸರ್ಬಿಯಾಕ್ಕೆ ಹೋಗಲು ಯಾವುದೇ ರೀತಿಯ ವೀಸಾದ ಅಗತ್ಯವಿರುವುದಿಲ್ಲ ಮತ್ತು ಅವರ ಭೇಟಿಯ ಉದ್ದೇಶವು ಸಾರಿಗೆ, ಪ್ರವಾಸೋದ್ಯಮ ಅಥವಾ ವ್ಯವಹಾರವಾಗಿವಾಗಿರಬೇಕು. ಸಂಕ್ಷಿಪ್ತವಾಗಿ ಹೇಳುವುದಾದರೆ, ಭಾರತೀಯರು ಒಂದು ವರ್ಷದ ಅವಧಿಯಲ್ಲಿ 30 ದಿನಗಳವರೆಗೆ ಈ ದೇಶಕ್ಕೆ ವೀಸಾ ಮುಕ್ತ ಪ್ರಯಾಣವನ್ನು ಆನಂದಿಸಬಹುದು.




    7. ಟುನೀಶಿಯಾ


    ಭಾರತೀಯ ಪ್ರಯಾಣಿಕರಿಗೆ ಪ್ರವಾಸೋದ್ಯಮ ಉದ್ದೇಶಗಳಿಗಾಗಿ ಟುನಿಶೀಯಾಗೆ ಪ್ರಯಾಣಿಸಲು ವೀಸಾ ಅಗತ್ಯವಿಲ್ಲ. ಆದಾಗ್ಯೂ, ಟುನಿಶೀಯಾದಲ್ಲಿ ಅವರು ಮೂರು ತಿಂಗಳುಗಳ ಅವಧಿಯನ್ನು ಮೀರಬಾರದು ಎಂಬುದನ್ನು ನೆನಪಿನಲ್ಲಿಡಬೇಕು. ಅಲ್ಲದೆ, ಅವರು ಪ್ರವಾಸೋದ್ಯಮವನ್ನು ಹೊರತುಪಡಿಸಿ ಇತರ ಉದ್ದೇಶಗಳಿಗಾಗಿ ಟುನೀಶಿಯಾಗೆ ಪ್ರಯಾಣಿಸುತ್ತಿದ್ದರೆ, ಅವರು ಮುಂಚಿತವಾಗಿ ವೀಸಾವನ್ನು ಪಡೆಯಬೇಕಾಗುತ್ತದೆ.


    8. ಸ್ವಾಲ್ಬಾರ್ಡ್


    ಈ ನಾರ್ವೇಜಿಯನ್ ದ್ವೀಪಸಮೂಹಕ್ಕೆ ವೀಸಾ ಇಲ್ಲದೆ ಭೇಟಿ ನೀಡಬಹುದು. 50ಕ್ಕೂ ಹೆಚ್ಚು ದೇಶಗಳಿಂದ ವಲಸಿಗರಿಗೆ ನೆಲೆಯಾಗಿರುವ ಸ್ವಾಲ್ಬಾರ್ಡ್ ಎಲ್ಲವನ್ನೂ ಉತ್ಕೃಷ್ಟವಾಗಿ ನೀಡುತ್ತದೆ. ಇಲ್ಲಿನ ಇನ್ನೊಂದು ವಿಶೇಷತೆ ಎಂದರೆ ಇಲ್ಲಿ ರಾತ್ರಿಗಳು ಆರು ತಿಂಗಳವರೆಗೆ ಸತತವಾಗಿರುತ್ತವೆ, ಏಕೆಂದರೆ ಇದು ಪೃಥ್ವಿಯ ಉತ್ತರ ಗೋಳದ ಅತಿ ಹತ್ತಿರದಲ್ಲಿರುವ ಪ್ರದೇಶವಾಗಿದೆ.

    Published by:Gowtham K
    First published: