ಭಾರತೀಯರು ದುಡ್ಡು ಕೊಡದೆ ಉಚಿತವಾಗಿ ನೆಟ್​ಫ್ಲಿಕ್ಸ್​ನಲ್ಲಿ ಸಿನಿಮಾ ನೋಡಬಹುದು!​

ಭಾರತದಲ್ಲೂ ನೆಟ್​ಫ್ಲಿಕ್ಸ್​ಗೆ ಅತೀ ಹೆಚ್ಚು ಚಂದಾದಾರರಿದ್ದಾರೆ. ಇದೀಗ ಉಚಿತ ವೀಕ್ಷಣೆಯ ಆಫರ್ ನೀಡುವ ಮೂಲಕ ಮತ್ತಷ್ಟು ಭಾರತೀಯ ಚಂದಾದಾರರನ್ನು ತನ್ನತ್ತ ಸೆಳೆಯುವ ತಂತ್ರಕ್ಕೆ ನೆಟ್​ಫ್ಲಿಕ್ಸ್ ಸಂಸ್ಥೇ ಮುಂದಾಗಿದೆ.

ನೆಟ್​​ಫ್ಲಿಕ್ಸ್

ನೆಟ್​​ಫ್ಲಿಕ್ಸ್

 • Share this:
  ವಿಶ್ವದ ಮೂಲೆ ಮೂಲೆಯಲ್ಲೂ ಚಂದಾದಾರರನ್ನು ಹೊಂದಿರುವ ನೆಟ್​ಫ್ಲಿಕ್ಸ್​ ಜಗತ್ತಿನ ಅತಿ ದೊಡ್ಡ ಓಟಿಟಿ ಪ್ಲಾಟ್​ಫಾರಂಗಳಲ್ಲಿ ಒಂದು. ಎಲ್ಲಾ ಮಾದರಿಯ ಸಿನಿಮಾ, ವೆಬ್ ಸೀರಿಸ್ ಹಾಗೂ ಟಿವಿ ಶೋಗಳನ್ನು ಒಂದೇ ವೇದಿಕೆಯಲ್ಲಿ ಉಣ ಬಡಿಸುವ ಅಮೆರಿಕ ಮೂಲದ ಸಂಸ್ಥೆ ಇದೀಗ ಭಾರತೀಯರಿಗೆ ಉಚಿತ ಚಂದಾದಾರತ್ವ ನೀಡಲು ಮುಂದಾಗಿದೆ.

  ನೆಟ್​ಫ್ಲಿಕ್ಸ್​ ಗೆ ಚಂದಾದಾರರಾಗಲು ತಿಂಗಳಿಗೆ ಇಂತಿಷ್ಟು ಹಣ ಪಾವತಿ ಮಾಡಬೇಕು. ಇದರ ಸಬ್​ಸ್ಕ್ರಿಬ್ಷನ್ ಚಾರ್ಜ್​ ಅಮೆಜಾನ್ ಪ್ರೈಮ್ ಅಥವಾ ಇನ್ನಿತರ ಮನರಂಜನಾ ಸಂಸ್ಥೆಗಳಿಗಿಂತ ಸ್ವಲ್ಪ ದುಬಾರಿಯೇ. ಹೀಗಿರುವಾಗ ನೆಟ್​ಫ್ಲಿಕ್ಸ್ ಇದೀಗ ಭಾರತೀಯರಿಗೆ ಉಚಿತ ಸೇವೆ ನೀಡಲು ಮುಂದಾಗಿದೆ. ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಕೋಟ್ಯಾಂತರ ಗ್ರಾಹಕರನ್ನು ಹೊಂದಿರುವ ನೆಟ್​ಫ್ಲಿಕ್ಸ್ ಕೇವಲ ಭಾರತೀಯರಿಗೆ ಮಾತ್ರ ಇಂತಹ ಸುವರ್ಣ ಅವಕಾಶ ನೀಡಿದೆ.

  ಹಾಗಂತ ಜೀವನ ಪೂರ್ತಿ ನೆಟ್​ಫ್ಲಿಕ್​ ಅನ್ನು ಉಚಿತವಾಗಿ ನೋಡಬಹುದು ಅಂದುಕೊಳ್ಳಬೇಡಿ. ನೆಟ್​ಫ್ಲಿಕ್ಸ್​ ಈ ಫ್ರೀ ಆಫರ್ ಕೇವಲ 2 ದಿನಗಳು ಮಾತ್ರ. ನೆಟ್​ಫ್ಲಿಕ್ಸ್  ಇಂಡಿಯಾ ಹೊಸ ಆಚರಣೆಗೆ ಸಿದ್ಧತೆ ನಡೆಸುತ್ತಿದೆ. ಇದೇ ತಿಂಗಳ 5 ಮತ್ತು 6 ರಂದು Netflix Stream fest ನಡೆಯಲಿದೆ. Stream fest ಪ್ರಯುಕ್ತ ಭಾರತೀಯರಿಗೆ ಎರಡು ದಿನದ ಮಟ್ಟಿಗೆ ಈ ಭರ್ಜರಿ ಆಫರ್ ನೀಡುತ್ತಿದೆ. ಡಿ. 5 ಮತ್ತು 6ರಂದು ಭಾರತದ ಯಾರೂ ಬೇಕಾದರೂ, ಚಂದಾದಾರರತ್ವ ಪಡೆಯದೆಯೂ, ತನ್ನ ವೆಬ್​ಸೈಟ್​ ಅಥವಾ ಅಪ್ಲಿಕೇಷನ್ ಮೂಲಕ ಉಚಿತವಾಗಿ ತಮ್ಮ ಇಷ್ಟದ ಸಿನಿಮಾ, ವೆಬ್ ಸೀರಿಸ್ ಅಥವಾ ಟಿವಿ ಶೋಗಳನ್ನು ನೋಡಬಹುದು.

  ಇದನ್ನು ಓದಿ: ಕೊಡಗಿನ ಸುಗ್ಗಿ ಹಬ್ಬ ಪುತ್ತರಿ ಸಂಭ್ರಮ ನಾಡಮಂದ್ ಊರು ಮಂದ್​ಗಳಲ್ಲಿ ಕಳೆಗಟ್ಟಿದ ಕೋಲಾಟ ಸಂಭ್ರಮ

  ಈ ಎರಡು ದಿನದ ಮಟ್ಟಿನ ವೀಕ್ಷಣೆಗೆ ಯಾವುದೇ ಶುಲ್ಕ ವಿಧಿಸುವುದಿಲ್ಲ ಎಂದು ನೆಟ್​ಫ್ಲಿಕ್ಸ್ ಸಂಸ್ಥೆ ತಿಳಿಸಿದೆ. ಭಾರತದಲ್ಲೂ ನೆಟ್​ಫ್ಲಿಕ್ಸ್​ಗೆ ಅತೀ ಹೆಚ್ಚು ಚಂದಾದಾರರಿದ್ದಾರೆ. ಇದೀಗ ಉಚಿತ ವೀಕ್ಷಣೆಯ ಆಫರ್ ನೀಡುವ ಮೂಲಕ ಮತ್ತಷ್ಟು ಭಾರತೀಯ ಚಂದಾದಾರರನ್ನು ತನ್ನತ್ತ ಸೆಳೆಯುವ ತಂತ್ರಕ್ಕೆ ನೆಟ್​ಫ್ಲಿಕ್ಸ್ ಸಂಸ್ಥೇ ಮುಂದಾಗಿದೆ.
  Published by:HR Ramesh
  First published: