ಮೇರಿ, ಮೆರಿ ಅಥವಾ ಮ್ಯಾರಿ ಕ್ರಿಸ್ಮಸ್?: ಸ್ಪೆಲ್ಲಿಂಗ್​ ತಿಳಿಯಲು ಗೂಗಲ್​ ಮೊರೆ ಹೋದ ಭಾರತೀಯರು..!

ಇದರಿಂದ ಭಾರತದಲ್ಲಿ ಇಂದು ಮೇರಿ ಕ್ರಿಸ್ಮಸ್​ ಬದಲಾಗಿ ಗೂಗಲ್​ ಹುಡುಕಾಟದಲ್ಲಿ ಮೆರಿ ಕ್ರಿಸ್ಮಸ್ ( Meri Christmas) ​ಎಂಬ ಪದ ಟ್ರೆಂಡ್​ ಆಗಿತ್ತು.

zahir | news18
Updated:December 25, 2018, 9:57 PM IST
ಮೇರಿ, ಮೆರಿ ಅಥವಾ ಮ್ಯಾರಿ ಕ್ರಿಸ್ಮಸ್?: ಸ್ಪೆಲ್ಲಿಂಗ್​ ತಿಳಿಯಲು ಗೂಗಲ್​ ಮೊರೆ ಹೋದ ಭಾರತೀಯರು..!
.
  • News18
  • Last Updated: December 25, 2018, 9:57 PM IST
  • Share this:
ಮೇರಿ ಕ್ರಿಸ್ಮಸ್ (Merry Christmas)​..? ಅಥವಾ ಮೆರಿ ಕ್ರಿಸ್ಮಸ್ (Meri Christmas)​, ಇಲ್ಲ ಮ್ಯಾರಿ ಕ್ರಿಸ್ಮಸ್ (Marry Christmas)​..? ಇಂತಹದೊಂದು ಸಂಶಯ ಮೂಡಿದ್ದು  ಭಾರತೀಯರಿಗೆ. ಕ್ರಿಸ್ಮಸ್​ ಹಬ್ಬದಂದು ಶುಭಾಶಯ ತಿಳಿಸಲು ಸ್ಪೆಲ್ಲಿಂಗ್​ ಬರೆಯುವುದು ಹೇಗೆ ಎಂಬ ಡೌಟ್​ ಬಂದಿದೆ. ಇದಕ್ಕಾಗಿ ಗೂಗಲ್​ ಸರ್ಚ್​​ನಲ್ಲಿ ಹುಡುಕಾಡಿದ್ದಾರೆ.

ಇದರಿಂದ ಭಾರತದಲ್ಲಿ ಇಂದು ಮೇರಿ ಕ್ರಿಸ್ಮಸ್​ ಬದಲಾಗಿ ಗೂಗಲ್​ ಹುಡುಕಾಟದಲ್ಲಿ ಮೆರಿ ಕ್ರಿಸ್ಮಸ್ ( Meri Christmas) ​ಎಂಬ ಪದ ಟ್ರೆಂಡ್​ ಆಗಿತ್ತು. ಅಲ್ಲದೆ ಅತಿ ಹೆಚ್ಚು ಹುಡುಕಾಡಿದ ಕೀವರ್ಡ್​ನಲ್ಲಿ ಮೊದಲ ಸ್ಥಾನದಲ್ಲಿ Meri Christmas ಕಾಣಿಸಿಕೊಂಡಿದೆ.

ಇದನ್ನೂ ಓದಿ: ಶೀಘ್ರದಲ್ಲೇ ಬರಲಿದೆ 20 ರೂ. ಹೊಸ ನೋಟು: ಏನಿದರ ವಿಶೇಷತೆ ?

ಹಾಗೆಯೇ ಟ್ವಿಟರ್​ನಲ್ಲೂ ಮೇರಿ ಬದಲು ಮೆರಿ ಎಂಬುದು ಟ್ರೆಂಡ್​ ಆಗಿತ್ತು. ಮೆರಿ ಅಂದರೆ ಹಿಂದಿಯಲ್ಲಿ ನನ್ನದು ಎಂಬ ಅರ್ಥ  ನೀಡುತ್ತದೆ. ಇದನ್ನೇ ಕೆಲವರು ಮೆರಿ ತೇರಿ ಕ್ರಿಸ್ಮಸ್​ ಎಂದು ಟ್ವೀಟಿಸುವ ಮೂಲಕ ಹಾಸ್ಯ ಚಟಾಕಿಯನ್ನು ಹಾರಿಸಿದ್ದರು.

ಇದನ್ನೂ ಓದಿ: ಸಾಂತಾ ತಾತನಿಗೊಂದು ಪತ್ರ: ಬಾಲಕಿಗೆ ಸಿಕ್ತು ಭರ್ಜರಿ ಉಡುಗೊರೆ

ಒಟ್ಟಿನಲ್ಲಿ ಕಾಗುಣಿತದ ತಪ್ಪಿನಿಂದ ಈ ಬಾರಿ ಭಾರತದಲ್ಲಿ ಕ್ರಿಸ್ಮಸ್​ ಎಂಬುದು ಸಖತ್ ಟ್ರೆಂಡ್​ ಆಗಿದ್ದು ವಿಶೇಷ. ಅಂದಹಾಗೆ ಎಲ್ಲರಿಗೂ ಮತ್ತೊಮ್ಮೆ ಮೆರಿ, ಮ್ಯಾರಿ ಅಲ್ಲದ ಮೇರಿ ಕ್ರಿಸ್ಮಸ್​ ಹಬ್ಬದ ಶುಭಾಶಯಗಳು.

ಇದನ್ನೂ ಓದಿ: ನಮ್ಮೂರ ಹೆಮ್ಮೆ ಡಾಕ್ಟರ್ ನರಸಮ್ಮ: 15 ಸಾವಿರ ಹೆರಿಗೆ ಮಾಡಿಸಿದ ಮಹಾತಾಯಿ
First published:December 25, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading