Cow Dung: ಭಾರತದ ಸಗಣಿ ಮೇಲೆ ಅಮೆರಿಕನ್ನರ ಕೆಂಗಣ್ಣು, ವಿಮಾನ ನಿಲ್ದಾಣದಲ್ಲಿ ಇನ್ನು ಇದನ್ನು ತಲುವಂತೆಯೇ ಇಲ್ಲ!

ಹಸುವಿನ ಸಗಣಿ ಕಂಡು ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಕೆಂಡಾಮಂಡಲರಾಗಿದ್ದಾರೆ. ಹಲುವಿಗೆ ಕಾಲು ಮತ್ತು ಬಾಯಿ ರೋಗ ಉಂಟಾಗುತ್ತದೆ. ಹೀಗಾಗಿ ಹಸುವಿನ ಸಗಣಿಯಿಂದ ಮನುಷ್ಯನ ಆರೋಗ್ಯಕ್ಕೆ ತೊಂದರೆ ಉಂಟಾಗುತ್ತದೆ ಅಂತ ಹೇಳಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಅಮೆರಿಕ: ಭಾರತದಲ್ಲಿ (India) ಹಸುವಿಗೆ (Cow) ಇರುವ ಪವಿತ್ರ ಸ್ಥಾನದ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಈಗಾಗಲೇ ಗೋ ಹತ್ಯೆ ನಿಷೇಧ ಕಾಯ್ದೆ ಬಂದಿದ್ದು, ಹಸುಗಳ ಹತ್ಯೆ ಶಿಕ್ಷಾರ್ಹ ಅಪರಾಧವಾಗಿದೆ. ಇನ್ನು ಗೋವುಗಳಿಗೆ ಇರುವಷ್ಟೇ ಮಹತ್ವ ಗೋವುಗಳ ಉತ್ಪನ್ನಗಳಿಗೂ (Products) ಇದೆ. ಅಂದರೆ ಹಾಲು (Milk), ಗೋ ಮೂತ್ರ (Urine), ಸಗಣಿಗೆ (Dung) ಭಾರತೀಯರು ಪೂಜನೀಯ ಸ್ಥಾನ ನೀಡುತ್ತಾರೆ. ಈಗಂತೂ ಆನ್‌ ಲೈನ್ ಮಾರುಕಟ್ಟೆಯಲ್ಲೂ (Online Market) ಗೋ ಮೂತ್ರ, ಸಗಣಿ ಲಭ್ಯವಿದೆ. ಇನ್ನು ಭಾರತೀಯರು (Indians) ವಿದೇಶಕ್ಕೆ ಹೋಗುವಾಗ ವಿಮಾನದಲ್ಲಿ (Flight) ಸಗಣಿ ಇತ್ಯಾದಿಗಳನ್ನು ತಮ್ಮೊಂದಿಗೆ ತೆಗೆದುಕೊಂಡು ಹೋಗುತ್ತಾರೆ. ಆದರೆ ಇನ್ನು ಮುಂದೆ ಅಮೆರಿಕದಲ್ಲಿ (America) ಸಗಣಿಯನ್ನು ಭಾರತೀಯ ಪ್ರಯಾಣಿಕರು (Indian travelers) ತಮ್ಮೊಂದಿಗೆ ತೆಗೆದುಕೊಂಡು ಹೋಗುವಂತಿಲ್ಲ.

ವಿಮಾನದಲ್ಲಿ ಸಗಣಿ ತೆಗೆದುಕೊಂಡು ಹೋಗವಂತೆ ಇಲ್ಲ

ಅಮೆರಿಕಕ್ಕೆ ಹೊರಟ ಏರ್ ಇಂಡಿಯಾ ಪ್ರಯಾಣಿಕರೊಬ್ಬರಿಗೆ ಇಂಥದ್ದೊಂದು ಅನುಭವ ಆಗಿದ್ಯಂತೆಯ ಕಳೆದ ತಿಂಗಳು ಅಂದರೆ ಏಪ್ರಿಲ್ 4 ರಂದು, US ಕಸ್ಟಮ್ಸ್ ಮತ್ತು ಬಾರ್ಡರ್ ಪ್ರೊಟೆಕ್ಷನ್ (CBP) ಅಧಿಕಾರಿಗಳು ವಾಷಿಂಗ್ಟನ್ ಡಲ್ಲೆಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ಪ್ರಯಾಣಿಕನನ್ನು ತಡೆದಿದ್ದಾರಂತೆ. ಕಾರಣ ಆತನ ಬ್ಯಾಗ್‌ನಲ್ಲಿ ಹಸುವಿನ ಸಗಣಿ ಇತ್ತಂತೆ.

ಸಗಣಿ ತರಲು ಕಸ್ಟಮ್ಸ್ ಅಧಿಕಾರಿಗಳಿಂದ ಅಡ್ಡಿ

ಆತನ ಸೂಟ್‌ ಕೇಸ್‌ನಲ್ಲಿ ಸುಮಾರು ಹಸುವಿನ ಸಗಣಿಯಿಂದ ಮಾಡಿದ 2 ಬೆರಣಿಗಳು ಇದ್ದವಂತೆ. ಹೀಗಾಗಿ ಆ ಸೂಟ್‌ ಕೇಸ್‌ ಅನ್ನು ಅಲ್ಲಿನ ವಿಮಾನ ನಿಲ್ದಾಣದ ಕಸ್ಟಮ್ಲ್ ಅಧಿಕಾರಿಗಳು ಹಿಡಿದಿದ್ದಾರೆ.

ಇದನ್ನೂ ಓದಿ: Grand Wedding: ಹೆಲಿಕಾಪ್ಟರ್‌ನಿಂದ ಇಳಿದು, ಜಾಗ್ವಾರ್‌ ಹತ್ತಿ ಮಂಟಪಕ್ಕೆ ಬಂದ ರೈತನ ಮಗ! ವೈರಲ್ ಆಯ್ತು ಅದ್ಧೂರಿ ವಿವಾಹ

ಕಾಲು ಮತ್ತು ಬಾಯಿ ರೋಗದ ಅಪಾಯ

ಹಸುವಿನ ಸಗಣಿ ಕಂಡು ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಕೆಂಡಾಮಂಡಲರಾಗಿದ್ದಾರೆ. ಹಲುವಿಗೆ ಕಾಲು ಮತ್ತು ಬಾಯಿ ರೋಗ ಉಂಟಾಗುತ್ತದೆ. ಹೀಗಾಗಿ ಹಸುವಿನ ಸಗಣಿಯಿಂದ ಮನುಷ್ಯನ ಆರೋಗ್ಯಕ್ಕೆ ತೊಂದರೆ ಉಂಟಾಗುತ್ತದೆ. ಈ ರೋಗವು ವಿಶ್ವದಾದ್ಯಂತ ವೇಗವಾಗಿ ಹರಡುವ ಸಾಧ್ಯತೆ ಇದೆ. ಹೀಗಾಗಿ ಸಗಣಿಯನ್ನು ಅಪಾಯಕಾರಿ ವಸ್ತು ಅಂತ ಅಮೆರಿಕದ ಕೃಷಿ ಇಲಾಖೆ ಘೋಷಿಸಿದೆಯಂತೆ ಅಂತ ಕಸ್ಟಮ್ಸ್ ಅಧಿಕಾರಿಗಳು ಹೇಳಿದ್ದಾರೆ.

ಸಗಣಿಯಿಂದ ರೋಗ ಹರಡುತ್ತದೆ ಎಂದ ಅಧಿಕಾರಿಗಳು

"ಕಾಲು ಮತ್ತು ಬಾಯಿ ರೋಗವು ಜಾನುವಾರುಗಳ ಮಾಲೀಕರು ಹೆಚ್ಚು ಭಯಪಡುವ ಪ್ರಾಣಿಗಳ ಕಾಯಿಲೆಗಳಲ್ಲಿ ಒಂದಾಗಿದೆ, ಇದು ಗಂಭೀರ ಆರ್ಥಿಕ ಪರಿಣಾಮಗಳನ್ನು ಹೊಂದಿದೆ ಮತ್ತು ಇದು ಕಸ್ಟಮ್ಸ್ ಮತ್ತು ಗಡಿ ರಕ್ಷಣೆಯ ಕೃಷಿ ಸಂರಕ್ಷಣಾ ಮಿಷನ್‌ನ ನಿರ್ಣಾಯಕ ಬೆದರಿಕೆ ಕೇಂದ್ರವಾಗಿದೆ" ಎಂದು CBP ಯ ಕ್ಷೇತ್ರ ಕಾರ್ಯಾಚರಣೆಗಳ ಕಾರ್ಯನಿರ್ವಾಹಕ ನಿರ್ದೇಶಕ ಕೀತ್ ಫ್ಲೆಮಿಂಗ್ ಹೇಳಿದರು.

ಪತ್ರಿಕಾ ಪ್ರಕಟಣೆಯಲ್ಲಿ ಬಾಲ್ಟಿಮೋರ್ ಫೀಲ್ಡ್ ಆಫೀಸ್ . "CBP ಯ ಕೃಷಿ ತಜ್ಞರು ನಮ್ಮ ರಾಷ್ಟ್ರದ ಮುಂಚೂಣಿಯಲ್ಲಿರುವ ಪ್ರಮುಖ ಕೃಷಿ ಮತ್ತು ನೈಸರ್ಗಿಕ ಸಂಪನ್ಮೂಲಗಳ ರಕ್ಷಕರಾಗಿದ್ದಾರೆ, ಅದು ನಮ್ಮ ರಾಷ್ಟ್ರದ ಆರ್ಥಿಕತೆಯನ್ನು ಬಲವಾದ ಮತ್ತು ದೃಢವಾಗಿಡಲು ಸಹಾಯ ಮಾಡುತ್ತದೆ." ಅಂತ ಅಧಿಕಾರಿಗಳು ಹೇಳಿದ್ದಾರೆ.

ಸಗಣಿ ನಾಶ ಪಡಿಸಿದ ಅಧಿಕಾರಿಗಳು

ಇನ್ನು ಭಾರತೀಯ ಪ್ರಯಾಣಿಕ ಎಷ್ಟೇ ಹೇಳಿದರು ಕಸ್ಟಮ್ಸ್ ಆಧಿಕಾರಿಗಳು ಕೇಳಿದರು. ಅವರ ತೀವ್ರ ವಿರೋಧದ ನಡುವೆಯೂ ಸಗಣಿಯನ್ನು ವಿಮಾನ ನಿಲ್ದಾಣದಲ್ಲೇ ನಾಶಪಡಿಸಲಾಯ್ತು.

ಇದನ್ನೂ ಓದಿ: Kili Paul: ಸೋಶಿಯಲ್ ಮೀಡಿಯಾ ಸ್ಟಾರ್ ಕಿಲಿ ಪೌಲ್‌ ಮೇಲೆ ಹಲ್ಲೆ, ಚಾಕುವಿನಿಂದ ಇರಿದು ಅಪರಿಚಿತರು ಎಸ್ಕೇಪ್!

ಭಾರತದಲ್ಲಿ ಪೂಜ್ಯ ಭಾವನೆ

ಇನ್ನು ಭಾರತದಲ್ಲಿ ತೀವ್ರ ಹೊಗಳಿಕೆ ಮತ್ತು ವಿಲಕ್ಷಣ ಸುದ್ದಿಗಳಿಗೆ ಹಸುಗಳು  ಒಳಗಾಗೋದು ಹೊಸದೇನಲ್ಲ . ಗೋವುಗಳನ್ನು ಹಿಂದೂಗಳು ಪವಿತ್ರವೆಂದು ಪರಿಗಣಿಸುತ್ತಾರೆ ಮತ್ತು ಗೋಮೂತ್ರ ಮತ್ತು ಸಗಣಿ ಪ್ರಯೋಜನಗಳಿಂದ ತುಂಬಿದೆ ಎಂದು ಹಲವರು ಭಾವಿಸುತ್ತಾರೆ. ಹಸುವಿನ ಹಾಲಿನಲ್ಲಿ ಚಿನ್ನದ ಅಂಶ ಇರುವುದರಿಂದ ಹಳದಿ ಬಣ್ಣದ್ದಾಗಿದೆ ಅಥವಾ ಗೋಮೂತ್ರವನ್ನು ಕುಡಿಯುವುದರಿಂದ ಕಾನ್ಸರ್ ರೋಗ ವಾಸಿಯಾಗುತ್ತದೆ ಎಂದೂ ಹೇಳಲಾಗುತ್ತದೆ.
Published by:Annappa Achari
First published: