Gama Wrestler: ಚಿಕ್ಕಂದಿನಿಂದಲೇ ಕುಸ್ತಿ ಕಣಕ್ಕಿಳಿದು ಎದುರಾಳಿಯನ್ನು ಚಿತ್ತ ಹಾಕಿದ್ದ ಗಾಮಾ ಪೈಲ್ವಾನ್ ಜೀವನಗಾಥೆ

ಗಾಮಾ ಪೈಲ್ವಾನ್ ತನ್ನ ಜೀವನದ 50 ವರ್ಷಗಳನ್ನು ಕುಸ್ತಿಗೆ ಅರ್ಪಿಸಿದ್ದಾರೆ. ಮತ್ತು ಅನೇಕ ಪ್ರಶಸ್ತಿ ಗೆಲ್ಲುವ ಮೂಲಕ ಹೆಮ್ಮೆ ಕೀರ್ತಿ ತಂದು ಕೊಟ್ಟಿದ್ದಾರೆ. ಇಷ್ಟೆಲ್ಲಾ ಸಾಧನೆ ಮಾಡಿದ ಗಾಮಾ ಪೈಲ್ವಾನ್ ಬದುಕಿನ ಕೊನೆಯ ದಿನಗಳು ಸಾಕಷ್ಟು ಸಂಕಷ್ಟದಾಯಕವಾಗಿದ್ದವು.

ಗಾಮಾ ಪೈಲ್ವಾನ್

ಗಾಮಾ ಪೈಲ್ವಾನ್

 • Share this:
  ಭಾರತದಲ್ಲಿ (India) ಕುಸ್ತಿ (Wrestler) ದೇಶೀಯ ಕ್ರೀಡೆ (Domestic Sports) ಆಗಿದೆ. ಭಾರತದಲ್ಲಿ ಒಂದಕ್ಕಿಂತ ಹೆಚ್ಚು ಕುಸ್ತಿ ಪಟುಗಳಿದ್ದಾರೆ. ಕುಸ್ತಿ ನೋಡೋಕೆ ಗಮ್ಮತ್ತಾಗಿರುತ್ತದೆ. ಕುಸ್ತಿಪಟುಗಳು ವಿಶ್ವದಲ್ಲೇ (World) ತಮ್ಮ ಪ್ರದರ್ಶನ ನೀಡಿ, ಗೆದ್ದು, ದೇಶಕ್ಕೆ ಪ್ರಶಸ್ತಿ ತಂದು ಕೊಡುವುದರ ಜೊತೆಗೆ ಹೆಮ್ಮೆ ತಂದು ಕೊಟ್ಟಿದ್ದಾರೆ. ಮತ್ತು ಸಾಕಷ್ಟು ಹೆಸರು ಗಳಿಸಿದ್ದಾರೆ. ಅಂತಹ ಒಬ್ಬ ಕುಸ್ತಿ ಪಟುವನ್ನು 'ಗಾಮಾ ಪೈಲ್ವಾನ್' ಎಂದು ಹೆಸರಿಸಲಾಗಿದೆ. ಅವರನ್ನು 'ದಿ ಗ್ರೇಟ್ ಗಾಮಾ' ಮತ್ತು ರುಸ್ತಮ್-ಎ-ಹಿಂದ್ ಎಂದೂ ಕರೆಯಲಾಗುತ್ತಿತ್ತು. ಇಂದು 22 ಮೇ 2022 ಅವರ 144 ನೇ ಜನ್ಮ ದಿನ. ಮತ್ತು Google ಅವರ ಜನ್ಮದಿನವನ್ನು ಡೂಡಲ್ ಮಾಡುವ ಮೂಲಕ ಇನ್ನಷ್ಟು ವಿಶೇಷಗೊಳಿಸಿದೆ.

  ಜೀವನದ 50 ವರ್ಷಗಳನ್ನು ಕುಸ್ತಿಗೆ ಅರ್ಪಿಸಿದ್ದ ಗಾಮಾ ಪೈಲ್ವಾನ್

  ಗಾಮಾ ಪೈಲ್ವಾನ್ ತನ್ನ ಜೀವನದ 50 ವರ್ಷಗಳನ್ನು ಕುಸ್ತಿಗೆ ಅರ್ಪಿಸಿದ್ದಾರೆ. ಮತ್ತು ಅನೇಕ ಪ್ರಶಸ್ತಿ  ಗೆಲ್ಲುವ ಮೂಲಕ ಹೆಮ್ಮೆ, ಕೀರ್ತಿ ತಂದು ಕೊಟ್ಟಿದ್ದಾರೆ. ಇಷ್ಟೆಲ್ಲಾ ಸಾಧನೆ ಮಾಡಿದ ಗಾಮಾ ಪೈಲ್ವಾನ್ ಬದುಕಿನ ಕೊನೆಯ ದಿನಗಳು ಸಾಕಷ್ಟು ಸಂಕಷ್ಟದಾಯಕವಾಗಿದ್ದವು.

  ಹಾಗಾದರೆ ಗಾಮಾ ಪೈಲ್ವಾನ್ ಅವರ ಜನ್ಮ ದಿನವಾದ ಇಂದು ನಾವು ಅವರ ಜೀವನ, ವೃತ್ತಿ, ಆಹಾರ ಮತ್ತು ವ್ಯಾಯಾಮದ ಬಗ್ಗೆ ತಿಳಿದುಕೊಳ್ಳೋಣ.

  ಗಾಮಾ ಪೈಲ್ವಾನ್ ಮೂಲ ಹೆಸರು ಗುಲಾಮ್ ಮೊಹಮ್ಮದ್ ಬಕ್ಷ್ ಬಟ್. ಅವರು 22 ಮೇ 1878 ರಂದು ಅಮೃತಸರದ ಜಬ್ಬೋವಾಲ್ ಗ್ರಾಮದಲ್ಲಿ ಜನಿಸಿದರು. ಕೆಲವು ವರದಿಗಳ ಪ್ರಕಾರ ಅವರು ಮಧ್ಯಪ್ರದೇಶದ ದಾತಿಯಾದಲ್ಲಿ ಜನಿಸಿದರು ಎಂದು ಹೇಳುತ್ತವೆ. ಹಾಗಾಗಿ ಅವರ ಜನನದ ಬಗ್ಗೆ ವಿವಾದಗಳಿವೆ.

  ಇದನ್ನೂ ಓದಿ: ಬಿಳಿ ಕೂದಲ ಸಮಸ್ಯೆ ನಿವಾರಣೆಗೆ ವಾಲ್ ನಟ್ ಸಿಪ್ಪೆಯಿಂದ ಹೀಗೆ ಮಾಡಿ, ಪ್ರಯೋಜನ ಪಡೆಯಿರಿ

  ಬಾಲ್ಯದಿಂದಲೂ ಕುಸ್ತಿಪಟು ಆಗಬೇಕೆಂದು ಕನಸು ಕಂಡಿದ್ದರು

  ಗಾಮಾ ಪೈಲ್ವಾನ್ ನ ಎತ್ತರ 5 ಅಡಿ 7 ಇಂಚು. ಮತ್ತು ತೂಕ ಸುಮಾರು 113 ಕೆಜಿ. ಅವರ ತಂದೆಯ ಹೆಸರು ಮುಹಮ್ಮದ್ ಅಜೀಜ್ ಬಕ್ಷ್ ಮತ್ತು ಗಾಮಾ ಪೈಲ್ವಾನ್ ಅವರಿಗೆ ಕುಸ್ತಿಯ ಆರಂಭಿಕ ಕೌಶಲ್ಯಗಳನ್ನು ತಮ್ಮ ತಂದೆಯಿಂದ ಕಲಿತಿದ್ದಾರೆ. ಕುಸ್ತಿಯ ಮೇಲಿನ ಅಭಿರುಚಿ ಹಿನ್ನೆಲೆ ಅವರು ಬಾಲ್ಯದಿಂದಲೂ ಕುಸ್ತಿಪಟು ಆಗಬೇಕೆಂದು ಕನಸು ಕಂಡಿದ್ದರು.

  ಚಿಕ್ಕಂದಿನಿಂದಲೇ ಕುಸ್ತಿ ಕಣಕ್ಕೆ ಇಳಿದ ಗಾಮಾ ಪೈಲ್ವಾನ್ ಒಂದಕ್ಕಿಂತ ಹೆಚ್ಚು ಕುಸ್ತಿ ಪಟುಗಳನ್ನು ಬಗ್ಗು ಬಡಿದು ಕುಸ್ತಿ ಪ್ರಪಂಚದಲ್ಲಿ ಹೆಸರು ಮಾಡಿದರು. ನಂತರ ಭಾರತದ ಎಲ್ಲಾ ಕುಸ್ತಿ ಪಟುಗಳನ್ನು ಸೋಲಿಸಿ, 1910 ರಲ್ಲಿ ಲಂಡನ್ ಗೆ ಹೋದರು.

  ಎತ್ತರದ ಹಿನ್ನೆಲೆ ಅಂತಾರಾಷ್ಟ್ರೀಯ ಚಾಂಪಿಯನ್‌ಶಿಪ್‌ಗೆ ಸೇರಿಸಲಿಲ್ಲ

  1910 ರಲ್ಲಿ ಅವರು ತಮ್ಮ ಸಹೋದರ ಇಮಾಮ್ ಬಕ್ಷ್ ಅವರೊಂದಿಗೆ ಅಂತರರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲು ಇಂಗ್ಲೆಂಡ್‌ಗೆ ತೆರಳಿದರು. ಅವರ ಎತ್ತರ ಕೇವಲ 5 ಅಡಿ ಮತ್ತು 7 ಇಂಚುಗಳ ಕಾರಣ, ಅವರನ್ನು ಅಂತಾರಾಷ್ಟ್ರೀಯ ಚಾಂಪಿಯನ್‌ಶಿಪ್‌ಗೆ ಸೇರಿಸಲಿಲ್ಲ.

  ಗಾಮಾ ಪೈಲ್ವಾನ್ ತಮ್ಮ ಎತ್ತರದಿಂದ ಅವಕಾಶ ಸಿಗದ್ದಕ್ಕೆ, ಯಾವುದೇ ಕುಸ್ತಿ ಪಟುವನ್ನು 30 ನಿಮಿಷಗಳಲ್ಲಿ ಸೋಲಿಸಬಹುದು ಎಂದು ಅವರು ಅಲ್ಲಿದ್ದ ಕುಸ್ತಿ ಪಟುಗಳಿಗೆ ಬಹಿರಂಗವಾಗಿ ಸವಾಲು ಹಾಕಿದ್ದರು. ಆದರೆ ಅವರ ಸವಾಲನ್ನು ಯಾರೂ ಸ್ವೀಕರಿಸಲಿಲ್ಲ. ವರ್ಲ್ಡ್ ಹೆವಿವೇಟ್ ಚಾಂಪಿಯನ್‌ಶಿಪ್ (1910) ಮತ್ತು ವರ್ಲ್ಡ್ ವ್ರೆಸ್ಲಿಂಗ್ ಚಾಂಪಿಯನ್‌ಶಿಪ್ (1927) ಸೇರಿದಂತೆ ಅವರು ತಮ್ಮ ವೃತ್ತಿಜೀವನದಲ್ಲಿ ಹಲವಾರು ಪ್ರಶಸ್ತಿಗಳನ್ನು ಗೆದ್ದರು.

  'ಟೈಗರ್' ಎಂಬ ಬಿರುದು ಪಡೆದಿದ್ದ ಗಾಮಾ

  ಅಲ್ಲಿ ಅವರಿಗೆ 'ಟೈಗರ್' ಎಂಬ ಬಿರುದು ನೀಡಿ ಗೌರವಿಸಲಾಯಿತು. ಮಾರ್ಷಲ್ ಆರ್ಟ್ಸ್ ಕಲಾವಿದ ಬ್ರೂಸ್ ಲೀ ಅವರಿಗೂ ಗಾಮಾ ಸವಾಲು ಹಾಕಿದ್ದರು. ಬ್ರೂಸ್ ಲೀ ಗಾಮಾ ಕುಸ್ತಿ ಪಟುವನ್ನು ಭೇಟಿಯಾದಾಗ, ಯೋಗ ಆಧರಿಸಿದ ಪುಷ್-ಅಪ್‌ಗಳ ರೂಪಾಂತರವಾದ 'ದಿ ಕ್ಯಾಟ್ ಸ್ಟ್ರೆಚ್' ಅನ್ನು ಅವರಿಂದ ಕಲಿತಿದ್ದರಂತೆ. ಗಾಮಾ 20 ನೇ ಶತಮಾನದ ಆರಂಭದಲ್ಲಿ ರುಸ್ತಮ್-ಎ-ಹಿಂದ್ ಎಂದೇ ಖ್ಯಾತಿ ಪಡೆದಿದ್ದರು.

  ನಿತ್ಯ 10 ಲೀಟರ್ ಹಾಲು, 6 ದೇಶೀಯ ಕೋಳಿಗಳ ಸೇವನೆ ಮಾಡುತ್ತಿದ್ದ ಗಾಮಾ

  ಗಾಮಾ ಕುಸ್ತಿ ಪಟು ಹಳ್ಳಿಗರಾಗಿದ್ದರು. ಹಾಗಾಗಿ ಅವರ ಆಹಾರ ಕ್ರಮವೂ ದೇಸಿ ಹಾಗೂ ಗ್ರಾಮೀಣ ಊಟ ಸೇವಿಸುತ್ತಿದ್ದರು. ಅವರ ಆಹಾರಕ್ರಮವು ಸಾಕಷ್ಟು ಭಾರವಾಗಿತ್ತು. ಗಾಮಾ ಪೈಲ್ವಾನ್ ನಿತ್ಯ 10 ಲೀಟರ್ ಹಾಲು ಕುಡಿಯುತ್ತಿದ್ದರು. ಇದರೊಂದಿಗೆ ಅವರು ಆಹಾರದಲ್ಲಿ 6 ದೇಶೀಯ ಕೋಳಿಗಳನ್ನು ತಿನ್ನುತ್ತಿದ್ದರಂತೆ. ಇದರೊಂದಿಗೆ ಸುಮಾರು 200 ಗ್ರಾಂ ಬಾದಾಮಿ ಜೊತೆ ಪಾನೀಯ ತಯಾರಿಸಿ ಕುಡಿಯುತ್ತಿದ್ದರಂತೆ.

  40 ತಂಡದ ಸಹ ಆಟಗಾರರೊಂದಿಗೆ ಪ್ರತಿದಿನ ಕುಸ್ತಿ

  ಇದು ಗಾಮಾ ಪೈಲ್ವಾನ್ ಗೆ ಶಕ್ತಿ ನೀಡುತ್ತಿತ್ತು. ದೊಡ್ಡ ಕುಸ್ತಿಪಟುಗಳನ್ನು ಸೋಲಿಸಲು ಇದು ಸಹಾಯ ಮಾಡಿತು. ಗಾಮಾ ಪೈಲ್ವಾನ್ ತನ್ನ 40 ತಂಡದ ಸಹ ಆಟಗಾರರೊಂದಿಗೆ ಪ್ರತಿದಿನ ಕುಸ್ತಿಯಾಡುತ್ತಿದ್ದರು. ಅವರ ವ್ಯಾಯಾಮವು 5 ಸಾವಿರ ಹಿಂದೂ ಸ್ಕ್ವಾಟ್‌ಗಳು ಅಥವಾ ಸಿಟ್-ಅಪ್‌ಗಳು, 3 ಸಾವಿರ ಹಿಂದೂ ಪುಷ್-ಅಪ್‌ಗಳು ಅಥವಾ ಸ್ಟಿಕ್‌ಗಳು.

  ಸಯಾಜಿಬಾಗ್‌ನಲ್ಲಿರುವ ಬರೋಡಾ ವಸ್ತುಸಂಗ್ರಹಾಲಯದಲ್ಲಿ 2.5 ಅಡಿ ಘನಾಕೃತಿಯ ಕಲ್ಲನ್ನು ಇರಿಸಲಾಗಿದ್ದು, ಇದರ ತೂಕ ಸುಮಾರು 1200 ಕೆ.ಜಿ. 1902 ರ ಡಿಸೆಂಬರ್ 23 ರಂದು ಗಾಮಾ ಈ 1200 ಕೆಜಿ ಕಲ್ಲನ್ನು ಎತ್ತಿದ್ದರು ಎಂದು ಹೇಳಲಾಗಿದೆ.

  ಗಾಮಾ ಪೆಹಲ್ವಾನ್ ಅವರ ಕೊನೆಯ ದಿನಗಳು

  ಗಾಮಾ ಪೈಲ್ವಾನ್ ಅಮೃತಸರದಲ್ಲಿ ಇರುತ್ತಿದ್ದರು. ಕೋಮು ಉದ್ವಿಗ್ನತೆಯಿಂದಾಗಿ ಅವರು ಲಾಹೋರ್‌ಗೆ ತೆರಳಿದರು. ಗಾಮಾ ಪೈಲ್ವಾನ್ ತನ್ನ ಜೀವನದ ಕೊನೆಯ ಕುಸ್ತಿಯನ್ನು 1927 ರಲ್ಲಿ ಸ್ವೀಡಿಷ್ ಕುಸ್ತಿಪಟು ಜೆಸ್ ಪೀಟರ್ಸನ್ ಅವರೊಂದಿಗೆ ಆಡಿದ್ದರು. ಜೀವನದಲ್ಲಿ 50 ಕ್ಕೂ ಹೆಚ್ಚು ಕುಸ್ತಿ ಸ್ಪರ್ಧೆ ಭಾಗವಹಿಸಿ, ಎಲ್ಲದರಲ್ಲೂ ಗೆಲುವು ಕಂಡಿದ್ದಾರೆ.

  ಇದನ್ನೂ ಓದಿ: ಮಹಿಳೆಯರ ಮುಖದ ಮೇಲಿನ ಅನಗತ್ಯ ಕೂದಲು ತೆಗೆದು ಹಾಕುವುದು ಹೇಗೆ?

  ಕುಸ್ತಿ ತೊರೆದ ನಂತರ ಗಾಮಾ ಅಸ್ತಮಾ ಮತ್ತು ಹೃದಯ ಕಾಯಿಲೆ ಹೊಂದಿದ್ದರು. ಈ ಸ್ಥಿತಿಯು ದೇಹಾರೋಗ್ಯ ಹದಗೆಟ್ಟಿತು. ಇದರಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಅವರು ಕೊನೆ ಕ್ಷಣದಲ್ಲಿ ಪದಕ ಮಾರಾಟ ಮಾಡಿದ್ದರು. 1960 ರಲ್ಲಿ ತಮ್ಮ 82 ನೇ ವಯಸ್ಸಿನಲ್ಲಿ ದೀರ್ಘ ಕಾಲದ ಅನಾರೋಗ್ಯದಿಂದ ನಿಧನರಾದರು.
  Published by:renukadariyannavar
  First published: