ಬಡ ಮಹಿಳೆ ಹಾಡಿದ ಈ ಹಾಡು ಕೇಳಿದ್ರೆ ನೀವೂ ಹುಬ್ಬೇರಿಸುತ್ತೀರಿ!: ಸ್ಟಾರ್​ಗಳೂ ಈಕೆ ಎದುರು ಫೇಲ್!


Updated:May 30, 2018, 2:28 PM IST
ಬಡ ಮಹಿಳೆ ಹಾಡಿದ ಈ ಹಾಡು ಕೇಳಿದ್ರೆ ನೀವೂ ಹುಬ್ಬೇರಿಸುತ್ತೀರಿ!: ಸ್ಟಾರ್​ಗಳೂ ಈಕೆ ಎದುರು ಫೇಲ್!

Updated: May 30, 2018, 2:28 PM IST
ನ್ಯೂಸ್ 18 ಕನ್ನಡ

ಸೋಷಿಯಲ್ ಮೀಡಿಯಾದ ಮೂಲಕ ಇತ್ತೀಚೆಗೆ ಹೊಸ ಪ್ರತಿಭೆಗಳಿಗೂ ಅವಕಾಶ ಸಿಗುತ್ತಿದೆ, ಈ ಮೂಲಕ ರಾತ್ರೋ ರಾತ್ರಿ ಸ್ಟಾರ್​ಗಳಾಗುತ್ತಾರೆ. ಸದ್ಯ ಬಡ ಮಹಿಳೆಯ ವಿಡಿಯೋವೊಂದು ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗುತ್ತಿದ್ದದು, ಜನಮನ್ನಣೆ ಗಳಿಸುತ್ತಿದೆ.

ವಿಡಿಯೋದಲ್ಲಿ ಮಹಿಳೆಯೊಬ್ಬಳು ಬಾಲಿವುಡ್​ನ ಪ್ರಖ್ಯಾತ ಹಾಡು "ಕುಛ್ ನ ಅಕಹೋ, ಕುಛ್ ಭೀ ನಾ ಕಹೋ" ಹಾಡಿದ್ದು, ಬಳಿಕ ಲತಾ ಮಂಗೇಶ್ಕರ್​ರವರ ಪ್ರಸಿದ್ಧ ಹಾಡು ಎ ಮನೇರೆ ವತನ್​ ಕೇ ಲೋಗೋ ಹಾಡನ್ನು ಹಾಡಿದ್ದಾಳೆ. ಈಕೆ ಅದೆಷ್ಟು ಸುಮಧುರವಾಗಿ ಹಾಡಿದ್ದಾಳೆಂದರೆ ಕೆಳಿಸಿಕೊಂಡ ಜನರು ಹುಬ್ಬೇರಿಸಿ ಪ್ರಶಂಸೆಯ ಸುರಿಮಳೆಗೈದಿದ್ದಾರೆ.

ಇನ್ನು ಈಕೆಯ ಹಾಡು ಕೇಳಿಸಿಕೊಮಡ ಜನರು ತಮಗಿಷ್ಟವಾದ ಹಾಡನ್ನು ಹಾಡಿಸಿರುವುದನ್ನೂ ವಿಡಿಯೋದಲ್ಲಿ ನೋಡಬಹುದು. ಹಲವಾರು ಹಾಡುಗಳನ್ನು ಆ ಮಹಿಳೆ ಹಾಡಿದ್ದು, ಅಲ್ಲಿ ನಿಂತು ಕೇಳಿದ ಕೇಳುಗರು ಆಕೆಯ ಪ್ರತಿಭೆಯನ್ನು ಮೆಚ್ಚಿ ಚಪ್ಪಾಳೆ ತಟ್ಟಿದ್ದಾರೆ. ಸದ್ಯ ಈ ವಿಡಿಯೋವನ್ನು ಹಲವಾರು ಪೇಜ್​ಗಳು ಸೇರ್ ಮಾಡಿಕೊಂಡಿವೆ.


ಫಿಲ್ಮೀ ಜಗತ್ ಎಂಬ ಫೇಸ್​ಬುಕ್​ ಪೇಜ್​ ಕೂಡಾ ಈಕೆಯ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದು, ಈ ವಿಡಿಯೋ ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ. 69 ಸಾವಿರಕ್ಕೂ ಅಧಿಕ ಮಂದಿ ಶೇರ್ ಮಾಡಿಕೊಂಡಿದ್ದಾರೆ. ವಿಡಿಯೋ ಪೋಸ್ಟ್​ ಮಾಡಿರುವ ಈ ಪೇಜ್ "ಈ ಬಡ ಮಹಿಳೆಯ ಹಾಡಿನೆದುರು ಬಾಲಿವುಡ್​ನ ಪ್ರಸಿದ್ಧ ಗಾಯಕರೂ ಫೇಲ್ ಆಗುತ್ತಾರೆ. ಬಾಲಿವುಡ್​ನಲ್ಲಿ ಈಕೆಗೂ ಸ್ಥಾನ ಸಿಗಬೇಕಲ್ಲವೇ?" ಎಂಬ ಪ್ರಶ್ನೆಯನ್ನು ಬರೆದುಕೊಂಡಿದ್ದಾರೆ.

Loading...

ಕೆಲವೇ ದಿನಗಳ ಹಿಂದಷ್ಟೇ ಕೇರಳದ ಶಿಕ್ಷಕಿಯೊಬ್ಬರು ಹಾಡಿದ ಹಾಡು ಕೂಡಾ ಫೇಸ್​ಬುಕ್​ನಲ್ಲಿ ಬಹಳಷ್ಟು ವೈರಲ್ ಆಗಿ, ಜನ ಮೆಚ್ಚುಗೆಗೆ ಪಾತ್ರವಾಗಿತ್ತು.
First published:May 30, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...