Friendship: ಗಡಿಗಳನ್ನು ಮೀರಿರುವ ಇವರಿಬ್ಬರ ಸ್ನೇಹವೇ ಎಲ್ಲರಿಗೂ ಸ್ಪೂರ್ತಿ!

ಗ್ರಹಿಕೆಗಳು ಗಡಿಯಾಚೆಗಿನ ಜನರನ್ನು ಭೇಟಿಯಾದಾಗ ಮತ್ತು ಅವರೊಂದಿಗೆ ಸಂವಹನ ನಡೆಸಲು ಬಂದಾಗ ಬದಲಾಗುತ್ತವೆ. ಅದಕ್ಕೆ ಇಲ್ಲಿ ಒಂದು ಬೆಸ್ಟ್‌ ಉದಾಹರಣೆ ಎಂದರೆ ಒಬ್ಬ ಭಾರತದ ಹುಡುಗಿ ಪಾಕಿಸ್ತಾನದ ಹುಡುಗಿಯನ್ನು ಭೇಟಿಯಾಗಿದ್ದು ಹೇಗೆ ? ಅವರಿಬ್ಬರೂ ಸ್ನೇಹಿತೆಯರು ಆಗಿದ್ರಾ? ಅಥವಾ ಸುಮ್ಮನೆ ದಾರಿಯಲ್ಲಿ ಸಿಕ್ಕ ಸಹ ಪ್ರಯಾಣಿಕರು ಆಗಿದ್ರಾ? ಎಂಬ ಹೆಚ್ಚಿನ ಮಾಹಿತಿಯನ್ನು ನಾವು ಇಲ್ಲಿ ತಿಳಿಯೋಣ ಬನ್ನಿ.

ಗಡಿಗಳನ್ನು ಮೀರಿರುವ ಇಬ್ಬರ ಸ್ನೇಹ

ಗಡಿಗಳನ್ನು ಮೀರಿರುವ ಇಬ್ಬರ ಸ್ನೇಹ

  • Share this:
ಸಾಮಾನ್ಯವಾಗಿ ಎರಡು ನೆರೆಹೊರೆಯ ರಾಷ್ಟ್ರಗಳ ಪ್ರಜೆಗಳು ತಮ್ಮ ಪಕ್ಕದಲ್ಲಿರುವ ರಾಷ್ಟ್ರದ (Nation) ಜನರ ಬಗ್ಗೆ ಹಲವು ಬಾರಿ ತಪ್ಪು ಕಲ್ಪನೆಗಳು ಮತ್ತು ಪೂರ್ವಾಗ್ರಹಗಳನ್ನು ಹೊಂದಿರುವ ಸಾಧ್ಯತೆ ಇರುತ್ತದೆ. ಹಾಗೆಯೇ ಅವುಗಳಿಗೆ ಪುಷ್ಟಿ ನೀಡುವಂತೆ ಮಾಧ್ಯಮಗಳು ಅಂತಹ ವಿಚಾರಗಳನ್ನು ಉತ್ತೇಜಿಸುತ್ತವೆ. ಸಾಮಾನ್ಯವಾಗಿ ಅಂತಹ ತಪ್ಪು ಗ್ರಹಿಕೆಗಳು ಗಡಿಯಾಚೆಗಿನ (Border)  ಜನರನ್ನು ಭೇಟಿಯಾದಾಗ ಮತ್ತು ಅವರೊಂದಿಗೆ ಸಂವಹನ ನಡೆಸಲು ಬಂದಾಗ ಬದಲಾಗುತ್ತವೆ. ಅದಕ್ಕೆ ಇಲ್ಲಿ ಒಂದು ಬೆಸ್ಟ್‌ ಉದಾಹರಣೆ (Example) ಎಂದರೆ ಒಬ್ಬ ಭಾರತದ (India) ಹುಡುಗಿ ಪಾಕಿಸ್ತಾನದ (Pakistan) ಹುಡುಗಿಯನ್ನು ಭೇಟಿಯಾಗಿದ್ದು ಹೇಗೆ ? ಅವರಿಬ್ಬರೂ ಸ್ನೇಹಿತೆಯರು ಆಗಿದ್ರಾ? ಅಥವಾ ಸುಮ್ಮನೆ ದಾರಿಯಲ್ಲಿ ಸಿಕ್ಕ ಸಹ ಪ್ರಯಾಣಿಕರು ಆಗಿದ್ರಾ? ಎಂಬ ಹೆಚ್ಚಿನ ಮಾಹಿತಿಯನ್ನು ನಾವು ಇಲ್ಲಿ ತಿಳಿಯೋಣ ಬನ್ನಿ.

ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್‌ನಲ್ಲಿ ಬೆಳೆದ ಇಬ್ಬರ ಸ್ನೇಹ 
ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್‌ನಲ್ಲಿ ಪಾಕಿಸ್ತಾನದ ಹುಡುಗಿಯನ್ನು ಹೇಗೆ ಭೇಟಿಯಾದೆ ಎಂಬುದನ್ನು ಸಾಮಾಜಿಕ ಜಾಲತಾಣವಾದ ಲಿಂಕ್ಡ್‌ಇನ್‌ನಲ್ಲಿ ಸ್ನೇಹಾ ಬಿಸ್ವಾಸ್ ಅವರು ಈ ಭೇಟಿಯ ಬಗ್ಗೆ ಪೋಸ್ಟ್‌ ಒಂದನ್ನು ಹಾಕಿದ್ದಾರೆ. ಇದು ಈಗ ಎಲ್ಲ ಕಡೆ ಸಖತ್‌ ವೈರಲ್‌ ಆಗುತ್ತಿದೆ.

ಪಾಕಿಸ್ತಾನಿ ಮೂಲದ ಗೆಳತಿಯ ಬಗ್ಗೆ ಏನಂದ್ರು ಸ್ನೇಹಾ ಬಿಸ್ವಾಸ್‌
ಸ್ನೇಹಾ ಬಿಸ್ವಾಸ್‌ ಅವರು “ಭಾರತದ ಒಂದು ಸಣ್ಣ ಪಟ್ಟಣದಲ್ಲಿ ಬೆಳೆದ ನಾನು, ಪಾಕಿಸ್ತಾನದ ಬಗ್ಗೆ ನನ್ನ ಜ್ಞಾನವು ಕ್ರಿಕೆಟ್, ಇತಿಹಾಸ ಪುಸ್ತಕಗಳು ಮತ್ತು ಮಾಧ್ಯಮಗಳಿಗೆ ಸೀಮಿತವಾಗಿತ್ತು. ಪಾಕಿಸ್ತಾನ ಮತ್ತು ಭಾರತದ ನಡುವೆ ನಡೆಯುವ ಎಲ್ಲ ವಿಷಯಗಳು ಪೈಪೋಟಿ ಮತ್ತು ದ್ವೇಷದ ಸುತ್ತ ಸುತ್ತುತ್ತವೆ. ನಾನು ದಶಕಗಳ ನಂತರ ಈ ಹುಡುಗಿಯನ್ನು ಭೇಟಿಯಾದೆ. ಆ ಹುಡುಗಿ ಪಾಕಿಸ್ತಾನದ ಇಸ್ಲಾಮಾಬಾದ್ ಮೂಲದವರು.

ಇದನ್ನೂ ಓದಿ: No Entry To Indians: ಭಾರತದ ಈ ಪ್ರದೇಶಗಳಿಗೆ ವಿದೇಶಿಗರಿಗೆ ಮಾತ್ರ ಪ್ರವೇಶವಂತೆ! ಆದ್ರೆ ಭಾರತೀಯರಿಗೆ ನೋ ಎಂಟ್ರಿ

ನಾನು ಅವಳನ್ನು ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್‌ನಲ್ಲಿ ನನ್ನ ಕಾಲೇಜಿನ ಮೊದಲ ದಿನದಂದು ಭೇಟಿಯಾದೆ. ನಾವು ಒಬ್ಬರನ್ನೊಬ್ಬರು ನೋಡಿದ ಕೂಡಲೇ ಇವರು ನನಗೆ ತುಂಬಾ ಬೇಕಾದವರು ಎಂದು ಅನಿಸಲು ಆರಂಭವಾಯಿತು ಮತ್ತು ಮೊದಲ ಸೆಮಿಸ್ಟರ್‌ನ ಅಂತ್ಯದ ವೇಳೆಗೆ ಆ ಹುಡುಗಿ ಕಾಲೇಜ್‌ ಕ್ಯಾಂಪಸ್‌ನಲ್ಲಿ ನನ್ನ ಹತ್ತಿರದ ಸ್ನೇಹಿತರಲ್ಲಿ ಒಬ್ಬಳಾದಳು” ಎಂದು ಲಿಂಕ್ಡ್‌ಇನ್‌ ಪೋಸ್ಟ್‌ನಲ್ಲಿ ವಿವರಿಸಿದ್ದಾರೆ.

ಮತ್ತೆ ತಮ್ಮ ಮಾತು ಮುಂದುವರಿಸುತ್ತಾ “ನಾವಿಬ್ಬರೂ ಸೇರಿ ಬಹಳಷ್ಟು ಕುಡಿದ ಚಹಾಪೇಯಗಳು, ಬಿರಿಯಾನಿಗಳು, ಹಣಕಾಸಿನ ಮಾದರಿಗಳು ಮತ್ತು ಕೇಸ್ ಸ್ಟಡಿ ಸಿದ್ಧತೆಗಳ ಮೂಲಕ, ನಾವು ಒಬ್ಬರಿಗೊಬ್ಬರು ಪರಿಚಯ ಆದೆವು, ಹಾಗೆಯೇ ಉತ್ತಮ ಸ್ನೇಹಿತರು ಆದೆವು. ಸಂಘರ್ಷಣೆಯ ಪಾಕಿಸ್ತಾನಿ ಹಿನ್ನಲೆಯಲ್ಲಿ ಬೆಳೆದ ಅವಳ ಕಥೆಗಳು, ಆದರೆ ಅವಳಿಗೆ ಮತ್ತು ಅವಳ ತಂಗಿಗೆ ರೂಢಿಗಳನ್ನು ಮುರಿಯಲು ಮತ್ತು ಅವರ ಕನಸುಗಳನ್ನು ಬೆನ್ನಟ್ಟಲು ಧೈರ್ಯವನ್ನು ನೀಡಿದ ಪೋಷಕರ ಬಗ್ಗೆ ಎಲ್ಲವೂ ತಿಳಿದುಕೊಂಡೆ. ಅವರ ನಿರ್ಭೀತ ಮಹತ್ವಾಕಾಂಕ್ಷೆಗಳು ಮತ್ತು ದಿಟ್ಟ ಆಯ್ಕೆಗಳ ಕಥೆಗಳು ನನಗೆ ಸಾಕಷ್ಟು ಸ್ಫೂರ್ತಿ ನೀಡಿದೆ” ಎಂದು ಹೇಳಿದ್ದಾರೆ.

ಭಾರತ ಪಾಕಿಸ್ತಾನ ವೈರತ್ವದ ದೇಶಗಳು ಅನ್ನುವುದು ತಪ್ಪು ಕಲ್ಪನೆ 
“ನಮ್ಮೆಲ್ಲರ ವೈಯಕ್ತಿಕ ರಾಷ್ಟ್ರಗಳ ಹೆಮ್ಮೆಯು ಬಲವಾಗಿ ನಿಂತಿದೆ. ಜನರ ಮೇಲಿನ ನಿಮ್ಮ ಪ್ರೀತಿಯು ಭೌಗೋಳಿಕತೆ ಮತ್ತು ಗಡಿಗಳನ್ನು ಮೀರಿದೆ ಎಂದು ನಾನು ಅರಿತುಕೊಂಡೆ. ಜನರು ಮೂಲಭೂತವಾಗಿ ಎಲ್ಲ ಕಡೆ ಒಂದೇ ರೀತಿ ಇರುತ್ತಾರೆ. ಈ "ಬೌಂಡರಿಗಳು, ಗಡಿಗಳು ಮತ್ತು ಸ್ಥಳಗಳು ಮಾನವರಿಂದ ನಿರ್ಮಿಸಲ್ಪಟ್ಟಿವೆ. ಈ ವಿಷಯ ನಮ್ಮ ಬುದ್ದಿಗೆ ಅರ್ಥವಾಗದಿದ್ದರೆ, ಅದನ್ನು ಅರ್ಥಮಾಡಿಕೊಳ್ಳಲು ನಮ್ಮ ಹೃದಯವು ವಿಫಲಗೊಳ್ಳುತ್ತದೆ” ಎಂದು ಹೇಳಿದರು.

ಇದನ್ನೂ ಓದಿ:  ದಿನ ಬೆಳಗಾಗ್ತಿದ್ದಂತೆ ಸ್ಟಾರ್​​ ಆದ ಡೆಲಿವರಿ ಬಾಯ್, ಭೇಟಿಯಾಗುವಂತೆ ಕರೆ ಮಾಡಿದ Dubai ರಾಜಕುಮಾರ!

"#ಹಾರ್ವರ್ಡ್‌ನಲ್ಲಿ ಪ್ರಸಿದ್ಧ ಧ್ವಜ ದಿನದಂದು ನಮ್ಮನ್ನು ನೋಡಿ -ನಮ್ಮ ಧ್ವಜಗಳನ್ನು ಪ್ರದರ್ಶಿಸುತ್ತಾ ಮತ್ತು 'ಅಡೆತಡೆಗಳನ್ನು ಮುರಿಯುವ' ನಿರ್ಧಾರಕ್ಕೆ ಸಂತೋಷದಿಂದ ನಗುತ್ತಾ - ಅಕ್ಷರಶಃ ಭಾರತ ಮತ್ತು ಪಾಕಿಸ್ತಾನದ ನಡುವೆ ಮಾತ್ರ ಈ ಪ್ರೀತಿ ಇರುವುದು ಅಲ್ಲವೇ ಅಲ್ಲ. ಪಾಕಿಸ್ತಾನ ನಮ್ಮ ವೈರತ್ವದ ದೇಶ ಎಂದು ಭಾರತದದವರಲ್ಲಿ, ಭಾರತ ನಮ್ಮ ವೈರತ್ವದ ದೇಶ ಎಂದು ಪಾಕಿಸ್ತಾನಿಗಳಲ್ಲಿ ಮೊದಲಿನಿಂದ ಇರುವ ತಪ್ಪು ತಿಳುವಳಿಕೆ ಆಗಿದೆ. ಆದ್ದರಿಂದ ಭಾರತ ಮತ್ತು ಪಾಕಿಸ್ತಾನದ ಅಸಂಖ್ಯಾತ ಚಿಕ್ಕ ಹುಡುಗಿಯರು ಭಯಭೀತರಾಗಿದ್ದಾರೆ” ಎಂದು ಅವರು ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಸಿಕ್ಕಾಪಟ್ಟೆ ವೈರಲ್ ಆಗತಿದೆ ಇವರ ಈ ಪೋಸ್ಟ್
ಈ ವಿಷಯದ ಕುರಿತು ಮಂಗಳವಾರ ಪೋಸ್ಟ್ ಮಾಡಿದ ನಂತರ, ಇದು 39,000 ಕ್ಕೂ ಹೆಚ್ಚು ಲೈಕ್‌ಗಳು ಮತ್ತು 1,400 ಕ್ಕೂ ಹೆಚ್ಚು ಕಾಮೆಂಟ್‌ಗಳನ್ನು ಸ್ವೀಕರಿಸಿದೆ. "ನಾವು ಪರಸ್ಪರರ ನಡುವೆ ಗೋಡೆಗಳನ್ನು ನಿರ್ಮಿಸಿದ್ದೇವೆ ಮತ್ತು ಆದ್ದರಿಂದ, ಅವುಗಳನ್ನು ಉರುಳಿಸುವುದು ನಮಗೆ ಬಿಟ್ಟದ್ದು" ಎಂದು ಲಿಂಕ್ಡ್‌ಇನ್ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. “ನಿಖರವಾಗಿ, ಮನುಷ್ಯ ಮಾಡಿದ LOC ಯಾದ್ಯಂತ ನಾವು ಒಂದೇ ಜನರು. ಖಂಡಿತವಾಗಿ ನೀವಿಬ್ಬರು ಜೀವನಪರ್ಯಂತ ಸ್ನೇಹವನ್ನು ಹಂಚಿಕೊಳ್ಳುತ್ತೀರಿ. ಅದು ಗಡಿಯ ಸಮಸ್ಯೆಯನ್ನು ಸ್ವಲ್ಪ ಆದರೂ ಬದಲಾವಣೆಗಳನ್ನು ತರಬಹುದು” ಎಂದು ಮತ್ತೊಬ್ಬರು ಬರೆದಿದ್ದಾರೆ.
Published by:Ashwini Prabhu
First published: