Flipkart: ಇಯರ್​​ಫೋನ್ ಆರ್ಡರ್ ಮಾಡಿದ್ರೆ, ಖಾಲಿ ಡಬ್ಬ ಕಳಿಸಿದ ಫ್ಲಿಪ್​​ಕಾರ್ಟ್; ಟಿವಿ ನಟ ಫುಲ್ ಗರಂ

'ಫ್ಲಿಪ್​ಕಾರ್ಟ್​ ನನಗೆ ಖಾಲಿ ಡಬ್ಬ ಕಳಿಸಿದೆ. ದಿನ ಕಳೆದಂತೆ ಫ್ಲಿಪ್ ಕಾರ್ಟ್​​ ತನ್ನ ಗುಣಮಟ್ಟ ಕಳೆದುಕೊಳ್ಳುತ್ತಿದೆ. ಬಹಳ ಬೇಗ ಜನರು ಫ್ಲಿಪ್ ಕಾರ್ಟ್​​ನೊಂದಿಗೆ ವ್ಯವಹರಿಸುವುದನ್ನು ನಿಲ್ಲಿಸಲಿದ್ದಾರೆ' ಎಂದಿದ್ದಾರೆ.

ಇಯರ್​ಫೋನ್ ಬದಲಿಗೆ ಖಾಲಿ ಡಬ್ಬ ಕಳಿಸಿರುವ ಫ್ಲಿಪ್​ಕಾರ್ಟ್

ಇಯರ್​ಫೋನ್ ಬದಲಿಗೆ ಖಾಲಿ ಡಬ್ಬ ಕಳಿಸಿರುವ ಫ್ಲಿಪ್​ಕಾರ್ಟ್

  • Share this:
ಹಿಂದಿಯ ಅನುಪಮಾ ಧಾರಾವಾಹಿ(Bollywood Anupama Serial) ಖ್ಯಾತಿಯ ನಟ ಪರಾಸ್ ಕಲ್ನಾವತ್(Paras Kalnawat) ಅವರು ಫ್ಲಿಪ್​ ಕಾರ್ಟ್(Flipkart)​​ನಲ್ಲಿ ಇಯರ್​​ಪೋನ್(Earphones) ಆರ್ಡರ್ ಮಾಡಿದ್ದಾರೆ. ಆದರೆ ಅವರಿಗೆ ಈ ಕಾಮರ್ಸ್​​ ಕಡೆಯಿಂದ ಖಾಲಿ ಡಬ್ಬ ಬಂದಿದೆ. ಈ ಬಗ್ಗೆ ಪರಾಸ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಇನ್ನೂ ಪರಾಸ್​​ ಅವರು ಟ್ವಿಟ್ಟರ್​ ಮೂಲಕ ಖಾಲಿ ಡಬ್ಬಗಳ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ. ಆ ಮೂಲಕ ಫ್ಲಿಪ್​​ಕಾರ್ಟ್​​ನ ಈ ಕೆಲಸದ ಬಗ್ಗೆ ಗಮನ ಸೆಳೆದಿದ್ದಾರೆ. 'ಹದಗೆಟ್ಟ ಸೇವೆಯ ಗುಣಮಟ್ಟದ ಕಾರಣ ಈ ದೈತ್ಯ ಈ ಕಾಮರ್ಸ್ ಕಂಪನಿ ಹೇಗೆ ತನ್ನ ಒಳ್ಳೆಯ ಹೆಸರನ್ನು ಕಳೆದುಕೊಳ್ಳುತ್ತಿದೆ' ಎಂದು ಶೀರ್ಷಿಕೆ ನೀಡಿದ್ದಾರೆ.

ಪ್ಲಿಫ್​ಕಾರ್ಟ್ ವಿರುದ್ಧ ಆಕ್ರೋಶ

'ಫ್ಲಿಪ್​ಕಾರ್ಟ್​ ನನಗೆ ಖಾಲಿ ಡಬ್ಬ ಕಳಿಸಿದೆ. ದಿನ ಕಳೆದಂತೆ ಫ್ಲಿಪ್ ಕಾರ್ಟ್​​ ತನ್ನ ಗುಣಮಟ್ಟ ಕಳೆದುಕೊಳ್ಳುತ್ತಿದೆ. ಬಹಳ ಬೇಗ ಜನರು ಫ್ಲಿಪ್ ಕಾರ್ಟ್​​ನೊಂದಿಗೆ ವ್ಯವಹರಿಸುವುದನ್ನು ನಿಲ್ಲಿಸಲಿದ್ದಾರೆ' ಎಂದಿದ್ದಾರೆ.

ಕ್ಷಮೆಯಾಚಿಸಿದ ಫ್ಲಿಪ್​ಕಾರ್ಟ್

ಈ ಘಟನೆಯಿಂದ ಕೂಡಲೇ ಎಚ್ಚೆತ್ತ ಫ್ಲಿಪ್​ಕಾರ್ಟ್​​​ ತನ್ನ ಅಧಿಕೃತ ಖಾತೆಯಿಂದ ಉತ್ತರಿಸಿದೆ. 'ನಿಮಗೆ ಆದ ತೊಂದರೆಗೆ ಕ್ಷಮೆ ಯಾಚಿಸುತ್ತೇವೆ. ನಮ್ಮ ಉತ್ಪನ್ನದ ಬಗ್ಗೆಗಿನ ನಿಮ್ಮ ಕಾಳಜಿ ನಮಗೆ ಅರ್ಥವಾಗಿದೆ. ನಾವು ನಿಮಗೆ ಈ ಮೂಲಕ ಸಹಾಯ ಮಾಡುತ್ತೇವೆ. ದಯವಿಟ್ಟು ನಿಮ್ಮ ಆರ್ಡರ್ ಐಡಿಯನ್ನು ಶೇರ್ ಮಾಡಿ. ನಾವು ಅದನ್ನು ಪರಿಶೀಲಿಸಿ ನಿಮಗೆ ಸಹಾಯ ಮಾಡುತ್ತೇವೆ. ನಿಮ್ಮ ಪ್ರತಿಕ್ರಿಯೆ ನಿರೀಕ್ಷೆಯಲ್ಲಿದ್ದೇವೆ' ಎಂದು ತಿಳಿಸಿದೆ.

ಇನ್ನೂ ಪರಾಸ್​ ಅವರ ಪೋಸ್ಟ್​​ಗೆ ಉತ್ತರಿಸುವ ಮೂಲಕ ನೆಟ್ಟಿಗರು ಫ್ಲಿಪ್​ಕಾರ್ಟ್​​ನಿಂದ ತಮಗೆ ಆದ ತೊಂದರೆಯ ಬಗ್ಗೆ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:Life After Death: ಅಕಾಲಿಕ ಮರಣ ಹೊಂದಿದವರು ಭೂತ-ಪ್ರೇತಗಳಾಗುತ್ತಾರಾ? ಸಾವಿನ ಬಳಿಕವೂ ಜೀವನ ಇದೆಯಾ? ಉತ್ತರ ಇಲ್ಲಿದೆ

ಫ್ಲಿಪ್​ಕಾರ್ಟ್​​ನಿಂದ ನೆಟ್ಟಿಗರಿಗೆ ಆದ ಅನುಭವಗಳು

'ನಾನು ನಾಲ್ಕು ಸಿಸ್ಕಾ ಲೆಡ್ ಬಲ್ಬ್‌ಗಳ ಸೆಟ್ ಅನ್ನು ಆರ್ಡರ್ ಮಾಡಿದೆ, ಆದರೆ ಅವುಗಳಲ್ಲಿ ಒಂದು ಕವರ್ ಕಾಣೆಯಾಗಿದೆ. ನನಗೆ ಹಣವನ್ನು ಮರುಪಾವತಿ ಮಾಡಲಾಯ್ತು ಆದರೆ ಫ್ಲಿಪ್‌ಕಾರ್ಟ್ ಗ್ರಾಹಕರ ನಂಬಿಕೆಯನ್ನು ಕಳೆದುಕೊಳ್ಳುತ್ತಿದೆ' ಎಂದು ಪ್ರೀತಿ ಪಟೇಲ್ ಎನ್ನುವವರು ಕಮೆಂಟಿಸಿದ್ದಾರೆ.

'ನಾನು ಫ್ಲಿಪ್‌ಕಾರ್ಟ್‌ನಿಂದ ಫೋನ್ ಆರ್ಡರ್ ಮಾಡಿದೆ ಮತ್ತು ಖಾಲಿ ಬಾಕ್ಸ್ ಅನ್ನು ಸ್ವೀಕರಿಸಿದೆ. ನನ್ನ ಹಣವನ್ನು ಮರಳಿ ಪಡೆಯಲು ನಾನು ಎಲ್ಲಾ ರೀತಿ ಪ್ರಯತ್ನಿಸಿದೆ, ಆದರೆ ಫ್ಲಿಪ್‌ಕಾರ್ಟ್ ಇನ್ನೂ ಪ್ರತಿಕ್ರಿಯಿಸಿಲ್ಲ. ಈ ಸಮಸ್ಯೆಯನ್ನು ವರದಿ ಮಾಡಲು ನಾವು ಪ್ರತಿನಿತ್ಯ ಗ್ರಾಹಕ ಸೇವೆಗೆ ಕರೆ ಮಾಡಿದರೂ, ಅವರು ನನ್ನ ಎಲ್ಲಾ ಫೋನ್ ಸಂಖ್ಯೆಗಳನ್ನು ನಿಷೇಧಿಸುತ್ತಿದ್ದಾರೆ. ಪ್ಲಿಪ್ ಕಾರ್ಟ್​​ನಿಂದ ಏನನ್ನೂ ಖರೀದಿಸಬೇಡಿ' ಎಂದು ರವಿ ಕುಮಾರ್ ಎನ್ನುವವರು ಬರೆದಿದ್ದಾರೆ.

'ನಾನು ಎರಡು ವಿಎಲ್‌ಸಿಸಿ ಫೇಸ್ ವಾಶ್ ಅನ್ನು ಆರ್ಡರ್ ಮಾಡಿದರೇ ಸ್ಯಾವ್ಲಾನ್ ಸೋಂಕುನಿವಾರಕ ಸ್ಪ್ರೇ ಬಂದಿತ್ತು. ಅದನ್ನು ಮರಳಿಸಿದೆ, ಈಗ ಆಟಿಕೆಗಳನ್ನು ಕಳಿಸಿದ್ದಾರೆ. ನನಗನ್ನಿಸುತ್ತೆ ಫ್ಲಿಪ್​ಕಾರ್ಟ್​​ನ ಮಾರಾಟಗಾರರು ಹುಚ್ಚರಾಗಿದ್ದಾರೆ' ಎಂದು ವ್ಯಾಪಾರಿಯ ಫೋನ್ ನಂಬರ್ ಮತ್ತು ಪೋಟೋವನ್ನು ಅಪ್​ಲೋಡ್ ಮಾಡಿದ್ದಾರೆ ಬಿಸ್ವರಂಜನ್ ಮುದುಲಿ

ಈ ಕಾಮರ್ಸ್​​ಗಳಲ್ಲಿ ಗ್ಯಾಜೆಟ್​ಗಳನ್ನು ಆರ್ಡರ್​ ಮಾಡಿದಾಗ ಈ ರೀತಿಯಾದ ವಿತರಣಾ ದೋಷ ಸಂಭವಿಸುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಗ್ರಾಹಕರು ಇಟ್ಟಿಗೆ, ಸೋಪು, ಸೇಬು ಮತ್ತು ಇನ್ನಿತರ ತಪ್ಪು ತಪ್ಪಾದ ಆರ್ಡರ್ ಸ್ವೀಕರಿಸಿ ಹಣ್ಣಾಗಿದ್ದಾರೆ.
Published by:Latha CG
First published: