Sleep In Office: ಆಫೀಸ್​ಗೆ ಬಂದು ಅರ್ಧ ಗಂಟೆ ಮಲಗಿದ್ದಕ್ಕೂ ಸಂಬಳ ಕೊಡುತ್ತೆ ಈ ಕಂಪನಿ!

ಕಂಪೆನಿಯೊಂದು ಕೆಲಸದಲ್ಲಿ 30 ನಿಮಿಷಗಳ ಅಧಿಕೃತ ನಿದ್ರೆಯ ಸಮಯವನ್ನು ಪ್ರಕಟಿಸಿದೆ. ಕೆಲಸದಲ್ಲಿ 30 ನಿಮಿಷಗಳ ಅಧಿಕೃತ ನಿದ್ದೆ ಸಮಯವನ್ನು ಬೆಂಗಳೂರು ಸ್ಟಾರ್ಟ್ಅಪ್ (Startup) ಪ್ರಕಟಿಸಿದೆ. ಉದ್ಯೋಗಿಗಳಿಗೆ ಉತ್ತಮ ನಿದ್ದೆ ಪಾಡ್‌ಗಳು ಮತ್ತು ಕೊಠಡಿಗಳನ್ನು ರೂಪಿಸುತ್ತಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಆಫೀಸ್​ಗಳು ಇತ್ತೀಚೆಗೆ ಉದ್ಯೋಗಿಗಳಿಗಾಗಿ ಬಹಳಷ್ಟು ಆಫರ್​ಗಳನ್ನು (Offers) ಕೊಡುತ್ತಿದೆ. ಸುಮಾರು 2 ವರ್ಷಗಳ ಕಾಲ ಮನೆಯಲ್ಲೇ ಕೆಲಸ (Work) ಮಾಡಿದ ಜನರು ಈಗ ಆಫೀಸಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಇನ್ನೂ ಬಹಳಷ್ಟು ಕಡೆ ಕಂಪನಿಗಳ ನಿಯಮಗಳಲ್ಲಿ ಬಹಳಷ್ಟು ಬದಲಾವಣೆಗಳೂ ಆಗಿವೆ. ಇದೀಗ ಇಲ್ಲೊಂದು ಆಫೀಸ್ ತನ್ನ ಉದ್ಯೋಗಿಗಳಿಗೆ ಮಲಗಿದ್ದಕ್ಕೂ (Sleep) ಸಂಬಳ (Salary) ಕೊಡೋಕೆ ಮುಂದಾಗಿದೆ. ಹೌದು, ಆಫೀಸಿಗೆ ಬಂದು 30 ನಿಮಿಷ ನಿದ್ದೆ ಮಾಡೋ ಅವಕಾಶವನ್ನು ಕಂಪನಿ ಕೊಟ್ಟಿದೆ. ಈ ಸುದ್ದಿ ಈಗ ಎಲ್ಲೆಡೆ ವೈರಲ್ (Viral) ಆಗಿದ್ದು ಏನಿದರ ವಿಶೇಷತೆ ಎನ್ನುವುದನ್ನು ಇಲ್ಲಿ ನೋಡೋಣ.

ಬೆಂಗಳೂರಿನ ಕಂಪೆನಿಯೊಂದು ಕೆಲಸದಲ್ಲಿ 30 ನಿಮಿಷಗಳ ಅಧಿಕೃತ ನಿದ್ರೆಯ ಸಮಯವನ್ನು ಪ್ರಕಟಿಸಿದೆ. ಕೆಲಸದಲ್ಲಿ 30 ನಿಮಿಷಗಳ ಅಧಿಕೃತ ನಿದ್ದೆ ಸಮಯವನ್ನು ಬೆಂಗಳೂರು ಸ್ಟಾರ್ಟ್ಅಪ್ (Startup) ಪ್ರಕಟಿಸಿದೆ. ಉದ್ಯೋಗಿಗಳಿಗೆ ಉತ್ತಮ ನಿದ್ದೆ ಪಾಡ್‌ಗಳು ಮತ್ತು ಕೊಠಡಿಗಳನ್ನು ರೂಪಿಸುತ್ತಿದೆ.

30 ನಿಮಿಷಗಳ ಅಧಿಕೃತ ನಿದ್ರೆಯ ಸಮಯ

ಬೆಂಗಳೂರಿನ ಸ್ಟಾರ್ಟ್‌ಅಪ್‌ ವೊಂದು ಉದ್ಯೋಗಿಗಳಿಗೆ ನಿದ್ರೆ ಮಾಡಲು ಸಮಯವನ್ನು ನಿಗದಿಪಡಿಸಿದ್ದು, ಎಲ್ಲರಿಗೂ ನಿದ್ರೆ ಮಾಡುವ ಹಕ್ಕು ಇದೆ ಎಂದು ಘೋಷಿಸಿ ಇಮೇಲ್‌ನಲ್ಲಿ ವಿಚಾರ ತಿಳಿಸಿದೆ. ವೇಕ್‌ಫಿಟ್ ಸಹ-ಸಂಸ್ಥಾಪಕ ಚೈತನ್ಯ ರಾಮಲಿಂಗೇಗೌಡ ತನ್ನ ಉದ್ಯೋಗಿಗಳಿಗೆ ಕೆಲಸದ ಸಮಯದಲ್ಲಿ 30 ನಿಮಿಷಗಳ ಅಧಿಕೃತ ನಿದ್ರೆಯ ಸಮಯವನ್ನು ಘೋಷಿಸಿದ್ದಾರೆ.

ಮಧ್ಯಾಹ್ನದ ಚಿಕ್ಕ ನಿದ್ರೆ ಅವಶ್ಯಕ

ಇಮೇಲ್‌ನಲ್ಲಿ ರಾಮಲಿಂಗೇಗೌಡ ಅವರು ಹೀಗೆ ಬರೆದಿದ್ದಾರೆ, 'ನಾವು ಆರು ವರ್ಷಗಳಿಂದ ವ್ಯವಹಾರದಲ್ಲಿದ್ದೇವೆ. ಆದರೆ ವಿಶ್ರಾಂತಿಯ ನಿರ್ಣಾಯಕ ಅಂಶವಾದ ಮಧ್ಯಾಹ್ನದ ನಿದ್ದೆಯನ್ನೇ ಮಾಡಲು ನನಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಉದ್ಯೋಗಿಗಳ ಕಷ್ಟ ನನಗೆ ತಿಳಿದಿದೆ. ಹೀಗಾಗಿ ನಾನು ಚಿಕ್ಕನಿದ್ರೆಯನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಉದ್ಯೋಗಿಗಳಿಗೆ ಕೆಲಸದ ಸಮಯದಲ್ಲಿ ನಿದ್ದೆ ಮಾಡಲು ನ್ಯಾಪ್ ಬ್ರೇಕ್‌ ನೀಡುತ್ತೇವೆ' ಎಂದಿದ್ದಾರೆ.

ಇದನ್ನೂ ಓದಿ: Successful Farmer: ಬರಡು ಭೂಮಿಯಲ್ಲಿ ಛಲ ಬಿಡದ ರೈತ! 10 ಕೋಟಿ ಲೀಟರ್ ಹಿಡಿಯುವ ಬಾವಿ, ಒಣಗಿದ್ದ ನೆಲದಲ್ಲಿ ಈಗ ತಿಳಿನೀರು

ಕಾರ್ಯಕ್ಷಮತೆ ಹೆಚ್ಚಿಸುವ ನಿದ್ದೆ

ನಾಸಾದ ಅಧ್ಯಯನದ ಪ್ರಕಾರ, 26 ನಿಮಿಷಗಳ ಕ್ಯಾಟ್‌ನ್ಯಾಪ್ ಕಾರ್ಯಕ್ಷಮತೆಯನ್ನು ಶೇಕಡಾ 33ರಷ್ಟು ಹೆಚ್ಚಿಸಬಹುದು. ಹಾರ್ವರ್ಡ್ ಅಧ್ಯಯನವು ನಿದ್ದೆಯು ಆಯಾಸವನ್ನು ಹೇಗೆ ಬಗೆಹರಿಸಿದೆ ಎಂಬುದನ್ನು ತೋರಿಸಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ: Cafe: ಈ ಕೆಫೆಯ ಸಿಬ್ಬಂದಿಗೆ ಕಿವಿಯೂ ಕೇಳಿಸಲ್ಲ, ಮಾತೂ ಬರಲ್ಲ! ಆದರೂ ಬ್ಯುಸಿನೆಸ್ ಸೂಪರ್

ನಾವು ಕೆಲಸದಲ್ಲಿ ಮಧ್ಯಾಹ್ನದ ನಿದ್ರೆಯನ್ನು ಸಾಮಾನ್ಯಗೊಳಿಸಲು ನಿರ್ಧರಿಸಿದ್ದೇವೆ ಮತ್ತು ನಮ್ಮ ಎಲ್ಲಾ ಉದ್ಯೋಗಿಗಳಿಗೆ 2 ರಿಂದ 2:30 ರವರೆಗೆ ಅಧಿಕೃತ ನಿದ್ರೆಯ ಸಮಯ ಎಂದು ಘೋಷಿಸಿದ್ದೇವೆ. ಇನ್ನು ಮುಂದೆ, ನೀವು 2 ರಿಂದ 2:30 ರವರೆಗೆ ಕೆಲಸ ಮಾಡದೆ ನಿದ್ದೆ ಮಾಡುವ ಹಕ್ಕನ್ನು ಹೊಂದಿರುತ್ತೀರಿ ಎಂದು ಇಮೇಲ್ ನಲ್ಲಿ ವೇಕ್‌ಫಿಟ್ ಸಹ-ಸಂಸ್ಥಾಪಕ ಚೈತನ್ಯ ರಾಮಲಿಂಗೇಗೌಡ ಮಾಹಿತಿ ನೀಡಿದ್ದಾರೆ.

ಗುಣಮಟ್ಟದ ಕೆಲಸದ ಅವಧಿ

ವೇಕ್‌ಫಿಟ್ ತನ್ನ ಉದ್ಯೋಗಿಗಳಿಗೆ ಪರಿಪೂರ್ಣ ನಿದ್ರೆಯ ವಾತಾವರಣವನ್ನು ನಿರ್ಮಿಸಲು ಕಚೇರಿಯಲ್ಲಿ ಸ್ನೇಹಶೀಲ ಚಿಕ್ಕನಿದ್ರೆ ಪಾಡ್‌ಗಳು ಮತ್ತು ಸ್ತಬ್ಧ ಕೊಠಡಿಗಳನ್ನು ರಚಿಸಲು ಕೆಲಸ ಮಾಡುತ್ತಿದೆ. ಈ ಅರ್ಧ ಗಂಟೆಯ NAP ಒಂದು ದಿನವನ್ನು ಎರಡು ಗುಣಮಟ್ಟದ ಕೆಲಸದ ಅವಧಿಗಳಾಗಿ ಪರಿವರ್ತಿಸುತ್ತದೆ. ನೀವು ಮಾರುಕಟ್ಟೆಯಲ್ಲಿ ಹೊಸ ಟ್ರೆಂಡ್‌ಗಳನ್ನು ಹೊಂದಿಸಲಿದ್ದೀರಿ. ಅದನ್ನು ಮುಂದುವರಿಸಿ ಎಂದು ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.

ನೀವು ಕಾರ್ಪೊರೇಟ್ ಸಂಸ್ಕೃತಿ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಸಂಪೂರ್ಣ ಪ್ರಕ್ರಿಯೆಯನ್ನು ಮರುರೂಪಿಸಲಿದ್ದೀರಿ, ಇದು ಗೇಮ್ ಚೇಂಜರ್ ನಿರ್ಧಾರ. ಇದರಿಂದ ಕೆಲಸದಲ್ಲಿ ಕಾರ್ಯಕ್ಷಮತೆ ಇನ್ನಷ್ಟು ಹೆಚ್ಚುತ್ತದೆ ಎಂಬುದನ್ನು ನಾನು ನಂಬುತ್ತೇನೆ ಎಂದು ಸಂಸ್ಥೆಯ ಮುಖ್ಯಸ್ಥ ರಾಮಲಿಂಗೇಗೌಡ ತಿಳಿಸಿದ್ದಾರೆ.
Published by:Divya D
First published: