Brimato: ಒಂದೇ ಗಿಡದಲ್ಲಿ ಟೊಮ್ಯಾಟೋ ಮತ್ತು ಬದನೆಕಾಯಿ; ಈ ಹೈಬ್ರಿಡ್ ಬೆಳೆಯನ್ನು ಎಲ್ರೂ ಬೆಳೆಯಬಹುದಾ?

ದಿ ಪ್ರಿಂಟ್ ಪ್ರಕಾರ, ಬದನೆ ಮೊಳಕೆಗಳಿಗೆ ಸುಮಾರು 25 ದಿನಗಳಿದ್ದಾಗ ಮತ್ತು ಟೊಮ್ಯಾಟೋ ಮೊಳಕೆಗಳಿಗೆ 22 ದಿನಗಳಿದ್ದಾಗ ಈ ಬ್ರಿಮ್ಯಾಟೋ ಕಸಿ ಮಾಡುವಿಕೆಯ ಪ್ರಕ್ರಿಯೆ ಕೈಗೊಳ್ಳಲಾಯಿತು.

ಒಂದೇ ಗಿಡದಲ್ಲಿ ಟೊಮ್ಯಾಟೊ-ಬದನೆಕಾಯಿ

ಒಂದೇ ಗಿಡದಲ್ಲಿ ಟೊಮ್ಯಾಟೊ-ಬದನೆಕಾಯಿ

  • Share this:
ಎರಡು ತರಕಾರಿಗಳ ಬೆಳವಣಿಗೆಯ ಪ್ರಕ್ರಿಯೆಗಳನ್ನು ಒಗ್ಗೂಡಿಸುವ ಬಗ್ಗೆ ಎಂದಾದರೂ ಯೋಚಿಸಿದ್ದೀರಾ? ಅಂದರೆ, ಎರಡು ತರಕಾರಿಗಳನ್ನು ಏಕಕಾಲದಲ್ಲಿ ನೀಡಬಲ್ಲ ಗಿಡ ಇರಬಹುದೇ? ಖಂಡಿತಾ ಇದೆ, ಅದುವೇ “ಬ್ರಿಮ್ಯಾಟೋ” ! ವಾರಣಾಸಿಯ ವಿಜ್ಞಾನಿಗಳ ಹೊಸ ಪ್ರಯೋಗವಿದು. ಅಲ್ಲಿನ ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರ್ ರಿಸರ್ಚ್(Indian Council of Agriculture Research) (ICAR-IIVR) ವಿಜ್ಞಾನಿಗಳು ಬದನೆ(Brinjal) ಮತ್ತು ಟೊಮ್ಯಾಟೋ(Tomato) ಎರಡನ್ನೂ ನೀಡುವ ಸಾಮರ್ಥ್ಯ ಇರುವ ಸಸ್ಯಗಳನ್ನು ಬೆಳೆಸುವ ಹೊಸ ತಂತ್ರ ಕಂಡು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಒಂದೇ ಗಿಡದಲ್ಲಿ ಟೊಮ್ಯಾಟೋ ಮತ್ತು ಬದನೇಕಾಯಿ ಬೆಳೆಯುವ ಹೊಸ ಪ್ರಯೋಗವೇ “ಬ್ರಿಮ್ಯಾಟೋ''(Brimato).

ಈಗಲೇ ತಲೆ ಕೆಡಿಸಿಕೊಳ್ಳಬೇಡಿ. ಯಾಕೆಂದರೆ ಈ ತರಕಾರಿಗಳು ಕಮಟು ರುಚಿಯ ಹೈಬ್ರಿಡ್ ತರಕಾರಿಗಳ ಆವೃತ್ತಿಯಾಗಿ ಬೆಳೆಯುವುದಿಲ್ಲ, ಬದಲಿಗೆ ಪ್ರತ್ಯೇಕ ತರಕಾರಿಗಳಾಗಿ ಅವುಗಳ ಮೂಲ ಗುಣ ಲಕ್ಷಣಗಳನ್ನು ಉಳಿಸಿಕೊಂಡಿರುತ್ತವೆ.

ಬ್ರಿಮ್ಯಾಟೋ : ಪರಿಣಾಮಕಾರಿ ಹೈಬ್ರಿಡ್

ಪ್ರತೀ “ಬ್ರಿಮ್ಯಾಟೋ” ಗಿಡ 2.3 ಕೆಜಿ ಟೊಮ್ಯಾಟೋಗಳು ಮತ್ತು 3.4 ಕೆಜಿ ಬದನೇಕಾಯಿಗಳನ್ನು ನೀಡಬಲ್ಲದು. ಎರಡು ಕಸಿಗಳನ್ನು ಮಾಡುವ ಮೂಲಕ ಬ್ರಿಮ್ಯಾಟೋ ಗಿಡವನ್ನು ಅಭಿವೃದ್ಧಿಪಡಿಸಲಾಗಿದೆ. ಪ್ರಕ್ರಿಯೆಯಲ್ಲಿ ಒಂದೇ ಸಸ್ಯ ಕುಟುಂಬಕ್ಕೆ ಸೇರಿದ ಎರಡು ಅಥವಾ ಹೆಚ್ಚು “ಕಸಿ ಕುಡಿಗಳನ್ನು” “ಬ್ರಿಮ್ಯಾಟೋ”ದ ಪರಿಣಾಮವನ್ನು ಹೊರಹೊಮ್ಮಿಸಲು ಒಟ್ಟಿಗೆ ಕಸಿ ಮಾಡಲಾಗುತ್ತದೆ.

ಇದನ್ನೂ ಓದಿ:Shocking News: ಕಿವಿಯಲ್ಲಿ ಬಲೆ ಕಟ್ಟಿದ್ದ ಜೇಡ, ಒಳಗಿದ್ದ ಕೀಟದ ಸಂಸಾರ ನೋಡಿ ಡಾಕ್ಟರ್ ಶಾಕ್!

ಬ್ರಿಮ್ಯಾಟೋ ಬೆಳೆಯುವುದು ಹೇಗೆ?

ಕಸಿ ಮಾಡುವುದು ಎಂದರೆ, ವಿವಿಧ ರೀತಿಯ ಸಸ್ಯಗಳನ್ನು ಸೇರಿಸಲು, ಸಸ್ಯದ ಒಂದು ಭಾಗವನ್ನು ಶಾಖೆ , ಬೇರು ಅಥವಾ ಕಾಂಡದ ಒಳಗೆ ಇರಿಸುವ ಮೂಲಕ ಸಸ್ಯ ಅಂಗಾಂಶವನ್ನು ಪುನರುತ್ಪಾದಿಸುವ ಪ್ರಕ್ರಿಯೆ. “ಬ್ರಿಮ್ಯಾಟೋ” ಕಸಿ ಪ್ರಕ್ರಿಯೆಯಲ್ಲಿ ಇರುವ , ಮೂಲ ಸಸ್ಯಗಳು “ಕಾಶಿ ಸಂದೇಶ್” (ಬದನೆ ) ಮತ್ತು “ಕಾಶಿ ಅಮನ್” (ಟೊಮ್ಯಾಟೋ). ಅವನ್ನು ಐಸಿ 111056 ಎಂದು ಅಧಿಕೃತವಾಗಿ ಕರೆಯಲ್ಪಡುವ ಬದನೆಕಾಯಿ ಬೇರು ಕಾಂಡಕ್ಕೆ ಕಸಿ ಮಾಡಲಾಗಿದೆ.

ದಿ ಪ್ರಿಂಟ್ ಪ್ರಕಾರ, ಬದನೆ ಮೊಳಕೆಗಳಿಗೆ ಸುಮಾರು 25 ದಿನಗಳಿದ್ದಾಗ ಮತ್ತು ಟೊಮ್ಯಾಟೋ ಮೊಳಕೆಗಳಿಗೆ 22 ದಿನಗಳಿದ್ದಾಗ ಈ ಬ್ರಿಮ್ಯಾಟೋ ಕಸಿ ಮಾಡುವಿಕೆಯ ಪ್ರಕ್ರಿಯೆ ಕೈಗೊಳ್ಳಲಾಯಿತು.

ಎಲ್ಲಿ ಬೆಳೆಯುವುದು?

ಸ್ವಾಭಾವಿಕವಾಗಿ, ಸಸ್ಯಗಳನ್ನು ನೇರವಾಗಿ ಹೊಲದಲ್ಲಿ ಬೆಳೆಸಲಾಗುವುದಿಲ್ಲ. ತಾಪಮಾನ, ಆದ್ರತೆ ಮತ್ತು ಬೆಳಕಿನಂತಹ ನೈಜ-ಸಮಯದ ಪರಿಸ್ಥಿತಿಗಳನ್ನು ಎಚ್ಚರಿಕೆಯಿಂದ ನಿಯಂತ್ರಿಸಿದ ನಂತರ, ಸಸ್ಯಗಳನ್ನು ಒಂದು ವಾರದವರೆಗೆ ಅವಲೋಕಿಸಲಾಯಿತು. ಅದಾಗಿ, 15 ದಿನಗಳ ಬಳಿಕ, ಸಸ್ಯಗಳನ್ನು ಹೊಲಕ್ಕೆ ಸ್ಥಳಾಂತರಿಸಲಾಯಿತು.
“ಬ್ರಿಮ್ಯಾಟೋ ಗಿಡವನ್ನು ಕೇವಲ 10 -11 ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಬಹುದು” ಎಂದು ವಾರಾಣಾಸಿಯ ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕ್ಚರ್ ರಿಸರ್ಚ್‍ನ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವೆಜಿಟೇಬಲ್ ರಿಸರ್ಚ್‍ನ ನಿರ್ದೇಶಕ ಡಾ. ಟಿ .ಕೆ.ಬೆಹರಾ ದಿ ಪ್ರಿಂಟ್‍ಗೆ ಹೇಳಿದ್ದಾರೆ.

ಇದನ್ನೂ ಓದಿ:Explained: ಹಿಮಕರಡಿಗಳು ಶಾಶ್ವತವಾಗಿ ನಾಶವಾಗುತ್ತವಾ? ಆರ್ಕ್ಟಿಕ್​​​ನ ಮಂಜುಗಡ್ಡೆಗಳೆಲ್ಲಾ ಕರಗಿ ಹೋಗುತ್ತಿವೆ!

ಬ್ರಿಮ್ಯಾಟೋಯಿಂದ ಉಪಯೋಗ ಏನು?

ಜನದಟ್ಟಣೆಯ ನಗರಗಳಲ್ಲಿ ಅನೇಕ ತರಕಾರಿಗಳ ಏಕಕಾಲಿಕ ಬೆಳವಣಿಗೆಯನ್ನು ಸುಗಮಗೊಳಿಸುವ ನಿಟ್ಟಿನಲ್ಲಿ, “ಬ್ರಿಮ್ಯಾಟೋ’ ಒಂದು ಪ್ರಮುಖ ವೈಜ್ಞಾನಿಕ ಸಾಧನೆಯನ್ನು ಗುರುತಿಸುತ್ತದೆ. ಅದಲ್ಲದೆ, ಎರಡು ತರಕಾರಿಗಳನ್ನು ಬೆಳೆಯುವ ಸಾಮರ್ಥ್ಯ ಹೊಂದಿರುವ ಹೈಬ್ರಿಡ್ ಸಸ್ಯದಿಂದಾಗಿ, ನೀರಿನ ಅಗತ್ಯತೆ ಮತ್ತು ತರಕಾರಿಗಳನ್ನು ಬೆಳೆಯಲು ಅಗತ್ಯವಿರುವ ಕಾರ್ಮಿಕರ ಕುರಿತ ಒತ್ತಡ ಕಡಿಮೆ ಮಾಡುತ್ತದೆ.
Published by:Latha CG
First published: