Royal Family: ಕಡು ಬಡತನದಲ್ಲಿ ಬದುಕುತ್ತಿರುವ 8 ಭಾರತೀಯ ರಾಜವಂಶಸ್ಥರು ಇವರು..!

Fact: ಒತ್ತಾಯಪೂರ್ವಕವಾಗಿ ತಮ್ಮ ಅರಮನೆಯನ್ನು ಮಾರಬೇಕಾಗಿ ಬಂದ ಅವರು, ಎಲ್ಲಾ ಸಂಪತ್ತನ್ನು ಕಳೆದುಕೊಂಡು ಗ್ರಾಮಸ್ಥರ ಹಂಗಿನಲ್ಲಿ ಬದುಕುತ್ತಿದ್ದಾರೆ. ಒಡಿಶಾದ ಕೊನೆಯ ಮಾಜಿ ರಾಜ ಇವರು. ಹಿಂದೊಮ್ಮೆ 25 ಐಷಾರಾಮಿ ಕಾರುಗಳನ್ನು ಹೊಂದಿದ್ದ ಅವರು, 30 ಜನ ಸೇವಕರೊಂದಿಗೆ ಅರಮನೆಯಲ್ಲಿ ಬಾಳಿದವರು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಸ್ವಾತಂತ್ರ್ಯ ಪೂರ್ವದಲ್ಲಿ (Independence) ವೈಭವದ ಜೀವನದ ನಡೆಸಿದ್ದ, ಭಾರತದ (India)  ಎಲ್ಲಾ 500 ಕ್ಕೂ ಹೆಚ್ಚು ರಾಜ ಕುಟುಂಬಗಳ ಆಡಂಬರದ ಬದುಕು ಈಗ ಇತಿಹಾಸ (History) ಮಾತ್ರ. ಸ್ವಾತಂತ್ರ್ಯ ಬಂದ ಬಳಿಕ, ವಿವಿಧ ರಾಜಮನೆತನದವರು (Royal Family), ಎಷ್ಟೋ ಜನ ಮಹಾರಾಜರು, ಮಹಾರಾಣಿಯರು (Queen), ನವಾಬರು, ಬೇಗಂಗಳು, ನಿಜಾಮರು, ರಾಜಕುಮಾರರು ಮತ್ತು ರಾಜಕುಮಾರಿಯರು, ತಮ್ಮ ಅಧಿಕಾರವನ್ನು ಮತ್ತು ಭೂಮಿಯನ್ನು ಸರಕಾರದ ವಶಕ್ಕೆ ನೀಡಬೇಕಾಗಿ ಬಂತು. ಆರಂಭದಲ್ಲಿ ಅವರಿಗೆ ಪ್ರೈವಿ ಪರ್ಸ್‌ ಹೆಸರಲ್ಲಿ ರಾಯಧನ ನೀಡಲಾಗುತ್ತಿತ್ತು. ಬಳಿಕ ಅದನ್ನು ಕೂಡ ರದ್ದು ಮಾಡಲಾಯಿತು. ರಾಜವಂಶಸ್ಥರಲ್ಲಿ ಕೆಲವರು, ತಮಗೆ ನೀಡಲಾಗುತ್ತಿದ್ದ ಖಾಸಗಿ ಗೌರವಧನವನ್ನು ರದ್ದು ಮಾಡಿದ ಬಳಿಕ, ಇಂದಿಗೂ ಯಾವುದೇ ಪರಿಹಾರವನ್ನು ಪಡೆಯದೆ ಬದುಕುತ್ತಿದ್ದಾರೆ. ಸ್ವಾತಂತ್ರ್ಯಾ ನಂತರ ಅಧಿಕಾರ ಮತ್ತು ಒಂದಿಷ್ಟು ಸಂಪತ್ತು ಕಳೆದುಕೊಂಡ ರಾಜ ವಂಶಸ್ಥರಲ್ಲಿ ಕೆಲವು ಸಫಲ ಉದ್ಯಮಿಗಳು ಮತ್ತು ರಾಜಕಾರಣಿಗಳಾಗುವಲ್ಲಿ ಯಶಸ್ವಿ ಆಗಿದ್ದಾರೆ. ಉಳಿದವರು ತಮ್ಮ ಅಳಿದುಳಿದ ಆಭರಣಗಳನ್ನು ಮಾರಿ, ನಾನಾ ರೀತಿಯ ಕೆಲಸಗಳನ್ನು ನಿರ್ವಹಿಸುತ್ತಾ, ಅತ್ಯಂತ ಬಡತನದಲ್ಲಿ ಜೀವನ ನಡೆಸುತ್ತಿದ್ದಾರೆ. ಅಂತಹ ಕೆಲವು ರಾಜವಂಶಸ್ಥರ ಕುರಿತ ಮಾಹಿತಿ ಇಲ್ಲಿದೆ.

1. ಓಸ್ಮಾನ್ ಅಲಿ ಖಾನ್ , ಹೈದರಾಬಾದಿನ ಕೊನೆಯ ನಿಜಾಮ
ಒಂದಾನೊಂದು ಕಾಲದಲ್ಲಿ ವಿಶ್ವದ ಆಗರ್ಭ ಶ್ರೀಮಂತನಾಗಿದ್ದ ಓಸ್ಮಾನ್ ಅಲಿ ಖಾನನ ವಂಶಸ್ಥರು, ಆಗಿನ ಅವನ ಸಂಪತ್ತಿನ ಒಂದು ಭಾಗಕ್ಕಿಂತಲೂ ಅತ್ಯಂತ ಕಡಿಮೆ ಆಸ್ತಿಯಲ್ಲಿ ಜೀವಿಸುತ್ತಿದ್ದಾರೆ. 20ನೇ ಶತಮಾನದ ಆರಂಭದಲ್ಲಿ ಅವರಲ್ಲಿ , ಸುಮಾರು 100 ಮಿಲಿಯನ್ ಪೌಂಡ್ ಚಿನ್ನ ಮತ್ತು ಬೆಳ್ಳಿಯ ಗಟ್ಟಿಗಳಿದ್ದವು. ಜೊತೆಗೆ 400 ಮಿಲಿಯನ್ ಪೌಂಡ್ ಆಭರಣಗಳಿದ್ದವು. ಅವರು 200 ಮಿಲಿಯನ್ ಡಾಲರ್ ಬೆಲೆ 185 ಕ್ಯಾರೆಟ್‍ನ ವಜ್ರವೊಂದನ್ನು ಪೇಪರ್‌ವೇಯ್ಟ್‌ ಆಗಿ ಬಳಸುತ್ತಿದ್ದರಂತೆ. ಅವರ ಬಳಿ ಇದ್ದ ಮುತ್ತುಗಳಿಗಂತೂ ಲೆಕ್ಕವೇ ಇರಲಿಲ್ಲ. ತನ್ನ ಅಂತಪುರಃದಲ್ಲಿ 86 ಮಂದಿ ಪ್ರೇಯಸಿಯರನ್ನು ಇಟ್ಟುಕೊಂಡಿದ್ದ ಅವರಿಗೆ ಅವರಿಂದ ಬಹಳಷ್ಟು ಮಕ್ಕಳನ್ನು ಪಡೆದಿದ್ದ, ಕಾನೂನು ಬಾಹಿರವಾಗಿ 100ಕ್ಕೂ ಹೆಚ್ಚು ಮಕ್ಕಳನ್ನು ಹೊಂದಿದ್ದರು. ಈ ಕಾರಣದಿಂದಾಗಿ 1990 ರ ಹೊತ್ತಿಗೆ ಅವರ ಸಂಪತ್ತಿಗೆ 400 ಮಂದಿ ಉತ್ತರಾಧಿಕಾರಿಗಳು ಹುಟ್ಟಿಕೊಂಡಿದ್ದರು. ನಿಜಾಮನ ಅಂತಹ ದುರಾದೃಷ್ಟಕರ ವಂಶಸ್ಥರಲ್ಲಿ ಒಬ್ಬರಾಗಿರುವ ಮುಕರಮ್ ಜಾಹ್, ಇಸ್ತಾಂಬುಲ್‍ನ ಚಿಕ್ಕ ಅಪಾರ್ಟ್‍ಮೆಂಟ್‍ನಲ್ಲಿ ಬದುಕುತ್ತಿದ್ದು, ಮಧುಮೇಹದಿಂದ ಬಳಲುತ್ತಿದ್ದಾರೆ.

2. ರಾಜಾ ಬ್ರಜ್‍ರಾಜ್ ಕ್ಷತ್ರಿಯ ಬೀರ್‍ಬರ್ ಚಮುಪತಿ ಸಿಂಗ್, ತಿಗಿರಿಯಾದ ಮಹಾಪಾತ್ರ
ಒತ್ತಾಯಪೂರ್ವಕವಾಗಿ ತಮ್ಮ ಅರಮನೆಯನ್ನು ಮಾರಬೇಕಾಗಿ ಬಂದ ಅವರು, ಎಲ್ಲಾ ಸಂಪತ್ತನ್ನು ಕಳೆದುಕೊಂಡು ಗ್ರಾಮಸ್ಥರ ಹಂಗಿನಲ್ಲಿ ಬದುಕುತ್ತಿದ್ದಾರೆ. ಒಡಿಶಾದ ಕೊನೆಯ ಮಾಜಿ ರಾಜ ಇವರು. ಹಿಂದೊಮ್ಮೆ 25 ಐಷಾರಾಮಿ ಕಾರುಗಳನ್ನು ಹೊಂದಿದ್ದ ಅವರು, 30 ಜನ ಸೇವಕರೊಂದಿಗೆ ಅರಮನೆಯಲ್ಲಿ ಬಾಳಿದವರು. 13 ಹುಲಿಗಳು ಮತ್ತು 28 ಚಿರತೆಗಳನ್ನು ಹೊಡೆದುರುಳಿಸಿದ ಖ್ಯಾತಿ ಅವರದ್ದು. ಆದರೆ ಸ್ವಾತಂತ್ರ್ಯಾನಂತರ ತಮ್ಮ ರಾಜ್ಯ ತೆರಿಗೆ ಆದಾಯವನ್ನು ಕಳೆದುಕೊಂಡ ಅವರು, ವಾರ್ಷಿಕ 130 ಪೌಂಡ್‍ಗಳ ರಾಯಧನದಲ್ಲಿ ಬದುಕಬೇಕಾಗಿ ಬಂತು. 1960 ರಲ್ಲಿ ಅವರು 900 ಪೌಂಡ್‍ಗಳಿಗೆ ತಮ್ಮ ಅರಮನೆಯನ್ನು ಮಾರಬೇಕಾಗಿ ಬಂತು, ಬಳಿಕ ಪತ್ನಿಯಿಂದಲೂ ದೂರವಾದರು. 1975 ರಲ್ಲಿ ಸರಕಾರವು ಅವರಿಗೆ ನೀಡುತ್ತಿದ್ದ ಕೊನೆಯದಾಗಿ ಉಳಿದಿದ್ದ ಎಲ್ಲಾ ರಾಜಮನೆತನದ ಸವಲತ್ತುಗಳನ್ನು ಹಿಂಪಡೆಯಿತು ಮತ್ತು ವಾರ್ಷಿಕ ಆದಾಯವು ಕೂಡ ಇಲ್ಲವಾಯಿತು. ಈಗ ಅವರು ಗ್ರಾಮಸ್ಥರು ನೀಡುವ ಊಟ ತಿಂದುಕೊಂಡು, ಹರಕಲು ಗುಡಿಸಲಿನಲ್ಲಿ ಬದುಕುತ್ತಿದ್ದಾರೆ.

3. ಸುಲ್ತಾನ ಬೇಗಂ, ಬಹಾದುರ್ ಷಾ ಜಾಫರನ ಮರಿ ಮೊಮ್ಮಗನ ಪತ್ನಿ
1980 ರಲ್ಲಿ ಆಕೆಯ ಪತಿ ರಾಜಕುಮಾರ ಮಿರ್ಜಾ ಬೇದರ್ ಭಕ್ತ್ ಮೃತಪಟ್ಟ ಬಳಿಕ, ಸುಲ್ತಾನ ಬಡತನದ ಜೀವನವನ್ನು ನಡೆಸಬೇಕಾಯಿತು. ಅವರು ಕೋಲ್ಕತ್ತಾದ ಕೊಳಗೇರಿಯಲ್ಲಿರುವ ಎರಡು ಚಿಕ್ಕ ಕೋಣೆಗಳ ಗುಡಿಸಲಿನಲ್ಲಿ ಬದುಕುತ್ತಿದ್ದಾರೆ. 19ನೇ ಶತಮಾನದ ರಾಜಕುಟುಂಬಕ್ಕೆ ಸೇರಿದವರು ಎಂಬ ಪುರಾವೆಗಳನ್ನು ಹೊಂದಿದ್ದರೂ, ಮಾಸಿಕ 6000 ರೂ.ಗಳ ಪಿಂಚಣಿಯಲ್ಲಿ ಬದುಕುತ್ತಿರುವ ಆಕೆ, ಅದರಲ್ಲೇ ತನ್ನ ಆರು ಮಕ್ಕಳನ್ನು ಸಾಕುತ್ತಿದ್ದಾರೆ.

4. ಗ್ವಾಲಿಯರ್‌ನ ಸಿಂಧಿಯಾಗಳು
ಗ್ವಾಲಿಯರ್‌ನ ಸಿಂಧಿಯಾಗಳು ತಮ್ಮ ಕೋಟೆಯನ್ನು ಶಸ್ತ್ರಾಗಾರ ಮತ್ತು ಖಜಾನೆಯಾಗಿ ಬಳಸುತ್ತಿದ್ದರು. ಅಲ್ಲಿರುವ ಅಪಾರ ಸಂಪತ್ತು ತುರ್ತು ಪರಿಸ್ಥಿತಿಗೆ ಮೀಸಲಾಗಿತ್ತು. ಈ ಖಜಾನೆಯ ಉಸ್ತುವಾರಿ ವಹಿಸಿದ್ದ ಮಹರಾಜ ಜಯಾಜಿರಾವ್ ಸಿಂಧಿಯಾ ಸಾಯುವಾಗ, ಅವರ ಮಗ ಮಾಧವ್ ರಾವ್ ಇನ್ನೂ ಪುಟ್ಟ ಮಗು. ಹಾಗಾಗಿ, ಆ ಸಂಪತ್ತಿನ ಸೀಕ್ರೆಟ್ ಕೋಡ್ ಅನ್ನು ಮಗನಿಗೆ ತಿಳಿಸುವುದು ಅವರಿಗೆ ಸಾಧ್ಯವಾಗಲಿಲ್ಲ. ಈ ಕುಟುಂಬ ಹಲವಾರು ವರ್ಷಗಳವರೆಗೆ ಹಣಕಾಸಿನ ಸಮಸ್ಯೆಯನ್ನು ಎದುರಿಸಬೇಕಾಯಿತು. ಕ್ರಮೇಣ ತಮ್ಮ ವಂಶದ ಖಜಾನೆಯನ್ನು ಪತ್ತೆ ಹಚ್ಚುವಲ್ಲಿ ಸಫಲರಾದ ಮಾಧವ್ ರಾವ್, ಕುಟುಂಬದ ಆರ್ಥಿಕ ಸಮಸ್ಯೆಯನ್ನು ಸರಿಪಡಿಸಿದರು. ಆ ಸಂಪತ್ತನ್ನು ಟಾಟಾ ಸೇರಿದಂತೆ ಹಲವು ಕೈಗಾರಿಕೆಗಳ ಮೇಲೆ ಹೂಡಿಕೆ ಮಾಡಿದರು.

5. ಜಿಯಾವುದ್ದೀನ್ ತುಸಿ, ಕೊನೆಯ ಮೊಘಲ್ ದೊರೆ ಬಹಾದುರ್ ಷಾ ಜಾಫರ್‌ ವಂಶಸ್ಥ
ಇವರು ಮೊಘಲ್ ದೊರೆ ಬಹಾದುರ್ ಷಾ ಜಾಫರ್‌ನ ಆರನೇ ತಲೆಮಾರಿನವರು. ಬಾಡಿಗೆ ಮನೆಯಲ್ಲಿ ಬದುಕುತ್ತಾ, ಬಡತನದ ಜೀವನ ಸವೆಸುತ್ತಿರುವ ಇವರು, ಮೊಘಲರ ಆಸ್ತಿಗಳನ್ನು ಸರಕಾರ ಕಾನೂನುಬದ್ಧ ಉತ್ತರಾಧಿಕಾರಿಗಳಿಗೆ ಬಿಡುಗಡೆ ಮಾಡುತ್ತದೆ ಎಂದು ಇಂದಿಗೂ ನಂಬಿ ಕಾಯುತ್ತಿದ್ದಾರೆ. ಮೊಘಲ್ ವಂಶಸ್ಥರಿಗೆ ನೀಡುತ್ತಿದ್ದ 100 ರೂ. ಶಿಷ್ಯ ವೇತನವನ್ನು ಕೆಲ ಸಮಯದ ಹಿಂದೆ ಸರಕಾರ ಸ್ಥಗಿತಗೊಳಿಸಿದೆ, ಅದನ್ನು ಮರು ಸ್ಥಾಪಿಸಬೇಕು ಎಂಬ ಒತ್ತಾಯ ಇವರದ್ದು. ಹಾಗೂ, ಆ ಮೊತ್ತವನ್ನು 8000 ರೂ.ಗಳಿಗೆ ಏರಿಸಬೇಕು ಮತ್ತು ಬಡ ಮೊಘಲ್ ವಂಶಸ್ಥರ ಉನ್ನತಿಗೆ ಸರ್ಕಾರ ಹಣ ನೀಡಬೇಕು ಎನ್ನುತ್ತಾರೆ ಅವರು. ಇಬ್ಬರು ಮಕ್ಕಳ ತಂದೆಯಾದ ತುಸಿ, ಸದ್ಯಕ್ಕೆ ಪಿಂಚಣಿ ಹಣದಲ್ಲಿ ಬದುಕುತ್ತಿದ್ದಾರೆ.

ಇದನ್ನೂ ಓದಿ: ಹೆಲ್ಮೆಟ್ ಧರಿಸಿ ಬೈಕ್ ಸವಾರಿ ಮಾಡಿದ ಜಾಣಬೆಕ್ಕು..! ಅಯ್ಯೋ ಎಷ್ಟೊಂದು ಮುದ್ದು

6. ಉತ್ರಾಧಮ್ ತಿರುನಾಲ್ ಮಾರ್ತಾಂಡ ವರ್ಮ, ತಿರುವಾಂಕೂರಿನ ಮಾಜಿ ರಾಜ
ತಿರುವಾಂಕೂರು 1750 ಹೊತ್ತಿಗೆ ಶ್ರೀಮಂತವಾಯಿತು ಮತ್ತು ದೊಡ್ಡದಾಯಿತು. ಆಗ ಆಳುತ್ತಿದ್ದ ಮಹಾರಾಜರು ಒಂದು ಐತಿಹಾಸಿಕ ಮತ್ತು ಆಧ್ಯಾತ್ಮಿಕ ತೀರ್ಮಾನವನ್ನು ತೆಗೆದುಕೊಂಡರು. ಅದೇನೆಂದರೆ ಅವರು ತಮ್ಮ ಎಲ್ಲಾ ಸಂಪತ್ತನ್ನು ದೇವಾಲಯಕ್ಕೆ ಅರ್ಪಿಸಲು ನಿರ್ಧರಿಸಿದರು. ಪದ್ಮನಾಭ ಸ್ವಾಮಿ ಅವರ ಕುಲದೇವರು. ಬಳಿಕ, 1839 ರಲ್ಲಿ ಅವರು ಬ್ರಿಟೀಷರ ವಿರುದ್ಧ ದಂಗೆ ಎದ್ದರು ಮತ್ತು ಕಠಿಣ ಶಿಕ್ಷೆಗೆ ಒಳಗಾದರು. ಅವರ ಮನೆತನ ತನ್ನ 50,000 ಸೈನಿಕ ಸೈನ್ಯವನ್ನು ಬಿಡಬೇಕಾಯಿತು ಮತ್ತು ಬ್ರಿಟಿಷ್ ಪಡೆಗಳ ನಿರ್ವಹಣೆಗೆ ಪರಿಹಾರ ಪಾವತಿಸಬೇಕಾಯಿತು. 2011 ರಲ್ಲಿ ತಿರುವನಂತಪುರಂನ ಪದ್ಮನಾಭಸ್ವಾಮಿ ದೇಗುಲದಲ್ಲಿ ಅಪಾರ ಸಂಪತ್ತು ಪತ್ತೆಯಾಯಿತು. ಆದರೆ, ಉತ್ರಾಧಮ್ ತಿರುನಾಲ್ ಮಾರ್ತಾಂಡ ವರ್ಮ ಆ ನಿಧಿ ತನಗೆ ಅಥವಾ ಸರಕಾರಕ್ಕೆ ಸೇರಿಲ್ಲ, ದೇವರಿಗೆ ಸೇರಿದ್ದು ಎಂದು ಹೇಳಿಕೆ ನೀಡಿದ್ದರು.

7. ಟಿಪ್ಪು ಸುಲ್ತಾನನ ವಂಶಜರು
ಮೈಸೂರಿನ ಹುಲಿ ಎಂದು ಖ್ಯಾತನಾಗಿದ್ದ ಟಿಪ್ಪು , 1799 ರಲ್ಲಿ ಶ್ರೀರಂಗಪಟ್ಟಣದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿ ಸಾವನ್ನಪ್ಪಿದ್ದರು. ಈಗ ಅವರ ವಂಶಾವಳಿಯು ಅಳಿವಿನ ಅಂಚಿನಲ್ಲಿದೆ. ಅವರ ವಂಶಸ್ಥರು ಕಡಿಮೆಯಾಗುತ್ತಿದ್ದಾರೆ ಮತ್ತು ಸಣ್ಣ ಪುಟ್ಟ ಕೆಲಸಗಳನ್ನು ಮಾಡಿಕೊಂಡು ಜೀವನ ಸಾಗಿಸುವ ಸ್ಥಿತಿಯಲ್ಲಿ ಇದ್ದಾರೆ. ಅವರು ದೇಶದ ಅತಿ ದೊಡ್ಡ ಮತ್ತು ಶ್ರೀಮಂತ ಮುಸ್ಲಿಂ ಟ್ರಸ್ಟ್‌ಗಳಲ್ಲಿ ಒಂದಾದ ಪ್ರಿನ್ಸ್ ಗುಲಾಮ್ ಮೊಹಮ್ಮದ್ ಟ್ರಸ್ಟ್‌ಗೆ ಈಗಲೂ ಉತ್ತರಾಧಿಕಾರಿಗಳು, ಹಾಗಿದ್ದರೂ ಕೂಡ ಹೀನಾಯ ಸ್ಥಿತಿಯಲ್ಲಿ ಬದುಕಬೇಕಾಗಿದೆ. ಅವರ 12 ಮಂದಿ ಪುತ್ರರಲ್ಲಿ 7 ಮಂದಿಗೆ ಪುರುಷ ಉತ್ತರಾಧಿಕಾರಿ ಇಲ್ಲ. ಉಳಿದ 5 ಮಂದಿಯಲ್ಲಿ ಮೂನಿರುದ್ದೀನ್ ಮತ್ತು ಗುಲಾಮ್ ಮೊಹಮ್ಮದ್ ಎಂಬ ಇಬ್ಬರ ವಂಶಸ್ಥರು ಮಾತ್ರ ಪತ್ತೆಯಾಗಿದ್ದಾರೆ. ಅವರುಗಳಲ್ಲಿ ಕೆಲವರು ಸಣ್ಣ ಪುಟ್ಟ ವ್ಯಾಪಾರ ಮಾಡಿಕೊಂಡು ಬದುಕುತ್ತಿದ್ದಾರೆ. ಗುಲಾಮ್ ಮೊಹಮ್ಮದ್ ವಂಶಸ್ಥರು ಶಿಥಿಲವಾದ ಸಣ್ಣ ಹವೇಲಿಯಲ್ಲಿ ಅತ್ಯಂತ ಕಡು ಬಡತನದ ಬದುಕು ಸಾಗಿಸುತ್ತಿದ್ದಾರೆ.

ಇದನ್ನೂ ಓದಿ: ಜಗತ್ತಿನಲ್ಲಿ ಬಹುತೇಕ ಜನರು ಇಷ್ಟಪಡುವ ಪರಿಮಳ ಯಾವುದು?

8. ಅವಧ್‍ನ ರಾಜಕುಮಾರಿ ಸಕೀನಾ ಮಹಲ್
ಅವಧ್ ಸಾಮ್ರಾಜ್ಯದ ಆಡಳಿತಗಾರರಾಗಿದ್ದ ರಾಜಕುಮಾರಿ ಸಕೀನಾಳ ವಂಶಸ್ಥರು, ಒಂದು ಕಾಲದಲ್ಲಿ ಮಧ್ಯಭಾರತದ ಅತಿ ದೊಡ್ಡ ಭೂಪ್ರದೇಶವನ್ನು ಆಳುತ್ತಿದ್ದರು. ಪ್ರಸ್ತುತ ರಾಜಕುಮಾರಿ ಸಖಿನಾ ಮತ್ತು ಒಬ್ಬ ರಾಜಕುಮಾರ ರಿಯಾಜ್ ಇಬ್ಬರೂ ಮಧ್ಯ ವಯಸ್ಕರು. ತುಘಲಕ್ ಯುಗದಲ್ಲಿ ಬೇಟೆಯ ವಸತಿಗೃಹ ಎಂದು ಖ್ಯಾತವಾಗಿದ್ದ, ಇದೀಗ ಶಿಥಿಲಗೊಂಡಿರುವ ಕಟ್ಟಡದಲ್ಲಿ ಅವರಿಬ್ಬರು ವಾಸ ಮಾಡುತ್ತಿದ್ದಾರೆ. ಸರಕಾರದ ಜೊತೆ 9 ವರ್ಷಗಳ ದೀರ್ಘ ಕಾನೂನು ಸಮರ ನಡೆಸಿದ ಬಳಿಕ, ಅವರಿಗೆ ಈಗ ತಿಂಗಳಿಗೆ 500 ರೂ. ಪಿಂಚಣಿ ಸೌಲಭ್ಯ ದೊರಕಿದೆ.
Published by:Sandhya M
First published: