• Home
  • »
  • News
  • »
  • trend
  • »
  • Indian Richest People: ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಗಳ ಹಳೆ ಫೋಟೋ ಇಲ್ಲಿದೆ

Indian Richest People: ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಗಳ ಹಳೆ ಫೋಟೋ ಇಲ್ಲಿದೆ

ಮುಕೇಶ್ ಅಂಬಾನಿ ಅವರ ತಂದೆ ಮತ್ತು ಸಹೋದರ

ಮುಕೇಶ್ ಅಂಬಾನಿ ಅವರ ತಂದೆ ಮತ್ತು ಸಹೋದರ

ಆನಂದ್ ಮಹೀಂದ್ರ, ಕುಮಾರ್ ಮಂಗಳಂ ಬಿರ್ಲಾ, ರತನ್ ಟಾಟಾ, ಅಜೀಂ ಪ್ರೇಮ್‌ಜಿ, ಕಿರಣ್ ಮಜುಂದಾರ್ ಶಾ ಆಗಿದ್ದಾರೆ. ಇವರೆಲ್ಲರ ಸಾಧನೆಯ ಹಾದಿ ಬಗ್ಗೆ ಅವರ ಹಳೆ ಪೋಟೊದೊಂದಿಗೆ ಸಂಕ್ಷಿಪ್ತವಾಗಿ ಮಾತನಾಡೋಣ ಬನ್ನಿ.

  • News18 Kannada
  • Last Updated :
  • New Delhi, India
  • Share this:

ಭಾರತೀಯ ಮಿಲಿಯನೇರ್ (Indian Millionaire) ‌ ಮತ್ತು ಬಿಲಿಯನೇರ್‌ಗಳ ಬಗ್ಗೆ ಏನಾದರೂ ವಿಷಯ ಕೇಳಿದಾಗ ನಮ್ಮ ಯೋಚನಾ ಲಹರಿ ಒಮ್ಮೆಲೆ ಆಕಾಶಕ್ಕೆ ಜಿಗಿಯುತ್ತದೆ. ಏಕೆಂದರೆ ಅವರು ಅಷ್ಟೊಂದು ಶ್ರೀಮಂತರಾ? ಎಂದು ಬಾಯಿ ಮೇಲೆ ಬೆರಳಿಟ್ಟುಕೊಂಡು ಅವರ ಬಗ್ಗೆ, ಅವರು ಹೇಗೆಲ್ಲ ಜೀವನ ನಡೆಸುತ್ತಿರಬಹುದು? ಅವರು ಧರಿಸೋ ಬಟ್ಟೆಯಿಂದ (Cloth) ಹಿಡಿದು ಅವರು ಓಡಾಡೋ ಕಾರ್‌ವರೆಗೂ (Car) ಎಲ್ಲದರ ಬಗ್ಗೆಯೂ ಯೋಚನೆ ಮಾಡುತ್ತವೆ. ಅವರು ಅಷ್ಟೊಂದು ಶ್ರೀಮಂತರು (Rich) ಆಗಿದ್ದು ಹೇಗೆ? ಹಂತ ಹಂತವಾಗಿ ಶ್ರೀಮಂತಿಕೆಯನ್ನು ತಮ್ಮ ಮುಷ್ಠಿಯಲ್ಲಿ ಹಿಡಿದುಕೊಂಡಿದ್ದು ಹೇಗೆ? ಎಂಬುದರ ಬಗ್ಗೆ ನಾವಿಂದು ಇಲ್ಲಿ ತಿಳಿಯೋಣ.


ರತನ್ ಟಾಟಾ, ಕಿರಣ್ ಮಜುಂದಾರ್ ಶಾ ಮುಂತಾದ ಭಾರತೀಯ ಮಿಲಿಯನೇರ್‌ಗಳು ಮತ್ತು ಬಿಲಿಯನೇರ್‌ಗಳ ಬಗ್ಗೆ ನಾವೆಲ್ಲರೂ ಆಗಾಗ ಕೇಳುತ್ತಲೇ ಇರುತ್ತೆವೆ. ಅವರೆಲ್ಲರೂ ಸಾಧನೆಯೆಂಬ ಶಿಖರವೇರಿ, ತಮ್ಮ ಗ್ರಾಮ, ರಾಜ್ಯಕ್ಕೆ ಮಾತ್ರವಲ್ಲದೆ ಇಡೀ ರಾಷ್ಟ್ರವನ್ನು ಹೆಮ್ಮೆಪಡುವಂತೆ ಮಾಡಿದವರಲ್ಲಿ ಅಗ್ರ ಸ್ಥಾನದಲ್ಲಿ ನಿಲ್ಲುತ್ತಾರೆ.


ನೀವು ಏನೇ ಕೆಲಸ ಮಾಡಿ, ಅದನ್ನು ಹೃದಯದಿಂದ ಮಾಡಿ, ಆಗ ಯಾವ ಕೆಲಸವಾದರೂ ಸಹ ನಿಮಗೆ ಒಲಿಯುತ್ತದೆ. ಇಲ್ಲವೆಂದರೆ ಯಶಸ್ಸು ಎಂಬುದು ಕೈಗೆಟುಕದ ನಕ್ಷತ್ರವಾಗುತ್ತದೆ ಅಷ್ಟೆ. ಈ ಭಾರತೀಯ ಶ್ರೇಷ್ಠ ಉದ್ಯಮಿಗಳು ಕಾಲ ಬದಲಾದಂತೆ ತಮ್ಮ ಯಶಸ್ಸಿನಲ್ಲಿಯೂ ಹೇಗೆ ಬದಲಾಗಿದ್ದಾರೆ ಎಂಬುದನ್ನು ತಿಳಿಯೋಣ.


ಈ ಬಿಲಿಯನೇರ್‌ ಮತ್ತು ಮಿಲಿಯನೇರ್‌ ಗಳಲ್ಲಿ ಪ್ರಮುಖರಾದವರು ಎಂದ್ರೆ ಆನಂದ್ ಮಹೀಂದ್ರ, ಕುಮಾರ್ ಮಂಗಳಂ ಬಿರ್ಲಾ, ರತನ್ ಟಾಟಾ, ಅಜೀಂ ಪ್ರೇಮ್‌ಜಿ, ಕಿರಣ್ ಮಜುಂದಾರ್ ಶಾ ಆಗಿದ್ದಾರೆ. ಇವರೆಲ್ಲರ ಸಾಧನೆಯ ಹಾದಿ ಬಗ್ಗೆ ಅವರ ಹಳೆ ಪೋಟೊದೊಂದಿಗೆ ಸಂಕ್ಷಿಪ್ತವಾಗಿ ಮಾತನಾಡೋಣ ಬನ್ನಿ.


ರತನ್ ಟಾಟಾ


ರತನ್ ಟಾಟಾ ಅವರು ಪ್ರಸಿದ್ಧ ವ್ಯಕ್ತಿಯಾಗಿದ್ದು, ಅವರಿಗೆ ಯಾವುದೇ ಪರಿಚಯ ಅಗತ್ಯವಿಲ್ಲ. ಭಾರತದಲ್ಲಿ ಈ ಹೆಸರನ್ನು ಕೇಳದ ವ್ಯಕ್ತಿಯೇ ಇಲ್ಲ. ಅನೇಕ ಉದ್ಯಮಿಗಳಿಗೆ ಇವರ ವ್ಯಕ್ತಿತ್ವ ಮತ್ತು ಸಾಧನೆ ಸ್ಫೂರ್ತಿಯಾಗಿದೆ. ರತನ್ ಟಾಟಾ ಉದಾತ್ತ ಕುಟುಂಬದಿಂದ ಬಂದಿದ್ದರೂ ಅವರು ಎಂದಿಗೂ ಅಧಿಕಾರ ಅಥವಾ ಹಣದ ಹಿಂದೆ ಬಿದ್ದವರಲ್ಲ.


ರತನ್ ಟಾಟಾ


ಟಾಟಾ ಹೆಸರಿನಲ್ಲಿ ಅನೇಕ ಕಂಪನಿಗಳನ್ನು ದೊಡ್ಡದಾಗಿ ಬೆಳೆಸಿ ಸಮಾಜಕ್ಕೆ ಅಪಾರ ಕೊಡುಗೆ ನೀಡಿದವರು ರತನ್ ಟಾಟಾ. ಸದ್ದಿಲ್ಲದೆ ಸಮಾಜ ಸೇವೆ ಮಾಡುತ್ತಾ ಇಂದಿನ ಯುವ ಜನತೆಗೆ ದೊಡ್ಡ ಸ್ಫೂರ್ತಿಯಾಗಿದ್ದಾರೆ.


ಭಾರತದ ನೆಚ್ಚಿನ ಉದ್ಯಮಿಗಳಲ್ಲಿ ರತನ್ ಟಾಟಾ ಒಬ್ಬರಾಗಿದ್ದಾರೆ. ಅವರ ವಿನಯತೆ ಮತ್ತು ನಮ್ರತೆ ಗುಣಗಳು ಪ್ರತಿಯೊಬ್ಬರ ಮನಸೂರೆಗೊಳ್ಳುತ್ತವೆ. 1991 ರಲ್ಲಿ ಜೆಆರ್‌ಡಿ ಟಾಟಾ ಅವರು ಸ್ಥಾನದಿಂದ ಕೆಳಗಿಳಿದ ನಂತರ ರತನ್ ಟಾಟಾ ಅವರು ಟಾಟಾ ಸನ್ಸ್‌ನ ಅಧಿಕಾರವನ್ನು ವಹಿಸಿಕೊಂಡರು.


ರತನ್ ಟಾಟಾ ಅವರು ತಮ್ಮ ಹಳೆಯ ಪೋಟೋವನ್ನು ಪೋಸ್ಟ್ ಮಾಡಿದ್ದಾರೆ. ಅದಕ್ಕೆ ಅವರು "ನಾನು ಇದನ್ನು ನಿನ್ನೆ ಪೋಸ್ಟ್ ಮಾಡಲು ಹೊರಟಿದ್ದೆ, ಆದರೆ ನಂತರ ನನಗೆ ನೆನಪಾಯಿತು. ಗುರುವಾರದಂದೇ ಈ ಪೋಟೊ ಆಗ ತೆಗೆಸಿದ್ದೆ. ಈಗ ಮತ್ತೆ ಈ "ಥ್ರೋಬ್ಯಾಕ್" ಪೋಟೋವನ್ನು ಗುರುವಾರವೇ ಪೋಸ್ಟ್‌ ಮಾಡುತ್ತಿರುವುದು ನನಗೆ ವಿಶೇಷ ಎನಿಸಿದೆ. ನನ್ನ ಹಳೆಯ ಸಂತೋಷದ ದಿನಗಳನ್ನು ಈ ಥ್ರೋ ಬ್ಯಾಕ್‌ ಪೋಟೊ ತೋರಿಸುತ್ತದೆ ನೋಡಿ ಎಂದು #throwbackthursday" ಎಂದು ಬರೆದುಕೊಂಡಿದ್ದಾರೆ.


ಗೌತಮ್ ಅದಾನಿ


ಫೋರ್ಬ್ಸ್ ಪತ್ರಿಕೆಯ ಪ್ರಕಾರ ಅದಾನಿ ಸಮೂಹದ ಅಧ್ಯಕ್ಷರಾದ ಗೌತಮ್ ಅದಾನಿ ಅವರು ಏಷಿಯಾದಲೇ ಅತಿ ಸಿರಿವಂತ ವ್ಯಕ್ತಿ. ಅಕ್ಟೋಬರ್ 10, 2022 ರ ಸಮಯದಲ್ಲಿ ಅವರ ಆಸ್ತಿಯ ನಿವ್ವಳ ಮೌಲ್ಯ ಸುಮಾರು 150 ಬಿಲಿಯನ್ ಡಾಲರ್ ಎನ್ನಲಾಗಿದೆ. ಹಾಗಾಗಿ ಇವರು ಭಾರತದ ಮೊದಲನೇ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಅದಾನಿ ಸಮೂಹವು ಹಲವು ವೈವಿಧ್ಯಮಯ ವ್ಯವಹಾರಗಳಲ್ಲಿ ತನ್ನನ್ನು ತಾನು ಗುರುತಿಸಿಕೊಂಡಿದೆ.


ಗೌತಮ್ ಅದಾನಿ


ಅದಾನಿ ಅವರ ಮಡದಿಯಾದ ಪ್ರಿಯಾ ಅದಾನಿ ಅವರು ತಮ್ಮ ಪತಿ 60ನೇ ಹುಟ್ಟುಹಬ್ಬ ಆಚರಿಕೊಳ್ಳುತ್ತಿದ್ದ ಸಂದರ್ಭದಲ್ಲಿ ಅವರ ಥ್ರೋ ಬ್ಯಾಕ್ ಚಿತ್ರವೊಂದನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು, "36 ವರ್ಷಗಳ ಹಿಂದೆ ನಾನು ನನ್ನ ಕರಿಯರ್ ಅನ್ನು ಬದಿಗಿಟ್ಟು ಈ ವ್ಯಕ್ತಿಯ @gautam_adani ಜೊತೆ ನನ್ನ ಹೊಸ ಪ್ರಯಾಣ ಆರಂಭಿಸಿದೆ. ಇಂದು ನಾನು ಅದನ್ನು ಸ್ಮರಿಸಿಕೊಂಡಾಗ ಉಳಿದಿರುವುದು ಕೇವಲ ಆ ವ್ಯಕ್ತಿಯ ಬಗೆಗಿನ ಹೆಮ್ಮೆ ಹಾಗೂ ಗೌರವ. ನಾನು ಅವರ ಉತ್ತಮ ಆರೋಗ್ಯ ಹಾಗೂ ಅವರೆಲ್ಲ ಕನಸುಗಳು ನನಸಾಗಲಿ ಎಂದು ಪ್ರಾರ್ಥಿಸುತ್ತೇನೆ" ಎಂದು ಬರೆದುಕೊಂಡಿದ್ದಾರೆ.


ಮುಕೇಶ್ ಅಂಬಾನಿ


ಅಂಬಾನಿ ಎಂದರೆ ದೇಶದಲ್ಲಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ರಿಲಯನ್ಸ್ ಎಂಬ ದೈತ್ಯ ಸಂಸ್ಥೆಯ ಜವಾಬ್ದಾರಿ ಹೊತ್ತಿರುವ ಮುಕೇಶ್ ಅಂಬಾನಿ ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಸದ್ಯ ಇವರು ಭಾರತದ ಎರಡನೇ ಅತ್ಯಂತ ಶ್ರೀಮಂತ ವ್ಯಕ್ತಿ. 2005 ರಲ್ಲಿ ತಮ್ಮ ತಂದೆಯಿಂದ ಆಯಿಲ್ ರಿಫೈನಿಂಗ್ ಹಾಗೂ ಪೆಟ್ರೋಕೆಮಿಕಲ್ಸ್ ಸಂಸ್ಥೆಯ ಜವಾಬ್ದಾರಿ ಪಡೆದ ಮುಕೇಶ್ ಅಂಬಾನಿ ಅವರು ತದನಂತರ ಅದನ್ನು ಭಾರತದಲೇ ದೊಡ್ಡ ದೈತ್ಯ ಸಂಸ್ಥೆಯನ್ನಾಗಿ ರೂಪಿಸುವುದಲ್ಲದೆ ಇ-ಕಾಮರ್ಸ್ ಕ್ಷೇತ್ರದಲ್ಲೂ ದಾಪುಗಾಲು ಇಟ್ಟಿದ್ದಾರೆ.


ಮುಕೇಶ್ ಅಂಬಾನಿ, ತಂದೆ ಹಾಗೂ ಸಹೋದರ


ಸದ್ಯ 64ರ ಪ್ರಾಯದಲ್ಲಿರುವ ಮುಕೇಶ್ ಅಂಬಾನಿ ಅವರು ಮೊದಲಿನಿಂದಲೂ ತಮ್ಮ ಸಹೋದರ ಹಾಗೂ ತಂದೆಯ ಜೊತೆ ಇದ್ದುಕೊಂಡೇ ವ್ಯವಹಾರದ ಉದ್ದಗಲವನ್ನು ತಿಳಿದುಕೊಂಡಿದ್ದಾರೆ ಎನ್ನಬಹುದು. ಥ್ರೋ ಬ್ಯಾಕ್ ಚಿತ್ರವೊಂದರಲ್ಲಿ @IndiaHistorypic ಎಂಬ ಹ್ಯಾಂಡಲ್ ಒಂದು ಟ್ವಿಟರ್ ನಲ್ಲಿ ಮುಕೇಶ್ ಅವರು ತಮ್ಮ ಸಹೋದರ ಅನಿಲ್ ಅಂಬಾನಿ ಹಾಗೂ ತಂದೆ ದಿ. ಧೀರೂಬಾಯ್ ಅಂಬಾನಿ ಅವರೊಂದಿಗಿದ್ದ ಅವರ ಹಳೆಯ ಚಿತ್ರವೊಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಮುಕೇಶ್ ಅವರು ಸಾಕಷ್ಟು ಯಂಗ್ ಆಗಿದ್ದುದನ್ನು ಇಲ್ಲಿ ಕಾಣಬಹುದು.


ಆನಂದ್ ಮಹೀಂದ್ರ


ಭಾರತೀಯ ಬಿಲಿಯನೇರ್‌ ಗಳಲ್ಲಿ ಪ್ರಮುಖರಾದ ಮಹೀಂದ್ರಾ ಗ್ರೂಪ್ ಅಧ್ಯಕ್ಷ ಮತ್ತು ಉದ್ಯಮಿ ಆನಂದ್ ಮಹೀಂದ್ರಾ ಸೋಷಿಯಲ್‌ ಮೀಡಿಯಾ ಆದ ಟ್ವಿಟರ್‌ನಲ್ಲಿ ಸಾಕಷ್ಟು ಸಕ್ರಿಯರಾಗಿದ್ದಾರೆ. ಅದರ ಜೊತೆಗೆ 9.8 ಮಿಲಿಯನ್ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. ಇದರಲ್ಲಿ ಅವರು ಆಗಾಗ್ಗೆ ಹಾಸ್ಯಮಯ ಟ್ವೀಟ್‌ಗಳನ್ನು ಹಂಚಿಕೊಳ್ಳುತ್ತಾರೆ. ಆ ಹಾಸ್ಯ ಚಟಾಕಿಗಳು ಜನರಿಗೆ ಬಲು ಇಷ್ಟವಾಗುತ್ತವೆ.


ಆನಂದ್ ಮಹೀಂದ್ರ


ಭಾರತದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರು ಮತ್ತು ಉನ್ನತ ಉದ್ಯಮಿಯಾಗಿರುವ ಮಹಿಂದ್ರಾ ಅವರ ಬಗ್ಗೆ ತಿಳಿಯಲು ಜನ ಯಾವಾಗಲೂ ಉತ್ಸುಕರಾಗಿರುತ್ತಾರೆ.


ಅವರ ಮಾತುಗಳಲ್ಲೆ ಹೇಳುವುದಾದ್ರೆ, ಹಳೆ ದಿನಗಳ ನನ್ನ ಯೌವನದ ಅತ್ಯುತ್ತಮ ವಾರಾಂತ್ಯಗಳನ್ನು ಆಗಾಗ ನೆನಪಿಸಿಕೊಳ್ಳುತ್ತಿದ್ದೇನೆ. ನನ್ನ 72 ನೇ ವಯಸ್ಸಿನಲ್ಲಿ ಈ ಹಳೆ ನೆನಪುಗಳೆ ನನಗೆ ಶಕ್ತಿ. ನಾನು 17 ವರ್ಷ ವಯಸ್ಸಿನಲ್ಲಿದ್ದಾಗ ನಾನು ಮತ್ತು ನನ್ನ ಸ್ನೇಹಿತ ಟ್ರಕ್‌ಗಳಲ್ಲಿ ಸವಾರಿ ಮಾಡುತ್ತಾ 'ಬಾಂಬೆ' ಯಿಂದ 'ಪೂನಾ'ಕ್ಕೆ ಆಗಾಗ ಹಿಚ್‌ಹೈಕ್ ಮಾಡುತ್ತಿದ್ದೆವು. ಆ ಸಂದರ್ಬದಲ್ಲಿಯೇ ‘ಪರಿಚಯ್’ ಎಂಬ ಸಿನಿಮಾವು ಬಂದಿತ್ತು. ಅದರಲ್ಲಿನ “ಮುಸಾಫಿರ್ ಹೂಂ ಯಾರೋನ್” ಎಂಬ ಹಾಡನ್ನು ಆಗಾಗ ಗುನುಗುತ್ತಿದ್ದೆವು" ಎಂದು ಪೋಸ್ಟ್‌ನಲ್ಲಿ ಬರೆದಿದ್ದಾರೆ.


ಇದನ್ನೂ ಓದಿ: ಗಣಿತದ ಸೂತ್ರಗಳನ್ನು ಎಷ್ಟು ಸುಲಭವಾಗಿ ಕಲಿಸಿದ್ದಾರೆ ನೋಡಿ ಈ ಶಿಕ್ಷಕ!


ಕುಮಾರ್ ಮಂಗಳಂ ಬಿರ್ಲಾ


ಭಾರತದ ಅಗ್ರಗಣ್ಯ ವ್ಯಾಪಾರ ಕುಟುಂಬಗಳಲ್ಲಿ ಒಂದಾದ ನಾಲ್ಕನೇ ತಲೆಮಾರಿನ ಕಾರ್ಪೊರೇಟ್ ನಾಯಕ ಎಂದೇ ಗುರುತಿಸಿಕೊಂಡಿರುವ ಕುಮಾರ್ ಮಂಗಳಂ ಬಿರ್ಲಾ ಅವರು ಭಾರತದಲ್ಲಿನ ಅತಿದೊಡ್ಡ ಜಾಗತಿಕ ಸಂಘಟಿತ ಸಂಸ್ಥೆಗಳಲ್ಲಿ ಒಂದಾದ ಆದಿತ್ಯ ಬಿರ್ಲಾ ಗ್ರೂಪ್‌ನ ಅಧ್ಯಕ್ಷರಾಗಿದ್ದಾರೆ.


ಕುಮಾರ್ ಮಂಗಳಂ ಬಿರ್ಲಾ


ಅವರು 1995 ರಲ್ಲಿ ಆದಿತ್ಯ ಬಿರ್ಲಾ ಗ್ರೂಪ್ ಅನ್ನು ಸ್ವಾಧೀನಪಡಿಸಿಕೊಂಡರು, ಆಗ ಕಂಪನಿಯ ವಹಿವಾಟು 2 ಬಿಲಿಯನ್ ಡಾಲರ್‌ ಅಷ್ಟೆ ಇತ್ತು, ಆದರೆ ಕುಮಾರ್ ಮಂಗಳಂ ಅವರ ಕಠಿಣ ಪರಿಶ್ರಮ ಮತ್ತು ದೃಢಸಂಕಲ್ಪದಿಂದ ಕಂಪನಿಯ ವಹಿವಾಟು ಇಂದು 40 ಬಿಲಿಯನ್‌ ಡಾಲರ್‌ ತಲುಪಿದೆ ಮತ್ತು ಸುಮಾರು 42 ದೇಶಗಳಲ್ಲಿ 1,20,000 ಕ್ಕೂ ಹೆಚ್ಚು ಉದ್ಯೋಗಿಗಳಿಗೆ ಉದ್ಯೋಗವನ್ನು ನೀಡಿರುವ ಹಿರಿಮೆ ಇವರದ್ದಾಗಿದೆ.


ಇವರು ಅತಿ ಹೆಚ್ಚು ಸಂಭಾವನೆ ಪಡೆಯುವ ನಿರ್ದೇಶಕರಲ್ಲಿ ಒಬ್ಬರಲ್ಲದೇ ಭಾರತದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರು. ಬಿರ್ಲಾ ಅವರು ಮುಂಬೈ ವಿಶ್ವವಿದ್ಯಾನಿಲಯದಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಆಗಿ ಅಧ್ಯಯನ ಮಾಡಿ ತಮ್ಮ ಕೌಶಲ್ಯಗಳನ್ನು ಹೆಚ್ಚಿಸಿಕೊಂಡಿದ್ದರು. ನಂತರ ಅವರು ಲಂಡನ್ ವಿಶ್ವವಿದ್ಯಾನಿಲಯದಲ್ಲಿ MBA ಪದವಿ ಪಡೆದರು. ಅಲ್ಲಿ ಅವರು ಈಗ ಗೌರವಾನ್ವಿತ ಫೆಲೋ ಆಗಿದ್ದಾರೆ.


ಇದನ್ನೂ ಓದಿ: ಚಂದ್ರ ರೂಪಗೊಂಡಿದ್ದು ಗಂಟೆಗಳಲ್ಲಿ, ಶತಮಾನಗಳ ಅವಧಿಯಲಲ್ಲ ಅಂದ್ರೆ ನಂಬ್ತೀರಾ?


ಅಜೀಂ ಪ್ರೇಮ್‌ಜಿ


ಅಜೀಂ ಪ್ರೇಮ್‌ಜಿ ಅವರ ಥ್ರೋಬ್ಯಾಕ್‌ ಪೋಟೊವನ್ನುಅವರ ಮಗ ರಿಷಾದ್ ಪ್ರೇಮ್‌ಜಿ ಅವರು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ, ಅಲ್ಲಿ ಅವರು “ನನ್ನ ತಂದೆ, ಅಜೀಂ ಪ್ರೇಮ್‌ಜಿ ಅವರು 21 ನೇ ವಯಸ್ಸಿನಲ್ಲಿ ಸಣ್ಣ ವನಸ್ಪತಿ ಬೀಜ್ ಕಂಪನಿಯನ್ನು ಆರಂಭಿಸಿದರು. ಆದರೆ 53 ವರ್ಷಗಳ ನಂತರ ಅದನ್ನು ವೈವಿಧ್ಯಮಯ, ಜಾಗತಿಕ ಕಂಪನಿಯಾಗಿ ಬೆಳೆಸಿದರು. ಇಷ್ಟೆಲ್ಲ ಸಾಧಿಸಿದರೂ ಅವರು ಸ್ವಲ್ಪವೂ ಕೂಡ ಬದಲಾಗಿಲ್ಲ. ನಾನು ಅವರಿಂದ ಸಾಕಷ್ಟು ಕಲಿತಿದ್ದೇನೆ ಎಂದು #75Yearsof Wipro #The StoryofWipro” ಎಂದು ಬರೆದಿದ್ದಾರೆ.


ಅಜೀಂ ಪ್ರೇಮ್‌ಜಿ


ಭಾರತೀಯ ಟೆಕ್ ಮ್ಯಾಗ್ನೇಟ್ ಅಜೀಂ ಪ್ರೇಮ್‌ಜಿ ಅವರನ್ನು ಭಾರತೀಯ ಐಟಿ ಉದ್ಯಮದ ಸಾರ್ವಭೌಮ ಎಂದೂ ಕರೆಯುತ್ತಾರೆ. ಅವರು ಭಾರತದ ಅತಿದೊಡ್ಡ ಸಾಫ್ಟ್‌ವೇರ್ ಸೇವಾ ಪೂರೈಕೆದಾರ ವಿಪ್ರೋ ಲಿಮಿಟೆಡ್‌ನ ಅಧ್ಯಕ್ಷರಾಗಿದ್ದರು ಮತ್ತು ಮಂಡಳಿಯ ಕಾರ್ಯನಿರ್ವಾಹಕೇತರ ಸದಸ್ಯ ಮತ್ತು ಸಂಸ್ಥಾಪಕ ಅಧ್ಯಕ್ಷರಾಗಿ ಇಂದಿಗೂ ಕಾರ್ಯನಿರ್ವಹಿಸುತ್ತಿದ್ದಾರೆ.


ಅಜೀಂ ಪ್ರೇಮ್‌ಜಿ ಅವರು ಭಾರತದಲ್ಲಿ ಕೋವಿಡ್ -19 ಅನ್ನು ನಿಯಂತ್ರಿಸಲು 2019 ರಲ್ಲಿ ದಿನಕ್ಕೆ 22 ಕೋಟಿ ರೂ. ಗಳನ್ನು ದಾನ ಮಾಡಿದ್ದಾರೆ. ಅಜೀಂ ಪ್ರೇಮ್‌ಜಿ ದತ್ತಿ ನಿಧಿಯು ವಿಪ್ರೊದಲ್ಲಿ ಪ್ರವರ್ತಕರ ಷೇರುಗಳ 13.6 ಪ್ರತಿಶತವನ್ನು ಹೊಂದಿದೆ ಮತ್ತು ಪ್ರವರ್ತಕರ ಷೇರುಗಳಿಂದ ಗಳಿಸಿದ ಎಲ್ಲಾ ಹಣವನ್ನು ಪಡೆಯುವ ಹಕ್ಕನ್ನು ಈ ಕಂಪನಿಯು ಹೊಂದಿದೆ.


1 ಏಪ್ರಿಲ್ 2020 ರಂದು, ಅಜೀಂ ಪ್ರೇಮ್‌ಜಿ ಫೌಂಡೇಶನ್ (ರೂ. 1,000 ಕೋಟಿ), ವಿಪ್ರೋ (ರೂ. 100 ಕೋಟಿ), ಮತ್ತು ವಿಪ್ರೋ ಎಂಟರ್‌ಪ್ರೈಸಸ್ (ರೂ. 25 ಕೋಟಿ) ಗಳ ಮೂಲಕ ಕೋವಿಡ್-19 ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸಲು ಒಟ್ಟು 1,125 ಕೋಟಿ ರೂ.ಗಳನ್ನು ನೀಡಿದ ಹಿರಿಮೆ ಇವರದ್ದಾಗಿದೆ.


ಫೋರ್ಬ್ಸ್ ಟಾಪ್ 10 ಖಾಸಗಿ ದೇಣಿಗೆಗಳ ಪಟ್ಟಿಯ ಪ್ರಕಾರ, “ಕರೋನವೈರಸ್ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಸಹಾಯ ಮಾಡಿದ ಖಾಸಗಿ ದಾನಿಗಳ ಪಟ್ಟಿಯಲ್ಲಿ ಅಜೀಂ ಪ್ರೇಮ್‌ಜಿ ವಿಶ್ವದ ಮೂರನೇ ಅತಿದೊಡ್ಡ ಮತ್ತು ಏಕೈಕ ಭಾರತೀಯರಾಗಿದ್ದಾರೆ” ಎಂದು ಹೇಳಿದೆ.


ಕಿರಣ್ ಮಜುಂದಾರ್ ಶಾ


ಕಿರಣ್ ಮಜುಂದಾರ್ ಶಾ ಸ್ವಯಂ ನಿರ್ಮಿತ ಬ್ಯುಸಿನೆಸ್‌ ವುಮನ್‌. ಇಂದು ಅವರು ಭಾರತದ ಅತ್ಯಂತ ಯಶಸ್ವಿ ಮತ್ತು ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರು. ಫೋರ್ಬ್ಸ್ ಪಟ್ಟಿಯಲ್ಲಿ ಸಹ ಸ್ಥಾನ ಗಳಿಸಿದ್ದರು. ಭಾರತ ಸರ್ಕಾರ ಇವರಿಗೆ ಪದ್ಮಭೂಷಣ ಮತ್ತು ಪದ್ಮವಿಭೂಷಣ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ. ಆಕಸ್ಮಿಕವಾಗಿ ಅವರು ವ್ಯವಹಾರ ಕ್ಷೇತ್ರಕ್ಕೆ ಪ್ರವೇಶಿಸಿದ್ದಂತೆ. 1978ರಲ್ಲಿ ಬಯೋಕಾನ್ ಎಂಬ ಜೈವಿಕ ಔಷಧೀಯ ಕಂಪನಿಯನ್ನು ಸ್ಥಾಪಿಸಿದರು. ಈ ಕಂಪನಿಯು ಔಷಧೀಯ ಉತ್ಪಾದನಾ ಕ್ಷೇತ್ರದಲ್ಲಿ ಪ್ರಮುಖ ಕಂಪನಿ.


ಕಿರಣ್ ಮಜುಂದಾರ್ ಶಾ


ಟೈಮ್ ಮ್ಯಾಗಜೀನ್‌ನ ವಿಶ್ವದ 100 ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಕಿರಣ್ ಮಜುಂದಾರ್ ಶಾ ಅವರು ಗುರುತಿಸಿದೆ. ಇವರು ಏಷ್ಯಾದ ಪ್ರಮುಖ ಜೈವಿಕ-ಔಷಧಗಳ ಉದ್ಯಮವಾದ ಬಯೋಕಾನ್‌ನ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಜೈವಿಕ ತಂತ್ರಜ್ಞಾನದ ಜಾಗತಿಕ ಚಿಂತನೆಯ ನಾಯಕರಾಗಿ ಗುರುತಿಸಲ್ಪಟ್ಟಿದ್ದಾರೆ.


ಇವರ ಉಸ್ತುವಾರಿಯಲ್ಲಿ, 1978 ರಲ್ಲಿ ಆರಂಭವಾದ ಬಯೋಕಾನ್ ಕಂಪನಿಯಿಂದ ಹಿಡಿದು ಸಂಪೂರ್ಣ-ಸಂಯೋಜಿತ, ಉದಯೋನ್ಮುಖ ಜಾಗತಿಕ ಜೈವಿಕ ಔಷಧೀಯ ಉದ್ಯಮವಾಗಿ ಮಧುಮೇಹ, ಕ್ಯಾನ್ಸರ್ ಮತ್ತು ಸ್ವಯಂ ನಿರೋಧಕ ಕಾಯಿಲೆಗಳಂತಹ ದೀರ್ಘಕಾಲದ ಸ್ಥಿತಿಗಳ ಚಿಕಿತ್ಸೆಯ ವೆಚ್ಚವನ್ನು ಕಡಿಮೆ ಮಾಡುವ ಉದ್ದೇಶವನ್ನು ಈ ಕಂಪನಿಯು ಹೊಂದಿದೆ.

First published: