ಕೇವಲ ಯುದ್ದ, ವೈ ಮನಸ್ಸುಗಳಿಗೆ ಹೆಸರಾಗಿರುವ ಇಂಡಿಯಾ-ಪಾಕಿಸ್ತಾನವು (India-Pakistan) ಈಗ ಸುಂದರ ಪ್ರೇಮ ವಿವಾಹವೊಂದಕ್ಕೆ ಸಾಕ್ಷಿಯಾಗಿದೆ. ನಿಜ, ಮುಂಬೈನ ಮಹೇಂದ್ರ ಕುಮಾರ್ ಹಾಗೂ ಕರಾಚಿಯ ಸಂಜುಗಟ್ಟ ಕುಮಾರಿ ಭಾರತ-ಪಾಕ್ನ ದುಷ್ಮನಿಯನ್ನೂ ಮೀರಿ ಪ್ರೀತಿ ಯಲ್ಲಿ ಗೆದ್ದಿದ್ದಾರೆ. ಅಡ್ವಕೇಟ್ ಆಗಿರುವ ಮಹೇಂದ್ರ ಕುಮಾರ್ಗೆ ಪಾಕಿಸ್ತಾನ ಕರಾಚಿಯ ಸಂಜು ಕುಮಾರಿಯ ಪರಿಚಯವಾದದ್ದು ಸೋಷಿಯಲ್ ಮೀಡಿಯಾದಲ್ಲಿ (Social Media). ಸ್ನೇಹದಿಂದ ಪ್ರಾರಂಭವಾದ ಇವರ ಪರಿಚಯ ಪ್ರೀತಿಗೆ ತಿರುಗಲು ಹೆಚ್ಚು ಸಮಯ ಬೇಕಾಗಲಿಲ್ಲ. ತಮ್ಮಿಬ್ಬರ ನಡುವೆ ಪ್ರೇಮಾಂಕುರವಾಗಿದೆ ಎಂಬುದು ಅರಿವಾದೊಡನೆ ಮಹೇಂದ್ರ ಕುಮಾರ್ (Mahendra Kumar) ತಮ್ಮ ಪ್ರೀತಿಯ ವಿಷಯವನ್ನು ತಮ್ಮ ಕುಟುಂಬಸ್ಥರಿಗೆ ತಿಳಿಸಿದ್ದಾರೆ.
ಇವರ ಕುಟುಂಬವು ಸಹ ಇವರ ಪ್ರೀತಿಗೆ ಅಡ್ಡಿ ಮಾಡದೇ ಗ್ರೀನ್ ಸಿಗ್ನಲ್ ಕೊಟ್ಟಿದೆ. ಜೊತೆಗೆ, ಕುಟುಂಬದವರು ವಾಟ್ಸಪ್ ಮೂಲಕವೇ ಮದುವೆ ಮಾತುಕತೆಯನ್ನು ಮುಗಿಸಿದ್ದಾರೆ. ಕಳೆದ ವಾರವಷ್ಟೇ ತನ್ನ ಕುಟುಂಬದೊಂದಿಗೆ ಪಾಕಿಸ್ತಾನಕ್ಕೆ ಹಾರಿದ ಮಹೇಂದ್ರ ಅವರು ಸಿಂಧ್ ಪ್ರಾಂತ್ಯದ ಸುಕ್ಕೂರ್‌ನಲ್ಲಿ ಕುಮಾರಿ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ) ಅಲ್ಪಸಂಖ್ಯಾತ ವಿಭಾಗದ ನಾಯಕ ರಾಜ್‌ಕುಮಾರ್ ಸೇರಿದಂತೆ ಎರಡೂ ಕುಟುಂಬಗಳ ಸಂಬಂಧಿಕರು ಮತ್ತು ಸುಕ್ಕೂರ್ ಹಿಂದೂ ಸಮುದಾಯದ ಸದಸ್ಯರು ಸಿಂಧಿ ಹಾಡುಗಳೊಂದಿಗೆ ಮದುವೆಯಲ್ಲಿ ಸಂಭ್ರಮಿಸಿದ್ದಾರೆ.
ಇದನ್ನೂ ಓದಿ: ಪುಟ್ಟ ಅಕ್ಕ-ತಮ್ಮ ಮ್ಯಾಜಿಕ್ ಮಾಡಲು ಹೋಗಿ ಏನಾಯ್ತು ಗೊತ್ತಾ? ಸಖತ್ ಕ್ಯೂಟ್ ಆಗಿದೆ ವಿಡಿಯೋ!
“ನಾನು ಸಂಜುಗಟ್ ಅವರಲ್ಲಿ ಮದುವೆಯ ಬಗ್ಗೆ ಪ್ರಸ್ತಾಪಿಸಿದಾಗ, ಯಾವುದೇ ಹಿಂಜರಿಕೆಯಿಲ್ಲದೆ ತಕ್ಷಣವೇ ಒಪ್ಪಿಕೊಂಡಿದ್ದರು. ನನಗೆ ತುಂಬಾ ಖುಷಿಯಾಗಿತ್ತು. ಜೊತೆಗೆ, ಅವರ ಆ ಮಾತುಗಳು ನನಗೆ ಸಾಕಷ್ಟು ಧೈರ್ಯ ನೀಡಿತ್ತು” ಎಂದು ಮಹೇಂದ್ರ ಅವರು ನೆನಪಿಸಿಕೊಂಡಿದ್ದಾರೆ.
"ನಮ್ಮ ಮದುವೆಯ ಮುಖ್ಯ ಮಂತ್ರವೇ ‘ಸಮ’ ಅಂದರೆ, ಒಂದಾಗುವುದು ಎಂದರ್ಥ. ಸಮಾ ಎಂದರೆ ‘ಸುಖವಾದ ವೈವಾಹಿಕ ಸಂಬಂಧ" ಎಂಬರ್ಥವೂ ಸಹ ಇದೆ. ಜನರು ತಮ್ಮ ಧರ್ಮ, ಜಾತಿ ಅಥವಾ ರಾಷ್ಟ್ರೀಯತೆಯನ್ನು ಲೆಕ್ಕಿಸದೆ ಒಟ್ಟಿಗೆ ಬಾಳುವುದರಲ್ಲಿ ಹೆಚ್ಚು ಅರ್ಥವಿದೆ" ಎಂದು ಅವರು ತಿಳಿಸಿದ್ದಾರೆ.
ಜೈಲಿನಲ್ಲಿ ಕೊನೆಗೊಂಡಿದ್ದ ಜೀವಾನಿಯ ಲವ್
ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿ ಪಾಕಿಸ್ತಾನ ಮೂಲದ ಯುವತಿಯೊಬ್ಬಳನ್ನ ಪತ್ತೆ ಹಚ್ಚಲಾಗಿತ್ತು. ನಕಲಿ ಆಧಾರ್ ಕಾರ್ಡ್, ವೀಸಾ ಇಲ್ಲದೆ ಬೆಂಗಳೂರಿನಲ್ಲಿದ್ದ ಇದ್ದ ಆಕೆಯನ್ನ ಪೊಲೀಸರು ವಶಕ್ಕೆ ಪಡೆದಿದ್ದರು. ಆಕೆಯ ಇತಿಹಾಸ ಕೆದಕಿದಾಗ ಬಯಲಾಗಿದ್ದು, ಇದೇ ರೀತಿಯ ಪ್ರೇಮ್ ಕಹಾನಿ.
ಪಾಕಿಸ್ತಾನದ ಹೈದ್ರಾಬಾದ್ ಮೂಲದವಳಾದ 19 ವರ್ಷದ ಇಕ್ರಾ ಜೀವಾನಿಗೆ, ಕೊವಿಡ್ ಸಮಯದಲ್ಲಿ ಆನ್‌ಲೈನ್‌ನಲ್ಲಿ ಲುಡೋ ಗೇಮ್ ಆಡುವಾಗ ನೇಪಾಳದ ಮುಲಾಯಂ ಸಿಂಗ್ ಯಾದವ್ ಅನ್ನೋ ಯುವಕನ ಪರಿಚಯವಾಗಿತ್ತು.
ಬಳಿಕ ವಾಟ್ಸಾಪ್‌ನಲ್ಲಿ ಇಬ್ಬರ ನಡುವೆ ಪ್ರೀತಿ ಮೂಡಿತ್ತು. ಮುಲಾಯಂನ ಪ್ರೀತಿಯ ಬಲೆಗೆ ಬಿದ್ದಿದ್ದ ಇಕ್ರಾ ಪಾಕಿಸ್ತಾನ ತೊರೆದಿದ್ದಳು. ಪ್ರಿಯಕರ ಮುಲಾಯಂ ಜತೆ ಜೀವನ ಮಾಡಲು 2022ರ ಸೆಪ್ಟೆಂಬರ್‌ನಲ್ಲಿ ತನ್ನಿಲ್ಲಿದ್ದ ಚಿನ್ನದ ಒಡವೆಯನ್ನ ಸ್ನೇಹಿತರಿಗೆ ಮಾರಿ ಹಣ ಪಡೆದು, ದುಬೈ ಮೂಲಕ ಕಟ್ಮಂಡುವಿಗೆ ಬಂದು ಮುಲಾಯಂ ಸಿಂಗ್‌ನನ್ನ ಭೇಟಿಯಾಗಿದ್ದಳು. ಅಲ್ಲಿ ಮದ್ವೆಯಾಗಿದ್ದ ಇಬ್ಬರು ಬಳಿಕ ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿದ್ದರು. ನಂತರ, ಬೆಂಗಳೂರಿಗೆ ಬಂದು ವಾಸವಿದ್ದರು.
ಬೆಂಗಳೂರಿನಲ್ಲಿ ಹಿಂದೂ ಸಮುದಾಯದ ಒಬ್ಬರ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಆದರೆ, ಒಮ್ಮೆ ಇಕ್ರಾ ನಮಾಜ್ ಮಾಡೋದನ್ನ, ಮನೆ ಓನರ್ ಗಮನಿಸಿದ್ರು. ಇದರಿಂದ ಸಂಶಯ ಬಂದು ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ವಿಚಾರಣೆ ನಡೆಸಿದಾಗ ಇಕ್ರಾ ಪಾಕಿಸ್ತಾನ ಮೂಲದವಳು ಅನ್ನೋದು ಗೊತ್ತಾಯ್ತು.
ಬಳಿಕ ಇಕ್ರಾಳನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿ, ವಾಘಾ ಗಡಿ ಮೂಲಕ ಲಾಹೋರ್‌ನಿಂದ ಬಂದಂತಹ ಅವರ ಪೋಷಕರಿಗೆ ಇಕ್ರಾಳನ್ನ ಹಸ್ತಾಂತರಿಸಲಾಗಿತ್ತು.\ ಇಕ್ರಾ ಮರಳಿ ಪಾಕಿಸ್ತಾನ ಸೇರಿದ್ರೆ, ವೀಸಾ ಇಲ್ಲದೆ ದೇಶಕ್ಕೆ ಬಂದಿದ್ದಕ್ಕೆ ಹಾಗೂ ಅಕ್ರಮವಾಗಿ ನಕಲಿ ಕಾರ್ಡ್ ಮಾಡಿಸಿಕೊಂಡ ತಪ್ಪಿಗೆ ಯಾದವ್ ಜೈಲು ಸೇರಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ