ಮಿಸ್​ ಇಂಗ್ಲೆಡ್​ ಕಿರೀಟ ತೊಟ್ಟ ಭಾರತ ಮೂಲದ ವೈದ್ಯೆ

ಮಿಸ್​ ಇಂಗ್ಲೆಡ್​ ಪ್ರಶಸ್ತಿ ಭಾಜನಾರಾಗಿರುವ ಮುಖರ್ಜಿ ಈ ಮೂಲಕ ಮಿಸ್​ ವರ್ಲ್ಡ್​ ಸ್ಪರ್ಧೆಗೆ ಪ್ರವೇಶ ಪಡೆಯುವ ಜೊತೆಗೆ ರಜೆಯ ಮಜಾ ಸವಿಯಲು ಮರಿಷಿಯಸ್​ ಹೋಗುವ ಚಾನ್ಸ್​ ಕೂಡ ಪಡೆದಿದ್ದಾರೆ.

Seema.R | news18-kannada
Updated:August 3, 2019, 5:50 PM IST
ಮಿಸ್​ ಇಂಗ್ಲೆಡ್​ ಕಿರೀಟ ತೊಟ್ಟ ಭಾರತ ಮೂಲದ ವೈದ್ಯೆ
ಮಿಸ್​ ಇಂಗ್ಲೆಡ್​
  • Share this:
ಭಾರತದ ಮೂಲದ ವೈದ್ಯಯೊಬ್ಬರು ಮಿಸ್​ ಇಂಗ್ಲೆಡ್​ ಕೀರ್ತಿಗೆ ಭಾಜನಾರಾಗಿದ್ದಾರೆ. 23 ವರ್ಷ ಭಾಷಾ ಮುಖರ್ಜಿ ಈ ಕೀರ್ತಿಗೆ ಭಾಜನರಾದವರು.

ಇಂಗ್ಲೆಡ್​ನ ಡೆರ್ಬಿಯಲ್ಲಿರು ಭಾಷಾ ಎರಡು ವಿಭಿನ್ನ ವೈದ್ಯಕೀಯ ಪದವಿ ಹೊಂದಿದ್ದು ಅವರ ಬುದ್ದಿಮತೆ ಗುಣಮಟ್ಟ 146 ಆಗಿದೆ. ಐದು ಭಾಷೆಗಳಲ್ಲಿ ಸರಾಗವಾಗಿ ಮಾತನಾಡುವ ಪ್ರತಿಭವಂತೆ ಈಕೆ.

ಬೊಸ್ಟೊನ್​ ಆಸ್ಪತ್ರೆಯಲ್ಲಿ ಕಿರಿಯ ವೈದ್ಯೆಯಾಗಿ ಸೇವೆ ಸಲ್ಲಿಸುತ್ತಿರುವ ಇವರು 12ಕ್ಕೂ ಹೆಚ್ಚು ಸ್ಪರ್ಧಿಗಳನ್ನು ಹಿಂದಿಕ್ಕಿ ಈ ಪ್ರಶಸ್ತಿ ಪಡೆದಿದ್ದಾರೆ.

ಭಾರತದಲ್ಲಿ ಹುಟ್ಟಿದ ಮುಖರ್ಜಿ 9 ವರ್ಷವಿದ್ದಾಗ ಅವರ ಕುಟುಂಬ ಲಂಡನ್​ಗೆ ತೆರಳಿ ಅಲ್ಲೇ ವಾಸಿಸಲು ಶುರುಮಾಡಿದರು.

ಇದನ್ನು ಓದಿ: ಮಹಿಳೆಯರ ಸೀರೆ ಮೋಹಕ್ಕೆ ವೇದಿಕೆಯಾದ ಟ್ವಿಟರ್​; ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್​ ಸೃಷ್ಟಿಸುತ್ತಿರುವ #SareeTwitter

ಮಿಸ್​ ಇಂಗ್ಲೆಡ್​ ಪ್ರಶಸ್ತಿ ಭಾಜನಾರಾಗಿರುವ ಮುಖರ್ಜಿ ಈ ಮೂಲಕ ಮಿಸ್​ ವರ್ಲ್ಡ್​ ಸ್ಪರ್ಧೆಗೆ ಪ್ರವೇಶ ಪಡೆಯುವ ಜೊತೆಗೆ ರಜೆಯ ಮಜಾ ಸವಿಯಲು ಮರಿಷಿಯಸ್​ ಹೋಗುವ ಚಾನ್ಸ್​ ಕೂಡ ಪಡೆದಿದ್ದಾರೆ.

ಈ ಬಗ್ಗೆ ಸಂತೋಷ ಹಂಚಿಕೊಂಡಿರುವ ಮುಖರ್ಜಿ, ದಕ್ಷಿಣ ಏಷ್ಯಾ ಸಮುದಾಯ ಹಾಗೂ ಅಲ್ಪಾಸಂಖ್ಯಾತ ಡೆರ್ಬಿ ಪ್ರದೇಶವನ್ನು ಪ್ರತಿನಿಧಿಸುತ್ತಿರುವುದಕ್ಕೆ ಸಂತಸವಾಗಿದೆ ಎಂದಿದ್ದಾರೆ.

First published: August 3, 2019, 5:50 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading