• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • ಉದ್ದನೆಯ ಕೂದಲಿನಿಂದ ಗಿನ್ನೆಸ್ ದಾಖಲೆ; 12 ವರ್ಷ ಬೆಳೆಸಿದ್ದ ಕೂದಲು ಕತ್ತರಿಸಿ ಮ್ಯೂಸಿಯಂಗೆ ನೀಡಿದ ನೀಲಾಂಶಿ ಪಟೇಲ್

ಉದ್ದನೆಯ ಕೂದಲಿನಿಂದ ಗಿನ್ನೆಸ್ ದಾಖಲೆ; 12 ವರ್ಷ ಬೆಳೆಸಿದ್ದ ಕೂದಲು ಕತ್ತರಿಸಿ ಮ್ಯೂಸಿಯಂಗೆ ನೀಡಿದ ನೀಲಾಂಶಿ ಪಟೇಲ್

ನೀಲಾಂಶಿ ಪಟೇಲ್

ನೀಲಾಂಶಿ ಪಟೇಲ್

Nilanshi Patel: ಗುಜರಾತಿನ ಮೊದಾಸದ ನೀಲಾಂಶಿ ಪಟೇಲ್ 2018ರಲ್ಲಿ ಅತಿ ಉದ್ದದ ಕೂದಲು ಹೊಂದಿರುವ ಯುವತಿ ಎಂದು ಖ್ಯಾತಿ ಪಡೆದಾಕೆ. ಆಕೆ ಇದೀಗ ತಮ್ಮ ಕೂದಲನ್ನು ಕತ್ತರಿಸಿ, ದಾನ ಮಾಡಿದ್ದಾರೆ.

  • Share this:

ಉದ್ದನೆಯ ಕೇಶರಾಶಿಯ ಮೂಲಕ ಮೂರು ಬಾರಿ ಗಿನ್ನೆಸ್ ದಾಖಲೆ ಮಾಡಿದ ಭಾರತದ ರಪುಂಜೆಲ್ ಎಂದೇ ಖ್ಯಾತಿ ಪಡೆದಿದ್ದ ನೀಲಾಂಶಿ ತನ್ನ ಉದ್ದದ ಕೂದಲನ್ನು ಕತ್ತರಿಸಿ ಸೇವಾ ಸಂಸ್ಥೆಗೆ ದಾನ ಮಾಡಿದ್ದಾಳೆ. ಅವರು ನಡೆಯುತ್ತಿದ್ದರೆ ಕೂದಲು ನೆಲಕ್ಕೆ ತಾಕುತ್ತದೆ. ಅವರು ನಡೆಯುತ್ತಿದ್ದರೆ ಕೂದಲು ಹಿಡಿಯಲು ಒಬ್ಬರು ಬೇಕೇಬೇಕು. ಇಲ್ಲವೇ ಅವರ ಕೈಯಲ್ಲೇ ಹಿಡಿದು ನಡೆಯಬೇಕು. ಹೌದು ಆ ನೀಳ ಜಡೆಯ ಸುಂದರಿಯೇ ಗುಜರಾತಿನ ಮೊದಾಸದ ನೀಲಾಂಶಿ ಪಟೇಲ್. ಇವರು 2018ರಲ್ಲಿ ಅತಿ ಉದ್ದದ ಕೂದಲು ಹೊಂದಿರುವ ಯುವತಿ ಎಂದು ಖ್ಯಾತಿ ಪಡೆದರು. 16ನೇ ವಯಸ್ಸಿನಲ್ಲಿ ಇವರ ಕೂದಲ ಉದ್ದ 170.5 ಸೆಂ.ಮೀ (5 ಅಡಿ 7 ಇಂಚು) ಇತ್ತು. ಕಳೆದ ಜುಲೈ ತಿಂಗಳಲ್ಲಿ 18 ವರ್ಷಕ್ಕೆ ಕಾಲಿಟ್ಟ ನೀಲಾಂಶಿಯ ಕೂದಲ ಉದ್ದ 200 ಸೆಂ.ಮೀಗೆ (6 ಅಡಿ 7 ಇಂಚು) ತಲುಪಿತ್ತು. ಈ ಮೂಲಕ ಗಿನ್ನೆಸ್ ರೆಕಾರ್ಡ್ ಬುಕ್‍ನಲ್ಲಿ ಸ್ಥಾನ ಪಡೆದಿದ್ದಳು.


ನೀಲಾಂಶಿ ಸುಮಾರು ಆರು ವರ್ಷದವಳಿದ್ದಾಗಲೇ ಉದ್ದನೆಯ ಕೂದಲು ಬೆಳೆಸುವ ನಿರ್ಧಾರ ತೆಗೆದುಕೊಂಡಳು. ಯಾವುದೇ ಕಾರಣಕ್ಕೂ ಕೂದಲು ಕತ್ತರಿಸಬೇಕು ಉದ್ದವಾಗಿ ಬೆಳೆಸಬೇಕು ಎಂದುಕೊಂಡಳು. 12 ವರ್ಷದ ವರೆಗೆ ನಿರ್ಧರಿಸಿದಂತೆ ತುಂಬಾ ಸುಂದರವಾಗಿ ಕೂದಲ ಆರೈಕೆ ಮಾಡಿದಳು. ಅದರಂತೆ ಉದ್ದದ ಕೂದಲ ಮೂಲಕ ಗಿನ್ನೆಸ್ ರೆಕಾರ್ಡ್ ಬುಕ್ ಸೇರಿದಳು.


ನಿಜ ಜೀವನದ ರಂಪುನ್ಜೆಲ್ ಎಂದೇ ಕರೆಯಲ್ಪಡುವ ನೀಲಾಂಶಿಗೆ ಕೂದಲು ದೊಡ್ಡ ಅದೃಷ್ಟ ಎಂದೇ ಭಾವಿಸುತ್ತಾರೆ. ದಶಕಕ್ಕೂ ಹೆಚ್ಚು ಕಾಲ ಕೂದಲ ಆರೈಕೆ ಮಾಡಿ ಖ್ಯಾತಿ ಪಡೆದಿದ್ದ ನಿಲಾಂಶಿ ಇದೀಗ ಕೂದಲು ಕತ್ತರಿಸಿದ್ದಾರೆ. ಕೂದಲು ಕತ್ತರಿಸುವಾಗ ಮೊಗದಲ್ಲಿ ಸಂತೋಷವಿದ್ದರೂ ಮನದಲ್ಲಿ ಬೇಸರ ಕಾಣಿಸುತ್ತಿತ್ತು. ಒಟ್ಟಿನಲ್ಲಿ ಮಿಶ್ರಿತ ಭಾವದಲ್ಲಿದ್ದ ನೀಲಾಂಶಿ ಕೂದಲು ಕತ್ತರಿಸುವಾಗ ಓಹ್ ಮೈ ಗಾಡ್ ಎನ್ನುತ್ತಲೇ ಇದ್ದರು. ನಂತರ ಕತ್ತರಿಸಿದ ಕೂದಲು ಹಿಡಿದು ವಾವ್ ನನ್ನ ಕೂದಲು ಐ ಲವ್ ಮೈ ಹೇರ್ ಎಂದು ಹೇಳುತ್ತಾ ಹಲವು ಬಾರಿ ಕೂದಲಿಗೆ ಮುತ್ತಿಕ್ಕಿದಳು.
ಕೂದಲು ಕತ್ತರಿಸಲು ನಿರ್ಧರಿಸಿದಾಗ ಹಲವಾರು ಮಂದಿ ನಿಮ್ಮ ಕೂದಲು ಇತರರಿಗೆ ಉಪಯೋಗವಾಗುವಂತಿರಲಿ ಎಂದು ಸಲಹೆ ನೀಡಿದ್ದರು. ಅದರಂತೆ ಕ್ಯಾನ್ಸರ್ ಸಂಸ್ಥೆಗೆ ಕೂದಲು ದಾನ ಮಾಡಿದ್ದಾರೆ. ಈ ಬಗ್ಗೆ ಖುದ್ದಾಗಿ ಮಾತನಾಡಿರುವ ನನ್ನ ಕೂದಲು ನನ್ನ ಜೀವನಕ್ಕೆ ಬಹಳಷ್ಟು ನೀಡಿದೆ. ಏಕೆಂದರೆ ನನ್ನ ಕೂದಲು ನನ್ನನ್ನು ನಿಜ ಜೀವನದ ರಂಪುನ್ಜೆಲ್ ಆಗಿ ಮಾಡಿದೆ. ಅದಕ್ಕೆ ಕೃತಜ್ಞತೆ ಸಲ್ಲಿಸಲು ಸರಿಯಾದ ಸಮಯ ಎಂದು ಹೇಳುತ್ತಾರೆ.

ನೀಲಾಂಶಿ ಕೂದಲು ಕತ್ತರಿಸುವ ಸಂದರ್ಭದಲ್ಲಿ ಅವರೆದುರು ಹರಾಜಿಗೆ ಹಾಕುವುದು, ಸೇವಾ ಸಂಸ್ಥೆಗೆ ನೀಡುವುದು ಅಥವಾ ವಸ್ತು ಸಂಗ್ರಹಾಲಕ್ಕೆ ನೀಡುವುದು ಎಂಬ ಮೂರು ಆಯ್ಕೆಗಳಿದ್ದವು. ನಂತರ ನಿಲಾಂಶಿ ತಾಯಿ ಕಾಮಿನಿಬೆನ್ ಅವರು ನಿನ್ನ ಕೂದಲು ಇತರರಿಗೆ ಮಾದರಿಯಾಗಲಿ ಆದ ಕಾರಣ ನೀನು ನಿನ್ನ ಕೂದಲನ್ನು ವಸ್ತುಸಂಗ್ರಹಾಲಕ್ಕೆ ನೀಡು ಎಂದು ಸಲಹೆ ಕೊಟ್ಟರು. ಅದರಂತೆ ನೀಲಾಂಶಿ ತನ್ನ ಕೂದಲನ್ನು ವಸ್ತು ಸಂಗ್ರಹಾಲಕ್ಕೆ ನೀಡಿದರೆ, ತಾಯಿ ಕಾಮಿನಿಬೆನ್ ತಮ್ಮ ಕೂದಲನ್ನು ದಾನ ಮಾಡಿದರು.

Published by:Sushma Chakre
First published: