ಫೋಟೋಶೂಟ್ ಮಾಡಿಸಿಕೊಳ್ಳಬೇಕು ಎಂಬುದು ಬಹುತೇಕ ಹುಡುಗಿಯರ ಕನಸು, ಅದಕ್ಕಾಗಿ ದುಡಿದ ಹಣವನ್ನೆಲ್ಲಾ ಖರ್ಚು ಮಾಡಿ ಫೋಟೋಶೂಟ್ ಮಾಡಿಸುತ್ತಾರೆ. ಆಕರ್ಷಕ ಬಟ್ಟೆತೊಟ್ಟು ವಿವಿಧ ಸ್ಥಳಗಳಿಗೆ ಹೋಗಿ ಫೋಟೋಶೂಟ್ ಮಾಡಿಸುತ್ತಾರೆ. ಅದರಂತೆ ಇಲ್ಲೊಬ್ಬಳು ಬಾಲಕಿ ಕಸದ ರಾಶಿಯಲ್ಲಿ ನಿಂತು ಫೋಟೋಶೂಟ್ ಮಾಡಿಸಿದ್ದಾಳೆ.
12ನೇ ತರಗತಿಯಲ್ಲಿ ಓದುತ್ತಿರುವ ಸುರಭಿಗೆ ಮಾಡೆಲ್ ಆಗಬೇಕೆಂಬ ಬಹು ದೊಡ್ಡ ಕನಸಿದೆ. ಹಾಗಾಗಿ ಆಕೆ ಕಸದ ರಾಶಿಗೆ ತೆರಳಿ ಅಲ್ಲಿ ನಿಂತುಕೊಂಡು ಭಿನ್ನವಾಗಿ ಫೋಟೋಶೂಟ್ ಮಾಡಿಸಿದ್ದಾಳೆ. ಅಷ್ಟು ಮಾತ್ರವಲ್ಲದೆ, ಕಸದ ಮೇಲೆ ರ್ಯಾಂಪ್ ವಾಕ್ ಕೂಡ ಮಾಡಿದ್ದಾಳೆ. ಕಸದ ಸಮಸ್ಯೆಯ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಈ ವಿಭಿನ್ನ ಪ್ರಯೋಗವನ್ನು ಸುರಭಿ ಮತ್ತು ತಂಡ ಮಾಡಿದೆ. ಸದ್ಯ ಈಕೆಯ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮೊದಲೇ ಹೇಳಿದಂತೆ ಫೋಟೋಶೂಟ್ಗಾಗಿ ವಿದೇಶಗಳಿಗೆ ತೆರಳಿ ಜನಪ್ರಿಯ ಫೋಟೋಗ್ರಾಫರ್ ಜೊತೆಗೆ ಫೋಟೋ ಕ್ಲಿಕ್ಕಿಸಿಕೊಂಡ ಅನೇಕ ಉದಾಹರಣೆಗಳಿದೆ. ಆದರೆ
ಸುರಭಿ ಫೋಟೋಶ್ಗಾಗಿ ಆರಿಸಿದ್ದ ಜಾಗ ಕಸ ಡಂಪ್ ಮಾಡುವ ಜಾಗ.
ಕಸದ ಸನಮಸ್ಯೆ ಇಂದು ವಿಶ್ವವನ್ನೇ ಕಾಡುತ್ತಿದೆ. ಇದೇ ವಿಚಾರವನ್ನು ಇಟ್ಟುಕೊಂಡು ಸುರಭಿ ಫೋಟೋಶೂಟ್ ಮಾಡಿಸಿಕೊಂಡಿದ್ದಾಳೆ. ದೊಡ್ಡ ಕಸದ ರಾಶಿ ಇರುವ ಸ್ಥಳಕ್ಕೆ ತೆರಳಿನ ಫೋಟೋ ಕ್ಲಿಕ್ಕಿಸಿಕೊಂಡಿದ್ದಾಳೆ. ಆ ಮೂಲಕ ಜನ ಸಾಮಾನ್ಯರಲ್ಲಿ, ಅಧಿಕಾರಿಗಳಿಗೆ ಕಸ ನಿರ್ವಹಣೆಯ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಿದ್ದಾಳೆ.
ಕಸ ಎಂದಾಕ್ಷಣ ಮೂಗು ಮುಚ್ಚಿ ಓಡುವವರೇ ಹೆಚ್ಚು. ಆದರೆ ಇದಕ್ಕೆ ಕಾರಣ ನಾವುಗಳೇ ಎಂಬುದನ್ನು ತೋರಿಸುದರ ಜೊತೆಗೆ ಪರಿಸರ ಕಾಳಜಿ ಮೂಡಿಸುವ ದೃಷ್ಟಿಯಿಂದ ಇಲ್ಲಿ ಕ್ಯಾಟ್ವಾಕ್ ಮಾಡಲಾಗಿದೆ ಎಂದು ಸುರಭಿ ಹೇಳುತ್ತಾಳೆ. ಅಂದಹಾಗೆಯೇ ಪ್ರಾಂಜಲ್ ಕುಮಾರ್ (
PRANJAL KUMAR) ಎಂಬ ಫೋಟೋಗ್ರಾಫರ್ ಸುರಭಿಯ ಫೋಟೋ ಕ್ಲಿಕ್ಕಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ