ಬಡ ಹೆಣ್ಣುಮಕ್ಕಳಿಗೆ ವಿವಾಹದ ಉಡುಪುಗಳನ್ನು ಒದಗಿಸಲು ಡ್ರೆಸ್ ಬ್ಯಾಂಕ್ ನಡೆಸುವ ಕೇರಳದ ಪರೋಪಕಾರಿ ವ್ಯಕ್ತಿ

ದಾನ ಮಾಡಿದ ಉಡುಪುಗಳನ್ನು ಕೇರಳದ ವಿವಿಧ ಸ್ಥಳಗಳಿಂದ ದತ್ತಿ ಸಂಸ್ಥೆಗಳು ಮತ್ತು ಸ್ನೇಹಿತರ ಮೂಲಕ ಸಂಗ್ರಹಿಸಲಾಗುತ್ತದೆ. ಡ್ರೈ ಕ್ಲೀನಿಂಗ್ ಮಾಡಿದ ನಂತರ ಅವುಗಳನ್ನು ಗಾಳಿಯಾಡದ ಪ್ಯಾಕೆಟ್‌ನಲ್ಲಿ ಸುತ್ತಿಡಲಾಗುತ್ತದೆ

ಡ್ರೆಸ್ ಬ್ಯಾಂಕ್ ನಡೆಸುತ್ತಿರುವ ನಾಸರ್

ಡ್ರೆಸ್ ಬ್ಯಾಂಕ್ ನಡೆಸುತ್ತಿರುವ ನಾಸರ್

  • Share this:
ಫುಡ್ ಬ್ಯಾಂಕ್,( Food Bank) ಬುಕ್ ಬ್ಯಾಂಕ್, ಆಟಿಕೆಗಳ ಬ್ಯಾಂಕ್ ಬಗ್ಗೆ ಕೂಡ ನೀವು ಕೇಳಿರುತ್ತೀರಿ. ಆದರೆ ಡ್ರೆಸ್ ಬ್ಯಾಂಕ್ ( Dress Bank) ಬಗ್ಗೆ ಎಂದಾದರೂ ಕೇಳಿದ್ದೀರಾ? ಈ ಅನನ್ಯವಾದ ಚಾರಿಟಿ ( Unique charity) ಶ್ರೀಮಂತ ಕುಟುಂಬಗಳು ದಾನ (Wedding Donations ) ಮಾಡಿದ ಒಮ್ಮೆ ಬಳಸಿದ ವಿವಾಹ ಉಡುಪುಗಳನ್ನು (Dresses) ಅಂದರೆ ಸೀರೆ, ಉದ್ದದ ಸ್ಕರ್ಟ್‌ಗಳು ಮತ್ತು ಡ್ರೆಸ್‌ಗಳನ್ನು ಪಡೆದುಕೊಂಡು ಆರ್ಥಿಕವಾಗಿ ಹಿಂದುಳಿದ ಹೆಣ್ಣುಮಕ್ಕಳ (Economically Backward Girls) ವಿವಾಹಗಳಿಗಾಗಿ ಒದಗಿಸುವ ಸೇವೆಯಲ್ಲಿ ಬದ್ಧವಾಗಿದೆ.

ಉಚಿತವಾಗಿ ವಿವಾಹ ಉಡುಪುಗಳನ್ನು ನೀಡುವ ಡ್ರೆಸ್ ಬ್ಯಾಂಕ್:
ಈ ಚಾರಿಟಿ ನಡೆಸುತ್ತಿರುವವರು ನಾಸರ್ ಥೂಥಾ. ಕೇರಳದ ಮಲಪ್ಪುರಂ ಜಿಲ್ಲೆಯ ಥೂಥಾ ಗ್ರಾಮದ ಟ್ಯಾಕ್ಸಿ ಚಾಲಕರಾಗಿರುವ ನಾಸರ್ 260ಕ್ಕೂ ಹೆಚ್ಚು ಆರ್ಥಿಕವಾಗಿ ಹಿಂದುಳಿದ ಹೆಣ್ಣುಮಕ್ಕಳ ವಿವಾಹಕ್ಕೆ ಉಚಿತವಾಗಿ ಬಟ್ಟೆಗಳನ್ನು ನೀಡಿ ನೆರವಾಗುತ್ತಿದ್ದಾರೆ.

ಫೇಸ್‌ಬುಕ್, ವಾಟ್ಸ್‌ಆ್ಯಪ್ ಮೂಲಕ ವಿನಂತಿ:
ಸೌದಿ ಅರೇಬಿಯಾದಲ್ಲಿ ಮೊದಲು ಕೆಲಸ ಮಾಡುತ್ತಿದ್ದ ಥೂಥಾ ಅಲ್ಲಿಂದ ಮರಳಿದ ನಂತರ ಈ ವಿನೂತನ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. 44ರ ಹರೆಯದ ಥೂಥಾ ವಾಟ್ಸ್‌ಆ್ಯಪ್, ಫೇಸ್‌ಬುಕ್ ಬಳಸಿಕೊಂಡು ಉತ್ತಮ ವಿವಾಹ ಉಡುಪುಗಳನ್ನು ದೇಣಿಗೆ ನೀಡುವಂತೆ ವಿನಂತಿಸಿಕೊಂಡಿದ್ದಾರೆ. ಇವರು ವಿನಂತಿಸಿದ್ದೇ ತಡ, ಹೊಸ ಉಡುಪುಗಳ ದೊಡ್ಡ ಸಂಗ್ರಹವೇ ಇವರನ್ನರಸಿಕೊಂಡು ಬಂದಿತು. ವಿವಾಹ ಉಡುಪುಗಳನ್ನು ಬಹಳ ಕಡಿಮೆ ಸಮಯದಲ್ಲಿ ಬಳಸಲಾಗುತ್ತದೆ. ವಿವಾಹ ಮುಗಿದ ನಂತರ ಈ ಉಡುಪುಗಳನ್ನು ಹಾಗೆಯೇ ಬೀರುವಿನಲ್ಲಿ ತೆಗೆದಿರಿಸಲಾಗುತ್ತದೆ. ಇದನ್ನು ಮನಗಂಡ ಅನೇಕ ಕುಟುಂಬಗಳು ಉದ್ದೇಶ ಬೆಂಬಲಿಸಲು ಮುಂದೆ ಬಂದವು. 8 ವರ್ಷಗಳ ಹಿಂದೆ ಭಾರತಕ್ಕೆ ಹಿಂತಿರುಗುವ ಮುನ್ನ ಥೂಥಾ 10 ವರ್ಷಗಳಿಗಿಂತಲೂ ಹೆಚ್ಚು ಕಾಲ ರಿಯಾದ್‌ನ ಆಹಾರ ಸೂಪರ್ ಮಾರ್ಕೆಟ್‌ನಲ್ಲಿ ಕೆಲಸ ಮಾಡುತ್ತಿದ್ದರು ಎಂಬುದಾಗಿ ಅಲ್ ಜಝೀರಾ ತಿಳಿಸಿದೆ.

ಇದನ್ನೂ ಓದಿ: Viral Story: ಉಟ್ಟ ಬಟ್ಟೆಯನ್ನೇ ಬಾಡಿಗೆಗೆ ಕೊಡುವ ಈಕೆ, ವರ್ಷಕ್ಕೆ 70 ಲಕ್ಷಕ್ಕೂ ಹೆಚ್ಚು ಹಣ ಸಂಪಾದಿಸುತ್ತಾಳೆ!

ವಧು ತಮಗಿಷ್ಟವಾದ ಉಡುಪು ಆರಿಸಿಕೊಳ್ಳಬಹುದು:
ಥೂಥಾ ಏಪ್ರಿಲ್ 2020ರಿಂದ ತಮ್ಮ ಮನೆಯ ಕೋಣೆಯಿಂದ ಆರಂಭಿಸಿದ ಈ ಡ್ರೆಸ್ ಬ್ಯಾಂಕ್ ಹೆಸರುವಾಸಿಯಾಗಿದೆ. ವಧುವಿನ ಕುಟುಂಬಗಳು ದಿರಿಸಿಗಾಗಿ ಅವರನ್ನು ಫೇಸ್‌ಬುಕ್ ಮೂಲಕ ಸಂಪರ್ಕಿಸುತ್ತಾರೆ ಹಾಗೂ ಅವರಿಗಿಷ್ಟವಾದ ಉಡುಪನ್ನು ಆಯ್ಕೆಮಾಡಲು ಡ್ರೆಸ್ ಬ್ಯಾಂಕ್‌ಗೆ ಭೇಟಿ ನೀಡುತ್ತಾರೆ. ಇವರು ಖರೀದಿಸುವಾಗ ವೆಚ್ಚವನ್ನು ನೋಡುವುದಿಲ್ಲ ಎಂಬುದು ಥೂಥಾ ಮಾತಾಗಿದೆ. ಇನ್ನು ವಧುವಿನ ಕುಟುಂಬದವರಿಗೆ ಪ್ರಯಾಣಿಸಲು ಹಣವಿಲ್ಲ ಇಲ್ಲವೇ ಅನಾರೋಗ್ಯ ಕಾರಣದಿಂದ ಭೇಟಿ ನೀಡಲು ಸಾಧ್ಯವಾಗದೇ ಇದ್ದಾಗ ಸ್ವಯಂಸೇವಕರ ಮೂಲಕ ಉಡುಗೆಯನ್ನು ನೇರವಾಗಿ ವಧುವಿನ ಕುಟುಂಬಕ್ಕೆ ರವಾನಿಸಲಾಗುತ್ತದೆ. ಉಡುಪುಗಳನ್ನು ಹಿಂತಿರುಗಿಸುವಂತೆ ಅವರು ಎಂದಿಗೂ ಕೇಳುವುದಿಲ್ಲ. ಆದರೆ ಇತರ ಅಗತ್ಯವಿರುವವರಿಗೆ ನೀಡುವಂತೆ ಕುಟುಂಬವನ್ನು ವಿನಂತಿಸಿಕೊಳ್ಳುತ್ತಾರೆ.

ದಿರಿಸುಗಳನ್ನು ಹೇಗೆ ಸಂಗ್ರಹಿಸಿಡಲಾಗುತ್ತದೆ?
ದಾನ ಮಾಡಿದ ಉಡುಪುಗಳನ್ನು ಕೇರಳದ ವಿವಿಧ ಸ್ಥಳಗಳಿಂದ ದತ್ತಿ ಸಂಸ್ಥೆಗಳು ಮತ್ತು ಸ್ನೇಹಿತರ ಮೂಲಕ ಸಂಗ್ರಹಿಸಲಾಗುತ್ತದೆ. ಡ್ರೈ ಕ್ಲೀನಿಂಗ್ ಮಾಡಿದ ನಂತರ ಅವುಗಳನ್ನು ಗಾಳಿಯಾಡದ ಪ್ಯಾಕೆಟ್‌ನಲ್ಲಿ ಸುತ್ತಿಡಲಾಗುತ್ತದೆ ಹಾಗೂ ಥೂಥಾ ತಮ್ಮ ಮಳಿಗೆಗಳಲ್ಲಿ ಸುಂದರವಾಗಿ ಜೋಡಿಸುತ್ತಾರೆ. ದೇವರ ಅನುಗ್ರಹದಿಂದ ನಾನು ಹೆಚ್ಚು ಹಣ ಹೂಡಿಕೆ ಮಾಡದೆಯೇ ದಿರಿಸುಗಳನ್ನು ಅಗತ್ಯವಿರುವವರಿಗೆ ವಿತರಿಸುತ್ತಿದ್ದೇನೆ. ನಾನು ಕೇವಲ ಮಧ್ಯಂತರ ವ್ಯಕ್ತಿಯಾಗಿದ್ದೇನೆ. ನನ್ನ ಮೂಲಕ ಅಗತ್ಯವಿರುವ ಮಹಿಳೆಯರು ದಾನಿಗಳಿಂದ ದಿರಿಸುಗಳನ್ನು ಸ್ವೀಕರಿಸುತ್ತಾರೆ ಎಂದು ಥೂಥಾ ಹೇಳುತ್ತಾರೆ.

ಉಡುಪಿನ ಬ್ಯಾಂಕ್‌ನಲ್ಲಿ 800ಕ್ಕೂ ಹೆಚ್ಚು ದಿರಿಸುಗಳಿರುವುದಾಗಿ ಥೂಥಾ ತಿಳಿಸಿದ್ದು, 5,000 ರೂಗಳಿಂದ 50,000 ರೂಗಳವರೆಗಿನ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಉಡುಪುಗಳನ್ನು ಹೊಂದಿದ್ದಾರೆ. ಇದೀಗ, ಕೇರಳದಾದ್ಯಂತ ಮಾತ್ರವಲ್ಲದೆ ನೆರೆಯ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಿಂದಲೂ, ಹಾಗೆಯೇ ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಸೌದಿ ಅರೇಬಿಯಾದಲ್ಲಿರುವ ಅನಿವಾಸಿ ಭಾರತೀಯ (NRI) ಸಮುದಾಯದಿಂದಲೂ ಕೊಡುಗೆಗಳು ಬರಲಾರಂಭಿಸಿವೆ.

ಬಡ ವಧುವಿಗೆ ನೆರವಾದ ಡ್ರೆಸ್ ಬ್ಯಾಂಕ್:
ಮುಂಬೈ ಮೂಲದ ಸಕೀನಾ ಖಾನ್ ತಮ್ಮ ವಿವಾಹಕ್ಕಾಗಿ ಇದೇ ಡ್ರೆಸ್ ಬ್ಯಾಂಕ್‌ನಿಂದ ಗುಲಾಬಿ ಬಣ್ಣದ ಬನಾರಸಿ ರೇಶ್ಮೆ ಸೀರೆ ಖರೀದಿಸಿದ್ದಾರೆ. ತಾನು ಸ್ವೀಕರಿಸಿರುವ ಅತ್ಯಮೂಲ್ಯ ಉಡುಗೊರೆ ಇದಾಗಿದೆ ಎಂದು ಸಕೀನಾ ತಿಳಿಸಿದ್ದಾರೆ.

ಸಕೀನಾರ ತಂದೆ ಹಾಗೂ ಚಿಕ್ಕಪ್ಪ ಡೆಲ್ಟಾ ಸೋಂಕಿಗೆ ಬಲಿಯಾದವರು. ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದ ಸಕೀನಾ ಸಾಂಕ್ರಾಮಿಕದಿಂದಾಗಿ ಉದ್ಯೋಗ ಕಳೆದುಕೊಳ್ಳಬೇಕಾಯಿತು. ನಾಲ್ಕೈದು ಮನೆಗಳಲ್ಲಿ ಮನೆಕೆಲಸ ಮಾಡುವ ತಾಯಿ ಮಾತ್ರವೇ ನಮ್ಮ ಕುಟುಂಬದ ಆಧಾರವಾಗಿದ್ದಾರೆ. ನನ್ನ ವಿವಾಹ ಖರ್ಚುವೆಚ್ಚಗಳಿಗಾಗಿ ಈಗಾಗಲೇ 5,000 ರೂಗಳು ಖರ್ಚಾಗಿದ್ದು ನನ್ನ ವಿವಾಹ ಉಡುಪಿಗೆ ನನ್ನ ಬಳಿ ಹಣವಿರಲಿಲ್ಲ ಎಂದು ಹೇಳುತ್ತಾರೆ. ಫೇಸ್‌ಬುಕ್ ಮೂಲಕ ಥೂಥಾರನ್ನು ಸಂಪರ್ಕಿಸಿದ ಸಕೀನಾ ವಿಡಿಯೋ ಕರೆಯ ಮೂಲಕ ಉಡುಪನ್ನು ಆಯ್ಕೆಮಾಡಿದರು. ವಾರದೊಳಗೆ ಇದನ್ನು ನನಗೆ ತಲುಪಿಸಿದರು ಎಂದು ಹೇಳುತ್ತಾರೆ. ಕಳೆದ ವಾರ ದಿರಿಸಿನ ಪ್ಯಾಕೆಟ್ ಮನೆಗೆ ತಲುಪಿದಾಗ ನಾನು ಮತ್ತು ಅಮ್ಮ ಭಾವುಕರಾಗಿ ಒಬ್ಬರನ್ನೊಬ್ಬರು ತಬ್ಬಿಕೊಂಡೆವು ಎಂಬುದಾಗಿ ಸಕೀನಾ ಹೇಳುತ್ತಾರೆ.

ಬಡತನವಿದ್ದರೂ ನಿರ್ಗತಿಕರಿಗೆ ಸಹಾಯ ಮಾಡುವ ಪರೋಪಕಾರಿ:
ಥೂಥಾ ನಾಲ್ಕು ಮಕ್ಕಳು, ಪತ್ನಿ, ಪೋಷಕರು ಹಾಗೂ ಅಂಗವಿಕಲ ಸಹೋದರಿಯೊಂದಿಗೆ ದೊಡ್ಡ ಕುಟುಂಬದ ಹೊರೆ ಹೊತ್ತವರು. ಇವರಿಗೆ ಈ ಕೆಲಸ ಮಾಡಲು ಏನು ಸ್ಫೂರ್ತಿ ಎಂದರೆ, ಸೌದಿ ಅರೇಬಿಯಾದಿಂದ ಹಿಂತಿರುಗಿದ ನಂತರ ಇವರು ಬಡವರಿಗೆ ನಿರಾಶ್ರಿತರಿಗೆ ಸಹಾಯ ಮಾಡುತ್ತಿದ್ದರು. ಪುನರ್ವಸತಿ ಮಾಡಲು ರಾಜ್ಯ ಏಜೆನ್ಸಿಗಳಿಗೆ ಸಹಾಯ ಮಾಡುತ್ತಿದ್ದೆ. ವಿವಾಹ ಉಡುಪುಗಳನ್ನು ಜೋಡಿಸಲು ಕಷ್ಟಪಡುತ್ತಿರುವ ಹಲವಾರು ಕುಟುಂಬಗಳನ್ನು ಇವರು ಗಮನಿಸಿದರು. ಏಕೆಂದರೆ ವಿವಾಹದ ದಿರಿಸುಗಳು ಯಾವಾಗಲೂ ದುಬಾರಿಯಾಗಿರುತ್ತದೆ. ಹೀಗಾಗಿ ನಾನು ಆ ಕುಟುಂಬಗಳಿಗೆ ಸಹಾಯ ಮಾಡಲು ನಿರ್ಧರಿಸಿದೆ ಎಂಬುದು ಥೂಥಾ ಮಾತಾಗಿದೆ.

ವರನ ಬಟ್ಟೆಗಳನ್ನು ಒದಗಿಸುವ ಯೋಜನೆ:
ಲೋಕಾರ್ಥವಾಗಿ ನಡೆಸುತ್ತಿದ್ದ ಡ್ರೆಸ್ ಬ್ಯಾಂಕ್ ಅನ್ನು ಆರಂಭದಲ್ಲಿ ಮನೆಯಲ್ಲಿಯೇ ನಡೆಸಿದರು. ಅವರಿಗಿದ್ದ ಸೇವಾ ಮನೋಭಾವ ಹಾಗೂ ಕೆಲಸದ ಮೇಲಿನ ಅಸ್ಥೆಯನ್ನು ಗಮನಿಸಿ ಸ್ನೇಹಿತರಲ್ಲಿ ಒಬ್ಬರು ಶಾಪ್‌ನ ಕೋಣೆಯೊಂದನ್ನು ನೀಡಿದರು. ಮುಂದಿನ ವರ್ಷ ಈ ಶಾಪ್‌ಗೆ ಡ್ರೆಸ್ ಬ್ಯಾಂಕ್ ಸ್ಥಳಾಂತರಿಸಲು ಯೋಚನೆ ಮಾಡಿರುವುದಾಗಿ ಥೂಥಾ ತಿಳಿಸುತ್ತಾರೆ. ವರನ ಉಡುಪುಗಳನ್ನು ಒದಗಿಸುವ ಯೋಜನೆಯನ್ನು ಥೂಥಾ ಹೊಂದಿದ್ದಾರೆಯೇ ಎಂದು ಕೇಳಿದಾಗ ತಮ್ಮ ವಿವಾಹದ ದಿನದಂದು ಅವರು ಕೂಡ ಚೆನ್ನಾಗಿ ಕಾಣಬೇಕೆಂದೇ ಬಯಸುತ್ತಾರೆ. ಆದರೆ ವರನ ಬಟ್ಟೆಗಾಗಿ ನಾವು ಯಾವುದೇ ವಿನಂತಿಗಳನ್ನು ಇದುವರೆಗೆ ಸ್ವೀಕರಿಸಿಲ್ಲ. ಎಲ್ಲಿಯಾದರೂ ವಿನಂತಿ ಬಂದಲ್ಲಿ ನಾವು ಖಂಡಿತ ಸಂಗ್ರಹಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ.

ಆ್ಯಂಬುಲೆನ್ಸ್ ಉಚಿತ ಸೇವೆ:
ಟ್ಯಾಕ್ಸಿಯಲ್ಲದೆ ಆ್ಯಂಬುಲೆನ್ಸ್ ಚಾಲಕರಾಗಿಯೂ ಸೇವೆ ಸಲ್ಲಿಸುವ ಥೂಥಾ ತಮ್ಮ ಕೈಲಾದಷ್ಟು ನಿರ್ಗತಿಕರಿಗೆ ಸೇವೆ ಸಲ್ಲಿಸುತ್ತಾರೆ. ಉಚಿತ ಸವಾರಿಯನ್ನು ಬಡಜನರಿಗೆ ಒದಗಿಸುತ್ತಾರೆ. ಸಾಂಕ್ರಾಮಿಕದ ಸಮಯದಲ್ಲಿ ಅದೆಷ್ಟೋ ಮರಣ ಹೊಂದಿದವರ ಶವಗಳನ್ನು ಸ್ಮಶಾನಕ್ಕೆ ಕೊಂಡೊಯ್ಯಲು ಬಡವರಿಗೆ ಸಹಾಯ ಮಾಡಿರುವ ಥೂಥಾ ಅವರಿಂದ ಹಣ ಪಡೆಯುವುದಿಲ್ಲ.

ವಿವಾಹ ಉದ್ಯಮದಲ್ಲಿ ಭಾರತಕ್ಕೆ ಎರಡನೇ ಸ್ಥಾನ:
ಅಮೆರಿಕಾದಲ್ಲಿ $72 ಶತಕೋಟಿಯಾಗಿರುವ ವಿವಾಹ ಉದ್ಯಮವು ಭಾರತದಲ್ಲಿ $50 ಶತಕೋಟಿಯಷ್ಟಿದೆ. ಭಾರತ ಈ ವ್ಯವಹಾರದಲ್ಲಿ ಎರಡನೇ ಸ್ಥಾನದಲ್ಲಿದೆ ಎಂಬುದಾಗಿ ಯುಎಸ್‌ ಮೂಲದ ಡೇಟಾ ಸಂಶೋಧನಾ ಸಂಸ್ಥೆ IBISWorld ವರದಿ ಮಾಡಿದೆ. ಶ್ರೀಮಂತರು ವಿವಾಹದಂತಹ ಕಾರ್ಯಗಳಲ್ಲಿ ದುಂದು ವೆಚ್ಚಮಾಡಲು ಶಕ್ತರಾಗಿದ್ದರೂ ಬಡವರು ಈ ಸಮಯದಲ್ಲಿ ಹೆಚ್ಚು ಕಷ್ಟಪಡುತ್ತಾರೆ ಮತ್ತು ಮದುವೆಯ ಖರ್ಚು ವೆಚ್ಚಗಳು ಅವರನ್ನು ಹೈರಾಣಾಗಿಸುತ್ತದೆ. ಭಾರತೀಯ ಕುಟುಂಬಗಳು ವಿವಾಹ ಸಂದರ್ಭಗಳಲ್ಲಿ ತಮ್ಮ ಅತಿಥಿಗಳನ್ನು ಖುಷಿಯಾಗಿರಿಸುವ ನಿಟ್ಟಿನಲ್ಲಿ ಆಹಾರ, ಬಟ್ಟೆಬರೆಗಳಿಗೆ ಹೆಚ್ಚಿನ ಖರ್ಚುಮಾಡುತ್ತಾರೆ. ಉಡುಗೊರೆಗಳ ವಿಷಯದಲ್ಲಿಯೂ ಭಾರತೀಯ ಕುಟುಂಬಗಳು ಅಪಾರ ಹಣ ಖರ್ಚುಮಾಡುತ್ತಾರೆ. ಬ್ಯಾಂಕ್‌ಗಳಿಂದ ಸಾಲ ಪಡೆದು ವಿವಾಹಗಳನ್ನು ನಡೆಸುತ್ತಾರೆ. ಇದು ಹೆಚ್ಚಿನ ಬಡ್ಡಿದರ ಹೊಂದಿರುತ್ತದೆ ಹಾಗೂ ಬಡವರಿಗೆ ಸಾಲದ ಹೊರೆಯನ್ನುಂಟು ಮಾಡುತ್ತದೆ.

ವಿವಾಹ ಸಾಲದಿಂದ ಆತ್ಮಹತ್ಯೆ ಮಾಡಿಕೊಂಡವರೇ ಹೆಚ್ಚು:
ಈ ಕುರಿತಾಗಿ ಹಲವಾರು ದೃಷ್ಟಾಂತಗಳನ್ನು ನೀಡುವ ರಂಜನಾ 2016ರಲ್ಲಿ ತಮಿಳುನಾಡಿನ ಕಾಂಚಿಪುರಂನ ರೈತರೊಬ್ಬರು ಮಗಳ ವಿವಾಹ ಸಾಲ ತೀರಿಸಲು ಸಾಧ್ಯವಾಗದೇ ಕುಟುಂಬ ಸದಸ್ಯರೊಂದಿಗೆ ಸೇರಿ ಆತ್ಮಹತ್ಯೆ ಮಾಡಿರುವ ಸುದ್ದಿಯನ್ನು ತಿಳಿಸಿದರು. ಇನ್ನು ಕೇರಳದ ತ್ರಿಶೂರ್ ಜಿಲ್ಲೆಯ ವಿಪಿನ್ ಸಹೋದರಿಯ ವಿವಾಹದ ಸಾಲದ ಬಾಧೆಯನ್ನು ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣವನ್ನು ತಿಳಿಸಿದ್ದಾರೆ.

ಇದನ್ನೂ ಓದಿ: Jeans Pants Ban: ಅರೇ ಮೈಸೂರಲ್ಲಿ ಇದೆಂಥಾ ರೂಲ್ಸ್; ಜಿಲ್ಲೆಯಲ್ಲಿ ಜೀನ್ಸ್ ಪ್ಯಾಂಟ್ ಬ್ಯಾನ್​ ಏಕೆ?

ವಿವಾಹ ಸಾಲಕ್ಕಾಗಿ ಬ್ಯಾಂಕ್‌ಗಳಲ್ಲಿ ಕುಗ್ಗದ ಬೇಡಿಕೆ:
ಡಿಜಿಟಲ್ ಲೆಂಡಿಂಗ್ ಕಂಪನಿಯಾದ ಲೆನ್‌ಡೆನ್‌ಕ್ಲಬ್‌ ನಡೆಸಿರುವ ಸಮೀಕ್ಷೆಯ ಪ್ರಕಾರ, ಭಾರತೀಯರು ತೆಗೆದುಕೊಂಡ ಎಲ್ಲಾ ಇತರ ಆವಶ್ಯಕ ಸಾಲಗಳಲ್ಲಿ ವಿವಾಹ ಸಾಲಗಳು 35%ಕ್ಕಿಂತ ಹೆಚ್ಚು ಎಂದಾಗಿದೆ. ಕಂಪನಿಯು ವಿಶ್ಲೇಷಿಸಿದ ಮಾಹಿತಿಯ ಪ್ರಕಾರ, 2020 - 2021ರಲ್ಲಿ ವಿವಾಹ ಸಾಲಗಳ ಬೇಡಿಕೆ 40% ಹೆಚ್ಚಾಗಿದೆ.
Published by:vanithasanjevani vanithasanjevani
First published: