Viral News: ಖಾತೆಗೆ ಬಂತು 1.5 ಕೋಟಿ ರೂಪಾಯಿ! ಕಂಪನಿಗೆ ವಾಪಸ್ ಕೊಟ್ಟು ಪ್ರಾಮಾಣಿಕತೆ ಮೆರೆದ ಕನ್ನಡಿಗ

Viral News: ಇನ್ನು ಸುನಿಲ್ ಡಿಸೋಜಾ ಅವರ ಪ್ರಾಮಾಣಿಕತೆಯನ್ನು ಕುವೈತ್ ನ ಕಂಪನಿ ಕೊಂಡಾಡಿದೆ. 1.5 ಕೋಟಿ ಹಿಂತಿರುಗಿಸಿದ್ದಕ್ಕೆ ಅವರನ್ನು ಅಭಿನಂದಿಸಿದೆ. ಜೊತೆಗೆ 250 ದಿನಾರ್ ಅಂದರೆ ಸುಮಾರು 61 ಸಾವಿರ ರೂಪಾಯಿ ಹಾಗೂ ವಿಶೇಷ ಪ್ರಶಂಸಾ ಪತ್ರ ನೀಡಿ ಗೌರವಿಸಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಈ ಕೋವಿಡ್ (Covid) ಮಹಾಮಾರಿ ಇಡೀ ಜಗತ್ತನ್ನೇ ಮತ್ತೆ ಕಾಡುತ್ತಿದೆ. ಕೊಂಚ ಸುಧಾರಿಸಿಕೊಂಡಿದ್ದ ಉದ್ಯಮಗಳು ಮತ್ತೆ ಮಂಕಾಗಿವೆ. ಬರೀ ಭಾರತವಷ್ಟೇ ಅಲ್ಲದೇ ವಿಶ್ವದ ಎಲ್ಲೆಡೆ ಆರ್ಥಿಕ ಪರಿಸ್ಥಿತಿ (Economic situation) ಬಿಗಡಾಯಿಸಿದೆ. ಇಂತ ಹೊತ್ತಲ್ಲಿ ಸರಿಯಾದ ಕೆಲಸ, ಒಳ್ಳೆ ಸಂಬಳ, ಸೂಕ್ತ ವ್ಯವಸ್ಥೆಯಿಲ್ಲದೇ ಜನರೆಲ್ಲ ಒದ್ದಾಡುತ್ತಿದ್ದಾರೆ. ಇನ್ನು ಕೆಳ, ಮಧ್ಯಮ ವರ್ಗಗಳ ಜನರ ಕಷ್ಟವನ್ನಂತೂ ಕೇಳುವುದೇ ಬೇಡ. ಎರಡು ಹೊತ್ತಿನ ಊಟಕ್ಕೂ ಕೆಲವರು ಪರದಾಡುತ್ತಿದ್ದಾರೆ. ಹೀಗಾಗಿ ಸುಲಭವಾಗಿ ದುಡ್ಡು ಮಾಡಲು ಜನ ಕೆಟ್ಟ ಮಾರ್ಗಗಳನ್ನು, ಅಡ್ಡದಾರಿಯನ್ನು ಹಿಡಿದಿರೋದು ಕಂಡು ಬರ್ತಿದೆ. ಸಾವಿರ ರೂಪಾಯಿ ಸಿಕ್ಕಿದ್ರೆ ಸಾಕಪ್ಪ ಅಂತ ಚಿಂತಿಸುತ್ತಿದ್ದಾರೆ. ಆರ್ಥಿಕ ಪರಿಸ್ಥಿತಿ ಹದಗೆಟ್ಟಿರೋ ಇಂತ ಸಮಯದಲ್ಲೇ ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಗೆ (Bank Account) ಒಂದೂವರೆ ಕೋಟಿ ರೂಪಾಯಿ (1.5 Crore) ಬಂದಿದೆ. ಸಾಮಾನ್ಯ ಜನರಾಗಿದ್ದರೆ ಹೀಗೆ ತಮ್ಮ ಖಾತೆಗೆ ಬಂದ ಹಣವನ್ನು ಉಪಯೋಗಿಸಿ ಕೊಳ್ಳುತ್ತಿದ್ದರು. ಆದರೆ ಈ ವ್ಯಕ್ತಿ ಮಾತ್ರ ಹಾಗೇ ಮಾಡದೇ, ಇತರರಿಗೆ ಮಾದರಿಯಾಗಿದ್ದಾರೆ. ಕುವೈತ್’ನಲ್ಲಿ (Kuwait) ಇಂಥದ್ದೊಂದು ಪ್ರಾಮಾಣಿಕತೆ ಮೆರೆದಿರೋದು ಕರ್ನಾಟಕದ ವ್ಯಕ್ತಿ ಎನ್ನುವುದು ವಿಶೇಷ.

  ಪ್ರಾಮಾಣಿಕತೆ ಮೆರೆದ ಕನ್ನಡಿಗ ಸುನಿಲ್

  ಹೌದು ಈ ಕಥೆಯ ಹೀರೋ ಸುನಿಲ್ ಡೊಮೆನಿಕ್ ಡಿಸೋಜಾ. ಬೆಂಗಳೂರು ಮೂಲದ ಸುನಿಲ್ ಕುವೈತ್ ನ ಬಿಟಿಸಿ ಎಂಬ ಖಾಸಗಿ ಕಂಪನಿಯಲ್ಲಿ ಎ.ಸಿ. ತಂತ್ರಜ್ಞರಾಗಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಇತ್ತೀಚಿಗೆ ಆ ಕೆಲಸ ತೊರೆದು ಬೆಂಗಳೂರಿಗೆ ವಾಪಸ್ಸಾಗಲು ನಿರ್ಧರಿಸಿದ್ದರು. ಈ ಬಗ್ಗೆ ಕಂಪನಿಗೆ ತಿಳಿಸಿದ್ದು, ಅಲ್ಲಿಂದ ರಿಲೀವಿಂಗ್ ಲೆಟರ್ ಸಹ ಪಡೆದಿದ್ದರು. ಇದಾದ ಬಳಿಕ ಇದರಿಂದ ಕಂಪನಿ ಅವರನ್ನು ಗೌರವಯುತವಾಗಿ ಬೀಳ್ಕೊಟ್ಟಿತು. ಅವರಿಗೆ ಬರಬೇಕಿದ್ದ ಸ್ಯಾಲರಿ, ಗ್ರಾಚ್ಯುಟಿ ಹಾಗೂ ಇತರೇ ಹಣಕಾಸಿನ ವ್ಯವಹಾರ ಪೂರ್ಣಗೊಳಿಸಿತು. ಇದರ ಸಂಬಂಧ ಅವರ ಖಾತೆಗೆ ಕಂಪನಿಯಿಂದ ಹಣ ವರ್ಗಾಯಿಸಲ್ಪಟ್ಟಿತು.

  ಇದನ್ನೂ ಓದಿ: 125 ಹಾವುಗಳ ನಡುವೆ ಪತ್ತೆಯಾಯ್ತು ಆ ಶವ, ಅಲ್ಲಿನ ದೃಶ್ಯ ನೋಡಿ ಪೊಲೀಸರಿಗೇ ಶಾಕ್!

  ಖಾತೆಗೆ ಬಂದಿದ್ದು ಬರೋಬ್ಬರಿ ಒಂದೂವರೆ ಕೋಟಿ ರೂಪಾಯಿ!

  ಖಾತೆಗೆ ಹಣ ಬರುತ್ತಿದ್ದಂತೆ ಸುನಿಲ್ ಡಿಸೋಜಾ ಮೊಬೈಲ್ ಗೆ ಮೆಸೇಜ್ ಒಂದು ಬಂತು. ಆದರೆ ಮೆಸೇಜ್ ನೋಡಿದ್ದ ಸುನಿಲ್ ಒಮ್ಮೆ ಹೌಹಾರಿದರು. ಕಾರಣ ಅವರಿಗೆ ಕೆಲವೇ ಕೆಲವು ಕುವೈತ್ ದಿನಾರ್ (ಕುವೈತ್ ಹಣ) ಬರಬೇಕಿತ್ತು. ಆದರೆ ಬಂದಿದ್ದು ಮಾತ್ರ 62,859 ಕುವೈತ್ ದಿನಾರ್. ಅಂದರೆ ಬರೋಬ್ಬರಿ ಒಂದೂವರೆ ಕೋಟಿ ರೂಪಾಯಿ.

  ಕಂಪನಿಗೆ 1.5 ಕೋಟಿ ವಾಪಸ್ ಮಾಡಿದ ಸುನಿಲ್

  ಸಾಮಾನ್ಯ ಜನರಾಗಿದ್ದರೆ ಒಂದೂವರೆ ಕೋಟಿ ತಮ್ಮ ಖಾತೆಗೆ ಬಂದಿದ್ದರೆ ಖುಷಿ ಪಡುತ್ತಿದ್ದರು. ಹೇಗಿದ್ದರೂ ಬೆಂಗಳೂರಿಗೆ ವಾಪಸ್ಸಾಗುತ್ತೀನಿ. ಮತ್ತೆ ಈ ಕಂಪನಿ ಕಡೆ ತಲೆ ಹಾಕುವುದಿಲ್ಲ. ಹೀಗಾಗಿ ಇವಿಷ್ಟು ಹಣ ನಮ್ಮ ಬಳಿಯೇ ಇರಲಿ ಅಂತ ಯೋಚಿಸುತ್ತಿದ್ದರು. ಆದರೆ ಸುನಿಲ್ ಡಿಸೋಜಾ ಮಾತ್ರ ಹೀಗೆ ಮಾಡಲೇ ಇಲ್ಲ. ಅವರೊಳಗಿದ್ದ ಪ್ರಾಮಾಣಿಕತೆ ಇದಕ್ಕೆ ಅವಕಾಶವನ್ನೇ ಕೊಡಲಿಲ್ಲ.

  ಕೂಡಲೇ ಎಚ್ಚೆತ್ತ ಸುನಿಲ್ ತಮ್ಮ ಕಂಪನಿಗೆ ಈ ವಿಚಾರ ತಿಳಿಸಿದ್ದಾರೆ. ಬಳಿಕ ಬ್ಯಾಂಕ್ ನಲ್ಲಿ ಪರಿಶೀಲಿಸಿದಾಗ ಟೆಕ್ನಿಕಲ್ ಪ್ರಾಬ್ಲಮ್ ನಿಂದ ಹೀಗಾಗಿರೋದು ಪತ್ತೆಯಾಗಿದೆ. ಕೂಡಲೇ ಅವರಿಗೆ ಸಿಗಬೇಕಾಗಿದ್ದಷ್ಟು ಹಣ ಇರಿಸಿ, ಉಳಿದ ಮೊತ್ತವನ್ನು ಹಿಂಪಡೆಯಲಾಯಿತು.

  ಪ್ರಾಮಾಣಿಕತೆಗೆ ಸಿಕ್ಕಿತು ಬಹುಮಾನ, ಪ್ರಶಂಸಾ ಪತ್ರ

  ಇದನ್ನೂ ಓದಿ: ಐಸ್​ ಕ್ರೀಂ ದೋಸೆ ಆಯ್ತು ಈಗ ಕೊರೊನಾ ವಡೆ ಸರದಿ- ಇಲ್ಲಿದೆ ನೋಡಿ ವೈರಲ್ ವಿಡಿಯೋ

  ಇನ್ನು ಸುನಿಲ್ ಡಿಸೋಜಾ ಅವರ ಪ್ರಾಮಾಣಿಕತೆಯನ್ನು ಕುವೈತ್ ನ ಕಂಪನಿ ಕೊಂಡಾಡಿದೆ. 1.5 ಕೋಟಿ ಹಿಂತಿರುಗಿಸಿದ್ದಕ್ಕೆ ಅವರನ್ನು ಅಭಿನಂದಿಸಿದೆ. ಜೊತೆಗೆ 250 ದಿನಾರ್ ಅಂದರೆ ಸುಮಾರು 61 ಸಾವಿರ ರೂಪಾಯಿ ಹಾಗೂ ವಿಶೇಷ ಪ್ರಶಂಸಾ ಪತ್ರ ನೀಡಿ ಗೌರವಿಸಿದೆ. ಸುನಿಲ್ ಪ್ರಾಮಾಣಿಕತೆ ಕುರಿತಂತೆ ಕುವೈತ್ ಮಾಧ್ಯಮಗಳಲ್ಲೂ ಸುದ್ದಿ ಪ್ರಕಟವಾಗಿದೆ.

  ವರದಿ: ಅಣ್ಣಪ್ಪ ಆಚಾರ್​
  Published by:Sandhya M
  First published: