ವಿಡಿಯೋ ವೈರಲ್: ರಿಷಭ್ ಪಂತ್​ಗೆ ಹಾಡು ಹೇಳಿ ಕಾಂಗರೂಗಳಿಗೆ ಚಾಟಿ ಬೀಸಿದ ಭಾರತ್ ಆರ್ಮಿ

ರಿಷಭ್ ಪಂತ್ ಅವರ ಭರ್ಜರಿ ಇನ್ನಿಂಗ್ಸ್​​ ನೋಡಿ ಭಾರತ ತಂಡದ ಅಧಿಕೃತ ಅಭಿಮಾನಿಗಳ ಸಂಘ ಭಾರತ್ ಆರ್ಮಿ ಹೊಸ ಹಾಡನ್ನು ಹಾಡಿ ಆಸ್ಟ್ರೇಲಿಯನ್ನರಿಗೆ ಸರಿಯಾಗೆ ಚಾಟಿ ಬೀಸಿದ್ದಾರೆ.

Vinay Bhat | news18
Updated:January 4, 2019, 3:48 PM IST
ವಿಡಿಯೋ ವೈರಲ್: ರಿಷಭ್ ಪಂತ್​ಗೆ ಹಾಡು ಹೇಳಿ ಕಾಂಗರೂಗಳಿಗೆ ಚಾಟಿ ಬೀಸಿದ ಭಾರತ್ ಆರ್ಮಿ
Pic: Twitter
Vinay Bhat | news18
Updated: January 4, 2019, 3:48 PM IST
ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ನಾಲ್ಕನೇ ಟೆಸ್ಟ್​ ಪಂದ್ಯದಲ್ಲಿ ಭಾರತೀಯ ಬ್ಯಾಟ್ಸ್​ಮನ್​ಗಳು ಭರ್ಜರಿ ಪ್ರದರ್ಶನ ತೋರಿದ್ದು 622 ರನ್​ಗೆ ಡಿಕ್ಲೇರ್ ಘೋಷಿಸಿದೆ.

ಟೀಂ ಇಂಡಿಯಾ ಪರ ಅದ್ಭುತ ಆಟ ಪ್ರದರ್ಶಿಸಿದ ಚೇತೇಶ್ವರ್ ಪೂಜಾರ 193 ರನ್​ ಗಳಿಸಿ ದ್ವಿಶತಕ ವಂಚಿತರಾದರೆ, ರಿಷಭ್ ಪಂತ್ ಅಜೇಯ 159 ರನ್ ಸಿಡಿಸಿದರು. ಅಂತೆಯೆ ರವೀಂದ್ರ ಜಡೇಜಾ 81 ಹಾಗೂ ಮಯಾಂಕ್ ಅಗರ್ವಾಲ್ 77 ರನ್​ ಗಳಿಸಿ ತಂಡಕ್ಕೆ ಆಸರೆಯಾದರು.

ಈ ಮಧ್ಯೆ ಟೀಂ ಇಂಡಿಯಾ ನೀಡಿದ ಪ್ರದರ್ಶನಕ್ಕೆ ಫಿದಾ ಆಗಿರುವ ಭಾರತೀಯ ಅಭಿಮಾನಿಗಳು, ಭಾರತದ ತ್ರಿವರ್ಣ ಧ್ವಜ ಹಿಡಿದು ಬೆಂಬಲ ನೀಡಿದರು. ಅಷ್ಟೆ ಅಲ್ಲದೆ ರಿಷಭ್ ಪಂತ್ ಅವರ ಭರ್ಜರಿ ಇನ್ನಿಂಗ್ಸ್​​ ನೋಡಿ ಭಾರತ ತಂಡದ ಅಧಿಕೃತ ಅಭಿಮಾನಿಗಳ ಸಂಘ ಭಾರತ್ ಆರ್ಮಿ ಹೊಸ ಹಾಡನ್ನು ಹಾಡಿ ಆಸ್ಟ್ರೇಲಿಯನ್ನರಿಗೆ ಸರಿಯಾಗೆ ಚಾಟಿ ಬೀಸಿದರು.

ಇದನ್ನೂ ಓದಿ: ಆಸೀಸ್ ಸರಣಿಯಲ್ಲಿ 1258 ಚೆಂಡಾಡಿದ ಪೂಜಾರ: ದ್ರಾವಿಡ್ ದಾಖಲೆ ನೆಲಸಮ

ಈ ಹಿಂದೆ ಪಂತ್ ಬ್ಯಾಟ್ ಮಾಡುವ ವೇಳೆ ಆಸೀಸ್ ನಾಯಕ ಟಿಮ್ ಪೇಯ್ನ್​​ ಅವರು 'ನೀನು ಬೇಬಿ ಸಿಟ್ಟಿಂಗ್ ಮಾಡು' ಎಂದು ಹೇಳಿ ಸ್ಲೆಡ್ಜಿಂಗ್ ಮಾಡಿದ್ದರು. ಇದಕ್ಕೀಗ ಭಾರತೀಯ ಅಭಿಮಾನಿಗಳು ಪ್ರೇಕ್ಷಕ ಗ್ಯಾಲರಿಯಲ್ಲಿ ಹಾಡು ಹೇಳುವ ಮೂಲಕ ತಿರುಗೇಟು ನೀಡಿದ್ದಾರೆ. 'ಭಾರತಕ್ಕೆ ರಿಷಭ್ ಪಂತ್ ಸಿಕ್ಕಿದ್ದಾರೆ, ಇವರು ಸಿಕ್ಸ್​​ ಕೂಡ ಬಾರಿಸುತ್ತಾರೆ, ನಿಮ್ಮ ಮಕ್ಕಳನ್ನೂ ನೋಡಿಕೊಳ್ಳುತ್ತಾರೆ' ಎಂಬರ್ಥದಲ್ಲಿ ಹಾಡನ್ನು ಹಾಡಿದ್ದಾರೆ.

 ರಿಷಭ್ ಪಂತ್ ಅವರು 189 ಎಸೆತಗಳಲ್ಲಿ 15 ಬೌಂಡರಿ ಹಾಗೂ 1 ಸಿಕ್ಸ್​ನೊಂದಿಗೆ ಅಜೇಯ 159 ರನ್ ಸಿಡಿಸಿ ದಾಖಲೆ ಬರೆದಿದ್ದಾರೆ. ಆಸೀಸ್ ನೆಲದಲ್ಲಿ ಶತಕ ಬಾರಿಸಿದ ಭಾರತೀಯ ಮೊತ್ತ ಮೊದಲ ವಿಕೆಟ್ ಕೀಪರ್ ಪಂತ್ ಆಗಿದ್ದಾರೆ. ಇದರ ಜೊತೆಗೆ ಪಂತ್ ಅವರು ಮಿ. 360 ಖ್ಯಾತಿಯ ಎಬಿ ಡಿವಿಯರ್ಸ್​​ ಬಳಿಕ ಆಸ್ಟ್ರೇಲಿಯಾದಲ್ಲಿ ಅತಿ ಹೆಚ್ಚು ರನ್ ಗಳಿಸಿದ ವಿಕೆಟ್ ಕೀಪರ್ ಬ್ಯಾಟ್ಸ್​ಮನ್​​ ಎಂಬ ಸಾಧನೆಯನ್ನೂ ಮಾಡಿದರು. ಪಂತ್ ಈವರೆಗೆ ಒಟ್ಟು ಎರಡು ಶತಕ ಬಾರಿಸಿದ್ದು, ಈ ಎರಡು ಶತಕ ವಿದೇಶದಲ್ಲಿ ಎಂಬುದು ವಿಶೇಷ.

   First published:January 4, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ