Viral Video: ಸಾಗರದೊಳಗೂ ಭಾರತದ ತ್ರಿವರ್ಣ ಧ್ವಜ! ವಿಡಿಯೋ ನೋಡಿ ಜನರ ಸಂಭ್ರಮ

ಇಂಡಿಯನ್ ಕೋಸ್ಟ್ ಗಾರ್ಡ್ ಹರ್ ಘರ್ ತಿರಂಗಾ ಅಭಿಯಾನದ ಪೂರಕವಾಗಿ ನೀರೊಳಗೆ ಧ್ವಜ ಹಾರಿಸುವಿಕೆಯ ಪ್ರದರ್ಶನವನ್ನು (Demo) ನಡೆಸಿತು. ಭಾರತದ 75 ನೇ ಸ್ವಾತಂತ್ರ್ಯ ದಿನಾಚರಣೆಯ ಗೌರವಾರ್ಥವಾಗಿ ನಡೆಸುತ್ತಿರುವ ಹರ್ ಘರ್ ತಿರಂಗಾ ಅಭಿಯಾನಕ್ಕೆ ಇದು ಹೊಸ ಮೆರುಗು ನೀಡುತ್ತಿದೆ.

ತ್ರಿವರ್ಣ ಧ್ವಜ

ತ್ರಿವರ್ಣ ಧ್ವಜ

  • Share this:
ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವದ (Amrutha Mahotsav)  ಸಂದರ್ಭದಲ್ಲಿ ದೇಶ ಭಕ್ತಿಯ ಬಗ್ಗೆ ಜನತೆಯಲ್ಲಿ ಹೆಚ್ಚಿನ ಅಭಿಮಾನವನ್ನು ಬೆಳೆಸಲು ಕೇಂದ್ರ ಸರ್ಕಾರವು ಹರ್ ಘರ್ ತಿರಂಗಾ (Har Ghar Tiranga) ಎಂಬ ಅಭಿಯಾನವನ್ನು (Abhiyan) ಕೈಗೊಂಡಿದೆ. ಇದಕ್ಕೆ ದೇಶದ ಪ್ರತಿಯೊಂದು ಸಂಘ ಸಂಸ್ಥೆಗಳು, ಕಚೇರಿಗಳು ಉತ್ತಮವಾಗಿ ಸ್ಪಂದಿಸುತ್ತಿದೆ. ದಿನದಿಂದ ದಿನಕ್ಕೆ ತಿರಂಗಾ ಉತ್ಪಾದನಾ ಪ್ರಕ್ರಿಯೆಯು ತೀವ್ರಗತಿಯಲ್ಲಿ ನಡೆಯುತ್ತಿದೆ. ಇದೀಗ ಹರ್ ಘರ್ ತಿರಂಗಾ ಅಭಿಯಾನದ ಭಾಗವಾಗಿ ಭಾರತೀಯ ಕೋಸ್ಟ್ ಗಾರ್ಡ್ (Indian Coast Guard) ನೀರಿನ ಅಡಿಯಲ್ಲಿ (Under Water) ತ್ರಿವರ್ಣ ಧ್ವಜ (Flag) ಹಾರಿಸಲಾಗಿದೆ. ಈ ವೀಡಿಯೋ ತುಂಬಾನೇ ವೈರಲ್ ಆಗುತ್ತಿದ್ದು ಇದನ್ನು ಕಂಡ ಭಾರತೀಯರು ತುಂಬಾನೇ ಸಂತಸಪಟ್ಟಿದ್ದಾರೆ.

ಇಂಡಿಯನ್ ಕೋಸ್ಟ್ ಗಾರ್ಡ್ ಹರ್ ಘರ್ ತಿರಂಗಾ ಅಭಿಯಾನದ ಪೂರಕವಾಗಿ ನೀರೊಳಗೆ ಧ್ವಜ ಹಾರಿಸುವಿಕೆಯ ಪ್ರದರ್ಶನವನ್ನು (Demo) ನಡೆಸಿತು. ಭಾರತದ 75 ನೇ ಸ್ವಾತಂತ್ರ್ಯ ದಿನಾಚರಣೆಯ ಗೌರವಾರ್ಥವಾಗಿ ನಡೆಸುತ್ತಿರುವ ಹರ್ ಘರ್ ತಿರಂಗಾ ಅಭಿಯಾನಕ್ಕೆ ಇದು ಹೊಸ ಮೆರುಗು ನೀಡುತ್ತಿದೆ.

ಇದನ್ನೂ ಓದಿ: National Flag Of India: ಭಾರತದ ತ್ರಿವರ್ಣ ಧ್ವಜ ಹೇಗೆ ತಯಾರಾಗುತ್ತಿದೆ? ಫೋಟೊ ನೋಡಿ

ರಾಷ್ಟ್ರಧ್ವಜದ ಬಗ್ಗೆ ಜಾಗೃತಿಯ ಯೋಜನೆ ಎಂದ ಅಧಿಕಾರಿಗಳು
ಜನರ ಹೃದಯದಲ್ಲಿ ದೇಶಭಕ್ತಿಯ ಭಾವನೆಯನ್ನು ಪ್ರಚೋದಿಸುವುದು ಮತ್ತು ಭಾರತೀಯ ರಾಷ್ಟ್ರಧ್ವಜದ ಬಗ್ಗೆ ಜಾಗೃತಿ ಮೂಡಿಸುವುದು ಇದರ ಹಿಂದಿನ ಪ್ರಮುಖ ಆಲೋಚನೆಯಾಗಿದೆ ಇಂಡಿಯನ್ ಕೋಸ್ಟ್ ಗಾರ್ಡ್​ (ICG) ಅಧಿಕಾರಿಗಳು ಹೇಳಿದರು.ಧ್ವಜದೊಂದಿಗಿನ ಸಂಬಂಧ ಅಧಿಕೃತದಿಂದ ವೈಯಕ್ತಿಕವಾಗಿ ಪರಿವರ್ತನೆ
ಹರ್ ಘರ್ ತಿರಂಗ' ಅಭಿಯಾನವು 75 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲು ತಮ್ಮ ಮನೆಗಳಲ್ಲಿ ಭಾರತದ ರಾಷ್ಟ್ರಧ್ವಜವನ್ನು ಹಾರಿಸಲು ನಾಗರಿಕರನ್ನು ಪ್ರೋತ್ಸಾಹಿಸುತ್ತದೆ. ಇದು ತ್ರಿವರ್ಣ ಧ್ವಜದೊಂದಿಗಿನ ಸಂಬಂಧವನ್ನು ಅಧಿಕೃತದಿಂದ ವೈಯಕ್ತಿಕವಾಗಿ ಪರಿವರ್ತಿಸುತ್ತದೆ ಎಂದು ವರದಿಯ ಮೂಲಗಳು ತಿಳಿಸಿವೆ. ಅಲ್ಲದೆ ಇದರಿಂದ ಜನತೆಯಲ್ಲಿ ಧ್ವಜದ ಬಗೆಗಿನ ಅಭಿಮಾನ ಇನ್ನಷ್ಟು ಹೆಚ್ಚಿಸುತ್ತದೆ.

ಜುಲೈ 22 ರಂದು ಹರ್ ಘರ್ ತಿರಂಗಾ ಅಭಿಯಾನದ ಆರಂಭ
ಭಾರತದ ಸ್ವಾತಂತ್ರ್ಯದ 75 ನೇ ವರ್ಷದ ಸಂಭ್ರಮವನ್ನು ಗುರುತಿಸಲು ಮನೆ ಮನೆಯಲ್ಲಿ ತಿರಂಗ ಹಾರಿಸಲು ಜನರನ್ನು ಉತ್ತೇಜಿಸಲು ಪ್ರಧಾನಿ ನರೇಂದ್ರ ಮೋದಿ ಜುಲೈ 22 ರಂದು ಹರ್ ಘರ್ ತಿರಂಗ ಅಭಿಯಾನವನ್ನು ಪ್ರಾರಂಭಿಸಿದರು. ಜನರ ಹೃದಯದಲ್ಲಿ ದೇಶಭಕ್ತಿಯ ಭಾವನೆಯನ್ನು ಮೂಡಿಸುವುದು ಮತ್ತು ಆಜಾದಿ ಕಾ ಅಮೃತ ಮಹೋತ್ಸವವನ್ನು ಜನರ ನಡುವೆ ಆಚರಿಸುವುದು ಈ ಅಭಿಯಾನದ ಹಿಂದಿನ ಆಲೋಚನೆಯಾಗಿದೆ.

ತ್ವರಿತಗತಿಯಲ್ಲಿ ನಡೆಯುತ್ತಿರುವ ಧ್ವಜ ಉತ್ಪಾದನೆ
ಧ್ವಜಗಳ ಉತ್ಪಾದನೆಗೆ ರಾಜ್ಯಗಳು ಸ್ವಸಹಾಯ ಗುಂಪುಗಳನ್ನು (SHG) ಸಜ್ಜುಗೊಳಿಸಿವೆ ಮತ್ತು ಸ್ಥಳೀಯ ಟೈಲರಿಂಗ್ ಘಟಕಗಳು ಮತ್ತು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ (MSME) ಸಚಿವಾಲಯವನ್ನು ಸಹ ನಿಯೋಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಜವಳಿ ಸಚಿವಾಲಯವು ದೊಡ್ಡ ಪ್ರಮಾಣದಲ್ಲಿ ಧ್ವಜಗಳನ್ನು ಪೂರೈಸುವ ಧ್ವಜ ಉತ್ಪಾದಕರನ್ನು ಗುರುತಿಸಿದೆ.

ಇದನ್ನೂ ಓದಿ: Vishwanath Karthikeya: 13 ವರ್ಷದ ಬಾಲಕನಿಂದ ಪರ್ವತಾರೋಹಣದಲ್ಲಿ ವಿಶ್ವದಾಖಲೆ!

ರಾಜ್ಯ, ಕೇಂದ್ರಾಡಳಿತ ಪ್ರದೇಶಗಳು ಮತ್ತು ಸಚಿವಾಲಯಗಳು ಪೂರ್ಣಪ್ರಮಾಣದ ಉತ್ಸಾಹದಿಂದ ಪ್ರಚಾರದಲ್ಲಿ ವ್ಯಾಪಕವಾಗಿ ಭಾಗವಹಿಸುತ್ತಿವೆ. ಈ ಅಭಿಯಾನವು ಆಗಸ್ಟ್ 13 ರಿಂದ 15 ರವರೆಗೆ ದೇಶಾದ್ಯಂತ ಧ್ವಜಗಳನ್ನು ಹಾರಿಸುವ ಗುರಿಯನ್ನು ಹೊಂದಿದೆ.
Published by:Nalini Suvarna
First published: