ಕ್ರಿಸ್ಟಿಯಾನೋ ರೊನಾಲ್ಡೋ ಬಗ್ಗೆ ಹಾಡಿಹೊಗಳಿದ ವಿರಾಟ್ ಕೊಹ್ಲಿ

news18
Updated:June 25, 2018, 4:20 PM IST
ಕ್ರಿಸ್ಟಿಯಾನೋ ರೊನಾಲ್ಡೋ ಬಗ್ಗೆ ಹಾಡಿಹೊಗಳಿದ ವಿರಾಟ್ ಕೊಹ್ಲಿ
news18
Updated: June 25, 2018, 4:20 PM IST
ನ್ಯೂಸ್ 18 ಕನ್ನಡ

ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಕೇವಲ ಕ್ರಿಕೆಟ್ ಬಗ್ಗೆ ಮಾತ್ರ ಅಲ್ಲದೆ ಫುಟ್ಬಾಲ್ ಆಟದ ಬಗ್ಗೆಯು ಅಪಾರ ಅಭಿಮಾನವುಳ್ಳವರು. ಆಗಾಗಾ ಫುಟ್ಬಾಲ್ ಆಟಗಾರರ ಬಗ್ಗೆ ಮಾತನಾಡುವ ಕೊಹ್ಲಿ ಅವರು, ಸದ್ಯ ಫುಟ್ಬಾಲ್ ಮಾಂತ್ರಿಕ ಕ್ರಿಸ್ಟಿಯಾನೋ ರೊನಾಲ್ಡೋ ಅವರ ಬಗ್ಗೆ ಹಾಡಿಹೊಗಳಿದ್ದಾರೆ.

ಇತ್ತೀಚೆಗೆಷ್ಟೆ ಸ್ಪೇನ್ ವಿರುದ್ಧದ ಪಂದ್ಯದಲ್ಲಿ ಪೋರ್ಚುಗಲ್ ತಂಡದ ನಾಯಕ ರೊನಾಲ್ಡೋ ಅವರು ಹ್ಯಾಟ್ರಿಕ್ ಗೋಲು ಸಿಡಿಸಿ ತಂಡಕ್ಕೆ ಜಯ ತಂದು ಕೊಟ್ಟಿದ್ದರು. ಈ ಪಂದ್ಯವನ್ನು ವೀಕ್ಷಿಸಿದ ಬಳಿಕ ಕೊಹ್ಲಿ ಅವರು ‘ಕ್ರಿಸ್ಟಿಯಾನೋ ರೊನಾಲ್ಡೋ ಒಬ್ಬ ಕೆಚ್ಚೆದೆಯ ಆಟಗಾರ, ಆಲ್ ಟೈಮ್ ಗ್ರೇಟೆಸ್ಟ್​’ ಎಂದು ಬರೆದು ರೊನಾಲ್ಡೋ ಆಟದ ವಿಡಿಯೋವನ್ನು ತಮ್ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

 
Loading...

Self belief, determination, courage and pure passion. The G.O.A.T. @cristiano


A post shared by Virat Kohli (@virat.kohli) on


ಸದ್ಯ ಕೊಹ್ಲಿ ಅವರು ಹಂಚಿಕೊಂಡಿರುವ ಈ ಪೋಸ್ಟ್ ಎಲ್ಲೆಡೆ ವೈರಲ್ ಆಗುತ್ತಿದ್ದು, 24 ಗಂಟೆ ಒಳಗಡೆಯೇ 23 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದೆ.
First published:June 25, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...