ಒಂದೇ ತಿಂಗಳಲ್ಲಿ ರಸ್ತೆಗಿಳಿಯಿತು 22 ಲಕ್ಷಕ್ಕೂ ಹೆಚ್ಚಿನ ಹೊಸ ವಾಹನಗಳು  !

zahir | news18
Updated:June 29, 2018, 8:30 PM IST
ಒಂದೇ ತಿಂಗಳಲ್ಲಿ ರಸ್ತೆಗಿಳಿಯಿತು 22 ಲಕ್ಷಕ್ಕೂ ಹೆಚ್ಚಿನ ಹೊಸ ವಾಹನಗಳು  !
zahir | news18
Updated: June 29, 2018, 8:30 PM IST
-ನ್ಯೂಸ್ 18 ಕನ್ನಡ

ದೇಶದ ಯಾವುದೇ ಮಹಾ ನಗರಕ್ಕೆ ಹೋದರೂ ಟ್ರಾಫಿಕ್ ಸಮಸ್ಯೆ ತಪ್ಪಿದ್ದಲ್ಲ. ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಟ್ರಾಫಿಕ್ ಕಿರಿಕಿರಿ ಸಮಸ್ಯೆಯನ್ನು ತಗ್ಗಿಸಲು ವಿಶ್ವಾದ್ಯಂತ ಹಲವಾರು ಅಧ್ಯಯನಗಳು ಕೂಡಾ ನಡೆಯುತ್ತಲೇ ಇದೆ. ಈ ಸಮಸ್ಯೆಗೆ ಮೂಲ ಕಾರಣವಾಗಿರುವ ರಸ್ತೆ ವ್ಯವಸ್ಥೆಯನ್ನು ಸರಿಪಡಿಸಲಾಗುತ್ತಿದ್ದರೂ ವಾಹನಗಳ ದಟ್ಟಣೆಯಿಂದ ಟ್ರಾಫಿಕ್ ಹೆಚ್ಚಾಗುತ್ತಿದೆ. 2018ರ ಮೇ ತಿಂಗಳಲ್ಲಿ ರಸ್ತೆಗೆ ಇಳಿದಿರುವ ವಾಹನಗಳ ಸಂಖ್ಯೆಯನ್ನು ಗಮನಿಸಿದರೆ ಮುಂಬರುವ ದಿನಗಳಲ್ಲಿ ಈ ಸಮಸ್ಯೆ ಮತ್ತಷ್ಟು ಬಿಗಡಾಯಿಸಲಿದೆ.

ಈ ವರ್ಷದ ಮೇ ತಿಂಗಳಲ್ಲಿ ಭಾರತದಲ್ಲಿ ಮಾರಾಟವಾದ ವಾಹನಗಳ ಸಂಖ್ಯೆ ಬರೋಬ್ಬರಿ 22.82 ಲಕ್ಷ. ಅಂದರೆ ದಿನವೊಂದಕ್ಕೆ 73,632 ವಾಹನಗಳು ರಸ್ತೆಗೆ ಇಳಿದಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ವಾಹನ ಮಾರಾಟದಲ್ಲಿ ಶೇ.12 ರಷ್ಟು ಪ್ರಗತಿ ಕಂಡಿದೆ. ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರರ್ಸ್ (SIAM) ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ 2017ರ ಮೇ ತಿಂಗಳಲ್ಲಿ 20.35 ಲಕ್ಷ ವಾಹನಗಳು ಮಾರಾಟವಾಗಿತ್ತು. ಕಳೆದ ವರ್ಷದ ಮೇ ತಿಂಗಳ ಅಂಕಿ ಅಂಶಗಳನ್ನು ಗಮನಿಸಿದರೆ ಈ ಬಾರಿ ಒಂದೇ ತಿಂಗಳಿಗೆ 2.47 ಲಕ್ಷಕ್ಕೂ ಅಧಿಕ ವಾಹನಗಳು ಸೇಲ್ ಆಗಿದೆ.

ಪ್ಯಾಸೆಂಜರ್ ವಾಹನಗಳ ಮಾರಾಟ ಕೂಡ ಈ ಬಾರಿ ಹೆಚ್ಚಾಗಿದ್ದು, ಕಳೆದ ಮೇ ತಿಂಗಳಿಗೆ ಹೋಲಿಸಿದರೆ ಶೇ.19.65 ರಷ್ಟು ಏರಿಕೆಯಾಗಿದೆ. ಇದರಲ್ಲಿ ಯುಟಿಲಿಟಿ ವಾಹನಗಳು ಮತ್ತು ವ್ಯಾನ್​ಗಳು ಹೆಚ್ಚು ಮಾರಾಟವಾಗಿದ್ದು, ಒಟ್ಟಾರೆ ಒಂದು ತಿಂಗಳಲ್ಲಿ 3.1 ಲಕ್ಷಕ್ಕಿಂತ ಹೆಚ್ಚಿನ ವಾಹನಗಳು ರಸ್ತೆಗಿಳಿದಿವೆ. ಕಳೆದ ವರ್ಷದ ಮೇ ತಿಂಗಳಲ್ಲಿ 53 ಸಾವಿರಕ್ಕೂ ಹೆಚ್ಚಿನ ವಾಣಿಜ್ಯ ವಾಹನಗಳು ಮಾರಾಟವಾಗಿದ್ದವು. ಆದರೆ ಈ ಬಾರಿ ಮಾರಾಟದಲ್ಲಿ ಉತ್ತಮ ಪ್ರಗತಿ ಸಾಧಿಸಿರುವ ವಾಹನ ಉದ್ಯಮ 2018ರ ಮೇನಲ್ಲಿ 76,478 ವಾಹನಗಳನ್ನು ಸೇಲ್ ಮಾಡಿದೆ.

18.50 ಲಕ್ಷ ದ್ವಿಚಕ್ರ ವಾಹನ
ಈಗಾಗಲೇ ದ್ವಿಚಕ್ರ ವಾಹನಗಳ ಉತ್ಪಾದನೆಯಲ್ಲಿ ಚೀನಾ ದೇಶವನ್ನು ಹಿಂದಿಕ್ಕಿ ಅಗ್ರಸ್ಥಾನವನ್ನು ಕಾಯ್ದುಕೊಂಡಿರುವ ಭಾರತದಲ್ಲಿ ಮೇ ತಿಂಗಳಲ್ಲಿ  ರಸ್ತೆಗಳಿದ ಒಟ್ಟು ದ್ವಿಚಕ್ರ ವಾಹನ ಸಂಖ್ಯೆ ಬರೋಬ್ಬರಿ 18.50 ಲಕ್ಷ.

2017ರ ಮೇ ತಿಂಗಳಲ್ಲಿ 16.94 ಲಕ್ಷ ವಾಹನಗಳು ಮಾರಾಟವಾದರೆ ಈ ಬಾರಿ 18.50 ಲಕ್ಷ ದ್ವಿಚಕ್ರ ವಾಹನಗಳು ಮಾರಾಟವಾಗಿದೆ. ಇದರ ಹೊರತಾಗಿ ಕಳೆದ 15 ತಿಂಗಳಲ್ಲಿ ಭಾರತದಲ್ಲಿ ಸ್ಕೂಟರ್ ಮಾರಾಟ ಇಳಿಮುಖವಾಗಿದೆ.
Loading...

ಭಾರತದ ವಾಹನದ ರಫ್ತಿನ ಪ್ರಮಾಣವು ಶೇ.23.84 ರಷ್ಟು ಹೆಚ್ಚಾಗಿದ್ದು, ಮೇ 2018 ರಲ್ಲಿ ಒಟ್ಟು 59,648 ಕಾರುಗಳು ಮತ್ತು ಎಸ್​ಯುವಿಗಳು ರಫ್ತಾಗಿದೆ. ಕಳೆದ ವರ್ಷದ ಮೇ ತಿಂಗಳಿಗೆ ಹೋಲಿಸಿದರೆ ಈ ಬಾರಿ ಶೇ. 3.45 ರಷ್ಟು ರಫ್ತಿನಲ್ಲಿ ಪ್ರಗತಿ ಸಾಧಿಸಿದೆ.
First published:June 29, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ