ಗುಂಟೂರು ಅಡುಗೆ ಮೂಲಕ ಯೂಟ್ಯೂಬ್​ನಲ್ಲಿ ಸೆನ್ಸೆಷನ್​ ಆಗಿದ್ದ ಮಸ್ತಾನಮ್ಮ ಅಜ್ಜಿ ಇನ್ನಿಲ್ಲ

ಗ್ರಾಮೀಣ ಸೊಗಡಿನ ರುಚಿಕಟ್ಟಾದ ಅಡುಗೆ ಮಾಡುತ್ತಿದ್ದ ಈ ಬಾಣಸಿಗ ಅಜ್ಜಿ ಸಾಮಾಜಿಕ ಜಾಲತಾಣದಲ್ಲಿ ಕ್ರಾಂತಿಯನ್ನೇ ಮಾಡಿದ್ದರೂ ಎಂದರೆ ತಪ್ಪಾಗಲಾರದು

Seema.R | news18
Updated:December 6, 2018, 5:11 PM IST
ಗುಂಟೂರು ಅಡುಗೆ ಮೂಲಕ ಯೂಟ್ಯೂಬ್​ನಲ್ಲಿ ಸೆನ್ಸೆಷನ್​ ಆಗಿದ್ದ ಮಸ್ತಾನಮ್ಮ ಅಜ್ಜಿ ಇನ್ನಿಲ್ಲ
ಮಸ್ತನಮ್ಮ ಅಜ್ಜಿ
  • News18
  • Last Updated: December 6, 2018, 5:11 PM IST
  • Share this:
ತಮ್ಮ ವಿನೂತದನ ಅಡುಗೆ ಮಾಡುವ ಶೈಲಿಯ ಮೂಲಕವೇ ಯೂಟ್ಯೂಬ್​ನಲ್ಲಿ ಭಾರೀ ಹವಾ ಸೃಷ್ಟಿಸಿದ ಹಿರಿಯ ಅಜ್ಜಿ ಕರ್ರೆ ಮಸ್ತಾನಮ್ಮ ಇನ್ನಿಲ್ಲ. ಅವರ ಅಗಲಿಕೆಗೆ ವಿಶ್ವದಾದ್ಯಂತ ಅಭಿಮಾನಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.

ಆಂಧ್ರದ ಗುಂಟೂರು ಜಿಲ್ಲೆಯ ಗಡಿವಾಡ ಗ್ರಾಮದ 107 ವರ್ಷದ ಈ ಅಜ್ಜಿ ಯೂಟ್ಯೂಬ್​ನ ಹಿರಿಯ ಅಜ್ಜಿ ಮಾತ್ರವಲ್ಲದೇ ಆಕೆಯ ಅಡುಗೆ ಮಾಡುವ ವಿಡಿಯೋಗಳ ಮೂಲಕ ಪ್ರಸಿದ್ಧಿಗೊಂಡಿದ್ದರು.ಪಕ್ಕಾ ಗುಂಟೂರು ಸೊಗಡಿನ ರುಚಿಕಟ್ಟಾದ ಅಡುಗೆ ಮಾಡುತ್ತಿದ್ದ ಈ ಬಾಣಸಿಗ ಅಜ್ಜಿ ಸಾಮಾಜಿಕ ಜಾಲತಾಣದಲ್ಲಿ ಕ್ರಾಂತಿಯನ್ನೇ ಮಾಡಿದ್ದರು.  ಇಂಟರ್​ನೆಟ್​ ಎಂದರೆ ಏನು, ಯೂ ಟ್ಯೂಬ್​ ಹೇಗೆ ಕಾರ್ಯ ನಿರ್ವಹಿಸುತ್ತಿದೆ ಎಂದು ತಿಳಿಯದ ಈ ಅಜ್ಜಿಯನ್ನು ಹಿಂಬಾಲಿಸುತ್ತಿದ್ದವರು ಕೋಟಿಗಟ್ಟಲೆ ಜನರು. ಯೂಟ್ಯೂಬ್​ನ ನಂ.1 ಸ್ಟಾರ್​ ಆಗಿದ್ದ ಈ ಅಜ್ಜಿ ಕಂಟ್ರಿ ಫುಡ್​ ಚಾನಲ್​ ಮೂಲಕ ತಮ್ಮ ಅಡುಗೆಯನ್ನು ಜನರ ಅಡುಗೆ ಮನೆಗೆ ಮುಟ್ಟಿಸುತ್ತಿದ್ದರು. ಇವರ ಚಾನಲ್​  12.18 ಲಕ್ಷ ಜನರ ಚಂದಾದಾರರನ್ನು​ ಹೊಂದಿದೆ.


ಯಾರಿ ಮಸ್ತಾನಮ್ಮ

ಜೀವನದಲ್ಲಿ ಸಂಕಷ್ಟವನ್ನೇ  ನೋಡಿ ಬೆಳೆದವರು ಈ ಮಸ್ತಾನಮ್ಮ. 22 ವರ್ಷಕ್ಕೆ ಗಂಡನನ್ನು ಕಳೆದು ಕೊಂಡ ಅವರು ಕಡೆಗೆ  ಐದು ಮಕ್ಕಳಲ್ಲಿ ಒಂದನ್ನು ಮಾತ್ರ ಬದುಕಿಸಿಕೊಂಡರು. ಕೃಷಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಈಕೆಯ ಕೈ ರುಚಿ ಇವರ ಬದುಕನ್ನೇ ಬದಲಾಯಿಸಿತು. ವಿಶಿಷ್ಟ ರೀತಿಯ ಅಡುಗೆ ಮಾಡುತ್ತಿದ್ದ ಮಸ್ತನಮ್ಮ ಕೈ ರುಚಿ ಹುಡುಕಿಕೊಂಡು ಗುಂಟೂರಿನ ರೆಸ್ಟೊರೆಂಟ್ ಮಾಲೀಕರು​  ಹುಡುಕಿಕೊಂಡು ಬಂದರು. ಬಳಿಕ ಅವರೇ ಅವರನ್ನು ಯೂಟ್ಯೂಬ್​ಬಲ್ಲಿ ಸ್ಟಾರ್​ ಮಟ್ಟಕ್ಕೆ ಏರಿಸಿ ಮಿಲಿಯನ್​ ಗಟ್ಟಲೆ  ವೀಕ್ಷಕರನ್ನು ಸಂಪಾದಿಸಿ ಕೊಟ್ಟರು.

ಮಸ್ತಾನಮ್ಮ ವಿಶೇಷ ಎಂದರೆ ಆಕೆ 21ನೇ ಶತಮಾನದಲ್ಲಿದ್ದರೂ ಅವರು ಗ್ಯಾಸ್​ನಲ್ಲಿ ಅಡುಗೆ ಮಾಡುತ್ತಿರಲಿಲ್ಲ. ಕೃಷಿ ಜಮೀನಿನ ಹತ್ತಿರ ತೆರೆದ ಬಯಲಲ್ಲಿ ರುಚಿಕಟ್ಟಾದ ಮಾಂಸಹಾರಿ ಅಡುಗೆ ತಯಾರಿಸುತ್ತಿದ್ದ ಇವರ ಶೈಲಿಗೆ ಹಲವರ ಬಾಯಲ್ಲಿ ನೀರೂರಲು ಕಾರಣವಾಗಿತ್ತು.

ಹೈದರಾಬಾದಿ ಧಮ್​ ಚಿಕನ್​ ಬಿರಿಯಾನಿಗಿಂತಲೂ ಮಸ್ತಾನಮ್ಮ ಬಿರಿಯಾನಿ ಆಂಧ್ರದಲ್ಲಿ ಭಾರೀ ಜನಪ್ರಿಯ.

First published:December 6, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ