ನೀನು ಸಿಕ್ಸ್​ ಸಿಡಿಸಿದರೆ ನನ್ನ ಬೆಂಬಲ ಮುಂಬೈ ತಂಡಕ್ಕೆ: ರೋಹಿತ್​ರನ್ನು ಕೆಣಕಿದ ಆಸೀಸ್ ನಾಯಕ

ಟೀಂ ಇಂಡಿಯಾ ಆಟಗಾರರ ರನ್ ಸುರಿಮಳೆಗೆ ಬೇಸತ್ತ ಆಸ್ಟ್ರೇಲಿಯಾ ನಾಯಕ ಟಿಮ್ ಪೇಯ್ನ್​ ರೋಹಿತ್ ಶರ್ಮಾ ಅವರನ್ನು ಕೆಣಕಲೋಗಿ ಕೆಟ್ಟಿದ್ದಾರೆ.

Vinay Bhat | news18
Updated:December 27, 2018, 2:21 PM IST
ನೀನು ಸಿಕ್ಸ್​ ಸಿಡಿಸಿದರೆ ನನ್ನ ಬೆಂಬಲ ಮುಂಬೈ ತಂಡಕ್ಕೆ: ರೋಹಿತ್​ರನ್ನು ಕೆಣಕಿದ ಆಸೀಸ್ ನಾಯಕ
Pic: Twitter
  • News18
  • Last Updated: December 27, 2018, 2:21 PM IST
  • Share this:
ಮೆಲ್ಬೋರ್ನ್​​​: ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಮೂರನೇ ಟೆಸ್ಟ್​ ಪಂದ್ಯದಲ್ಲು ಆಸೀಸ್ ಆಟಗಾರರ ಸ್ಲೆಡ್ಜಿಂಗ್ ಮುಂದುವರಿದಿದೆ.

ಟೀಂ ಇಂಡಿಯಾ ಆಟಗಾರರ ರನ್ ಸುರಿಮಳೆಗೆ ಬೇಸತ್ತ ಆಸ್ಟ್ರೇಲಿಯಾ ನಾಯಕ ಟಿಮ್ ಪೇಯ್ನ್​ ರೋಹಿತ್ ಶರ್ಮಾ ಅವರನ್ನು ಕೆಣಕಲೋಗಿ ಕೆಟ್ಟಿದ್ದಾರೆ. ಮೂರನೇ ಟೆಸ್ಟ್​ನ ಎರಡನೇ ದಿನವಾದ ಇಂದು ಕೂಡ ಭಾರತ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿತು. ಹಿಟ್​​ಮ್ಯಾನ್ ರೋಹಿತ್ ಶರ್ಮಾ ಕೂಡ 63 ರನ್​​​ ಸಿಡಿಸಿ ಅಜೇಯರಾಗಿ ಉಳಿದರು.

ಈ ಮಧ್ಯೆ ರೋಹಿತ್ ಬ್ಯಾಟ್ ಮಾಡುವ ಸಂದರ್ಭ ವಿಕೆಟ್ ಕೀಪರ್ ಟಿಮ್ ಪೇಯ್ನ್ ಅವರು ರೋಹಿತ್ ಏಕಾಗ್ರತೆಯನ್ನು ಭಂಗಗೊಳಿಸಲು ಪ್ರಯತ್ನಿಸಿದ್ದಾರೆ. 'ಐಪಿಎಲ್​​​ನಲ್ಲಿ ರಾಜಸ್ಥಾನ್ ರಾಯಲ್ಸ್​​ ಅಥವಾ ಮುಂಬೈ ಇಂಡಿಯನ್ಸ್​​ ತಂಡವನ್ನು ಬೆಂಬಲಿಸಬೇಕೋ ಎಂಬ ಗೊಂದಲದಲ್ಲಿದ್ದೇನೆ. ರೋಹಿತ್ ಈಗ ಸಿಕ್ಸ್​ ಬಾರಿಸಿದರೆ ನಾನು ಮುಂಬೈ ಇಂಡಿಯನ್ಸ್​​ ಬೆಂಬಲಿಸುತ್ತೇನೆ' ಎಂದು ಹೇಳುವ ಮೂಲಕ ರೋಹಿತ್​​ರನ್ನು ಕೆಣಕುವ ಪ್ರಯತ್ನ ಮಾಡಿದ್ದಾರೆ.

ಇದನ್ನೂ ಓದಿ: ಕನ್ನಡಿಗ ಮಯಾಂಕ್​ ಮೇಲೆ ಆಸ್ಟ್ರೇಲಿಯಾದ ಕಮೆಂಟೇಟರ್​ನಿಂದ ಜನಾಂಗೀಯ ನಿಂದನೆ..!

 ಆದರೆ, ಇದಕ್ಕೆಲ್ಲಾ ತಲೆ ಕೆಡಿಸಿಕೊಳ್ಳದ ಹಿಟ್​​ಮ್ಯಾನ್ ಎಚ್ಚರಿಕೆಯ ಆಟ ಪ್ರದರ್ಶಿಸಿ ಅರ್ಧಶತಕ ಸಿಡಿಸಿ ಅಜೇಯರಾಗಿ ಉಳಿದರು. ಸದ್ಯ ಭಾರತ 7 ವಿಕೆಟ್ ಕಳೆದುಕೊಂಡ ವೇಳೆ 443 ರನ್​ಗೆ ಡಿಕ್ಲೇರ್ ಮಾಡಿಕೊಂಡಿದ್ದು, ಇನ್ನಿಂಗ್ಸ್​ ಆರಂಭಿಸಿರುವ ಆಸ್ಟ್ರೇಲಿಯಾ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 8 ರನ್ ಗಳಿಸಿದೆ.

First published: December 27, 2018, 1:04 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading