Research: ಇನ್ನು ಇಷ್ಟು ವರ್ಷಗಳಲ್ಲಿ ಭಾರತ, ಮಡಗಾಸ್ಕರ್ ಮತ್ತು ಸೊಮಾಲಿಯಾ ಒಂದೇ ಖಂಡವಾಗಲಿದೆ!

ತನ್ನ ಯೋಜನೆಗಳ ಪ್ರಕಾರವಾಗಿಯೇ ಹಿನ್ಸ್‌ಬರ್ಗೆನ್‌ ಕಾರ್ಯರೂಪಕ್ಕೆ ತರಲು ನಿರ್ಧರಿಸಿದ್ದು, ಭವಿಷ್ಯದ ಪರ್ವತಗಳು ಹೇಗೆ ಕಾಣಬಹುದು ಎಂಬುದರ ಕುರಿತು ವಿಶ್ವದಲ್ಲಿಯೇ ಕೆಲವೊಂದು ನಿಯಮಗಳನ್ನು ರೂಪಿಸಿದ್ದಾರೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಭವಿಷ್ಯದ ಪರ್ವತಗಳನ್ನು ವೀಕ್ಷಿಸಲು ನಾವೆಲ್ಲರೂ ಬದುಕುಳಿಯದೇ ಇದ್ದರೂ 200 ಮಿಲಿಯನ್ ವರ್ಷಗಳಲ್ಲಿ(Million Years) ಆಫ್ರಿಕಾದ ಹಾರ್ನ್‌ನಲ್ಲಿರುವ ಪೂರ್ವ-ಆಫ್ರಿಕನ್ ದೇಶವಾದ ಸೊಮಾಲಿಯಾ(Africa, Somalia) ಮತ್ತು ಹಿಂದೂ ಮಹಾಸಾಗರದಲ್ಲಿರುವ ಮಡಗಾಸ್ಕರ್ (Madagascar) ದ್ವೀಪವು ಭಾರತದೊಂದಿಗೆ ಘರ್ಷಿಸಿ (Indian Ocean)ಒಂದು ಖಂಡವನ್ನು ನಿರ್ಮಿಸುತ್ತವೆ ಎಂಬುದಾಗಿ ಅಧ್ಯಯನವು ತಿಳಿಸಿದೆ.

ಒಂದೇ ಖಂಡವನ್ನು ಹಂಚಿಕೊಳ್ಳುವ ದೇಶಗಳು:
ಸಂಶೋಧನೆಯಲ್ಲಿ ಕೆಲಸ ಮಾಡಿದ ನೆದರ್ಲೆಂಡ್ಸ್‌ನ ಉಟ್ರೆಕ್ಟ್ ವಿಶ್ವವಿದ್ಯಾಲಯದ ಭೂವಿಜ್ಞಾನಿಗಳ ಪ್ರಕಾರ ಭವಿಷ್ಯದಲ್ಲಿ 200 ಮಿಲಿಯನ್ ವರ್ಷಗಳ ಅತಿದೊಡ್ಡ ಪರ್ವತ ಶ್ರೇಣಿಯಾಗಿರುವ ಸೋಮಾಲಯ ಪರ್ವತಗಳ ರಚನೆಗೆ ಇದು ಕಾರಣವಾಗುತ್ತದೆ. ಟೆಕ್ಟೋನಿಕ್ ಪ್ಲೇಟ್‌ಗಳ ನಾಟಕೀಯ ಬದಲಾವಣೆಯು ಹಿಮಾಲಯದ ಶಿಖರಗಳನ್ನು ಕಡಿಮೆಗೊಳಿಸುತ್ತದೆ ಹಾಗೂ ಸೋಮಾಲಯ ಪರ್ವತಗಳು ಮುಂಬೈಗಿಂತ ಎತ್ತರದಲ್ಲಿರುತ್ತವೆ. ಆ ಸಮಯದಲ್ಲಿ, ಎರಡು ವಿಭಿನ್ನ ಖಂಡಗಳಿಗೆ ಸೇರಿದ ದೇಶಗಳು ಒಂದೇ ಸೂಪರ್ ಖಂಡವನ್ನು ಹಂಚಿಕೊಳ್ಳುತ್ತವೆ.

ಭವಿಷ್ಯದಲ್ಲಿ ಖಂಡಗಳು ಹೇಗಿರಬಹುದೆಂಬ ಊಹೆ:
ಉಟ್ರೆಕ್ಟ್ ವಿಶ್ವವಿದ್ಯಾನಿಲಯದ ಡಚ್ ಭೂವಿಜ್ಞಾನಿ, ಪ್ರೊ. ಡೌವ್ ಜೆಜೆ ವ್ಯಾನ್ ಹಿನ್ಸ್‌ಬರ್ಗೆನ್ (Douwe J.J. van Hinsbergen)ಮತ್ತು ಅವರ ತಂಡವು ಗ್ರಹದ ಭೌಗೋಳಿಕ ಇತಿಹಾಸ ಬಹಿರಂಗಪಡಿಸಲು ಹಿಂದಿನ ಟೆಕ್ಟೋನಿಕ್ ಪ್ಲೇಟ್ ಚಲನೆಯನ್ನು ಪುನರ್ನಿರ್ಮಿಸಿದ್ದಾರೆ.

ಟೆಕ್ಟೋನಿಕ್ ಪ್ಲೇಟ್ (ಶಿಲಾಗೋಳದ ಪ್ಲೇಟ್ ಎಂದೂ ಕರೆಯುತ್ತಾರೆ) ಒಂದು ಬೃಹತ್, ಅನಿಯಮಿತ ಆಕಾರದ ಘನ ಬಂಡೆಯ ಚಪ್ಪಡಿಯಾಗಿದ್ದು, ಸಾಮಾನ್ಯವಾಗಿ ಭೂಖಂಡ ಮತ್ತು ಸಾಗರ ಶಿಲಾಗೋಳಗಳಿಂದ ಕೂಡಿದೆ. ತನ್ನದೇ ಆದ ಆಲೋಚನೆಗಳು ಹಾಗೂ ತಂಡದ ಪುನರ್ ರಚನೆಗಳನ್ನು ನಿರ್ಮಿಸಿಕೊಂಡು ಭವಿಷ್ಯದ ಪರ್ವತಗಳ ರಚನೆಯನ್ನು ಊಹಿಸಬಹುದೇ ಎಂದು ಹಿನ್ಸ್‌ಬರ್ಗೆನ್‌ ಅವರನ್ನು ವರದಿಗಾರರು ಕೇಳಿದಾಗ ಅವರು ಹೌದು ಎಂದು ಉತ್ತರಿಸಿದ್ದು ತಮ್ಮ ಭವಿಷ್ಯವಾಣಿಗಳನ್ನು ಪ್ರಾಯೋಗಿಕವಾಗಿ ತಿಳಿದುಕೊಳ್ಳುವ ಸಾಹಸಕ್ಕೆ ಕೈ ಹಾಕಿದ್ದಾರೆ.

ಇದನ್ನೂ ಓದಿ: Covid-19: ನೀವು ಮನೆಯಿಂದ ಹೊರ ಹೋದ್ರೆ ಕೋವಿಡ್ ಸೋಂಕಿನ ಅಪಾಯದ ಬಗ್ಗೆ ಎಚ್ಚರವಿರಲಿ..!

ಟೆಕ್ಟೋನಿಕ್ ಫಲಕಗಳು ಪರ್ವತ ರಚನೆಗೆ ಹೇಗೆ ಸಹಕಾರಿಯಾಗಿವೆ?
ತನ್ನ ಯೋಜನೆಗಳ ಪ್ರಕಾರವಾಗಿಯೇ ಹಿನ್ಸ್‌ಬರ್ಗೆನ್‌ ಕಾರ್ಯರೂಪಕ್ಕೆ ತರಲು ನಿರ್ಧರಿಸಿದ್ದು, ಭವಿಷ್ಯದ ಪರ್ವತಗಳು ಹೇಗೆ ಕಾಣಬಹುದು ಎಂಬುದರ ಕುರಿತು ವಿಶ್ವದಲ್ಲಿಯೇ ಕೆಲವೊಂದು ನಿಯಮಗಳನ್ನು ರೂಪಿಸಿದರು. ಭೂವಿಜ್ಞಾನಿಗಳು ಉಲ್ಲೇಖಿಸಿರುವಂತೆ ಟೆಕ್ಟೋನಿಕ್ ಪ್ಲೇಟ್‌ಗಳು ಎಲ್ಲಾ ಸಮಯದಲ್ಲೂ ಚಲಿಸುತ್ತವೆ ಮತ್ತು ವರ್ಷಕ್ಕೆ ಎರಡರಿಂದ ಮೂರು ಇಂಚುಗಳು ಘರ್ಷಣೆಗೊಳ್ಳುತ್ತವೆ. ಈ ಪ್ಲೇಟ್‌ಗಳು ಅಥವಾ ಫಲಕಗಳು ಘರ್ಷಣೆಗೊಳ್ಳುವ ಪ್ರದೇಶಗಳನ್ನು ಸಬ್‌ಡಕ್ಷನ್‌ ವಲಯಗಳು ಎಂದು ಕರೆಯಲಾಗುತ್ತದೆ. ಒಂದು ಟೆಕ್ಟೋನಿಕ್ ಪ್ಲೇಟ್ ಮತ್ತೊಂದು ಟೆಕ್ಟೋನಿಕ್ ಪ್ಲೇಟ್ ಅಡಿಯಲ್ಲಿ ಚಲಿಸಿದಾಗ ಈ ಪ್ರಕ್ರಿಯೆಯನ್ನು ಪ್ಲೇಟ್ ಸಬ್‌ಡಕ್ಷನ್‌ ಎಂದು ಕರೆಯಲಾಗುತ್ತದೆ.

ಸಬ್‌ಡಕ್ಷನ್‌ (Subduction) ಸಮಯದಲ್ಲಿ ಘರ್ಷಣೆಯ ಸಮಯದಲ್ಲಿ ಉಳಿಯಲು ಸಾಧ್ಯವಿರದ ಫಲಕಗಳು ಇನ್ನೊಂದು ಫಲಕದಡಿಯಲ್ಲಿ ಪರ್ವತಗಳನ್ನು ನಿರ್ಮಿಸುತ್ತವೆ. ಭವಿಷ್ಯದ ಸಬ್‌ಡಕ್ಷನ್‌ ಊಹಿಸಲು ಮತ್ತು ಅದರ ಪರಿಣಾಮವಾಗಿ ರೂಪುಗೊಂಡ ಪರ್ವತಗಳನ್ನು ವಿವರಿಸಲು ಹಿಂದಿನ ಟೆಕ್ಟೋನಿಕ್ ಪ್ಲೇಟ್ ಚಲನೆಗಳ ಪುನರ್‌ ನಿರ್ಮಾಣವನ್ನು ಹಿನ್ಸ್‌ಬರ್ಗೆನ್ ಬಳಸಿದರು.

ಭೌಗೋಳಿಕತೆಯು ಹೇಗೆ ಅಭಿವೃದ್ಧಿಗೊಂಡಿದೆ ಎಂಬುದನ್ನು ತಿಳಿದುಕೊಳ್ಳುವುದು:
ಜೆಜೆ ವ್ಯಾನ್ ಪ್ರಕಾರ, ಭವಿಷ್ಯದ ಪರ್ವತ ರಚನೆಗಳನ್ನು ಅರ್ಥಮಾಡಿಕೊಳ್ಳುವುದು ಭೂವಿಜ್ಞಾನಿಗಳಿಗೆ ಭೂಮಿಯ ಪ್ರಸ್ತುತ ಭೌಗೋಳಿಕತೆಯು ಹೇಗೆ ಅಭಿವೃದ್ಧಿಗೊಂಡಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದಾಗಿದೆ. ಈ ಅಧ್ಯಯನವನ್ನು ಜೂನ್ 2021ರಲ್ಲಿ ಅಮೆರಿಕನ್ ಜರ್ನಲ್ ಆಫ್ ಸೈನ್ಸ್‌ನಲ್ಲಿ ಪ್ರಕಟಿಸಲಾಗಿದೆ. ಹಿನ್ಸ್‌ಬರ್ಗೆನ್ ತಿಳಿಸಿರುವಂತೆ ಭವಿಷ್ಯದಲ್ಲಿ ಪರ್ವತಗಳು ಹಾಗೂ ಖಂಡಗಳು ಹೇಗೆ ಕಾಣುತ್ತವೆ ಎಂಬುದಕ್ಕೆ ಇದೀಗ ನಮ್ಮ ಬಳಿ ಉತ್ತರವಿದೆ ಎಂದು ತಿಳಿಸಿದ್ದಾರೆ. ಹಿನ್ಸ್‌ಬರ್ಗೆನ್ ತಿಳಿಸಿರುವಂತೆ ಖಂಡಗಳು ಶಾಶ್ವತವಾಗಿ ಅಸ್ತಿತ್ವದಲ್ಲಿರುವುದಿಲ್ಲ ಎಂದಾಗಿದೆ.

ಇದನ್ನೂ ಓದಿ: Study: ಶಾಲೆಗಳ ಬಂದ್‌ನಿಂದ ಮಕ್ಕಳಲ್ಲಿ ಉತ್ತಮ ನಿದ್ರೆ ಹಾಗೂ ಗುಣಮಟ್ಟದ ಜೀವನ..!

ಭಾರತವು ನಮಗೆಲ್ಲರಿಗೂ ತಿಳಿದಿರುವಂತೆ ಕಳೆದ ಹತ್ತು ಮಿಲಿಯನ್ ವರ್ಷಗಳಿಂದ ಅಸ್ತಿತ್ವದಲ್ಲಿದೆ. ಅದಕ್ಕೂ ಮುನ್ನ ಇದು ದ್ವೀಪವಾಗಿತ್ತು. ಹಿಂದೂ ಮಹಾಸಾಗರ ಕೂಡ ಮುಂದೊಂದು ದಿನ ಮುಚ್ಚುತ್ತದೆ. ಭಾರತವನ್ನು ಹೊಡೆದುರುಳಿಸುವ ಖಂಡವಿರುತ್ತದೆ. ಆ ಖಂಡ ಆಫ್ರಿಕಾ ಅಥವಾ ಅಂಟಾರ್ಟಿಕಾ ಇಲ್ಲದಿದ್ದರೆ ಆಸ್ಟ್ರೇಲಿಯ ಕೂಡ ಆಗಿರಬಹುದು ಎಂದು ಹಿನ್ಸ್‌ಬರ್ಗೆನ್ ಅಭಿಪ್ರಾಯವಾಗಿದೆ.
Published by:vanithasanjevani vanithasanjevani
First published: