• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • Viral Photo: ಅಬ್ಬಬ್ಬಾ! ಎಂಥಹಾ ದೇಶ ಪ್ರೇಮ ಗುರು; ಕಣ್ಣಿನೊಳಗೂ ತ್ರಿವರ್ಣ ಧ್ವಜ ಚಿತ್ರಿಸಿಕೊಂಡಿದ್ದಾರೆ ಇವ್ರು!

Viral Photo: ಅಬ್ಬಬ್ಬಾ! ಎಂಥಹಾ ದೇಶ ಪ್ರೇಮ ಗುರು; ಕಣ್ಣಿನೊಳಗೂ ತ್ರಿವರ್ಣ ಧ್ವಜ ಚಿತ್ರಿಸಿಕೊಂಡಿದ್ದಾರೆ ಇವ್ರು!

ತ್ರಿವರ್ಣ ಧ್ವಜವನ್ನು ಕಣ್ಣಿನಲ್ಲಿ ಚಿತ್ರಿಸಿಕೊಂಡ ವ್ಯಕ್ತಿ

ತ್ರಿವರ್ಣ ಧ್ವಜವನ್ನು ಕಣ್ಣಿನಲ್ಲಿ ಚಿತ್ರಿಸಿಕೊಂಡ ವ್ಯಕ್ತಿ

2022 ರ ಸ್ವಾತಂತ್ರ್ಯ ದಿನಾಚರಣೆಗೆ ಮುಂಚಿತವಾಗಿ ಭಾರತದ ಸ್ವಾತಂತ್ರ್ಯ ಚಳವಳಿಯ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನದಲ್ಲಿ, ತಮಿಳುನಾಡಿನ ಸಾಮಾಜಿಕ ಕಾರ್ಯಕರ್ತರೊಬ್ಬರು ತಮ್ಮ ಬಲಗಣ್ಣಿನ ಸ್ಕ್ಲೆರಲ್ ಭಾಗದಲ್ಲಿ ಭಾರತೀಯ ತ್ರಿವರ್ಣ ಧ್ವಜವನ್ನು ಚಿತ್ರಿಸಿಕೊಂಡಿದ್ದಾರೆ.

  • Share this:

ಪ್ರತಿ ವರ್ಷದ ಸ್ವಾತಂತ್ರ್ಯ ದಿನಾಚರಣೆಗಿಂತಲೂ (Independence day) ಈ ವರ್ಷದ ಸ್ವಾತಂತ್ರ್ಯ ದಿನಾಚರಣೆಯು ತುಂಬಾನೇ ವಿಭಿನ್ನ ಮತ್ತು ವಿಶಿಷ್ಟತೆಯಿಂದ ಕೂಡಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಏಕೆಂದರೆ ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯು ಭಾರತ (India) ದೇಶವು ತನ್ನ ಸ್ವಾತಂತ್ರ್ಯದ 75ನೇ ವರ್ಷಕ್ಕೆ ಕಾಲಿಡುತ್ತಿದೆ ಎಂದು ಹೇಳಬಹುದು. ಈಗಾಗಲೇ ದೇಶದಲ್ಲಿ ಎಲ್ಲೆಡೆ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ಮನೆ ಮಾಡಿದ್ದು, ಭಾರತ ಸರ್ಕಾರವು (Indian Government) ಸ್ವಾತಂತ್ರ್ಯದ ಈ ವಜ್ರಮಹೋತ್ಸವದಂದು 'ಆಜಾದಿ ಕಾ ಅಮೃತ್ ಮೊಹೋತ್ಸವ' ವನ್ನು (Azadi Ka Amrit Mohotsav) ಆಚರಿಸುತ್ತಿದೆ.  ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ದೇಶದ ಜನರು ತಮ್ಮ ಸಾಮಾಜಿಕ ಮಾಧ್ಯಮ ಚಿತ್ರಗಳಲ್ಲಿ ತ್ರಿವರ್ಣ ಧ್ವಜವನ್ನು ಪೋಸ್ಟ್ ಮಾಡಬೇಕು ಎಂದು ಸ್ವತಃ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೇ ವಿನಂತಿಸಿದ್ದಾರೆ.


ಮನೆಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸುವಂತೆ ಮನವಿ 
ಹೀಗೆ 75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಪರಿಚಯಿಸಿದ 'ಹರ್ ಘರ್ ತಿರಂಗಾ' ಉಪಕ್ರಮದ ಭಾಗವಾಗಿ ಎಲ್ಲಾ ದೇಶವಾಸಿಗಳು ತಮ್ಮ ಮನೆಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಈ ಹಿಂದೆ ಎಲ್ಲಾ ದೇಶವಾಸಿಗಳಿಗೆ ಮನವಿ ಮಾಡಿದ್ದರು. ಸ್ವಾತಂತ್ರ್ಯ ದಿನಾಚರಣೆಗೆ ಮುನ್ನ ಆಗಸ್ಟ್ 2 ರಿಂದ 15 ರವರೆಗೆ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ತಮ್ಮ ಪ್ರದರ್ಶನ ಚಿತ್ರವನ್ನು ರಾಷ್ಟ್ರಧ್ವಜಕ್ಕೆ ಬದಲಾಯಿಸುವಂತೆ ಪ್ರಧಾನಿ ನಾಗರಿಕರಿಗೆ ಸೂಚಿಸಿದ್ದಾರೆ.


ಹಾಗೆಯೇ ಇನ್ನೂ ಕೆಲವು ಕಡೆಗಳಲ್ಲಿ ಶಾಲಾ ವಿದ್ಯಾರ್ಥಿಗಳು ಉದ್ದನೆಯ ತ್ರಿವರ್ಣ ಧ್ವಜವನ್ನು ಹಿಡಿದುಕೊಂಡು ನಗರದ ಪ್ರಮುಖ ರಸ್ತೆಗಳಲ್ಲಿ ಸಾಗುತ್ತಿರುವುದನ್ನು ಸಹ ನಾವು ಮಾಧ್ಯಮದಲ್ಲಿ ಈಗಾಗಲೇ ನೋಡಿರುತ್ತೇವೆ. ಹೀಗೆಯೇ ಅನೇಕ ಕಲಾವಿದರು ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ಕೋರಿ ಸಮುದ್ರದ ತೀರಗಳಲ್ಲಿರುವ ಮರಳಿನ ಸಹಾಯದಿಂದ ಸುಂದರವಾಗಿ ಕೆಲವು ಕಲಾಕೃತಿಗಳೊಂದಿಗೆ ವಿನ್ಯಾಸ ಮಾಡುವುದನ್ನು ನಾವೆಲ್ಲಾ ನೋಡಿರುತ್ತೇವೆ. ಆದರೆ ನಾವು ನಿಮಗೆ ಈಗ ಹೇಳಲು ಹೊರಟಿರುವ ಘಟನೆ ನಿಜಕ್ಕೂ ನಿಮಗೆ ಒಂದು ಕ್ಷಣ ಆಶ್ಚರ್ಯ ಪಡುವಂತೆ ಮಾಡುವುದಂತೂ ನಿಜ.


ಬಲಗಣ್ಣಿನ ಸ್ಕ್ಲೆರಲ್ ಭಾಗದಲ್ಲಿ ಭಾರತೀಯ ತ್ರಿವರ್ಣ ಧ್ವಜವನ್ನು ಚಿತ್ರಣ
2022 ರ ಸ್ವಾತಂತ್ರ್ಯ ದಿನಾಚರಣೆಗೆ ಮುಂಚಿತವಾಗಿ ಭಾರತದ ಸ್ವಾತಂತ್ರ್ಯ ಚಳವಳಿಯ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನದಲ್ಲಿ, ತಮಿಳುನಾಡಿನ ಸಾಮಾಜಿಕ ಕಾರ್ಯಕರ್ತರೊಬ್ಬರು ತಮ್ಮ ಬಲಗಣ್ಣಿನ ಸ್ಕ್ಲೆರಲ್ ಭಾಗದಲ್ಲಿ ಭಾರತೀಯ ತ್ರಿವರ್ಣ ಧ್ವಜವನ್ನು ಚಿತ್ರಿಸಿಕೊಂಡಿದ್ದಾರೆ. ದೇಶಭಕ್ತಿಯನ್ನು ತೋರಿಸಲು ರಾಷ್ಟ್ರಧ್ವಜವನ್ನು ತಮ್ಮ ಕಣ್ಣಿನೊಳಗೆ ಚಿತ್ರಿಸುತ್ತಿರುವ ವಿಡಿಯೋವನ್ನು ಪೋಸ್ಟ್ ಮಾಡಿದ ಈ ಕೊಯಂಬತ್ತೂರಿನ ಸಾಮಾಜಿಕ ಕಾರ್ಯಕರ್ತ ಸಾರ್ವಜನಿಕರಲ್ಲಿ ವಿಭಿನ್ನ ರೀತಿಯಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.


ಇದನ್ನೂ ಓದಿ:  Independence Day 2022: 42 ವರ್ಷಗಳಲ್ಲಿ 3 ಮಿಲಿಯನ್ ರಾಷ್ಟ್ರಧ್ವಜ ತಯಾರಿ! ಇದರ ಹಿಂದಿದ್ದಾರೆ ಅಬ್ದುಲ್ ಚಾಚಾ


ಈ ಸಂದರ್ಭದಲ್ಲಿ, ಕೊಯಂಬತ್ತೂರು ಜಿಲ್ಲೆಯ ಕುನಿಯಮುತ್ತೂರಿನ ಯುಎಂಟಿ ರಾಜಾ ಅವರು ಭಾರತೀಯ ತ್ರಿವರ್ಣ ಧ್ವಜವನ್ನು ತಮ್ಮ ಕಣ್ಣಿನಲ್ಲಿ ಚಿತ್ರಿಸಿಕೊಳ್ಳಲು ಮುಂದಾದರು. ಮತ್ತು ಇದನ್ನು ಮಾಡಲು, ಅವರು ಮೊಟ್ಟೆಯ ಚಿಪ್ಪಿನೊಳಗಿನ ಬಿಳಿ ಭ್ರೂಣದ ಮೇಲೆ ಬಹಳ ತೆಳುವಾದ ಬಟ್ಟೆಯಂತಹ ಫಿಲ್ಮ್ ಮೇಲೆ ರಾಷ್ಟ್ರಧ್ವಜದ ಮಿನಿಯೇಚರ್ ಅನ್ನು ಚಿತ್ರಿಸಿದರು ಮತ್ತು ಅದನ್ನು ಗಂಟೆಗಳ ಏಕಾಗ್ರತೆಯಿಂದ ಕಣ್ಣಿನ ಮೇಲಿನ ಸ್ಕ್ಲೆರಾಗೆ ಅಂಟಿಸಿಕೊಂಡರು.


ವೈದ್ಯಕೀಯ ತಜ್ಞರಿಂದ ಎಚ್ಚರಿಕೆ
ಇದಲ್ಲದೆ, ರಾಷ್ಟ್ರಧ್ವಜದ ಬಗ್ಗೆ ಸಾರ್ವಜನಿಕ ಜಾಗೃತಿ ಮೂಡಿಸಲು ಅವರು ಇದನ್ನು ಮಾಡಿದ್ದಾರೆ ಎಂದು ಅವರು ಹೇಳಿದರು ಮತ್ತು ತಮ್ಮ ಕಣ್ಣಿನಲ್ಲಿ ಕಾಣಿಸಿಕೊಂಡ ರಾಷ್ಟ್ರಧ್ವಜದೊಂದಿಗೆ ವೀಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.


ಇದನ್ನೂ ಓದಿ: Explained: ಭಾರತದ ಧ್ವಜ ಸಂಹಿತೆ ಎಂದರೇನು? ಈ ಬಾರಿ ಕೇಂದ್ರ ಯಾವ ತಿದ್ದುಪಡಿಗಳನ್ನು ತಂದಿದೆ? ಇಲ್ಲಿದೆ ಸಂಪೂರ್ಣ ವಿವರ


ಇಂತಹ ಕೃತ್ಯಗಳು ಕಣ್ಣಿನಲ್ಲಿ ಅಲರ್ಜಿ ಮತ್ತು ತುರಿಕೆಯನ್ನು ಉಂಟು ಮಾಡುತ್ತವೆ, ಆದರೆ ಇದು ಸೋಂಕು ಮತ್ತು ಅಪಾಯಕ್ಕೆ ಕಾರಣವಾಗುತ್ತದೆ ಎಂದು ವೈದ್ಯಕೀಯ ತಜ್ಞರು ಎಚ್ಚರಿಸಿದ್ದರಿಂದ, ರಾಜಾ ಅವರು ತಾವು ಮಾಡಿದ ಕೆಲಸವನ್ನು ಸಾಮಾನ್ಯ ಜನರು ಯಾರು ಅನುಸರಿಸದಂತೆ ಜನರಿಗೆ ಸಲಹೆ ನೀಡಿದರು.

top videos
    First published: